Connect with us
Ad Widget

ರಾಜ್ಯ

ಮಸ್ಕಿ ತಾಲೂಕಿನಾದ್ಯಂತ ಮಳೆಯಾಗಿದ್ದು : ರಸ್ತೆಯಲ್ಲಿ ಮೇಲೆ ನೀರು ನಿಂತಿದ್ದು, ಜನತೆಗೆ ತೊಂದರೆ

Published

on

ಮಸ್ಕಿ :- ಮಸ್ಕಿ ತಾಲೂಕಿನ ವಿವಿಧೆಡೆ ಶನಿವಾರ ಸಂಜೆಯ ವೇಳೆಯಲ್ಲಿ ಕೆಲ ಕಾಲ ಸುರಿದ ಭಾರಿ ಮಳೆಯಿಂದ ನಗರದ ಅನೇಕ ಬಡಾವಣೆಗಳಲ್ಲಿ ಮಳೆ ನೀರು ರಸ್ತೆಯ ಇಕ್ಕೆಲದ ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ, ರಸ್ತೆಯ ತುಂಬ ಹೊಂಡದಂತೆ ತುಂಬಿಕೊಂಡು ಸಾರ್ವಜನಿಕರು ಫಜೀತಿಗೊಳಗಾದರು. 

ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳ ಇಕ್ಕೆಲದಲ್ಲಿ ಮಳೆ ನೀರಿಗೆ (ಕಾಂಕ್ರಿಟ್ ಬಾಕ್ಸ್ ಚರಂಡಿ) ನಿರ್ಮಿಸಲಾಗಿದೆಯಾದರೂ, ಇದರ ನಿರ್ವಹಣೆ ಇಲ್ಲದಿರುವುದು ಈ ರೀತಿಯ ಸಮಸ್ಯೆಗೆ ಕಾರಣವಾಗಿದ್ದು, ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ಪುನರಾವರ್ತಿತವಾಗುತ್ತಿದೆ.

ಚರಂಡಿಯಲ್ಲಿ ಮಣ್ಣು ಹಾಗೂ ಕಸ ತುಂಬಿರುವುದರಿಂದ ಅನೇಕ ಕಡೆಗಳಲ್ಲಿ ಚರಂಡಿಗೆ ನೀರು ಹೋಗದೆ, ರಸ್ತೆಯಲ್ಲೇ ಹರಿಯಿತು.

ಕೆಲವೆಡೆ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ನೀರು ಚರಂಡಿಯಲ್ಲಿ ಮುಂದಕ್ಕೆ ಹರಿಯಲಾಗದೆ ಅಲ್ಲೇ ನಿಲ್ಲುವಂತಾಯಿತು.

ಕೆಲವೆಡೆ ಚರಂಡಿ ಮೇಲೆ ಸ್ಲಾಬ್ ಜೋಡಿಸಿದ್ದು, ಅವುಗಳನ್ನು ತೆಗೆದು ಸ್ವಚ್ಛಗೊಳಿಸದಿರುವುದರಿಂದ ನೀರು ನಿಲ್ಲುವ ಈ ಸಮಸ್ಯೆ ಉದ್ಭವಿಸಿತು.

ನಗರದ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇದರ ನಿರ್ವಹಣೆಯು ರಾಷ್ಟ್ರೀಯ ಹೆದ್ದಾರಿ ಇಲಾಖೆಯದ್ದಾಗಿದ್ದರೂ ಇಲ್ಲೂ ಸಹ ಮಳೆ ನೀರಿನ ಚರಂಡಿ ನಿರರ್ಥಕವಾಗಿದ್ದು, ಮಳೆ ಬಂದಾಗ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲೇ ಹರಿಯುವುದನ್ನು ಹಾಗೂ ಕೆಲವೆಡೆ ಸರ್ವಿಸ್ ರಸ್ತೆಯಲ್ಲೇ ನೀರು ಹಳ್ಳದಂತೆ ನಿಲ್ಲುವುದನ್ನು ಜನರು ಉಲ್ಲೇಖಿಸುತ್ತಿದ್ದಾರೆ.

ಬಾಕ್ಸ್ ಚರಂಡಿ ನಿರ್ಮಾಣ ಮಾಡುವುದೇ ಒಂದು ದಂಧೆಯಂತಾಗಿದೆ. ಇದಕ್ಕಾಗಿ ಮಸ್ಕಿ ನಗರ ಪುರಸಭೆಯು ಕೋಟ್ಯಂತರ ರೂ. ವೆಚ್ಚ ಮಾಡಿದೆ. ಆದರೆ ಎಲ್ಲೂ ಸಹ ಇದು ವೈಜ್ಞಾನಿಕವಾಗಿ ನಿರ್ಮಾಣಗೊಂಡಿಲ್ಲ.

ಮಳೆ ಬಂದಾಗ ಮಳೆಯ ನೀರು ಸರಾಗವಾಗಿ ಮುಂದಕ್ಕೆ ಹರಿದು ಹೋಗುವಂತೆ ಸಂಪರ್ಕ ಜಾಲ ಇಲ್ಲವೇ ಇಲ್ಲ. ರಸ್ತೆಯ ಮೇಲೆ ಬಿದ್ದ ಮಳೆ ನೀರು ತಕ್ಷಣವೇ ಅಕ್ಕಪಕ್ಕದ ಚರಂಡಿಗೆ ಹರಿದುಬರುವಂತೆ ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಿಲ್ಲ.

ಮನಬಂದಂತೆ ನಿರ್ಮಿಸಿ ಬಿಲ್ ಮಾಡಿಕೊಳ್ಳಲಾಗಿದ್ದು ನೆಪಕ್ಕಷ್ಟೇ ಚರಂಡಿ ಇರುತ್ತದೆ ಎಂದು ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ರಾಜ್ಯ

ಮಸ್ಕಿಯ ಬಸವೇಶ್ವರ ಪ್ರತಿಮೆಗೆ ಮಹಿಳಾ ಕಾಂಗ್ರೆಸ್ ಮಾಲಾರ್ಪಣೆ

Published

on

ಮಸ್ಕಿಯ ಬಸವೇಶ್ವರ ಪ್ರತಿಮೆಗೆ ಶಶಿಕಲಾ ಭೀಮರಾಯ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರು ಮಹಿಳಾ ಕಾಂಗ್ರೆಸ್ ಮಾಲಾರ್ಪಣೆ.

ಮಸ್ಕಿ :- 12ನೇ ಶತಮಾನದ ಸಮಾನತೆಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಕೋವಿಡ್ -19 ಲಾಕ್ ಡೌನ್ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ
ಶ್ರೀ ಶ್ರೀ ಬಸವೇಶ್ವರ ಜಯಂತಿ ಶುಭಾಶಯಗಳು ನಾಡಿನ ಜನತೆಗೆ ಹಾಗೂ ನಾಡಿನ ರೈತ ಬಾಂಧವರಿಗೆ ಮಹಿಳೆಯರಿಗೆ ಪತ್ರಿಕೆ ಮಾಧ್ಯಮದವರಿಗೆ ಬಸವೇಶ್ವರ ಜಯಂತಿ ಶುಭಾಷಯಗಳು ಕೋರಿದರು.

ಶಶಿಕಲಾ ಭೀಮರಾಯ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರು ಮಹಿಳಾ ಕಾಂಗ್ರೆಸ್ ಮಸ್ಕಿ ಕ್ಷೇತ್ರದಲ್ಲಿ ಬಸವೇಶ್ವರರ ಜಯಂತಿ ಆಚರಣೆ ಮಾಡಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ರಾಜ್ಯ

ಭೋವಿ ಸಮಾಜದ ಕಟ್ಟಡ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಲು ತಾಲೂಕಿನ ತಹಸೀಲ್ದಾರರಿಗೆ ಮನವಿ

Published

on

ಮಸ್ಕಿ :- ದೇಶಾದ್ಯಂತ ಕೊರೋನ ಭೀತಿ ಹಿನ್ನೆಲೆಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ ಆರ್ಥಿಕ ಸಂಕಷ್ಟದಿಂದ ಕಟ್ಟಡ, ಇತರೆ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ.

ಕಟ್ಟಡ, ಇತರೆ ಕಾರ್ಮಿಕರ ನೆರವಿಗೆ ಸರಕಾರ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ಮಸ್ಕಿ ತಾಲೂಕಿನ ಸಿದ್ದರಾಮೇಶ್ವರ ಕಟ್ಟಡ ನಿರ್ಮಾಣ ಸಂಘದ ಪದಾಧಿಕಾರಿಗಳು ತಹಸಿಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ ಕಾರ್ಮಿಕರಿಗೆ ದಿನಗೂಲಿ ಲೆಕ್ಕದಲ್ಲಿ ಕೆಲಸಕ್ಕೆ ಕರೆಯುತ್ತಿದ್ದಾರೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಬೇರೆ ಗ್ರಾಮಗಳಿಗೆ ಕಾರ್ಮಿಕರು ಕೆಲಸಕ್ಕೆ ಹೋಗುವ ವೇಳೆಯಲ್ಲಿ ಪೊಲೀಸರು ಗುರುತಿನ ಚೀಟಿ ಕೇಳುತ್ತಿದ್ದಾರೆ
ಇಲ್ಲವಾದಲ್ಲಿ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಬೇಕು ಎಂದು ಕಾರ್ಮಿಕ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಲಿಂಗಸುಗೂರು ಸಹಾಯಕ ಆಯುಕ್ತರ ಗಮನಕ್ಕೆ ತರುವುದಾಗಿ ತಹಸಿಲ್ದಾರ್ ಬಲರಾಮ್ ಕಟ್ಟಿಮನಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರ ಸಾರಪ್ಪ ಬಂಗಾಲಿ , ಗೌರವಾಧ್ಯಕ್ಷ ತಿಮ್ಮಣ್ಣ ಗುಡಿಸಲಿ , ಕಾರ್ಯದರ್ಶಿ ಮಲ್ಲಯ್ಯ ಛಾವಣಿ , ಪುರಸಭೆ ಸದಸ್ಯ ರಂಗಪ್ಪ ಅರಕೇರಿ , ದುರುಗಪ್ಪ ಗೋನವಾರ , ನಾಗರಾಜ ರಾಯಚೂರು , ಮಲ್ಲಯ್ಯ ಸಾನಬಾಳ , ಬಸವರಾಜ ಉಪ್ಪಾರ , ಇಬ್ರಾಹಿಂ , ಗ್ಯಾನಪ್ಪ ಕಂದಗಲ್ , ಹಾಗೂ ಮಸ್ಕಿ ತಾಲೂಕಿನ ಹಲವು ಭೋವಿ ಸಮಾಜದ ಯುವಕರು ಸೇರಿದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ರಾಜ್ಯ

ಎ.ಪಿ.ಎಂ.ಸಿ ಕಾರ್ಮಿಕರಿಗೆ ಮಾಡಿದ ನೀರಿನ ಘಟಕ ಬಂದ್ ‌: ಕಾರ್ಮಿಕರು ಪರದಾಟ

Published

on

ಮಸ್ಕಿ :- ಜನರಿಗೆ ಪರಿಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಮಸ್ಕಿ ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ನಿರ್ಮಿಸಿರುವ ಶುದ್ಧ ನೀರು ಘಟಕ ಕೆಟ್ಟು ನಿಂತಿದೆ . ಇದರಿಂದಾಗಿ ಸಾರ್ವಜನಿಕರಿಗೆ ಶುದ್ಧ ನೀರು ದೊರೆಯದಾಗಿದೆ.

ಮಸ್ಕಿ ಎ.ಪಿ.ಎಂ.ಸಿ ಯ ಆವರಣದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹಲವು ತಿಂಗಳಾಗಿವೆ. ಆದರೆ ಎಷ್ಟೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮಸ್ಕಿಯ ಕೃಷಿ ಮಾರುಕಟ್ಟೆಗೆ ಬರುವಂತ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಬಹಳ ತೊಂದರೆಯಾಗಿದ್ದು.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಕಾರ್ಮಿಕ ಮುಖಂಡರು ತಿಳಿಸಿದರು, ಅಧಿಕಾರಿಗಳು ನೋಡಿದರೂ ನೋಡದಂತೆ ಸುಮ್ಮನಿದ್ದಾರೆ ಗುತ್ತಿಗೆ ಪಡೆದಂತೆ ಏಜೆನ್ಸಿಗಳು ಮೌನವಹಿಸಿದ್ದಾರೆ ಇದರ ಬಗ್ಗೆ ರೈತರು ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ, ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳು ಇತ್ತ ಗಮನ ಕೊಡುತ್ತಾರೆ ಎಂದು ಕಾದುನೋಡಬೇಕಾಗಿದೆ???

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್