ದೇಶ
ಪಿಎಂ-ಕಿಸಾನ್ ಯೋಜನೆಯಡಿ 8ನೇ ಕಂತಿನ ಹಣಕಾಸಿನ ನೆರವು ಬಿಡುಗಡೆ
ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಪಿಎಂ-ಕಿಸಾನ್ ಯೋಜನೆಯಡಿ 8ನೇ ಕಂತಿನ ಹಣಕಾಸಿನ ನೆರವನ್ನು ಬಿಡುಗಡೆ ಮಾಡಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.
ರಾಜ್ಯದ 55.36 ಲಕ್ಷ ರೈತರ ಖಾತೆಗಳಿಗೆ ಪ್ರಸಕ್ತ ವರ್ಷದ ಮೊದಲ ಕಂತು ಒಟ್ಟು 985.61 ಕೋಟಿ ರೂ. ವರ್ಗಾವಣೆಗೊಂಡಿದೆ.
ದೇಶ
ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿ ಯಾಗಿ ಎನ್.ವಿ ರಮಣ ಪ್ರಮಾಣ ಸ್ವೀಕಾರ
ನವ ದೆಹಲಿ : ನ್ಯಾಯಮೂರ್ತಿ ಎನ್.ವಿ ರಮಣ ಇಂದು ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸುತ್ತಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಿಜೆಐಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರ ಅಧಿಕಾರದ ಅವಧಿ ನಿನ್ನೆಗೆ ಮುಕ್ತಾಯವಾಗಿದೆ. ಹೀಗಾಗಿ ಸಿಜೆಐ ಆಗಿ ರಮಣ ಅವರು ಅಧಿಕಾರ ಸ್ವೀಕರಿಸುತ್ತಿದ್ದಾರೆ.
ದೇಶ
ಚಾಲಕನೇ ಅಪರಾಧಿ ಎಂದು ನ್ಯಾಯಾಧೀಶರು ಷರಾ
ಚಾಲಕನೇ ಅಪರಾಧಿ ಎಂದು ನ್ಯಾಯಾಧೀಶರು ಷರಾ : ಹನ್ನೆರಡು ವರ್ಷಗಳ ಹಿಂದಿನ ಅಪಘಾತ ಪ್ರಕರಣಕ್ಕೆ ಹೈ ಕೋರ್ಟ್ ಟ್ವಿಸ್ಟ್
ಬೆಂಗಳೂರು: ಚಾಲಕನೇ ಅಪರಾಧಿ ಎಂದು ನ್ಯಾಯಾಧೀಶರು ಷರಾ ಬರೆದಿದ್ದ ಹನ್ನೆರಡು ವರ್ಷಗಳ ಹಿಂದಿನ ಅಪಘಾತ ಪ್ರಕರಣಕ್ಕೆ ಹೈ ಕೋರ್ಟ್ ಟ್ವಿಸ್ಟ್ ನೀಡಿದೆ.ತನ್ನ ಕೆಳಗಿನ ಎರಡು ನ್ಯಾಯಾಲಯಗಳು ನೀಡಿದ್ದ ತೀರ್ಪನ್ನು ಪಕ್ಕಕ್ಕಿಟ್ಟಿರುವ ಕೋರ್ಟ್, ಈ ಅಪಘಾತಕ್ಕೆ ರಸ್ತೆ ಗುಂಡಿಯೇ ಕಾರಣ ಎಂಬ ಮಹತ್ವದ ತೀರ್ಪು ಕೊಟ್ಟಿದೆ.
2006ರಲ್ಲಿ ಗುಡಿಬಂಡೆ-ಬಾಗೇಪಲ್ಲಿ ಮುಖ್ಯರಸ್ತೆಯಲ್ಲಿ ಮ್ಯಾಕ್ಸಿ ಕ್ಯಾಬ್ ಟಯರ್ ಸ್ಫೋಟಗೊಂಡು ಪಲ್ಟಿಹೊಡೆದಿತ್ತು. ಘಟನೆಯಲ್ಲಿ ಕಾರಿನಲ್ಲಿದ್ದ ಅಶ್ವತ್ಥಮ್ಮ ಎಂಬುವವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ವಾಹನ ಚಾಲಕನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
2009ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್ಸಿ ಕೋರ್ಟ್, ಐಪಿಸಿ ಕಾಯ್ದೆ 279,337,338,304-ಎ ಅಡಿ ಚಾಲಕ ಅತಾವುಲ್ಲಾಗೆ ಒಂದೂವರೆ ವರ್ಷ ಜೈಲು ಹಾಗೂ 2.5 ಸಾವಿರ ದಂಡ ವಿಧಿಸಿತ್ತು.ಜೆಎಂಎಫ್ಸಿ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸೆಷನ್ ಕೋರ್ಟ್ ಮೊರೆ ಹೋದ ಡ್ರೈವರ್ಗೆ ಅಲ್ಲಿಯೂ ನ್ಯಾಯ ಸಿಗಲಿಲ್ಲ. ಇದೀಗ ಹೈಕೋರ್ಟ್ ಈ ಅಪಘಾತ ಪ್ರಕರಣ ಸಂಬಂಧ ಮಹತ್ವದ ತೀರ್ಪು ಪ್ರಕಟಿಸಿದ್ದು, ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಗರಂ ಆಗಿದೆ.ಸಾಲು ಸಾಲು ರಸ್ತೆಗುಂಡಿಗಳೇ ಅಶ್ವತ್ಥಮ್ಮಳ ಸಾವಿಗೆ ಕಾರಣ. ಪ್ರಕರಣದಲ್ಲಿ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ. ಚಾಲಕನ ನಿರ್ಲಕ್ಷ್ಯವನ್ನ ಸಾಬೀತು ಮಾಡುವಲ್ಲಿ ಪೊಲೀಸರು ವಿಫಲ ವಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ದೇಶ
ಗಾಂಧೀಜಿ ಮೊಮ್ಮಗ ಕೊರೊನಾಗೆ ಬಲಿ
ದಕ್ಷಿಣ ಆಫ್ರಿಕಾ : ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ಸತೀಶ್ ಧುಪೆಲಿಯಾ ಅವರು ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಂಡ ಮೂರು ದಿನಗಳ ನಂತರ ಕೋವಿಡ್-19ನಿಂದಾಗಿ ಭಾನುವಾರ ಜೋಹಾನ್ಸ್‌ಬರ್ಗ್‌ನಲ್ಲಿ ಮೃತಪಟ್ಟಿರುವುದಾಗಿ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಒಂದು ತಿಂಗಳ ಕಾಲ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೋವಿಡ್-19 ಸೋಂಕು ತಗುಲಿದ್ದರಿಂದಾಗಿ ಮೃತಪಟ್ಟಿರುವುದಾಗಿ ಧುಪೆಲಿಯಾ ಅವರ ಸಹೋದರಿ ಉಮಾ ಧುಪೆಲಿಯಾ-ಮೆಸ್ಟ್ರಿ ದೃಢಪಡಿಸಿದರು.
‘ನ್ಯುಮೋನಿಯಾದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಸಹೋದರ ಒಂದು ತಿಂಗಳ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮತ್ತು ಆ ವೇಳೆ ಕೊರೊನಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಅವರಿಗೆ ಇಂದು (ಭಾನುವಾರ) ಸಂಜೆ ತೀವ್ರ ಹೃದಯಾಘಾತವಾಗಿತ್ತು’ ಎಂದು ಎಂಎಸ್ ಉಮಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಬಹುಪಾಲು ಜೀವನವನ್ನು ಮಾಧ್ಯಮಗಳಲ್ಲಿ, ವಿಶೇಷವಾಗಿ ವಿಡಿಯೊಗ್ರಾಫರ್ ಮತ್ತು ಫೊಟೊಗ್ರಾಫರ್ ಆಗಿ ಕಳೆದ ಧುಪೆಲಿಯಾ, ಮಹಾತ್ಮ ಗಾಂಧಿ ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸಲು ಡರ್ಬನ್ ಬಳಿಯ ಫೀನಿಕ್ಸ್ ಸೆಟಲ್‌ಮೆಂಟ್‌ನಲ್ಲಿ ಸ್ಥಾಪಿತವಾದ ಗಾಂಧಿ ಅಭಿವೃದ್ಧಿ ಟ್ರಸ್ಟ್‌ಗೆ ಸಹಾಯ ಮಾಡುವಲ್ಲಿ ಬಹಳ ಸಕ್ರಿಯರಾಗಿದ್ದರು. ಅಲ್ಲದೆ ಎಲ್ಲಾ ಸಮುದಾಯಗಳ ಅಗತ್ಯವಿರುವವರಿಗೆ ಸಹಾಯ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದರು ಮತ್ತು ಹಲವಾರು ಸಾಮಾಜಿಕ ಕಲ್ಯಾಣ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಅವರ ಸ್ನೇಹಿತರು ಮತ್ತು ಆತ್ಮೀಯರು ಮೃತರಿಗೆ ಗೌರವ ಸಲ್ಲಿಸಿದ್ದಾರೆ.
ಧುಪೆಲಿಯಾ ಅವರು 1860ರ ಹೆರಿಟೇಜ್ ಫೌಂಡೇಶನ್ ಮಂಡಳಿಯ ಸದಸ್ಯರೂ ಆಗಿದ್ದರು.
-
Politics2 weeks ago
ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
-
ಸುದ್ದಿ6 days ago
ಸಿಎಂ ತವರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟ, 10 ಕ್ಕೂ ಹೆಚ್ಚು ಕಾರ್ಮಿಕರು ಬಲಿ
-
ಸುದ್ದಿ2 weeks ago
ಆಂಬ್ಯುಲೆನ್ಸ್ ನಲ್ಲೇ ಹೆರಿಗೆ, ಗಂಡು ಮಗುವಿಗೆ ಜನ್ಮ ಕೊಟ್ಟ ತಾಯಿ
-
ಕೊರೊನಾ3 weeks ago
ಪಟ್ಟಣದ ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಂದ ಕಟ್ಟು ನಿಟ್ಟಿನ ಕ್ರಮ