Connect with us
Ad Widget

ಕೊರೊನಾ

ಚಿತ್ರರಂಗದ ಕಾರ್ಮಿಕರಿಗೆ ರಿಯಲ್ ಸ್ಟಾರ್ ಉಪೇಂದ್ರ ನೆರವು

Published

on

ಬೆಂಗಳೂರು: ಚಿತ್ರೀಕರಣವಿಲ್ಲದೇ ಕಾರ್ಮಿಕರಿಗೆ ಒಪ್ಪೊತ್ತಿನ ಊಟಕ್ಕೂ ತೊಂದರೆಯಾಗಿದೆ. ಹೀಗಾಗಿ ಕಾರ್ಮಿಕರಿಗೆ ದೈನಂದಿನ ದಿನಸಿ ಕಿಟ್ ನ್ನು ಕಾರ್ಮಿಕರ ಸಂಘದ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ವಿತರಿಸಲಿದ್ದಾರೆ.

ಕೊರೋನಾದಿಂದಾಗಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರಿಗೆ ರಿಯಲ್ ಸ್ಟಾರ್ ಉಪೇಂದ್ರ ನೆರವಾಗಲು ಮುಂದೆ ಬಂದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಉಪೇಂದ್ರ ಅಗತ್ಯವಿದ್ದವರು ಕಾರ್ಮಿಕರ ಒಕ್ಕೂಟವನ್ನು ಸಂಪರ್ಕಿಸಿ ಎಂದಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ದೇಣಿಗೆಯಾಗಿ ಬಂದ ಹಣವನ್ನು ಕಿರುತೆರೆ ಕಾರ್ಮಿಕರ ನೆರವಿಗೆ ಒದಗಿಸಲಿದ್ದಾರೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಕೊರೊನಾ

ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ

Published

on

ಕೋಲಾರ : ಮಾಲೂರಿನ ಸಾರ್ವಜನಿಕ ಆಸ್ಪತ್ರೆ ಮತ್ತು ಕೊರೋನಾ ವಾರ್ ರೂಮ್ ಗೆ ಭೇಟಿ ನೀಡಿದ ಅರವಿಂದ ಲಿಂಬಾವಳಿ ರವರು ಪರಿಶೀಲನೆ ನಡೆಸಿದರು.
ಈ ವೇಳೆ ಕೊರೋನಾ ರೋಗಿಗಳು ಹಾಗೂ ಹೊರರೋಗಿಗಳ ವಿಭಾಗದ ಮಾಹಿತಿ ಪಡೆದು, ಬೆಡ್ , ಆಕ್ಸಿಜನ್ ಹಾಗೂ ಔಷಧಗಳ ಲಭ್ಯತೆ ಕುರಿತು ಮಾಹಿತಿ ಪಡೆದು, ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಮಾಲೂರು ಶಾಸಕರಾದ ಶ್ರೀ ನಂಜೇಗೌಡ, ಕೋಲಾರ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ , ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀ ಎನ್. ಎಂ. ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Continue Reading

Politics

ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 5 ಕೋಟಿ ರೂ ದೇಣಿಗೆ

Published

on

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಇಂದು 5 ಕೋಟಿ ರೂ.ಗಳ ದೇಣಿಗೆಯ ಚೆಕ್ ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹಸ್ತಾಂತರ ಮಾಡಲಾಯಿತು.

ಸಹಾಕಾರ ಸಚಿವ ಎಸ್.ಟಿ.ಸೋಮಶೇಖರ್, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Continue Reading

ಕೊರೊನಾ

ಕೊರೊನಾ ಆತಂಕದ ಜೊತೆಗೆ ಬಿಸಿಲಿನ ತಾಪಕ್ಕೆ ತತ್ತರ

Published

on

ಬಾಗೇಪಲ್ಲಿ: ಕೊರೊನಾ ಎರಡನೇ ಅಲೆಯ ತೀವ್ರತೆಗೆ ಜನ ಸಾವು,ನೋವುಗಳನ್ನು ಅನುಭವಿಸುತ್ತಿದ್ದಾರೆ. ಕೋವಿಡ್ ವೈರಾಣು ಹರಡದಂತೆ ತಡೆಯಲು ಲಾಕ್ಡೌನ್ ಕೂಡ ಜಾರಿಯಲ್ಲಿದೆ. ಇದರಿಂದಾಗಿ ನಗರ,ಪಟ್ಟಣ ಪ್ರದೇಶಗಳಲ್ಲಿನ ಬಡ ಜನರ ಬದುಕಿನ ಮೇಲೆ ಭಾರಿ ಹೊಡೆತ ಬಿದ್ದಂತಾಗಿದೆ.

ಇನ್ನು ತಾಲ್ಲೂಕಿನ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಇದರ ತೀವ್ರತೆ ಕೊಂಚ ಕಡಿಮೆಯಾದರೂ ಜನತೆಗೆ ಅಗತ್ಯ ಸಾಮಾಗ್ರಿಗಳು ದೊರೆಯದೆ ಕಂಗಾಲಾಗಿದ್ದಾರೆ‌. ಬಹುತೇಕ ಗ್ರಾಮೀಣ ಜನರು ಹೈನುಗಾರಿಕೆಯನ್ನು ನಂಬಿಕೊಂಡಿದ್ದು, ಎಂದಿನಂತೆ ಹಸು,ಕುರಿ,ಮೇಕೆ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಬಿಸಿಲಿನ ಬೇಗೆ ಮಾತ್ರ ಉಸಿರು ಕಟ್ಟುವಂತಿದೆ. ಮನೆಯಲ್ಲಿದ್ದರೆ ಫ್ಯಾನ್ ನಿರಂತರವಾಗಿ ತಿರುಗುತ್ತಿರಬೇಕು. ಹೊರಗಡೆ ಬಂದರೆ ಮರದ ಆಶ್ರಯ ಪಡೆಯಲೇಬೇಕು ಎನ್ನುವಂತಾಗಿದೆ. ಹೀಗಿದ್ದರೂ ಬಿಸಿಲಿನ ಝಳದ ಕಿರುಕುಳ ತಪ್ಪಿದ್ದಲ್ಲ. ಇನ್ನು ಕುರಿಗಾಹಿಗಳ ಪರಿಸ್ಥಿತಿ ಹದೆಗೆಟ್ಟಿದೆ. ದಿನಪೂರ್ತಿ ನೀರಿನ ಬಾಟಲಿಗಳನ್ನು ಹೆಗಲಿಗೆ ತಗಲಾಕಿಕೊಂಡು ಒಯ್ಯಲೇಬೇಕು. ಕುರಿಗಳಿಗೆ ರೋಗರುಜುನೆಗಳು ಹರಡದಂತೆ ನೋಡಿಕೊಳ್ಳಬೇಕು. ಏಕೆಂದರೆ ಬಿಸಿಲಿನ ಹೊಡೆತಕ್ಕೆ ಬೊಬ್ಬೆ ರೋಗ ಬರುವ ಸಂಭವವಿದೆ. ರೋಗ ಬಂದು ಸಾಯುವ ಕುರಿಗಳಿಗೂ ಸರ್ಕಾರದ ಪರಿಹಾರದ ನೆರವು ನಿಲ್ಲಿಸಲಾಗಿದೆ. ಹಾಗಾಗಿ ನಾನಾ ಪೀಕಲಾಟಗಳ ನಡುವೆ ಕುರಿ ಸಾಕಾಣಿಕೆ ಮಾಡಿಕೊಳ್ಳಬೇಕು. ಮಧ್ಹ್ಯಾನ 12 ರಿಂದ 3 ಗಂಟೆಯವರೆಗೂ ಮರಗಳಾಶ್ರಯ ಪಡೆಯಲೇಬೇಕಾಗಿದೆ. ಬಿಸಿ ಹಬೆಯ ಹೊಡೆತಕ್ಕೆ ಸಂರಕ್ಷಿಸಬೇಕು ಕಾಲ ದೂಡಬೇಕಾಗಿದೆ.

ನಾವು ಹೆಚ್ಚಾಗಿ ಕುರಿ,ಮೇಕೆ ಮಂದೆಯನ್ನು ಹುಣಸೆ ಮರ ಅಥವಾ ಹೊಂಗೆ ಮರಗಳ ನೆರಳಲ್ಲಿ ಹಾಕುತ್ತೇವೆ. ಹೊಂಗೆ ಮರದ ನೆರಳು ತಂಪನ್ನು ಕೊಡುತ್ತಾ ,ತಣ್ಣಗೆ ಗಾಳಿ ಬೀಸುತ್ತದೆ. ಮರಗಳನ್ನು ಬೆಳೆಸಿ ಸಂರಕ್ಷಿಸಬೇಕು ಎಂದು ಮಾಡಪಲ್ಲಿ ನಿವಾಸಿ ಶಿವಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್