ಕೊರೊನಾ
ಪಟ್ಟಣದ ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಂದ ಕಟ್ಟು ನಿಟ್ಟಿನ ಕ್ರಮ
ಸಿಂದಗಿ : ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ತಡೆಗಟ್ಟಲು ರಾಜ್ಯಾದ್ಯಂತ ಎರಡು ದಿನದ ಕಫ್ಯೂ೯ ಹಿನ್ನೆಲೆಯಲ್ಲಿ ಇಂದು ಪಟ್ಟಣದ ಪೋಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಂದ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಯಿತು.
ಇಂದು ಬೀದಿ ವ್ಯಾಪಾರಸ್ಥರಿಗೆ 10:00 ಗಂಟೆಯವರೆಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೂ ಬಸವೇಶ್ವರ ವೃತ್ತದಲ್ಲಿ ವೇಳೆ ಮೀರಿ ವ್ಯಾಪಾರ ಮಾಡುತ್ತಿದ್ದ ತರಕಾರಿ ವ್ಯಾಪಾರಸ್ಥರನ್ನು ಪುರಸಭೆಯ ಅಧಿಕಾರಿಗಳಾದ ಶ್ರೀ ನಾಯಕ್ ಹಾಗೂ ಪಿಎಸ್ಐ ಶ್ರೀ ಅವಿನಾಶ್ ಎ ವಾಯ್ ಹಾಗೂ ಸಿಬ್ಬಂದಿಯವರು ತೆರವು ಗೊಳಿಸಿದರು. ಹಾಗೂ ಅನಾವಶ್ಯಕವಾಗಿ ಅಡ್ಡಾಡುತ್ತಿದ್ದ ಜನರನ್ನು ನಿರ್ಬಂಧಿಸಿದರು. ಸಿಂದಗಿ ನಗರದ ಎಲ್ಲಾ ಅಂಗಡಿಗಳು ಮುಚ್ಚಿ ಕಫ್ಯೂ೯ಗೆ ಬೆಂಬಲ ನೀಡಿದರು.
ವರದಿ :- ರಾಘವೇಂದ್ರ ಭಜಂತ್ರಿ
ಕೊರೊನಾ
ದಿನದಿಂದ ದಿನಕ್ಕೆ ಅಟ್ಟಹಾಸ ಮೆರಿಯುತ್ತಿರುವ ಕೊರೊನಾ : ಶಿಡ್ಲಘಟ್ಟದಲ್ಲಿ ನೂರೊಂದು ಜನಕ್ಕೆ ದೃಢ
ಶಿಡ್ಲಘಟ್ಟ: ದಿನದಿಂದ ದಿನಕ್ಕೆ ಅಟ್ಟಹಸ ಮೆರಿಯುತ್ತಿರುವ ಕರೋನ ವೈರಸ್ ಶಿಡ್ಲಘಟ್ಟ ದಲ್ಲಿ ನೂರೊಂದು ಜನಕ್ಕೆ ದೃಢ ಪಟ್ಟಿದ್ದು ಶಿಡ್ಲಘಟ್ಟ ತಾಲೂಕಿನ ಜನರಲ್ಲಿ ಆತಂಕ ಹೆಚ್ಚಾಗಿದೆ
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 26/04/2021 ರಂದು 101 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ ನಗರದ VGT ರಸ್ತೆಯ 37 ವರ್ಷದ ಗಂಡಸು
ಕೋಟೆ ವೃತ್ತದ 23 ವರ್ಷದ ಮಹಿಳೆ ಮುತ್ತೂರು ಬೀದಿಯ 63 ವರ್ಷದ ಗಂಡಸು ಅನ್ಸಾರಿ ಮಸೀದಿಯ 21 ವರ್ಷದ ಮಹಿಳೆ ಗೌಡರ ಬೀದಿಯ 37 ವರ್ಷದ ಗಂಡಸು, 11 ವರ್ಷದ ಬಾಲಕ, 33 ವರ್ಷದ ಮಹಿಳೆ 1ನೇ TMC ಲೇಔಟ್ ನ 53 ವರ್ಷದ ಗಂಡಸು 2ನೇ ನಗರ್ತಪೇಟೆಯ 33 ವರ್ಷದ ಗಂಡಸು, 36 ವರ್ಷದ ಮಹಿಳೆ ಷರಾಫ್ ರಸ್ತೆಯ 49 ವರ್ಷದ ಮಹಿಳೆ, 23 ವರ್ಷದ ಗಂಡಸು, 27 ವರ್ಷದ ಮಹಿಳೆ ಕುಂಬಾರಪೇಟೆಯ 73 ವರ್ಷದ ಗಂಡಸು, 31 ವರ್ಷದ ಗಂಡಸು, 22 ವರ್ಷದ ಗಂಡಸು ಆಜಾದ್ ನಗರದ 38 ವರ್ಷದ ಗಂಡಸು ತಾಲ್ಲೂಕು ಕಚೇರಿಯ 39 ವರ್ಷದ ಗಂಡಸು ಕದಿರಿಪಾಳ್ಯದ 40 ವರ್ಷದ ಗಂಡಸು ಖಾದ್ರಪ್ಪ ರಸ್ತೆಯ 21 ವರ್ಷದ ಮಹಿಳೆ ಕಾಮಾಟಿಗರಪೇಟೆಯ 23 ವರ್ಷದ ಗಂಡಸು ಸರ್ಕಾರಿ ಆಸ್ಪತ್ರೆಯ 46 ವರ್ಷದ ಗಂಡಸು
ಜೌಗುಪೇಟೆಯ 27 ವರ್ಷದ ಗಂಡಸು ರಾಜೀವ್ ಗಾಂಧಿ ಲೇಔಟ್ ನ ಗಂಡಸು ಜೋಡಿಕಾಚಹಳ್ಳಿಯ 45 ವರ್ಷದ ಮಹಿಳೆ ಕುಡಪಕುಂಟೆಯ 33 ವರ್ಷದ ಗಂಡಸು ಬೆಳ್ಳೂಟಿಯ 20 ವರ್ಷದ ಮಹಿಳೆ ಹಿತ್ತಲಹಳ್ಳಿಯ 23 ವರ್ಷದ ಮಹಿಳೆ ತಾತಹಳ್ಳಿಯ 15 ವರ್ಷದ ಯುವತಿ
ಬೂಡಿದಗಡ್ಡಹಳ್ಳಿಯ 22 ವರ್ಷದ ಮಹಿಳೆ ದೇವರಮಳ್ಳೂರಿನ 23 ವರ್ಷದ ಗಂಡಸು ಅಂಬಿಗನಹಳ್ಳಿಯ 37 ವರ್ಷದ ಗಂಡಸು ಅರಿಕೇರದ 23 ವರ್ಷದ ಗಂಡಸು B ತಿಮ್ಮಸಂದ್ರದ 77 ವರ್ಷದ ಗಂಡಸು
ರಾಳ್ಳಕುಂಟ (ಜಂಗಮಕೋಟೆ) ಯ 55 ವರ್ಷದ ಗಂಡಸು
ವಿಜಯಪುರ (ಜಂಗಮಕೋಟೆ) ಯ 31 ವರ್ಷದ ಗಂಡಸು
ದಿಬ್ಬೂರಹಳ್ಳಿಯ 66 ವರ್ಷದ ಗಂಡಸು, 32 ವರ್ಷದ ಗಂಡಸು ಮಳ್ಳೂರಿನ 40 ವರ್ಷದ ಗಂಡಸು, 44 ವರ್ಷದ ಮಹಿಳೆ, 43 ವರ್ಷದ ಗಂಡಸು, 48 ವರ್ಷದ ಗಂಡಸು, 23 ವರ್ಷದ ಗಂಡಸು, 44 ವರ್ಷದ ಗಂಡಸು, 30 ವರ್ಷದ ಮಹಿಳೆ, 37 ವರ್ಷದ ಮಹಿಳೆ ಮೇಲೂರಿನ 12 ವರ್ಷದ ಬಾಲಕ, 35 ವರ್ಷದ ಮಹಿಳೆ, 35 ವರ್ಷದ ಮಹಿಳೆ, 65 ವರ್ಷದ ಮಹಿಳೆ, 62 ವರ್ಷದ ಮಹಿಳೆ, 29 ವರ್ಷದ ಮಹಿಳೆ
ಮುತ್ತೂರಿನ 47 ವರ್ಷದ ಗಂಡಸು ಜಂಗಮಕೋಟೆಯ 46 ವರ್ಷದ ಗಂಡಸು, 28 ವರ್ಷದ ಮಹಿಳೆ, 54 ವರ್ಷದ ಮಹಿಳೆ, 68 ವರ್ಷದ ಗಂಡಸು ಬಯಪ್ಪನಹಳ್ಳಿಯ 65 ವರ್ಷದ ಗಂಡಸು ಬಶೆಟ್ಟಹಳ್ಳಿಯ 36 ವರ್ಷದ ಗಂಡಸು
ತೊಟ್ಲಗಾನಹಳ್ಳಿಯ 35 ವರ್ಷದ ಮಹಿಳೆ ಬೈರಸಂದ್ರದ 44 ವರ್ಷದ ಮಹಿಳೆ ಬಳುವನಹಳ್ಳಿಯ 44 ವರ್ಷದ ಮಹಿಳೆ
ನಡಪಾಕನಹಳ್ಳಿಯ 35 ವರ್ಷದ ಗಂಡಸು ಚೊಕ್ಕಂಡಹಳ್ಳಿಯ 30 ವರ್ಷದ ಮಹಿಳೆ ಚೀಮಸಂದ್ರದ 24 ವರ್ಷದ ಗಂಡಸು ತೋಟಗಾನಹಳ್ಳಿ (ಜಂಗಮಕೋಟೆ) ಯ 45 ವರ್ಷದ ಮಹಿಳೆ ಭಕ್ತರಹಳ್ಳಿಯ 6 ವರ್ಷದ ಬಾಲಕ, 49 ವರ್ಷದ ಮಹಿಳೆ, 37 ವರ್ಷದ ಗಂಡಸು, 43 ವರ್ಷದ ಗಂಡಸು ಅಪ್ಪೇಗೌಡನಹಳ್ಳಿಯ 39 ವರ್ಷದ ಗಂಡಸು
ಮಳಮಾಚನಹಳ್ಳಿಯ 11 ವರ್ಷದ ಬಾಲಕಿ ಚೌಡಸಂದ್ರದ 22 ವರ್ಷದ ಗಂಡಸು ಗಂಜಿಗುಂಟೆಯ 22 ವರ್ಷದ ಗಂಡಸು, 26 ವರ್ಷದ ಮಹಿಳೆ ಕುಂದಲಗುರ್ಕಿಯ 54 ವರ್ಷದ ಗಂಡಸು ದೊಣ್ಣಹಳ್ಳಿಯ 4 ವರ್ಷದ ಬಾಲಕ, 30 ವರ್ಷದ ಮಹಿಳೆ, 11 ವರ್ಷದ ಬಾಲಕಿ, 41 ವರ್ಷದ ಗಂಡಸು, 43 ವರ್ಷದ ಮಹಿಳೆ, 32 ವರ್ಷದ ಗಂಡಸು, 55 ವರ್ಷದ ಮಹಿಳೆ ಕನ್ನಪ್ಪನಹಳ್ಳಿಯ 29 ವರ್ಷದ ಗಂಡಸು, 24 ವರ್ಷದ ಗಂಡಸು ಶೀಗೇಹಳ್ಳಿಯ 55 ವರ್ಷದ ಗಂಡಸು
ಕದಿರಿನಾಯಕನಹಳ್ಳಿಯ 42 ವರ್ಷದ ಮಹಿಳೆ ಕೊತ್ತನೂರಿನ 37 ವರ್ಷದ ಮಹಿಳೆ ಸಾದಲಿಯ 45 ವರ್ಷದ ಮಹಿಳೆ, 22 ವರ್ಷದ ಗಂಡಸು, 54 ವರ್ಷದ ಮಹಿಳೆ, 17 ವರ್ಷದ ಯುವತಿ, 22 ವರ್ಷದ ಮಹಿಳೆ, 43 ವರ್ಷದ ಮಹಿಳೆ, 9 ವರ್ಷದ ಬಾಲಕಿ ಲಘುನಾಯಕನಹಳ್ಳಿಯ 45 ವರ್ಷದ ಗಂಡಸು ದೇವರಮಳ್ಳೂರಿನ 14 ವರ್ಷದ ಬಾಲಕಿ S ಗೊಲ್ಲಹಳ್ಳಿಯ 35 ವರ್ಷದ ಮಹಿಳೆ ಸೋಮನಹಳ್ಳಿಯ 21 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ
ಕೊರೊನಾ
ನಿರ್ಲಕ್ಷ್ಯ ಮತ್ತು ಆತಂಕ ಬಿಟ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು- ಸ್ಥಾಯಿ ಸಮಿತಿಯ ಅಧ್ಯಕ್ಷ ಎ.ನಂಜುಂಡಪ್ಪ
ಬಾಗೇಪಲ್ಲಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಶುರುವಾಗ್ತಿದೆ. ತಾಲ್ಲೂಕಿನಾದ್ಯಂತ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮತ್ತೆ ಕರ್ನಾಟಕದಲ್ಲಿ ಮತ್ತೆ 15 ದಿನಗಳ ಕಾಲ ಲಾಕ್ಡೌನ್ ಕುರಿತು ಚರ್ಚೆಗಳು ನಡೆಯತ್ತಿದೆ ಆದರೆ ಲಾಕ್ ಡೌನ್ ಸದ್ಯಕ್ಕೆ ಬೇಡ ಎಂದು ಪುರಸಭೆ 7 ನೇ ವಾರ್ಡ್ ಸದಸ್ಯರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎನ್. ನಂಜುಂಡಪ್ಪ ಮನವಿ ಮಾಡಿದ್ದಾರೆ.
ಅವರು ಇಂದು ಪಟ್ಟಣದ ಪುರಸಭೆ ಆಡಳಿತ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ , ಪೋಲಿಸ್ ಇಲಾಖೆ ಹಾಗೂ 7 ಮತ್ತು 5 ನೇ ವಾರ್ಡ್ ವತಿಯಿಂದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಪಟ್ಟಣದ ಖಾಸಗಿ ಶಾಲೆಯ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕೊರೊನಾ ಎರಡನೇ ಅಲೆ ಶುರುವಾಗಿ ಮತ್ತೆ ಲಾಕ್ಡೌನ್ ಆಗೋದು ಬೇಡ, ದಯಮಾಡಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸೋಣ ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಕೊಳ್ಳುವ ಮೂಲಕ ತಮ್ಮ ಪ್ರಾಣವನ್ನು ತಾವೇ ಕಾಪಾಡಿಕೊಂಡು ಇತರರ ಪ್ರಾಣವನ್ನು ಕಾಪಾಡೋಣ ಎಂದು ಪುರಸಭೆ ಸದಸ್ಯ ಎ.ನಂಜುಂಡಪ್ಪ ಹೇಳಿದರು.
ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ ಹಾಗೂ ಆತಂಕ ಬೇಡ ಆದರೆ ಜಾಗೃತಿ ಮೂಡಿಸುವ ಕೆಲಸ ಎಲ್ಲರೂ ಮಾಡಬೇಕು ಎಂದು ಹೇಳಿದರು.
ಐದನೇ ವಾರ್ಡ್ ಸದಸ್ಯೆ ರೇಷ್ಮಾ ಭಾನು ಮಾತನಾಡಿ
ಸಾಂಕ್ರಾಮಿಕ ರೋಗ ಕೊರೋನಾ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿದೆ. ಅದರಲ್ಲೂ ಕೋವಿಡ್-19 ಎರಡನೇ ಅಲೆಯು ಬಾಗೇಪಲ್ಲಿ ಪಟ್ಟಣದಲ್ಲಿ ತಲ್ಲಣ ಸೃಷ್ಟಿಸಿದೆ. ಈಗಾಗಲೇ ಕೊರೋನಾ ಎರಡನೇ ಅಲೆಯಿಂದ ಪ್ರಕರಣಗಳು ಹೆಚ್ಚಾಗಿದ್ದು, ಇದು ಕಳೆದ ಬಾರಿಗಿಂತ ಹೆಚ್ಚಿನ ಸಾವು ನೋವನ್ನು ಉಂಟು ಮಾಡುವ ಸಾಧ್ಯತೆಯಿದೆ. ಇದಾಗ್ಯೂ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟಲು ಇರುವ ಏಕೈಕ ಪರಿಣಾಮಕಾರಿ ಮಾರ್ಗವೆಂದರೆ ಸಾಧ್ಯವಾದಷ್ಟು ಜನರಿಗೆ ಲಸಿಕೆ ಹಾಕುವ ಮೂಲಕ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪಂಕಜಾರೆಡ್ಡಿ, ಬಾಗೇಪಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ
ಎಸ್.ಸಿದ್ದಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷರಾದ ಪಿ.ವೆಂಕಟರವಣ, ಪ್ರಧಾನ ಕಾರ್ಯದರ್ಶಿ ಸಿ.ವಿ.ವೆಂಕಟರಾಯಪ್ಪ, ಬಿಎಲ್ಓ ಎಂ.ವಿ.ರಂಗಾ ರೆಡ್ಡಿ ಇಸಿಓ ಆಂಜನೇಯ ರೆಡ್ಡಿ ರಾಜಣ್ಣ, ಕರೋನ ನೋಡಲ್ ಅಧಿಕಾರಿ ವೆಂಕಟರಾಮರೆಡ್ಡಿ,ಜ. ಪುರಸಭೆ ಸದಸ್ಯರಾದ ಬೀವುಲ್ಲಾ ಖಾನ್,ರೇಷ್ಮೆ ಭಾನು ಅಲ್ಪಸಂಖ್ಯಾತ ಅದ್ಯಕ್ಷ ನಿಜಾಮ್ ಉದ್ದೀನ್,ಅಂಗನವಾಡಿ ಕಾರ್ಯಕರ್ತೆ ವೆಂಕಟರವಣಮ್ಮ, ನಳಿನಿ, ಆಶಾ ಕಾರ್ಯಕರ್ತೆರಾದ ಆದಿ ಲಕ್ಷ್ಮೀ,ಗಾಯತ್ರಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
ಕೊರೊನಾ
14 ದಿನ ಕರ್ನಾಟಕ ಸಂಪೂರ್ಣ ಲಾಕ್ ಡೌನ್
ಬೆಂಗಳೂರು : ನಾಳೆ ರಾತ್ರಿಯಿಂದ 14 ದಿನಗಳವರೆಗೆ ರಾಜ್ಯಾಧ್ಯಂತ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. 14 ದಿನಗಳವರೆಗೆ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತದೆ. ಈ ಬಗ್ಗೆ ರೂಪುರೇಷೆಗಳನ್ನು ಆರೋಗ್ಯ ಇಲಾಖೆ ಪ್ರಕಟಿಸಲಿದೆ. ಈ ಕೋವಿಡ್ ತಡೆಯೋದಕ್ಕೆ ಬಿಗಿ ಕ್ರಮವಾಗಿ ನಾಳೆ ರಾತ್ರಿಯಿಂದ 14 ದಿನ ಬಿಗಿ ಕ್ರಮ ಜಾರಿಯಲ್ಲಿರುತ್ತದೆ. ಇದು ರಾಜ್ಯಾಧ್ಯಂತ ಜಾರಿಯಲ್ಲಿ ಇರಲಿದೆ ಎಂದರು.
ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10 ಗಂಟೆಯ ನಂತ್ರ ಎಲ್ಲವೂ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ ಎಂದರು.
ಗಾರ್ಮೆಂಟ್ಸ್ ನೌಕರರನ್ನು ಬಿಟ್ಟು, ಕಟ್ಟಡ ಕಾಮಗಾರಿ, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಿಲ್ಲ. ವೈದ್ಯಕೀಯ, ಅಗತ್ಯ ಸೇವೆ ಎಂದಿನಂತೆ ಇರಲಿದೆ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6ರವೆರೆಗ ಕರ್ಪ್ಯೂ ಮುಂದುವರೆಯಲಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಬಂದೋಬಸ್ತ್ ಮಾಡಲಿದ್ದಾರೆ. ತಾಲೂಕು ಆಡಳಿತ ಕೂಡ ನಿಯಂತ್ರಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ವರದಿ : ವಸಂತ ಬಿ ಈಶ್ವರಗೆರೆ
-
Politics2 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
ಸುದ್ದಿ4 weeks ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ
-
ಸುದ್ದಿ2 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ3 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?