ಸುದ್ದಿ
ಬಾರ್ ಅಂಗಡಿಯಲ್ಲಿ ಮಧ್ಯ ಖರೀದಿಸುತ್ತಿರುವ ಮಹಿಳೆ ದೃಶ್ಯ ವೈರಲ್
ಹೆಣ್ಣುಮಕ್ಕಳು ದೇವಸ್ಥಾನಕ್ಕೆ ಹೋಗಲು ಭಯ ಬೀಳುವಂಥ ಕಾಲದಲ್ಲಿ :- ಬಾರ್ ಅಂಗಡಿಯಲ್ಲಿ ಮಧ್ಯ ಖರೀದಿಸುತ್ತಿರುವ ಮಹಿಳೆ ದೃಶ್ಯ ವೈರಲ್.
ಮಸ್ಕಿ :- ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗಬೇಕಾದರೆ ಭಯ ಬೀಳುವಂಥ ಕಾಲದಲ್ಲಿ ಇಲ್ಲಿಯ ಬಾರೊಂದರಲ್ಲಿ ಮಹಿಳೆಯೊಬ್ಬಳು ಮಧ್ಯ ಖರೀದಿಯಲ್ಲಿ ತೊಡಗಿರುವುದು ಕಂಡು ಸಾರ್ವಜನಿಕರು ದಂಗಾದರು.
ನಗರ ಪ್ರದೇಶಗಳಲ್ಲಿ ಮಹಿಳೆಯರು ಮಧ್ಯ ಖರೀದಿಸುವುದು ಸಾಮಾನ್ಯ ಗ್ರಾಮೀಣ ಪ್ರದೇಶದ ಮಹಿಳೆ ಬಾರ್ ಗೆ ತೆರಳಿ ಮಧ್ಯ ಖರೀದಿಸುವ ದೃಶ್ಯ ಚರ್ಚೆಗೆ ಗ್ರಾಸವಾಯಿತು.
ಕೊರೋನಾ ಎರಡನೇ ಅಲೆ ಕಟ್ಟಿಹಾಕಲು ಸರಕಾರ ಕಠಿಣ ಕರ್ಫ್ಯೂ ಜಾರಿಗೊಳಿಸಿ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ ಪಟ್ಟಣದ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿರುವ ದೃಶ್ಯಗಳು ಮುಖ್ಯ ಮಾರುಕಟ್ಟೆಗಳ ಬಳಿ ಕಂಡುಬಂದವು.
ಮದ್ಯಪ್ರಿಯರು ತಮಗೆ ಇಷ್ಟವಾದ ಮಧ್ಯ ಖರಿದಿಸಲು, ಬ್ರಾಂಡಿ ಶಾಪ್ , ಬಾರ್ ಗಳ ಮುಂದೆ ಬೆಳಗ್ಗೆಯಿಂದ ಜಮಾಯಿಸಿದ್ದು ಕಂಡುಬಂತು.
ಮಧ್ಯ ಖರೀದಿಸುವವರ ಜೊತೆ ಮಹಿಳೆಯೊಬ್ಬಳು ಇಲ್ಲಿಯ ಬಾರ್ ಮುಂದೆ ನಿಂತಿರುವುದು ಕಂಡು ಜನ ಕಕ್ಕಾಬಿಕ್ಕಿಯಾದರು.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಗುಟ್ಕಾ , ತಂಬಾಕು ರೇಟ್ ಗಳು ಜಾಸ್ತಿಯಾಗಿದ್ದು ದರ ಏರಿಕೆ ಭಯದಲ್ಲಿ ಗುಟ್ಕಾ ಪ್ರಿಯರು ಡಜನ್ ಗಟ್ಟಲೆ ಗುಟ್ಕಾ ಚೀಟಿ ಖರೀದಿಸುತ್ತಿದ್ದಾರೆ.
ಕರೋನಾ ಇನ್ನೂ ಏನೇನು ಸಂಕಷ್ಟ ತರುತ್ತದೆಯೋ ಗೊತ್ತಿಲ್ಲ ಆದರೆ ಸರಕಾರ ಯಾವ ಅಂಗಡಿಗಳನ್ನು ಆದರೂ ಬಂದ್ ಮಾಡಲು ಮದ್ಯದಂಗಡಿಗಳನ್ನು ಮಾತ್ರ ಬಂದ್ ಮಾಡಬಾರದು ನಮ್ಮ ತೆರಿಗೆ ಹಣದಿಂದ ಸರಕಾರ ನಡೆಯುತ್ತಿದೆಯೆಂದು ಮದ್ಯವ್ಯಸನಿಗಳು ಮಾತನಾಡಿಕೊಳ್ಳುತ್ತಿರುವ ದೃಶ್ಯಗಳು ತಾಲೂಕಿನಲ್ಲಿ ಕಂಡು ಬಂದಿದೆ.
ಸುದ್ದಿ
ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪ : ಆರೋಪಿಗಳನ್ನು ಬಂಧಿಸುವಂತೆ ಮನವಿ
ಸಿಂದಗಿ : ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಕುಮಾರಿ ಸಂಗೀತಾ ನಿಂಗಪ್ಪ ಆಲಾಳ (17) ಯುವತಿಯ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಪೋಕ್ಸೋ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ಸಿಂದಗಿ ತಾಲೂಕಾ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ತಾಲೂಕಿನ ಸಮಾಜ ಬಾಂಧವರು ಪಟ್ಟಣದ ತಹಶೀಲದಾರ ಕಚೇರಿಗೆ ತೆರಳಿ ತಹಶೀಲದಾರ ಅವರ ಮುಖಾಂತರ ಘನವೆತ್ತ ರಾಜ್ಯಪಾಲ ವಜುಬಾಯಿ ವಾಲಾ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಮಡಿವಾಳಪ್ಪ ಎಂ. ಮುಂಡೇವಾಡಗಿ ಮಾತನಾಡಿ, ಹಾಡುಹಗಲೇ ಯುವಕರು ಕುಮಾರಿ ಸಂಗೀತಾ ನಿಂಗಪ್ಪ ಆಲಾಳ ಯುವತಿಯನ್ನು ಅಪಹರಿಸಿ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿರುವ ಲಾಡ್ಜವೊಂದರಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಕೂಡಲೇ ಪರಾರಿಯಾದ ಆರೋಪಿಗಳನ್ನು ಪೋಲಿಸರು ಪತ್ತೆ ಹಚ್ಚಿ ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಬೇಕು. ಯುವತಿಯ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು. ಇಂಥಹ ಘಟನೆಗಳ ಮರುಕಳಿಸದಂತೆ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಿಂದಗಿ ತಾಲೂಕಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಡಿವಾಳಪ್ಪ ಎಂ. ಮುಂಡೇವಾಡಗಿ, ಉಪಾಧ್ಯಕ್ಷರಾದ ಪ್ರಕಾಶ ಗುಣಾರಿ, ಚನ್ನಪ್ಪ ಗೋಣಿ, ಉಮೇಶ ಜೋಗೂರ, ಭೀಮಾಶಂಕರ ಶ್ರೀಗರಿ, ಮುತ್ತು ಪಟ್ಟಣಶೆಟ್ಟಿ, ಪ್ರಕಾಶ ದಸ್ಮಾ, ಅನೀಲ ಪಟ್ಟಣಶೆಟ್ಟಿ, ನವೀನ ಶೆಳ್ಳಗಿ, ರಾಜೀವ ಭೈರಿ, ಮಹಾಂತೇಶ ನೂಲಾನವರ್, ಮಲ್ಲಿಕಾರ್ಜುನ ಲಾಳಸಂಗಿ, ಸಿದ್ಧಲಿಂಗ ಕಿಣಗಿ, ಸಂತೋಷ ಮನಗೂಳಿ, ಬಸವರಾಜ ಗುರಶೆಟ್ಟಿ, ಕುಮಾರ ಪಟ್ಟಣಶೆಟ್ಟಿ, ಸಿದ್ದು ಅಕಸ್ತಿ, ಗಂಗಾಧರ ಪಟ್ಟಣಶೆಟ್ಟಿ, ಪ್ರಸನ್ ಪಟ್ಟಣಶೆಟ್ಟಿ, ಗಂಗಾಧರ ಕಿಣಗಿ, ಮುತ್ತು ಕುಮಟಗಿ, ಅನೀಲ ಗೋಣಿ, ರಾಹುಲ ಪಟ್ಟಣಶೆಟ್ಟಿ, ಸೇರಿದಂತೆ ಇನ್ನಿತರರು ಇದ್ದರು.
ವರದಿ : ರಾಘವೇಂದ್ರ ಭಜಂತ್ರಿ
ಸುದ್ದಿ
ಮಸ್ಕಿ: ಈದ್ ಉಲ್ ಫಿತ್ರ್ ಸರಳ ಆಚರಣೆ : ಧರ್ಮದ ಗುರುಗಳು ಜಿಲಾನಿ ಖಾಜಿ
ಮಸ್ಕಿ:- ಕೋವಿಡ್‌ನಿಂದ ಈ ವರ್ಷವೂ ಈದ್ ಉಲ್ ಫಿತ್ರ್ ಸಂಭ್ರಮಕ್ಕೆ ಅಡ್ಡಿಯಾಗಿದ್ದು, ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಿಸುವಂತೆ ಧರ್ಮ ಬೋಧಕರು ಮುಸ್ಲಿಮರಿಗೆ ಸಂದೇಶ ನೀಡಿದ್ದಾರೆ.
ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ಮಸೀದಿ ಹಾಗೂ ದರ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಕೋವಿಡ್ ಮಾರ್ಗಸೂಚಿ ಪಾಲನೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ಕೊರೊನಾ ಎರಡನೇ ಅಲೆಯು ವ್ಯಾಪಿಸುತ್ತಿರುವುದು ಆತಂಕ ಮೂಡಿಸಿದೆ ಎಂದು ಮನವರಿಕೆ ಮಾಡುತ್ತಿದ್ದಾರೆ.
ರಂಜಾನ್ ಉಪವಾಸ ಆರಂಭವಾಗುವ ಪೂರ್ವದಲ್ಲೇ ಕೊರೊನಾ ವ್ಯಾಪಿಸಿಕೊಂಡಿತ್ತು. ಸಂಪೂರ್ಣ ಹಬ್ಬದ ಸಂಭ್ರಮ ಕಸಿದುಕೊಂಡಿದ್ದರಿಂದ ಪ್ರತಿವರ್ಷದಂತೆ ಹೊಸ ಬಟ್ಟೆಗಳನ್ನು ಖರೀದಿಸುವುದಕ್ಕೂ ಸಾಧ್ಯವಾಗಿಲ್ಲ. ಮನೆಗಳಲ್ಲಿ ಮತ್ತು ಮನಗಳಲ್ಲಿ ಮಾತ್ರ ಈದ್ ಉಲ್ ಫಿತ್ರ್ ಹಬ್ಬದ ಪವಿತ್ರತೆಯನ್ನು ತುಂಬಿಕೊಳ್ಳುವಂತಾಗಿದೆ
ಕೋವಿಡ್ ಮಾನವ ಕುಲಕ್ಕೆ ಒಂದು ಪರೀಕ್ಷೆಯಂತಿದೆ. ಕೋವಿಡ್ ನಿಂದ ಹಲವರು ಕೆಲಸ ಕಾರ್ಯವಿಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದು ಉಳ್ಳವರು ಬಡವರ ಸಹಾಯಕ್ಕೆ ಮುಂದೆ ಬರಬೇಕು. ಕೋವಿಡ್ ನಿಂದ ದೇಶ ಮಾತ್ರವಲ್ಲದೇ ಹಲವಾರು ಮುಸ್ಲಿಂ ದೇಶಗಳು ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ ಹೇರಿವೆ’ ಎಂದು ಮಸ್ಕಿಯ ಮುಸ್ಲಿಂ ಧರ್ಮಗುರುಗಳಾದ ಜಿಲಾನಿ ಖಾಜಿ ಅವರು ತಿಳಿಸಿದ್ದಾರೆ.
‘ಸರ್ಕಾರದ ನಿಯಮನುಸಾರ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಜ್) ನಿರ್ಬಂಧಿಸಲಾಗಿದ್ದು ಎಲ್ಲರೂ ಹಬ್ಬದ ದಿನ ಮನೆಯಲ್ಲಿಯೇ ನಮಾಜ್ ಮಾಡಬೇಕು. ಈದ್ ಉಲ್ ಫಿತ್ರ್ ನಮಾಜ್‌ಗೆ ಪ್ರತಿವರ್ಷ ಮೌಲ್ವಿ ಅವರ ನೇತೃತ್ವದಲ್ಲಿ ಎರಡು ರಕಾತ್ ನಮಾಜ್ ಮಾಡಲಾಗುತ್ತಿತ್ತು. ಆದರೆ ಈಗ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಿದ ಕಾರಣ 2+2 ನಾಲ್ಕು ರಕಾತ್ ಚಾಸ್ತ್ ನಫೀಲ್ ನಮಾಝ್ ಮಾಡಬೇಕು’ ಎಂದು ಮಸೊ ದ್ ಪಾಷಾ ಅವರು ಸಲಹೆ ನೀಡಿದ್ದಾರೆ.
‘ಕೋವಿಡ್ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಪಾಲನೆ ಮಾಡುವುದು ನಮ್ಮ ಕರ್ತವ್ಯ. ಜಾಮಿಯ ನಿಝಾಮಿಯ ಹೈದ್ರಾಬಾದ್‌ನ ಪ್ರಮುಖರ ಫತ್ವಾ ಹೊರಡಿಸಿದ್ದು ಅದರ ಪ್ರಕಾರ ಹಬ್ಬದ ಸಂದರ್ಭ ಮಾಡುವ ನಮಾಜ್ ಸಾಮೂಹಿಕವಾಗಿ ಮಸೀದಿ, ಈದ್ಗಾದಲ್ಲಿ ಮಾಡದೇ ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. ವೈಯಕ್ತಿಕ ಅಂತರ, ಮಾಸ್ಕ್ ಬಳಕೆ ಕಡ್ಡಾಯಗೊಳಿಸಿದೆ. ಇಸ್ಲಾಂ ಧರ್ಮದಲ್ಲಿ ಅನುಕೂಲಕ್ಕೆ ತಕ್ಕಂತೆ ಸರಳವಾಗಿ ಆಚರಣೆಗೆ ಆದ್ಯತೆ ನೀಡಿದೆ’ ಎಂದು ಮಹೆಬೂಬ ಕುಷ್ಟಗಿ ವಿವರಿಸಿದ್ದಾರೆ.
‘ಕೋವಿಡ್ ತೀವ್ರವಾಗಿ ಹರಡುತ್ತಿರುವ ಕಾರಣ ನಿಯಮ ಪಾಲನೆ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಇಸ್ಲಾಂ ಧರ್ಮದಲ್ಲಿ ಯಾವುದೇ ಒಂದು ಜಾಗದಲ್ಲಿ ಒಂದು ಖಾಯಿಲೆ ಹರಡುತ್ತಿದ್ದರೆ ಆ ಜಾಗಕ್ಕೆ ಹೋಗುವುದು ಹಾಗೂ ಅಲ್ಲಿನವರು ಬೇರೆ ಜಾಗಕ್ಕೆ ತೆರಳುವುದನ್ನು ಸ್ವಯಂ ನಿರ್ಬಂಧಿಸಿಕೊಳ್ಳಲು ತಿಳಿಸಿದೆ’ ಎಂದು ಮುಸ್ಲಿಂ ಧರ್ಮದ ಗುರುಗಳು ಜಿಲಾನಿ ಖಾಜಿ ತಿಳಿಸಿದ್ದಾರೆ.
ವರದಿ : ದುರ್ಗೇಶ್ ಭೋವಿ ಮಸ್ಕಿ
ರಾಜ್ಯ
ವರ್ಗಾವಣೆ ರದ್ದು : ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್
ಬೆಂಗಳೂರು : ರಾಜ್ಯ ಸರ್ಕಾರ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸಾರಿಗೆ ನೌಕರರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಮುಷ್ಕರದ ವೇಳೆಯಲ್ಲಿ ಕಡ್ಡಾಯ ವರ್ಗಾವಣೆ ಶಿಕ್ಷೆ ನೀಡಿದ್ದ ರಾಜ್ಯ ಸರ್ಕಾರ ಇದೀಗ ಹಲವರ ವರ್ಗಾವಣೆಯನ್ನು ಹಿಂಪಡೆದಿದೆ. ಅಮಾನತು ಕೂಡ ರದ್ದು ಪಡಿಸಲಾಗಿದೆ ಎಂದು ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಸಾರಿಗೆ ನೌಕರರ ಮುಷ್ಕರ ತಡೆಯಲು ಮತ್ತು ಮುಷ್ಕರದಿಂದ ಉಂಟಾಗಿರುವ ನಷ್ಟ ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಈ ವೇಳೆ ಸಾರಿಗೆ ನಿಗಮಗಳ ಪರ ವಕೀಲರು ಕೆಲವು ನೌಕರರ ವಿರುದ್ಧ ಹೊರಡಿಸಿದ್ದ ವರ್ಗಾವಣೆ ಮತ್ತು ಅಮಾನತ್ತು ಆದೇಶಗಳನ್ನು ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ
-
Politics1 week ago
ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
-
ಸುದ್ದಿ6 days ago
ಸಿಎಂ ತವರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟ, 10 ಕ್ಕೂ ಹೆಚ್ಚು ಕಾರ್ಮಿಕರು ಬಲಿ
-
ಸುದ್ದಿ2 weeks ago
ಆಂಬ್ಯುಲೆನ್ಸ್ ನಲ್ಲೇ ಹೆರಿಗೆ, ಗಂಡು ಮಗುವಿಗೆ ಜನ್ಮ ಕೊಟ್ಟ ತಾಯಿ
-
ಕೊರೊನಾ3 weeks ago
ಪಟ್ಟಣದ ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಂದ ಕಟ್ಟು ನಿಟ್ಟಿನ ಕ್ರಮ