Connect with us
Ad Widget

ಸುದ್ದಿ

ಮಸ್ಕಿ: ಈದ್‌ ಉಲ್ ಫಿತ್ರ್ ಸರಳ ಆಚರಣೆ : ಧರ್ಮದ ಗುರುಗಳು ಜಿಲಾನಿ ಖಾಜಿ

Published

on

ಮಸ್ಕಿ:- ಕೋವಿಡ್‌ನಿಂದ ಈ ವರ್ಷವೂ ಈದ್‌ ಉಲ್ ಫಿತ್ರ್‌ ಸಂಭ್ರಮಕ್ಕೆ ಅಡ್ಡಿಯಾಗಿದ್ದು, ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಿಸುವಂತೆ ಧರ್ಮ ಬೋಧಕರು ಮುಸ್ಲಿಮರಿಗೆ ಸಂದೇಶ ನೀಡಿದ್ದಾರೆ.

ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ ಮಸೀದಿ ಹಾಗೂ ದರ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ಕೊರೊನಾ ಎರಡನೇ ಅಲೆಯು ವ್ಯಾಪಿಸುತ್ತಿರುವುದು ಆತಂಕ ಮೂಡಿಸಿದೆ ಎಂದು ಮನವರಿಕೆ ಮಾಡುತ್ತಿದ್ದಾರೆ.

ರಂಜಾನ್‌ ಉಪವಾಸ ಆರಂಭವಾಗುವ ಪೂರ್ವದಲ್ಲೇ ಕೊರೊನಾ ವ್ಯಾಪಿಸಿಕೊಂಡಿತ್ತು. ಸಂಪೂರ್ಣ ಹಬ್ಬದ ಸಂಭ್ರಮ ಕಸಿದುಕೊಂಡಿದ್ದರಿಂದ ಪ್ರತಿವರ್ಷದಂತೆ ಹೊಸ ಬಟ್ಟೆಗಳನ್ನು ಖರೀದಿಸುವುದಕ್ಕೂ ಸಾಧ್ಯವಾಗಿಲ್ಲ. ಮನೆಗಳಲ್ಲಿ ಮತ್ತು ಮನಗಳಲ್ಲಿ ಮಾತ್ರ ಈದ್ ಉಲ್‌ ಫಿತ್ರ್‌ ಹಬ್ಬದ ಪವಿತ್ರತೆಯನ್ನು ತುಂಬಿಕೊಳ್ಳುವಂತಾಗಿದೆ

ಕೋವಿಡ್ ಮಾನವ ಕುಲಕ್ಕೆ ಒಂದು ಪರೀಕ್ಷೆಯಂತಿದೆ. ಕೋವಿಡ್ ನಿಂದ ಹಲವರು ಕೆಲಸ ಕಾರ್ಯವಿಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದು ಉಳ್ಳವರು ಬಡವರ ಸಹಾಯಕ್ಕೆ ಮುಂದೆ ಬರಬೇಕು. ಕೋವಿಡ್ ನಿಂದ ದೇಶ ಮಾತ್ರವಲ್ಲದೇ ಹಲವಾರು ಮುಸ್ಲಿಂ ದೇಶಗಳು ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ ಹೇರಿವೆ’ ಎಂದು ಮಸ್ಕಿಯ ಮುಸ್ಲಿಂ ಧರ್ಮಗುರುಗಳಾದ ಜಿಲಾನಿ ಖಾಜಿ ಅವರು ತಿಳಿಸಿದ್ದಾರೆ.

‘ಸರ್ಕಾರದ ನಿಯಮನುಸಾರ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಜ್) ನಿರ್ಬಂಧಿಸಲಾಗಿದ್ದು ಎಲ್ಲರೂ ಹಬ್ಬದ ದಿನ ಮನೆಯಲ್ಲಿಯೇ ನಮಾಜ್ ಮಾಡಬೇಕು. ಈದ್ ಉಲ್ ಫಿತ್ರ್‌ ನಮಾಜ್‌ಗೆ ಪ್ರತಿವರ್ಷ ಮೌಲ್ವಿ ಅವರ ನೇತೃತ್ವದಲ್ಲಿ ಎರಡು ರಕಾತ್ ನಮಾಜ್ ಮಾಡಲಾಗುತ್ತಿತ್ತು. ಆದರೆ ಈಗ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಿದ ಕಾರಣ 2+2 ನಾಲ್ಕು ರಕಾತ್ ಚಾಸ್ತ್ ನಫೀಲ್ ನಮಾಝ್ ಮಾಡಬೇಕು’ ಎಂದು ಮಸೊ ದ್ ಪಾಷಾ ಅವರು ಸಲಹೆ ನೀಡಿದ್ದಾರೆ.

‘ಕೋವಿಡ್ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಪಾಲನೆ ಮಾಡುವುದು ನಮ್ಮ ಕರ್ತವ್ಯ. ಜಾಮಿಯ ನಿಝಾಮಿಯ ಹೈದ್ರಾಬಾದ್‌ನ ಪ್ರಮುಖರ ಫತ್ವಾ ಹೊರಡಿಸಿದ್ದು ಅದರ ಪ್ರಕಾರ ಹಬ್ಬದ ಸಂದರ್ಭ ಮಾಡುವ ನಮಾಜ್ ಸಾಮೂಹಿಕವಾಗಿ ಮಸೀದಿ, ಈದ್ಗಾದಲ್ಲಿ ಮಾಡದೇ ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. ವೈಯಕ್ತಿಕ ಅಂತರ, ಮಾಸ್ಕ್ ಬಳಕೆ ಕಡ್ಡಾಯಗೊಳಿಸಿದೆ. ಇಸ್ಲಾಂ ಧರ್ಮದಲ್ಲಿ ಅನುಕೂಲಕ್ಕೆ ತಕ್ಕಂತೆ ಸರಳವಾಗಿ ಆಚರಣೆಗೆ ಆದ್ಯತೆ ನೀಡಿದೆ’ ಎಂದು ಮಹೆಬೂಬ ಕುಷ್ಟಗಿ ವಿವರಿಸಿದ್ದಾರೆ.

‘ಕೋವಿಡ್ ತೀವ್ರವಾಗಿ ಹರಡುತ್ತಿರುವ ಕಾರಣ ನಿಯಮ ಪಾಲನೆ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಇಸ್ಲಾಂ ಧರ್ಮದಲ್ಲಿ ಯಾವುದೇ ಒಂದು ಜಾಗದಲ್ಲಿ ಒಂದು ಖಾಯಿಲೆ ಹರಡುತ್ತಿದ್ದರೆ ಆ ಜಾಗಕ್ಕೆ ಹೋಗುವುದು ಹಾಗೂ ಅಲ್ಲಿನವರು ಬೇರೆ ಜಾಗಕ್ಕೆ ತೆರಳುವುದನ್ನು ಸ್ವಯಂ ನಿರ್ಬಂಧಿಸಿಕೊಳ್ಳಲು ತಿಳಿಸಿದೆ’ ಎಂದು ಮುಸ್ಲಿಂ ಧರ್ಮದ ಗುರುಗಳು ಜಿಲಾನಿ ಖಾಜಿ ತಿಳಿಸಿದ್ದಾರೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ರಾಜ್ಯ

ವರ್ಗಾವಣೆ ರದ್ದು : ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್

Published

on

ಬೆಂಗಳೂರು : ರಾಜ್ಯ ಸರ್ಕಾರ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸಾರಿಗೆ ನೌಕರರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಮುಷ್ಕರದ ವೇಳೆಯಲ್ಲಿ ಕಡ್ಡಾಯ ವರ್ಗಾವಣೆ ಶಿಕ್ಷೆ ನೀಡಿದ್ದ ರಾಜ್ಯ ಸರ್ಕಾರ ಇದೀಗ ಹಲವರ ವರ್ಗಾವಣೆಯನ್ನು ಹಿಂಪಡೆದಿದೆ. ಅಮಾನತು ಕೂಡ ರದ್ದು ಪಡಿಸಲಾಗಿದೆ ಎಂದು ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಸಾರಿಗೆ ನೌಕರರ ಮುಷ್ಕರ ತಡೆಯಲು ಮತ್ತು ಮುಷ್ಕರದಿಂದ ಉಂಟಾಗಿರುವ ನಷ್ಟ ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಈ ವೇಳೆ ಸಾರಿಗೆ ನಿಗಮಗಳ ಪರ ವಕೀಲರು ಕೆಲವು ನೌಕರರ ವಿರುದ್ಧ ಹೊರಡಿಸಿದ್ದ ವರ್ಗಾವಣೆ ಮತ್ತು ಅಮಾನತ್ತು ಆದೇಶಗಳನ್ನು ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ

Continue Reading

Politics

ಸಂತೆಕೆಲ್ಲೂರು ಗ್ರಾಮದಲ್ಲಿ ನೈರ್ಮಲ್ಯ ಮರೆ ಮಾಚಿದ್ದು ಸ್ವಚ್ಛತೆ ಗ್ರಾಮಸ್ಥರ ಆಗ್ರಹ

Published

on

ಮಸ್ಕಿ :-ಸಂತೆಕೆಲ್ಲೂರು ಗ್ರಾಮದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಚರಂಡಿಯ ವ್ಯವಸ್ಥೆ ಕಾರಣ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುವುದು ಸರ್ವೆ ಸಾಮಾನ್ಯ ಜನಸಾಮಾನ್ಯ ರಸ್ತೆಯ ಮೇಲೆ ತಿರುಗಾಡಲು ಹರಸಾಹಸ ಪಡುತ್ತಿದ್ದಾರೆ,ಅದೆಷ್ಟು ದ್ವಿಚಕ್ರ ವಾಹನ ಸವಾರರು ಬಿದ್ದು ಮಕ್ಕಳು ತಿರುಗಾಡುವುದು ಕಷ್ಟವಾದರೆ, ಇತ್ತ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನವನ್ನು ನೀಡಲು ಸಿದ್ಧವಾಗಿವೆ.

ಕೆಲ ವಾರ್ಡ್ ಗಳಲ್ಲಿ ಸರಿಯಾದ ರೀತಿಯ ಚರಂಡಿ ವ್ಯವಸ್ಥೆ ಮತ್ತು ಸಿಸಿ ರಸ್ತೆಗಳು ಇಲ್ಲದ ಕಾರಣ ಸಾಮಾನ್ಯ ಜನರು ತಿರುಗಾಡಲು ತುಂಬಾ ತೊಂದರೆ ಉಂಟಾಗುತ್ತಿದ್ದು ಗ್ರಾಮದಲ್ಲಿ ನೈರ್ಮಲ್ಯ ವ್ಯವಸ್ಥೆಯನ್ನು ಕಾಪಾಡುವಂತೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ತಿಮ್ಮನಗೌಡಗೆ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ಒತ್ತಾಯಿಸಿದರು.

ನಿಸ್ಕ್ರಿತೆಗೊಂದ ಗ್ರಾಮ ಪಂಚಯಿತಿ ವಾಹನ.
ಕಸವಿಲೇವಾರಿ ವಾಹನವು ನಿಷ್ಕ್ರಿಯೆಹೊಂದಿದ್ದು ಇದರ ಪ್ರಯೋಜನ ಯಾರಿಗೆ? ಇದು ಕೇವಲ ನೆಮಕಾವಸ್ತೆಗೆ ಮಾತ್ರ ಇರೋದಾ ಎಂದು ಪಿಡಿಒನನ್ನು ಗ್ರಾಮಸ್ಥರು ಕೇಳಿದಾಗ ಚಾಲಕರ ಸಮಸ್ಯೆ ಇದ್ದು ಕೆಲವೇ ದಿನಗಳಲ್ಲಿ ಸರಿಪಡಿಸುವುದಾಗಿ ಭರವಸೆ ಕೊಟ್ಟರು ಇದನ್ನು ಕೇಳದ ಗ್ರಾಮದ ಯುವಕರು ಆಲ್ಲರಿ ಮುಖ್ಯಮಂತ್ರಿಗಳು ಬಂದಾಗ ಮಾತ್ರ ಚಾಲಕರು ಇದಕ್ಕಿದ್ದಂತೆ ಹುಟ್ಟಿಕೊಳ್ಳುತ್ತಾರೆ ಬೇರೆ ದಿನಗಳೂ ಯಾಕಿಲ್ಲ ಇದು ಯಾವ ರೀತಿಯ ಆಡಳಿತ ? ನೀವು ಗ್ರಾಮದ ವಿವಿಧ ವಾರ್ಡ ಗಳಲ್ಲಿ ಬೇಟಿ ನೀಡಿದ ಉದಾಹರಣೆಗಳು ಇವೆಯ ? ಜನರು ಕೊರೋನಾ ಸಂಕಷ್ಟದಲ್ಲಿ ಸಾಯುತ್ತಿರುವಾಗಾ ಗ್ರಾಮದಲ್ಲಿ ನೈರ್ಮಲ್ಯ ಮರೆಮಾಚಿದೆ ಈ ಕೂಡಲೇ ಚರಂಡಿ ಸ್ವಚ್ಚಗೊಳಿಸಿ ಎಂದು ಯುವಕರು ಒತ್ತಾಯಿಸಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ರಾಜ್ಯ

ಹೈದರಾಬಾದ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಹಾಲ್ ಗೆ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಸರು

Published

on

ಹೈದರಾಬಾದ್: ಹೈದರಾಬಾದ್ ನ ಸರ್ದಾರ್ ವಲ್ಲಭಬಾಯ್ ಪಟೇಲ್ ನ್ಯಾಶನಲ್ ಪೊಲೀಸ್ ಅಕಾಡೆಮಿ ಇದರ ಹಾಲ್ ವೊಂದಕ್ಕೆ ದಿವಂಗತ ಐಪಿಎಸ್ ಅಧಿಕಾರಿ ಡಾ.ಕೆ ಮಧುಕರ್ ಶೆಟ್ಟಿ ಅವರ ಹೆಸರನ್ನು ಇಡಲಾಗಿದೆ.

ಪೊಲೀಸ್ ಅಕಾಡೆಮಿಯ ಹಾಲ್ ನಂ.106ಕ್ಕೆ ದಿವಂಗತ ಐಪಿಎಸ್ ಅಧಿಕಾರಿ ಡಾ.ಕೆ ಮಧುಕರ್ ಶೆಟ್ಟಿ ಅವರ ಹೆಸರನ್ನು ಇಡಲಾಗಿದೆ.

ಮಧುಕರ್ ಶೆಟ್ಟಿ ಅವರ ಬದ್ಧತೆ, ಸಮರ್ಪಣೆಯನ್ನು ಗೌರವಿಸಿ, ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳಿಗೆ ಅವರು ಮಾದರಿ ಎಂಬ ಕಾರಣಕ್ಕಾಗಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಸಹಾಯಕ ನಿರ್ದೇಶಕ ಡಾ.ಕೆ.ಪಿ.ಎ. ಇಲ್ಯಾಸ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್