ಮನರಂಜನೆ
ಡ್ರಗ್ಸ್ ಕೇಸ್ ನಿಂದ ಹೊರಬಂದ ನಟಿ ಮೇಲೆ ಮತ್ತೊಂದು ಎಫ್ ಐ ಆರ್
ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ನಟಿ ಸಂಜನಾ ಗಲ್ರಾನಿ ಜೈಲು ಸೇರಿದ್ದರು. ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಅವರು ಜೈಲಿನಿಂದ ಹೊರ ಬಂದಿದ್ದರು. ಕೊವಿಡ್ ಸಂದರ್ಭದಲ್ಲಿ ಅವರು ಸಾಮಾನ್ಯರ ಸಹಾಯಕ್ಕೆ ನಿಂತಿದ್ದಾರೆ. ಈ ಮಧ್ಯೆ, ಸಂಜನಾ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಇದರಿಂದ ಅವರು ಮತ್ತೆ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ.
ಸಂಜನಾ ಡ್ರಗ್ ಕೇಸ್ನಲ್ಲಿ ಬೇಲ್ ಪಡೆದು ಹೊರ ಬಂದಿದ್ದಾರೆ. ಹೀಗಿರುವಾಗಲೇ ಹಳೆಯ ಕೇಸ್ ಒಂದಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಡೆಲ್ ವಂದನಾ ಜೈನ್ ನೀಡಿದ ದೂರಿನ್ವಯ ಕಬ್ಬನ್ ಪಾರ್ಕ್ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
2019ರಲ್ಲಿ ಲಾವೆಲಿ ರಸ್ತೆಯ ಕ್ಲಬ್ಒಂದಕ್ಕೆ ವಂದನಾ ತೆರಳಿದ್ದರು.
ಅದೇ ಕ್ಲಬ್ನಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಇದ್ದರು. ಆಗ ಸಂಜನಾ ಅವರು ವಂದನಾ ಜೈನ್ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದರು ಎನ್ನಲಾಗಿದೆ.
ಅವಾಚ್ಯ ಶಬ್ದಗಳನ್ನು ಬಳಸದಂತೆ ವಂದನಾ ಜೈನ್ ಸೂಚನೆ ನೀಡಿದ್ದರು. ಈ ವೇಳೆ ವಂದನಾ ಮುಖಕ್ಕೆ ವಿಸ್ಕಿ ಎರಚಿದ ಸಂಜನಾ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಇದೆ. ಈ ಘಟನೆ ವೇಳೆ ವಂದನಾ ಕಣ್ಣಿಗೆ ಗಾಯ ಆಗಿತ್ತು. ಘಟನೆ ಬಳಿಕ ವಂದನಾಗೆ ಸಂಜನಾ ಬೆದರಿಕೆ ಹಾಕಿದ್ದರಂತೆ.
ಈ ಪ್ರಕರಣದ ಬಗ್ಗೆ ವಂದನಾ ಕೋರ್ಟ್ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಕೋರ್ಟ್ ನಿರ್ದೇಶನದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೊನಾ
ಚಿತ್ರರಂಗದ ಕಾರ್ಮಿಕರಿಗೆ ರಿಯಲ್ ಸ್ಟಾರ್ ಉಪೇಂದ್ರ ನೆರವು
ಬೆಂಗಳೂರು: ಚಿತ್ರೀಕರಣವಿಲ್ಲದೇ ಕಾರ್ಮಿಕರಿಗೆ ಒಪ್ಪೊತ್ತಿನ ಊಟಕ್ಕೂ ತೊಂದರೆಯಾಗಿದೆ. ಹೀಗಾಗಿ ಕಾರ್ಮಿಕರಿಗೆ ದೈನಂದಿನ ದಿನಸಿ ಕಿಟ್ ನ್ನು ಕಾರ್ಮಿಕರ ಸಂಘದ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ವಿತರಿಸಲಿದ್ದಾರೆ.
ಕೊರೋನಾದಿಂದಾಗಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರಿಗೆ ರಿಯಲ್ ಸ್ಟಾರ್ ಉಪೇಂದ್ರ ನೆರವಾಗಲು ಮುಂದೆ ಬಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಉಪೇಂದ್ರ ಅಗತ್ಯವಿದ್ದವರು ಕಾರ್ಮಿಕರ ಒಕ್ಕೂಟವನ್ನು ಸಂಪರ್ಕಿಸಿ ಎಂದಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ದೇಣಿಗೆಯಾಗಿ ಬಂದ ಹಣವನ್ನು ಕಿರುತೆರೆ ಕಾರ್ಮಿಕರ ನೆರವಿಗೆ ಒದಗಿಸಲಿದ್ದಾರೆ.
ಮನರಂಜನೆ
ಬಿಗ್ ಬಾಸ್ ಕನ್ನಡ ಶೋವನ್ನೂ ರದ್ದು ಮಾಡಲಿ : ಸಾಮಾಜಿಕ ಜಾಲತಾಣದಲ್ಲಿ ಆಗ್ರಹ
ಬೆಂಗಳೂರು: ಕೊರೋನಾನಿಂದಾಗಿ ಎಲ್ಲಾ ಟಿವಿ ಶೋಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಐಪಿಎಲ್ ಕೂಡಾ ರದ್ದಾಗಿದೆ. ಹೀಗಿರುವಾಗ ನೂರಾರು ಜನರು ಕೆಲಸ ಮಾಡುವ ಬಿಗ್ ಬಾಸ್ ಶೋ ಯಾಕೆ ಪ್ರಸಾರ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ. ಬಿಗ್ ಬಾಸ್ ಶೋನಲ್ಲೂ ನೂರಾರು ಜನರು ಕೆಲಸ ಮಾಡುತ್ತಾರೆ. ಅವರ ಸುರಕ್ಷತೆಯೂ ಮುಖ್ಯವಲ್ಲವೇ? ಹಾಗಾಗಿ ಬಿಗ್ ಬಾಸ್ ಕನ್ನಡ ಶೋವನ್ನೂ ರದ್ದು ಮಾಡಲಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ಮನರಂಜನೆ
ನಟಿ ಮೇಘನಾ ಗಾವಂಕರ್ ಗೆ ಇಂದು 36ನೇ ಹುಟ್ಟುಹಬ್ಬದ ಸಂಭ್ರಮ
ಬೆಂಗಳೂರು : ನಟಿ ಮೇಘನಾ ಗಾವಂಕರ್ ಇಂದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮೇಘನಾ ಗಾವಂಕರ್ ಆರಂಭದಲ್ಲಿ ‘ಕುಮುದ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದರು ನಂತರ 2010ರಂದು ‘ನಮ್ ಏರಿಯಲ್ಲೊಂದಿನ’ ಎಂಬ ಚಿತ್ರದ ಮೂಲಕ ತಮ್ಮ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.
2013ರಂದು ಲವ್ಲಿ ಸ್ಟಾರ್ ಪ್ರೇಮ್ ಜೊತೆ ‘ಚಾರ್ ಮಿನರ್’ ಚಿತ್ರದಲ್ಲಿ ನಟಿಸಿದರು ಈ ಚಿತ್ರದ ಮೂಲಕ ಮೇಘನಾ ಗಾವಂಕರ್ ಸಾಕಷ್ಟು ಜನಪ್ರಿಯತೆ ಪಡೆದರು. ನಟಿ ಮೇಘನಾ ಗಾವಾಂಕರ್ 1985 ಮೇ 8ರಂದು ಕಲಬುರಗಿಯಲ್ಲಿ ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
-
Politics1 week ago
ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
-
ಸುದ್ದಿ6 days ago
ಸಿಎಂ ತವರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟ, 10 ಕ್ಕೂ ಹೆಚ್ಚು ಕಾರ್ಮಿಕರು ಬಲಿ
-
ಸುದ್ದಿ2 weeks ago
ಆಂಬ್ಯುಲೆನ್ಸ್ ನಲ್ಲೇ ಹೆರಿಗೆ, ಗಂಡು ಮಗುವಿಗೆ ಜನ್ಮ ಕೊಟ್ಟ ತಾಯಿ
-
ಕೊರೊನಾ3 weeks ago
ಪಟ್ಟಣದ ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಂದ ಕಟ್ಟು ನಿಟ್ಟಿನ ಕ್ರಮ