ರಾಜ್ಯ
ಹೈದರಾಬಾದ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಹಾಲ್ ಗೆ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಸರು
ಹೈದರಾಬಾದ್: ಹೈದರಾಬಾದ್ ನ ಸರ್ದಾರ್ ವಲ್ಲಭಬಾಯ್ ಪಟೇಲ್ ನ್ಯಾಶನಲ್ ಪೊಲೀಸ್ ಅಕಾಡೆಮಿ ಇದರ ಹಾಲ್ ವೊಂದಕ್ಕೆ ದಿವಂಗತ ಐಪಿಎಸ್ ಅಧಿಕಾರಿ ಡಾ.ಕೆ ಮಧುಕರ್ ಶೆಟ್ಟಿ ಅವರ ಹೆಸರನ್ನು ಇಡಲಾಗಿದೆ.
ಪೊಲೀಸ್ ಅಕಾಡೆಮಿಯ ಹಾಲ್ ನಂ.106ಕ್ಕೆ ದಿವಂಗತ ಐಪಿಎಸ್ ಅಧಿಕಾರಿ ಡಾ.ಕೆ ಮಧುಕರ್ ಶೆಟ್ಟಿ ಅವರ ಹೆಸರನ್ನು ಇಡಲಾಗಿದೆ.
ಮಧುಕರ್ ಶೆಟ್ಟಿ ಅವರ ಬದ್ಧತೆ, ಸಮರ್ಪಣೆಯನ್ನು ಗೌರವಿಸಿ, ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳಿಗೆ ಅವರು ಮಾದರಿ ಎಂಬ ಕಾರಣಕ್ಕಾಗಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಸಹಾಯಕ ನಿರ್ದೇಶಕ ಡಾ.ಕೆ.ಪಿ.ಎ. ಇಲ್ಯಾಸ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Politics
ಕೋವಿಡ್-19 ಸೋಂಕಿತರ ಚಿಕಿತ್ಸೆಗೆ 86 ಐ.ಸಿ.ಯು ಬೆಡ್
ಬೆಂಗಳೂರು : ಕೋವಿಡ್-19 ಸೋಂಕಿತರ ಚಿಕಿತ್ಸೆಗೆ 86 ಐ.ಸಿ.ಯು ಬೆಡ್ ಗಳನ್ನು ಟೆಕ್ಸಾಸ್ ಇನ್ಸ್ ಟ್ರುಮೆಂಟ್ಸ್ ಸಂಸ್ಥೆ ಒದಗಿಸಲು ಮುಂದಾಗಿದೆ. ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾದ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಈ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ರಾಜೀವ್ ಖುಷು, ಗೌರವ್ ಜಬುಲಿ, ಸೇತುಲ್ ಥಕ್ರಾರ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹಾಗೂ ಐ.ಸಿ.ಯು ಆಸ್ಪತ್ರೆಗಳ ನಿರ್ಮಾಣಕ್ಕೆ ನೋಡಲ್ ಅಧಿಕಾರಿಯಾಗಿರುವ ಡಾ|| ಪಿ.ಎಸ್.ಹರ್ಷ ಉಪಸ್ಥಿತರಿದ್ದರು.
ರಾಜ್ಯ
ಕೊರೊನಾ ಸೋಂಕು ನಿಯಂತ್ರಣದ ಹಿನ್ನೆಲೆ : ಪಟ್ಟಣದಲ್ಲಿ ರಾಸಾಯನಿಕ ಔಷಧ ಸಿಂಪಡಣೆ
ಕೊಪ್ಪಳ : ಹಿರೇಕೆರೂರು ತಾಲೂಕು ಆಡಳಿತ, ಪಟ್ಟಣ ಪಂಚಾಯತ್, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ವತಿಯಿಂದ, ಕೊರೋನಾ ಸೋಂಕು ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಹಿನ್ನೆಲೆ ಹಿರೇಕೆರೂರು ಪಟ್ಟಣದಲ್ಲಿ ರಾಸಾಯನಿಕ ಔಷಧ ಸಿಂಪಡಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಶ್ರೀ ಜಿ.ಎನ್. ಶೆಟ್ಟರ್, ಸಿಪಿಐ ಶ್ರೀ ಆರ್.ಆರ್. ಪಾಟೀಲ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀ ಸಂತೋಷ ಚಂದ್ರಕೇರಿ, ಪಿಎಸ್ಐ ಶ್ರೀ ದೇವರಾಜ, ಶ್ರೀ ರಾಜು, ಕಂದಾಯ ನಿರೀಕ್ಷಕರಾದ ಶ್ರೀ ನಟರಾಜ ನಂದೀಹಳ್ಳಿ, ಡಾ. ಶಿವಪ್ರಸಾದ, ಶ್ರೀ ಆನಂದ ದೇಸಾಯಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಧಾ ಚಿಂದಿ, ಸದಸ್ಯರಾದ ಶ್ರೀ ಹರೀಶ ಕಲಾಲ, ಶ್ರೀಮತಿ ರಜಿಯಾ ಅಸಾದಿ, ಶ್ರೀ ಅಲ್ತಾಫ್ಙಾನ್ ಪಠಾಣ, ಶ್ರೀ ಶಂಷಾದ ಬಳಿಗಾರ, ಶ್ರೀ ಹನುಮಂತಪ್ಪ ಕುರುಬರ ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.
ಮಾಹಿತಿ
ಹಾಲ್ ಟಿಕೆಟ್ ತಿದ್ದುಪಡಿ : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ
ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ವಿದ್ಯಾರ್ಥಿ ಸಾಧನೆ ಟ್ರಾಕಿಂಗ್ ವ್ಯವಸ್ಥೆಯಲ್ಲಿ ಪ್ರಕಟಿಸಲಾಗಿದ್ದು, ಯಾವುದೇ ತಿದ್ದುಪಡಿಗಳಿದ್ದಲ್ಲಿ ಮೇ. 20 ರೊಳಗೆ ಮನವಿ ಸಲ್ಲಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
ಎಸ್ ಎಟಿಎಸ್ ಪೋರ್ಟಲ್ ಮೂಲಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕರಡು ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಪರಿಶೀಲಿಸಿ ತಿದ್ದುಪಡಿಗಳಿದ್ದರೆ ಅದನ್ನು ಕೆಂಪು ಶಾಯಿಯಿಂದ ಗುರುತು ಮಾಡಿ ಹಾಗೂ ತಿದ್ದುಪಡಿಗೆ ತಮ್ಮ ಕಾಲೇಜು ಪ್ರಾಂಶುಪಾಲರ ಮೊಹರು ಹಾಕಿ ದೃಢೀಕರಿಸಿ ಇ-ಮೇಲ್ 2puatcorrection [email protected] ವಿಳಾಸಕ್ಕೆ ಸಲ್ಲಿಸಬೇಕು.
-
Politics1 week ago
ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
-
ಸುದ್ದಿ4 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ4 days ago
ಸಿಎಂ ತವರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟ, 10 ಕ್ಕೂ ಹೆಚ್ಚು ಕಾರ್ಮಿಕರು ಬಲಿ
-
ಸುದ್ದಿ2 weeks ago
ಆಂಬ್ಯುಲೆನ್ಸ್ ನಲ್ಲೇ ಹೆರಿಗೆ, ಗಂಡು ಮಗುವಿಗೆ ಜನ್ಮ ಕೊಟ್ಟ ತಾಯಿ