Connect with us
Ad Widget

ಸುದ್ದಿ

ಬಾಗೇಪಲ್ಲಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಇಲ್ಲ, ಹಸಿವಿನ ದವಡೆಗೆ ಸಿಲುಕಿದ ನಿರ್ಗತಿಕರು

Published

on

ಬಾಗೇಪಲ್ಲಿ: ಲಾಕ್‌ಡೌನ್ ಸಂದರ್ಭದಲ್ಲಿ ನಿರ್ಗತಿಕರನ್ನು, ಭಿಕ್ಷುಕರನ್ನು ಗುರುತಿಸಿ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟ ಕೊಡಲು ಸರ್ಕಾರ ಆದೇಶ ಹೊರಡಿಸಿದೆ. ಆದರೆ‌ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಇಲ್ಲವಾಗಿದೆ.ಆದುದರಿಂದ ಇದುವರೆಗೂ ಪುರಸಭೆ ಅಧಿಕಾರಿಗಳು ನಿರ್ಗತಿಕರಿಗೆ ಆಹಾರ ವಿತರಣೆ ಮಾಡಿಲ್ಲ.

ಈ ಲಾಕ್ಡೌನ್ ನಿಂದಾಗಿ ಪಟ್ಟಣದ ಬಸ್ ನಿಲ್ದಾಣ, ಮುಖ್ಯರಸ್ತೆ ಅಂಗಡಿಗಳ ಹಾಗೂ ಮರಗಳ ಕೆಳಗೆ ನಿರ್ಗತಿಕರು, ಭಿಕ್ಷುಕರು, ವೃದ್ಧರು ಊಟ ಇಲ್ಲದೇ ಪರದಾಡುತ್ತಿದ್ದಾರೆ. ಊಟ ಇಲ್ಲದೇ ನಿಶಕ್ತರಾಗಿ, ಮರ, ಅಂಗಡಿಗಳ ಕೆಳಗೆ ಮಲಗುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳಿಂದ ಹಣ್ಣುಗಳನ್ನು ಬೇಡಿ ತಿನ್ನುತ್ತಿದ್ದಾರೆ.

ಪಟ್ಟಣದಲ್ಲಿ ಸುಮಾರು 30 ಮಂದಿ ನಿರ್ಗತಿಕರು, ಮಾನಸಿಕ ಅಸ್ವಸ್ಥರು, ಭಿಕ್ಷುಕರು, ವೃದ್ಧರು ಇದ್ದಾರೆ. ಇದುವರೆಗೂ ಪುರಸಭೆ ಅಧಿಕಾರಿಗಳು ಇಂತವರನ್ನು ಗುರುತಿಸಿಲ್ಲ. ಪಟ್ಟಿಯನ್ನೂ ಸಿದ್ಧಪಡಿಸಿಲ್ಲ. ಆಹಾರ ವಿತರಣೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಪಟ್ಟಣದ ಸಂತೇಮೈದಾನದಲ್ಲಿ ಇಂದಿರಾ ಕ್ಯಾಂಟೀನ್‌ನ ಕಟ್ಟಡ ಅರ್ಧ ಕಾಮಗಾರಿ ನಡೆದಿದೆ. ಪಟ್ಟಣಕ್ಕೆ ದೂರ ಇದೆ ಎಂದು ಕೆಲವರು ವಿರೋಧ ಮಾಡಿ, ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದಿರಾ ಕ್ಯಾಂಟೀನ್ ಮಾಡುವಂತೆ ಮನವಿ ಮಾಡಿದ್ದರು. ಇದರಿಂದ ಜಾಗದ ಗೊಂದಲದಿಂದ ಇಂದಿರಾ ಕ್ಯಾಂಟೀನ್ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದರಿಂದ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡವೇ ಇಲ್ಲವಾಗಿದೆ.

‘ಇಂದಿರಾ ಕ್ಯಾಂಟೀನ್‌ಗೆ ಕಟ್ಟಡ ಇಲ್ಲದೇ ಇರುವುದರಿಂದ, ನಿರ್ಗತಿಕರನ್ನು ಗುರುತಿಸಿ, ಇರುವ ಕಡೆಗೆ ಹೋಗಿ ಆಹಾರ ವಿತರಣೆ ಮಾಡಬಹುದಾಗಿತ್ತು. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಹಾರ ವಿತರಣೆ ಮಾಡಿಲ್ಲ’ ಎಂದು ಹಿರಿಯ ನಾಗರಿಕ ಆಂಜಿನಪ್ಪ ದೂರಿದರು.

‘ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ಇಲ್ಲದೇ ಇರುವುದರಿಂದ ಆಹಾರ ಹಂಚಲು ಆಗಿಲ್ಲ. ಮುಂದಿನ ದಿನಗಳಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥ, ನಿರ್ಗತಿಕರನ್ನು, ವೃದ್ಧರನ್ನು, ಭಿಕ್ಷುಕರನ್ನು ಗುರುತಿಸಿ, ಪ್ರತಿದಿನ ಅವರು ಇರುವ ಕಡೆಗೆ ಪುರಸಭೆ ಸಿಬ್ಬಂದಿ ಹೋಗಿ ಮೂರು ಬಾರಿ ಆಹಾರ, ನೀರು ಹಂಚುತ್ತಾರೆ’ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ನಾಗರಾಜ್ ತಿಳಿಸಿದರು.

ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದಾಗ ಬಡವರು ಹಸಿವಿನಿಂದ ಬಳಲಬಾರದು ಎಂದು ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟಿನ್ ಯೋಜನೆಯನ್ನು ರೂಪಿಸಿ ಜಾರಿ ಮಾಡಿದರು. ಆದರೆ ವರ್ಷಗಳೇ ಉರುಳಿದರು, ಸರ್ಕಾರಗಳೇ ಬದಲಾದರೂ ಬಾಗೇಪಲ್ಲಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲಾಗಿಲ್ಲ. ಬಡವರ,ನಿರ್ಗತಿಕರ ಪರವಾದ ಯೋಜನೆಗಳಿಗೆ ಶಾಸಕರ, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಏತಕ್ಕೆ ಎಂದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ದಲಿತರಿಗೆ, ಆಟೋ-ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಿಗಳಿಗೆ, ವಿಶೇಷ ಪ್ಯಾಕೇಜ್ ನೀಡಲು- ವೀರೇಶ್ ಒತ್ತಾಯ

Published

on

ರಾಯಚೂರು ಮೇ.17 :- ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇ 24 ರವರೆಗೆ ಲಾಕ್‌ಡೌನ್ ಜಾರಿಗೊಳಿಸಿದ ಕಾರಣ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಡ ಮತ್ತು ದಿನಗೂಲಿ ಕಾರ್ಮಿಕರು, ಆಟೋ-ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಅನೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಹೀಗಾಗಿ ಬಡವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ವೀರೇಶ್ ರವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೇರಳ, ತಮಿಳುನಾಡು ಹಾಗೂ ದೆಹಲಿ ಸರ್ಕಾರಗಳು ಈಗಾಗಲೇ ಜನರಿಗೆ ವಿಶೇಷ ಪ್ಯಾಕೇಜ್ ಘೋಷಿಸಿವೆ.

ಆದರೆ, ಕರ್ನಾಟಕ ಸರ್ಕಾರ ಮಾತ್ರ ವಿಶೇಷ ಪ್ಯಾಕೇಜ್ ಘೋಷಣೆ ಮಾಡದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಅವರ ಉಪಜೀವನ ನಡೆಯಬೇಕಾದರೆ ಬಹಳ ಕಷ್ಟವಾಗಿದೆ, ಆದ್ದರಿಂದ ಸರಕಾರ ಉಚಿತವಾಗಿ
15 ಕೆ.ಜಿ. ಅಕ್ಕಿ ಜೊತೆ ಅಗತ್ಯ ವಸ್ತುಗಳನ್ನು ತಕ್ಷಣ ಒದಗಿಸಿ ಅವರ ಜೀವ ಉಳಿಸಬೇಕು.

ದಲಿತರಿಗೆ ಹಾಗೂ ಇತರೆ ಬಡವರಿಗೆ ರೂ 10 ಸಾವಿರ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಸರಕಾರಕ್ಕೆ ಈ ಮೂಲಕ ಆಗ್ರಹಿಸಿದರು.

ಕೋವಿಡ್ -19 ದಲಿತ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕೇರಳ ಮಾದರಿಯಲ್ಲಿ ಕೋವಿಡ್ ಲಸಿಕೆಯನ್ನು ದಲಿತರು ವಾಸಿಸುವ ಕಾಲೋನಿ ಪ್ರದೇಶಗಳಿಗೆ ತೆರಳಿ ಲಸಿಕೆ ಹಾಕುಬೇಕು ಎಂದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಹರಳಕೆರೆ ಗ್ರಾಮದಲ್ಲಿ ಹಸುವನ್ನು ಬಲಿತೆಗೆದುಕೊಂಡ ಚಿರತೆ : ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

Published

on

ಮಂಡ್ಯ : ಮದ್ದೂರು ತಾಲೂಕು ಕೊಪ್ಪ ಹೋಬಳಿಯ ಹರಳಕೆರೆ ಗ್ರಾಮದಲ್ಲಿ ಇಂದು ಚಿರತೆಯು ಗ್ರಾಮವಾಸಿಯಾದ ಶೇಖರ್ ಎಂಬುವರ ಹಸುವನ್ನು ಬಲಿತೆಗೆದುಕೊಂಡಿದೆ. ಇದಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಗ್ರಾಮದ ಮುಖಂಡರು ಇನ್ನು ಮುಂದೆ ಯಾವುದೇ ರೀತಿಯ ಕಹಿ ಘಟನೆಗಳು ನಡೆಯದ ರೀತಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ಬಂಧಿಸಬೇಕು ಎಂದರು.

Continue Reading

ಸುದ್ದಿ

ಸ್ತಬ್ಧಗೊಂಡ ಅಶೋಕನ ನಾಡು, ಬಿಕೋ ಎನ್ನುತ್ತಿರುವ ರಸ್ತೆಗಳು

Published

on

ಸ್ತಬ್ಧಗೊಂಡ ಅಶೋಕನ ನಾಡು, ಬಿಕೋ ಎನ್ನುತ್ತಿರುವ ರಸ್ತೆಗಳು -ಪೊಲೀಸ್ ಹಾಗೂ ಪುರಸಭೆ ಸಿಬ್ಬಂದಿಗಳ ಸರ್ಪಗಾವಲು

ಮಸ್ಕಿ :- ತಾಲೂಕಿನಾದ್ಯಂತ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮೂರು ದಿನ ( ಸಂಪೂರ್ಣ ) ಲಾಕ್ ಡೌನ್ ಗೆ ಮೊದಲ ದಿನ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು‌ಬಂದಿದ್ದು.

ಬಹುತೇಕ ತಾಲೂಕಿನಾದ್ಯಂತ ಸ್ತಬ್ಧಗೊಂಡಿದ್ದು. ಮಸ್ಕಿ ನಗರ ಸೇರಿದಂತೆ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಾಗೂ ಮಸ್ಕಿ ಪಟ್ಟಣದಲ್ಲಿ ಪ್ರಮುಖ ವೃತ್ತ ರಸ್ತೆ ಬೀದಿಗಳು ಬಿಕೋ ಎನ್ನುತ್ತಿವೆ.

ಇನ್ನೂ ಮೂರು ದಿನಗಳ ಕಾಲ ಅಗತ್ಯ ವಸ್ತು ಖರೀದಿಗೆ ಹೋಗುವ ಹಾಗೂ ಮನೆಯಿಂದ ಹೊರ ಬರಬಾರದೆಂಬ ಆದೇಶದಿಂದ ಜನಗಳು ಮನೆ ಸೇರಿಕೊಂಡಿದ್ದಾರೆ.

ಮಸ್ಕಿ ತಾಲೂಕಾದ್ಯಂತ ಹಾಗೂ ಪಟ್ಟಣ ಸೇರಿದಂತೆ ರವಿವಾರ ಮುಂಜಾನೆ 6 ಗಂಟೆಯಾಗುತ್ತಿದ್ದಂತೆ ಮಾರುಕಟ್ಟೆಗಳನ್ನು ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿಗಳು ಮುಚ್ಚಿಸಿದರು.

ಮಸ್ಕಿ ಸೇರಿದಂತೆ ಬಸ್ ನಿಲ್ದಾಣದಲ್ಲಿ ಔಷಧ ಅಂಗಡಿ ಹಾಗೂ ಹಾಲಿನ ಅಂಗಡಿ ಮಾತ್ರ ತೆರೆದಿದ್ದು ಲಿಂಗಸುಗೂರು – ಸಿಂಧನೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಡಿಮೆ ಇದ್ದದ್ದು ಕಂಡುಬಂತು.

ನಗರದಲ್ಲಿ ಜನ ಸಂಚಾರ ವಿರಳವಾಗಿದ್ದು ಮಸ್ಕಿ ತಾಲೂಕಿನಲ್ಲಿ ಕೋರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಸಂಪೂರ್ಣ ಲಾಕ್ ಡೌನ್ ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗ್ರಾಹಕರನ್ನು ಹೊರಗೆ ಕಳುಹಿಸಿ, ಮಾರುಕಟ್ಟೆ ಪ್ರವೇಶಿಸುವ ಮಾರ್ಗಕ್ಕೆ ಬ್ಯಾರಿಕೇಡ್ ಅಡ್ಡ ಇಟ್ಟ ದೃಶ್ಯಗಳು ಕಂಡುಬಂತು ಅಶೋಕ ವೃತ್ತ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಕನಕ ವೃತ್ತ, ಸೇರಿದಂತೆ ಬಹುತೇಕ ಕಡೆ ಬಿಕೋ ಎನ್ನುತ್ತಿದ್ದ‌ ದೃಶ್ಯ ಕಂಡು ಬಂದಿದ್ದು ಸಂಪೂರ್ಣ ಅಘೋಷಿತ ಲಾಕ್ ಡೌನ್ ಸ್ಥಿತಿ ನಿರ್ಮಾಣವಾಗಿದೆ.

ಯಾರೊಬ್ಬರೂ ಕೂಡ ರಸ್ತೆಗಳಿಗೆ ಇಳಿಯುವಂತಿಲ್ಲ. ರಸ್ತೆಗಿಳಿದರೆ ಲಾಠಿ ಚಾರ್ಜ್ ಮಾಡುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದು ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಕೆಲವೆಡೆ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಖಡಕ್​ ಎಚ್ಚರಿಕೆ ಕೊಡಲಾಗಿದೆ.

ಎಲ್ಲ ನಾಕಾಬಂದಿಗಳಲ್ಲೂ ಪೊಲೀಸರು ಪ್ರತಿ ವಾಹನಗಳ ದಾಖಲಾತಿ ಪರಿಶೀಲಿಸುತ್ತಿದ್ದಾರೆ.

ಕಾರಣ ಇಲ್ಲದೆ ರಸ್ತೆಗಿಳಿದವರಿಗೆ ಫುಲ್ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮಾರುಕಟ್ಟೆ, ಬಸ್​ ನಿಲ್ದಾಣಗಳು ಬಿಕೋ ಎನ್ನುತ್ತಿರುವ ದೃಶ್ಯಗಳು ಕಂಡುಬಂದವು.

ಹಾಲು , ಮೆಡಿಕಲ್ , ಆಸ್ಪತ್ರೆ , ಪೆಟ್ರೋಲ್ ಬಂಕ್ ಮಾತ್ರ ತೆರೆಯಲು ಅವಕಾಶ ನೀಡಲಾಗಿದ್ದು.

ಮದ್ಯ ಮಾರಾಟ ಬಂದಾಗಿದ್ದು ಸಮೂಹ ಸಾರಿಗೆ ಮಾತ್ರವಲ್ಲದೆ ಖಾಸಗಿ ವಾಹನಗಳು ರಸ್ತೆಗೆ ಇಳಿಯಲು ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿಗಳು ಅವಕಾಶ ನೀಡಲಿಲ್ಲ ಹೀಗಾಗಿ ಮಸ್ಕಿ ಪ್ರಮುಖ ರಸ್ತೆಗಳು ನಿರ್ಜನಗೊಂಡಿದ್ದು ಇಡೀ ನಗರವೇ ಬಿಕೋ ಎನ್ನುತ್ತಿತ್ತು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಹನುಮಂತಮ್ಮ ನಾಯಕ್ , ಹನುಮಂತ ಪೊಲೀಸ್ , ರಮೇಶ್ ಬಿಲ್ ಕಲೆಕ್ಟರ್ , ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಪುರಸಭೆ ಸಿಬ್ಬಂದಿ ಸೇರಿದಂತೆ ತಾಲೂಕಿನ ಎಲ್ಲಾ ಕಡೆ ಬಂದ್ ಮಾಡಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್