Connect with us
Ad Widget

ಮನರಂಜನೆ

ಸಮಂತ ಅಭಿನಯ ಮೆಚ್ಚಿದ ಕಂಗಾನ ರಣಾವತ್

Published

on

ದಿ ಫ್ಯಾಮಿಲಿ ಮ್ಯಾನ್ 2 ಚಿತ್ರದ ಟ್ರೈಲರ್ ನೋಡಿದ ನಂತರ ನಟಿ ಕಂಗನಾ ರಣಾವತ್ ನಟಿ ಸಮಂತಾ ಅಕ್ಕಿನೇನಿ ಅವರನ್ನು ಹೊಗಳಿದ್ದಾರೆ. ವೆಬ್ ಸರಣಿಯ ಮೊದಲ ಟ್ರೇಲರ್ ಬುಧವಾರ ಬೆಳಗ್ಗೆ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿದೆ.

ಗುರುವಾರ ಇನ್ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಕಂಗನಾ ಟ್ರೈಲರ್ನಿಂದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಈ ಹುಡುಗಿ ನನ್ನ ಹೃದಯವನ್ನು ಕದ್ದಿದ್ದಾಳೆ ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ನಾನು ಅವರನ್ನು ಕೊಲ್ಲುತ್ತೇನೆ ಎಂಬ ಉಪಶೀರ್ಷಿಕೆ ಓದಿದಂತೆ ವೆಬ್ ಸರಣಿಯ ದೃಶ್ಯದಲ್ಲಿ ಸಮಂತಾ ಪಾತ್ರವನ್ನು ಕಾಣಬಹುದು. ಸಮಂತಾ ಅವರು ಕಂಗನಾ ಅವರ ಪೋಸ್ಟ್ ಅನ್ನು ಧನ್ಯವಾದದೊಂದಿಗೆ ಹಂಚಿಕೊಂಡಿದ್ದಾರೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಕ್ರೀಡೆ

ಭಾರತೀಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರದಲ್ಲಿ ಖ್ಯಾತ ನಟಿ ತಾಪ್ಸಿ ಪನ್ನು

Published

on

ಬಾಲಿವುಡ್‌ನ ಖ್ಯಾತ ನಟಿ ತಾಪ್ಸಿ ಪನ್ನು ಭಾರತೀಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಈ ಬಯೋಪಿಕ್‌ಗೆ ಕನ್ನಡ ಖ್ಯಾತ ನಟ ಜೆಕೆ ಎಂಟ್ರಿ ಕೊಟ್ಟಿದ್ದಾರೆ.

ಶಬಾಷ್ ಮಿಥು ಹೆಸರಿನಲ್ಲಿ ಸೆಟ್ಟೇರಿರುವ ಚಿತ್ರದಲ್ಲಿ ತಾಪ್ಸಿ ಪನ್ನು ಮಿಥಾಲಿ ರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕನ್ನಡದ ನಟ ಜೆಕೆ ನಟಿಸುತ್ತಿರುವ ಮಾಹಿತಿ ಬಹಿರಂಗವಾಗಿದೆ.

Continue Reading

ಮನರಂಜನೆ

ಮತ್ತೆ ಕಿರಿಕ್ ಮಾಡಲ್ಲ ಎಂದ ನಟಿ ರಶ್ಮಿಕಾ ಮಂದಣ್ಣ

Published

on

ಬೆಂಗಳೂರು : ಕಿರಿಕ್​ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೊಡಗಿನ ​ ಬೆಡಗಿ ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್​ ಕ್ರಶ್​. ಸದಾ ಒಂದಲ್ಲ ಒಂದು ವಿಚಾರದಿಂದ ಮುಖ್ಯಭೂಮಿಕೆಯಲ್ಲಿರುವ ರಶ್ಮೀಕಾ ಇದೀಗ ಮತ್ತೆ ಕಿರಿಕ್​ ಮಾಡಲ್ಲ ಅಂತ ಸುದ್ದಿಯಾಗಿದ್ದಾರೆ.

ಸಾನ್ವಿ ಪಾತ್ರದ ಮೂಲಕ ಯುವಕರ ನಿದ್ದೆ ಗೆಡಿಸಿದ್ದ ರಶ್ಮಿಕಾಗೆ, ಕಿರಿಕ್​ ಪಾರ್ಟಿ ನಂತ್ರ ಆಫರ್​ಗಳ ಸುರಿಮಳೆನೇ ಹರಿದು ಬಂತು. ಒಂದಾದ ಮೇಲೊಂದು ಹಿಟ್ ಸಿನಿಮಾ ಕೊಟ್ಟು ಅಭಿಮಾನಿಗಳನ್ನು ರಂಜಿಸಿದ ರಶ್ಮಿಕಾ ಕರ್ನಾಟಕ ಕ್ರಶ್​ನಿಂದ ನ್ಯಾಶನಲ್​ ಕ್ರಶ್ ಪಟ್ಟ ಗಳಿಸಿಕೊಂಡ್ರು. ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಕಾಲ್​ ಶೀಟ್​​ಗೆ ಅನೇಕ ನಿರ್ದೇಶಕರು ಕೂಡ ಕಾಯಬೇಕಾಯ್ತು. ಈಗಾಗಲೇ ಬಾಲಿವುಡ್​ಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದ ಹಿಂದಿ ರಿಮೇಕ್ನಲ್ಲಿ ನಟಿಸುವುದಿಲ್ಲ ಅಂತ ಹೇಳಿದ್ದಾರೆ.

Continue Reading

ಮನರಂಜನೆ

ಬಾಲಿವುಡ್ ನಟಿ ಹುಟ್ಟುಹಬ್ಬಕ್ಕೆ ಶುಭಕೋರಿ ಬೃಹತ್ ಫ್ಲೆಕ್ಸ್ : ಅಭಿಮಾನಕ್ಕೆ ಸಂತಸ ವ್ಯಕ್ತಪಡಿಸಿದ ಸನ್ನಿ ಲಿಯೋನ್

Published

on

ಮಂಡ್ಯ: ಮೇ 13 ರಂದು ಖ್ಯಾತ ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ 40ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ದೇಶದಾದ್ಯಂತ ಶುಭಾಶಯ ಕೋರಿದ್ದರು. ಅದರಲ್ಲೂ ಕರ್ನಾಟಕದಲ್ಲಿ ಈ ಬಾರಿ ಸನ್ನಿಗೆ ಅಭಿಮಾನಿಗಳು ಶುಭಾಶಯ ಕೋರಿದ ರೀತಿ ಸ್ವಲ್ಪ ಭಿನ್ನವಾಗಿದ್ದು, ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ಕೂಡ ಸಂತಸ ವ್ಯಕ್ತಪಡಿಸಿದ್ದರು.

ವಿಶಾಲವಾದ ಅಭಿಮಾನಿ ಬಳಗವನ್ನು ಹೊಂದಿರುವ ಸನ್ನಿ ಲಿಯೋನ್​ಗೆ ಹಳ್ಳಿಯೊಂದರಲ್ಲಿ ಫ್ಲೆಕ್ಸ್ ಹಾಕಿಸಿ ಅದರ ಮೇಲೆ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ‌ ದೇವತೆ ಎಂದು ಬರೆದು ಶುಭಕೋರಿ ಹಾಕಿದ್ದರು. ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗಿತ್ತು ಮತ್ತು ಇದೇ ಫೋಟೋವನ್ನು ಸನ್ನಿ ಲಿಯೋನ್ ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿ ಕರ್ನಾಟಕದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು.
ಆದರೆ ಇದು ಯಾವ ಹಳ್ಳಿಯಲ್ಲಿನ ಫೋಟೊ ಎಂದು ಯಾರಿಗೂ ತಿಳಿದಿರಲಿಲ್ಲ ಸದ್ಯ ಸನ್ನಿ ಲಿಯೋನ್​ಗೆ ಶುಭಕೋರಿ ಹಾಕಿದ ಈ ಫ್ಲೆಕ್ಸ್ ಸಕ್ಕರೆನಾಡು ಮಂಡ್ಯದ್ದು ಎಂದು ಗೊತ್ತಾಗಿದೆ. ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಯುವಕರ ತಂಡವೊಂದು ಮೇ 13 ರಂದು ತಮ್ಮೂರಿನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್​ಗೆ ಶುಭಕೋರಿ ಬೃಹತ್ ಫ್ಲೆಕ್ಸ್ ಹಾಕಿ ಕೇಕ್ ಕಟ್ ಮಾಡಿರುವುದರ ಜೊತೆಗೆ ನೆರೆದಿದ್ದವರಿಗೆ ಬಿರಿಯಾನಿ ಕೂಡ ಹಂಚಿದ್ದರು ಎಂದು ಮೂಲಗಳು ತಿಳಿಸಿವೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್