Politics
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
ರಾಯಚೂರು : ಮೇ 18: ರಾಯಚೂರಿನ ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಜನರಿಗೆ ಹಾಗೂ ಸರ್ವಜನಿಕರಿಗೆ ತುಂಬಾ ತೊಂದರೆಗಳಿಂದ ಜೀವನ ಮಾಡುವಂತ ಸ್ಥಿತಿಯಲ್ಲಿ ಉಂಟಾಗಿದೆ, ಹಾಗೂ ಈ 2ನೇ ಅಲೇ ಮಹಾಮಾರಿ ಕೊರೋನಾ ದಿಂದ ಬಳಷ್ಟು ಜನರಿಗೆ ಕೆಲಸ ಇಲ್ಲದೆ, ದಿನನಿತ್ಯ ಉಪಜೀವನ ನಡೆಸುವುದಕ್ಕೆ ಜನರು ತೊಂದರೆಗಳಿಂದ ನರಳುತ್ತಿದ್ದಾರೆ ಎಂದು ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಹೇಳಿದರು.
ಆದರೆ ನಮ್ಮ ರಾಯಚೂರು ನಲ್ಲಿ ಇರುವಂತಹ ರಾಜಕೀಯ ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ, ಇವರು ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ದಿನನಿತ್ಯ ಹೋರಾಟ ರಾಜಕೀಯ ನಾಟಕ ಮಾಡುತ್ತಿರುವ ವ್ಯಕ್ತಿಗಳು ಇಂಥ ಸಮಯದಲ್ಲಿ ಪ್ರತಿಭಟನೆ ಮಾಡುವುದು ಹಾಗೂ ಪತ್ರಿಕೆಯಲ್ಲಿ ಪೋಸ್ ಕೊಡುವುದು ಬಿಟ್ಟರೆ ಇವರಿಗೆ ಯಾವುದೇ ಕೆಲಸ ಇಲ್ಲ ಎಂದು ದೂರಿದರು.
ನಗರ ಶಾಸಕ ಡಾ. ಶಿವರಾಜ್ ಪಟೇಲ್ ಅವರು ಯಾವುದೇ ಪಕ್ಷಭೇದವಿಲ್ಲದೆ ಕೆಲಸ ಮಾಡುವಂತ ಗುಣವುಳ್ಳವರು, ಇಂಥ ಸಮಯದಲ್ಲಿ ರಾಜಕೀಯ ಮಾಡುವುದು ಬೇಡ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ರಾಜಕೀಯ ಮಾಡುವುದು ಬೇಡ ಎಂದು ಹೇಳಿದರು.
ಈ ಸಮಯದಲ್ಲಿ ಜನರಿಗೆ ಎಲ್ಲಾ ರೀತಿಯಿಂದ ಸಹಕಾರ ಮಾಡಬೇಕಾದದ್ದು ನಮ್ಮ ಕರ್ತವ್ಯ ಎಂದರು.
ಜನರಿಗೆ ಧೈರ್ಯ ತುಂಬಾ ಬೇಕಾಗಿದ್ದು ಮತ್ತು ಅವರ ಕುಟುಂಬಕ್ಕೆ ಯಾವ ರೀತಿ ಸಹಾಯ ಮಾಡಬೇಕೆನ್ನುವ ಚಿಂತೆ ಎಲ್ಲಾ ರಾಜಕಾರಣಿಗಳಿಗೆ ಇರಬೇಕು. ಅದನ್ನು ಬಿಟ್ಟು ನಾನು ಪ್ರತಿಭಟನೆ ಮಾಡುತ್ತೇನೆ,ಓಪೆಕ್ ಆಸ್ಪತ್ರೆಗೆ ಹೋಗಿ ಜನರ ಮುಂದೆ ಪೋಸ್ ಕೊಡ್ತೀನಿ ಎಂಬ ಭಾವನೆ ರಾಜಕೀಯದಲ್ಲಿ ತೋರಿಸಬಾರದು. ಎಲ್ಲಾ ಪಕ್ಷದವರು ಕಾಂಗ್ರೆಸ್ ಆಗಲೀ, ಜೆಡಿಎಸ್ ಆಗಲೀ,ಮತ್ತು ಬಿಜೆಪಿಯವರ ಆಗಲೇ, ಎಲ್ಲರೂ ಸಭೆ ಸೇರಿಕೊಂಡು ಚರ್ಚೆ ಮಾಡುವುದು ಸೂಕ್ತವಾದ ಸಮಯ ಇದನ್ನು ಬಿಟ್ಟು,ಇನ್ನೊಬ್ಬರ ಟೀಕೆ ಮಾಡುವುದು ಅವರು ನಿಮ್ಮನ್ನ ಟೀಕೆ ಮಾಡುವುದು ಬೇಡವೆಂದು ಹೇಳಿದರು.
ಇನ್ನೊಂದು ವಿಷಯ ನಿಮಗೆ ತಿಳಿದಿರಲಿ ಒಬ್ಬರನ್ನು ಟೀಕಿಸುವ ಮೊದಲು ಎಲ್ಲಾ ತಾಲೂಕಿನಿಂದ ಬಂದಿರುವಂತಹ ಕೊರೋನ ಪಾಸಿಟಿವ್ ಬಂದಿರುವಂತಹ ಪೇಷಂಟ್ ಗಳನ್ನು ಓಪೆಕ್,ರಿಮ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ,
ಆದರೆ ಇಲ್ಲಿ ಟೀಕಿಸುವುದು ನಗರ ಶಾಸಕರು ಒಬ್ಬರನ್ನೇ ಹೊರತು, ಇನ್ನು ಉಳಿದ ಎಲ್ಲ ತಾಲೂಕಿನ ಶಾಸಕರನ್ನು ಯಾಕೆ ಟೀಕಿಸು ವಂತಿಲ್ಲ, ಇದು ಎಷ್ಟರಮಟ್ಟಿಗೆ ಸರಿ,
ಓಪೆಕ್,ರಿಮ್ಸ್ ಆಸ್ಪತ್ರೆಗಳು ಜಿಲ್ಲೆಗೆ ಸೇರಿದ ಆಸ್ಪತ್ರೆಗಳು ಎಲ್ಲಾ ತಾಲೂಕುಗಳಿಂದ ರೋಗಿಗಳು ಬರುತ್ತರೆ,ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ತಾಲೂಕ ಶಾಸಕರು ಹೊಣೆಯಾಗಿರುತ್ತರೆ ಎಂದರು.
ಈ ಎಲ್ಲಾ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಅವರ ಕೆಲಸಗಳು ಮತ್ತು ಆ ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ಕೊಡಿಸಬೇಕು ಎನ್ನುವುದು ಅವರಿಗೆ ಗೊತ್ತಿರಬೇಕು,
ಕೆಲಸ ಮಾಡಬೇಕು ಅನ್ನೋ ರೀತಿ ಅವರು ಗೊತ್ತಿದೆ ಇಷ್ಟೆಲ್ಲ ಯಾಕೆ ನಿಮ್ಮ ಕಾಂಗ್ರೆಸ್ಸಿನ ಗ್ರಾಮೀಣ ಶಾಸಕರು ಕೊರೋನಾ ರೋಗಿಗಳಿಗೆ ತುಂಬಾ ಕಷ್ಟ ಪಡುತ್ತಿದ್ದಾರೆ ಅದೇ ರೀತಿಯಾಗಿ ನಮ್ಮ ನಾಯಕರುಗಳಾದ ಮಾನ್ವಿ ಕ್ಷೇತ್ರದ ಹಾಗೂ ಸಿಂಧನೂರು ಕ್ಷೇತ್ರದ ಶಾಸಕರು ಕೂಡ ಕೆಲಸ ಮಾಡುತ್ತಿದ್ದಾರೆ ಯಾವ ಒಬ್ಬ ಶಾಸಕರು ಸುಮ್ಮನೆ ಕುಳಿತಿಲ್ಲ.
ಅವರು ಅವರು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅದನ್ನೆಲ್ಲ ಬಿಟ್ಟು ರಾಯಚೂರು ನಗರದ ಶಾಸಕರ ಮೇಲೆ ಗುಬೆ ಕೂಡಿಸುವುದು ಸರಿಯಲ್ಲ ಎಂದು ದೂರಿದರು.
ಯಾಕೆಂದರೆ ರಾಯಚೂರು ನಗರದಲ್ಲಿ ಡಾ.ಶಿವರಾಜ್ ಪಾಟೀಲ್ ಅವರು ಉತ್ತಮವಾದ ಕೆಲಸ ಮಾಡುತ್ತಿದ್ದಾರೆ ನಾನು ಒಬ್ಬ ಜೆ ಡಿ ಎಸ್ ನ ಮುಖಂಡನಾಗಿ ಹೇಳುತ್ತಿದ್ದೇನೆ ಎಂದರು.
ರಾಯಚೂರು ಶಾಸಕರ ಜೊತೆ ಸಮೀಪ ಕಂಡವರು ನಾನು, ಅವರು ಯಾವುದೇ ಪಕ್ಷದವರು ಪಕ್ಷದಿಂದ ಗೆದ್ದವರಗಿಲ್ಲಿ ಅಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಅಭಿವೃದ್ಧಿ ಆಗಬೇಕೆಂದು ಕನಸು ಕಂಡವರು,ಅದೇ ರೀತಿ ಅವರು ಅಭಿವೃದ್ಧಿ ಕೆಲಸಗಳ ಮೇಲೆ ತೊಡಗಿದ್ದಾರೆ.
ಈಗಾಗಲೇ ಕೊರೋನಾ ರೋಗಿಗಳಿಗೆ ಚಿಕಿತ್ಸೆ ಕೊಡಿಸುವುದರಲ್ಲಿ ತುಂಬಾ ಕೆಲಸ ಮಾಡುತ್ತಿದ್ದಾರೆ ಅದೇ ರೀತಿಯಾಗಿ ಕ್ವರಂಟೈನ್ ಸೆಂಟರ್ ಗಳು. ಈಗಾಗಲೇ ಓಪನ್ ಮಾಡಿದ್ದಾರೆ. ಮತ್ತು ಆಸ್ಪತ್ರೆಯಲ್ಲಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುವಂತ ಮತ್ತು ಡಿ.ಸಿ ಯವರೆಗೆ ಹಾಗೂ ಸಂಬಂಧಪಟ್ಟಂತಹ ಆರೋಗ್ಯ ಸಚಿವರು ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿರುವ ಅಂತ ಶಾಸಕರು ಡಾ. ಶಿವರಾಜ್ ಪಾಟೀಲ್ ಅವರು ಎಂದರು.
ರಾಯಚೂರಿಗೆ ಇತಿಹಾಸದಲ್ಲೇ ಯಾವ ಶಾಸಕರು ಅನುದಾನ ಇಷ್ಟೊಂದು ತಂದುದಿರುವುದಿಲ್ಲ,ಆದರೆ ಡಾ. ಶಿವರಾಜ್ ಪಾಟೀಲ್ ರವರು ನಮ್ಮ ರಾಯಚೂರು ನಗರಕ್ಕೆ ಮೊಟ್ಟಮೊದಲ ಇಷ್ಟೊಂದು ಅನುದಾನ ತಂದಿರುವುದು ಇತಿಹಾಸದಲ್ಲಿ ಮೊದಲ ಅಂತ ಹೇಳಿದರೆ ತಪ್ಪಾಗಲಿಕಿಲ್ಲ, ಎಂದು ದೂರಿದರು.
ಶಾಸಕರು ರಾಯಚೂರಿನ ಎಲ್ಲ ವಾರ್ಡಗಳಲ್ಲಿ ಪಕ್ಷಬೇಧ ಮರೆತು ಅಭಿವೃದ್ಧಿಗಾಗಿ ಎಲ್ಲರಿಗೂ ಅನುದಾನ ನೀಡಿದಂತ ವ್ಯಕ್ತಿ ಡಾ.ಶಿವರಾಜ್ ಪಟೇಲ್ ರವರು ಎಂದರು.
ಜನರಿಗೆ ಯಾರು ಏನು ಅನ್ನೋದು ಈಗಾಗಲೇ ಗೊತ್ತಾಗಿದೆ ಯಾರು ಅಭಿವೃದ್ಧಿ ಕೆಲಸ ಮಾಡುತ್ತಾರೆ ಎನ್ನುವುದು ಜನರಿಗೆ ತಿಳಿದಿದೆ, ನೀವೇನು ಪ್ರತ್ಯೇಕವಾಗಿ ಹೇಳುವುದು ಬೇಕಾಗಿಲ್ಲ,ಅದನ್ನು ಬಿಟ್ಟು ರಾಯಚೂರಿನಲ್ಲಿ ಡಿ.ಸಿ ಕಚೇರಿಯಲ್ಲಿ ಹಾಗೂ ಆಸ್ಪತ್ರೆಯಲ್ಲಿ ಪೋಸ್ ಕೊಡೋದು ಬೇಡ. ಯಾರು ಏನನ್ನುವುದು ಜನರಿಗೆ ಗೊತ್ತಾಗಿದೆ.
ಅಣ್ಣ ದಯವಿಟ್ಟು ಎಲ್ಲಾ ರಾಜಕಾರಣಿಗಳು ಪಕ್ಷಬೇಧ ಮರೆತು ಕೋರೋನ ರೋಗಿಗಳಿಗೆ ನರಳುತ್ತಿರುವಂತ ಬಡಕುಟುಂಬದ ಮತ್ತು ಮಧ್ಯಮ ಕುಟುಂಬದ ಮನೆಯಲ್ಲಿ ಇರುವಂತ ಜನರಿಗೆ ದಯವಿಟ್ಟು ಸಹಾಯ ಮಾಡಿ ಅದನ್ನೆಲ್ಲ ಬಿಟ್ಟು ಈ ರಾಜಕೀಯ ನಾಟಕಗಳ ಬಿಟ್ಟು ಎಲ್ಲರೂ ಒಂದಾಗೋಣ.
ಇನ್ನೊಂದು ವಿಷಯವೇನೆಂದರೆ ನಮ್ಮ ರಾಯಚೂರು ನಗರಸಭೆ ವತಿಯಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಸ್ವಚ್ಛತೆ ಇಲ್ಲ ಮತ್ತು ನೀರು ಸರಬರಾಜು ಇಲ್ಲ .
ಕೆಲವೊಂದು ಕಾಂಗ್ರೆಸ್ ಸದಸ್ಯರುಗಳು ಕೆಲಸ ಮಾಡದೆ ನಿಮ್ಮ ಹಿಂದೆ ತಿರುಗಡುವುದನ್ನು ನಿಲ್ಲಿಸಿ ಕೆಲಸ ಮಾಡಲಿ. ಮತ್ತು ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಕಾಂಗ್ರೆಸ್ಸಿನವರು ಆದರೆ ಅಧ್ಯಕ್ಷರು ಮತ್ತು ಹಿರಿಯ ಸದಸ್ಯರಾದ ಜಯಣ್ಣ ರವರು ಒಂದು ಕಡೆ ಪತ್ರಿಕೆ ಹೇಳಿಕೆ ಕೊಟ್ಟರೆ ಮತ್ತೊಂದು ಕಡೆ ಉಪಾಧ್ಯಕ್ಷರು ಪತ್ರಿಕೆ ಹೇಳಿಕೆ ಕೊಡುತ್ತಿದ್ದಾರೆ, ಇದು ಎಷ್ಟರಮಟ್ಟಿಗೆ ಸರಿ ಅವರಿಬ್ಬರು ಒಂದೇ ಪಕ್ಷದವರ ಆಗಿದ್ದು ಅವರಲ್ಲಿ ಹೊಂದಾಣಿಕೆಯಿಲ್ಲ.
ರಾಯಚೂರು ನಗರದ ಜನರನ್ನು ದಾರಿ ತಪ್ಪಿಸುವಂತಹ ಕೆಲಸ ನೀವು ಮಾಡಬೇಡಿ, ಮೊದಲು ಅದನ್ನು ಸರಿಪಡಿಸಿಕೊಳ್ಳಿ.
ಕೆಲವು ಕಾಂಗ್ರೆಸ್ ಸದಸ್ಯರನ್ನು ನಿಮ್ಮ ಹಿಂದೆ ತಿರುಗಾಡಿಕೊಂಡು ಪ್ರತಿಭಟನೆ ಮಾಡುವುದು ಪತ್ರಿಕೆ ಹೇಳಿಕೆ ಕೊಡುವುದು ಬಿಟ್ಟು ಎಲ್ಲ ಜನರಿಗೆ ಧೈರ್ಯ ತುಂಬುವ ಶಕ್ತಿ ನಾವು ಮಾಡಬೇಕು ಎಂದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
Politics
ಶಾಸಕರ ಮೇಲೆ ಸುಳ್ಳು ಸುಳ್ಳು ಆರೋಪಗಳನ್ನು ಬಿಟ್ಟು ಒಟ್ಟಾಗಿ ಕೆಲಸ ಮಾಡೋಣ : ವೀರೇಶ್
ರಾಯಚೂರು : ಮೇ.18: ರಾಯಚೂರು ನಗರದ ರಿಮ್ಸ್ ಮತ್ತು ಒಪೆಕ್ ಆಸ್ಪತ್ರೆ ಗಳಲ್ಲಿ ಸಿಬ್ಬಂದಿಗಳು ದಿನನಿತ್ಯವೂ ಸ್ವಚ್ಛತಾ ಕಾರ್ಯ ಮಾಡುತ್ತಿರುವಂಥ ಫೋಟೋಗಳು ಈಗಾಗಲೇ ವಾಟ್ಸಪ್, ಫೇಸ್ಬುಕ್ ಗಳಲ್ಲಿ ಹಾರಾಡುವ ಚಿತ್ರಗಳನ್ನು ತಾವು ನೋಡಿದ್ದೀರಿ, ಆಸ್ಪತ್ರೆ ಆವರಣೆ,ಕೋವಿಡ್ ಸೋಂಕಿತರ ವಾರ್ಡಗಳು,ರೋಗಿಗಳ ಕಡೆಯಿಂದ ಬಂದಿರುವವರನ್ನು ಉಳಿದುಕೊಳ್ಳುವ ಕೋಣೆಗಳೆಲ್ಲ, ಪ್ರತಿದಿನ ಸ್ವಚ್ಛಗೋಳಿಸಲಾಗುತ್ತಿದೆ ಎಂದು ಶಾಸಕ ಡಾ.ಶಿವರಾಜ ಪಾಟೀಲ್ ಫೋಟೋಗಳ ಸಮೇತವಾಗಿ ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಗಳ ಸ್ವಚ್ಚತೆ ಬಗ್ಗೆ ವೃಥಾ ಆರೋಪಗಳು ಮಾಡುವುದು,ಫೋಟೋಗಳು ಬಿಡುವುದು ಮಾಡಿ,ಜನರಿಗೆ ದಾರಿ ತಪ್ಪಿಸಬಾರದು ಎಂದು ವೀರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿ ರಾಜಕೀಯ ಮಾಡುತ್ತಾ ಜನರಿಗೆ ಆತಂಕ ಹೆಚ್ವಿಸುವ ಕೆಲಸ ಮಾಡಬಾರದೆಂದು ಮನವಿ ಮಾಡಿದ್ದಾರೆ.
ಕೋವಿಡ್-19 ಸಂದರ್ಭದಲ್ಲಿ ಇಂತಹ ರಾಜಕೀಯ ಮಾಡುವುದು ಅವಶ್ಯಕತೆ ಇದೇನಾ? ಒಬ್ಬ ಶಾಸಕರ ಬಗ್ಗೆ ಈ ರೀತಿಯಾಗಿ ಹೇಳಿಕೆ ಕೊಡುವುದು ತಪ್ಪು, ಡಾ. ಶಿವರಾಜ್ ಪಟೇಲ್ ರವರು ಏನು ಅನ್ನೋದು ಜನಗಳಿಗೆ ಗೊತ್ತಿದೆ, ನೀವು ಹೇಳೋದು ಅವಶ್ಯಕತೆ ಇಲ್ಲ, ಪಕ್ಷಬೇಧವನ್ನು ಬಿಟ್ಟು ಅಗಲು ಇರುಳು ಎಂದು ಲೆಕ್ಕಿಸದೆ ಕೆಲಸ ಮಾಡುವ ಏಕೈಕ ವ್ಯಕ್ತಿ ಶಾಸಕರು ಅವರ ಬಗ್ಗೆ ಕಾಂಗ್ರೆಸ್ ಪಕ್ಷದವರು ಟೀಕೆ ಮಾಡುವುದನ್ನು ಬಿಟ್ಟು ಬೇರೆ ಏನು ಕೆಲಸ ಇಲ್ಲ.
ನಗರಸಭೆ ಅಧಿಕಾರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಕಾಂಗ್ರೆಸ್ನವರು ಇದ್ದಾರೆ ಆದರೆ ನಗರದಲ್ಲಿ ಅಭಿವೃದ್ಧಿದಲ್ಲಿ ಶೂನ್ಯ ಅದು ಮೊದಲು ತಿಳಿದುಕೋ ಬೇಕಾಗುವುದು ಕಾಂಗ್ರೆಸ್ನವರು.
ಇದನ್ನು ಬಿಟ್ಟು 2ನೇ ಅಲೇ ಕೋರನಾ ಸಂದರ್ಭದಲ್ಲಿ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ?
ಮೊನ್ನೆ ಅವರನ್ನು ಆಸ್ಪತ್ರೆ ಒಳಗೆ ಬಿಡಲಿಲ್ಲ ಎಂದು ಶಾಸಕರ ಮೇಲೆ ಅಪವಾದನೆ ಮಾಡಿದಿರಲ್ಲ, ಅವರು ಒಬ್ಬ ಕೊರನಾ ರೋಗಿಯ ಹತ್ತಿರ ಹೋಗಬೇಕಾದರೆ ಪಿ.ಪಿ.ಟಿ.ಕಿಟ್ಸ್ ಧರಿಸದೆ ಆಸ್ಪತ್ರೆಗಳ ಒಳಗಡೆ ಹೋಗಬಾರದು, ಇದು ಯಾವುದೇ ಇಲ್ಲದೆ ಅವರು ಏಕೈಕವಾಗಿ ಕೊರೊನ್ ರೋಗಿಗಳ ಜೊತೆಗೆ ಮಾತಾಡಿದರೆ ಹೇಗೆ ತಪ್ಪು ತಾನೇ
ನಿಮಗೆ ಕೊರೊನಾ ಬಂದರೆ, ನಿಮ್ಮ ಜೊತೆಯಲ್ಲಿರುವ ಅವರಿಗೆ ಸಹ ಬರುತ್ತೆ, ಅವರಿಂದ ಇನ್ನೊಬ್ಬರಿಗೆ ಕೊರೊನಾ ಬರುತ್ತೆ ಅನ್ನುವುದು ತಮಗೆ ಗೊತ್ತಿರುವ ವಿಷಯ ತಾನೆ,ಇದೆನಾ ನೀವು ಜನರಿಗೆ ಸಹಾಯ ಮಾಡುವ ರೀತಿ ಎಂದು ಪ್ರಶ್ನಿಸಿದರು.
ಅದಕ್ಕೆ ಅಲ್ಲಿಯ ಅಧಿಕಾರಿಗಳು ಅವರನ್ನು ಒಳೆಗಡೆ ಬಿಟ್ಟಿಲ್ಲ ಅಷ್ಟೇ, ಇದನ್ನು ಯಾರು ತಪ್ಪು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲಾ ಬಿಡಿ, ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ತಾವು ಮಾಡಿದ್ದಾರೆ ಅದನ್ನು ತಪ್ಪು ಅಂತ ಹೇಳುವುದು ಎಷ್ಟರ ಮಟ್ಟಿಗೆ ಸರಿ.
ತಾವೇ ಜನಸಾಮಾನ್ಯರಿಗೆ ತಿಳಿವಳಿಕೆ ಹೇಳುವುದು ಬಿಟ್ಟು ತಾವೇ ತಪ್ಪು ಮಾಡಿದರೆ ಯಾರಿಗೆ ಹೇಳಬೇಕು.
ಈ ಲಾಕ್ ಡೌನ್ ನಿನ್ನಿಂದ ಜನಸಾಮಾನ್ಯರಿಗೆ ಮತ್ತು ರೈತರಿಗೆ, ಕೂಲಿ ಕಾರ್ಮಿಕರಿಗೆ, ಇನ್ನಿತರರು ದಿನನಿತ್ಯ ಉಪಜೀವನ ನಡೆಸುವುದು ಬಹಳ ತೊಂದರೆ ಅನುಭವಿಸುತ್ತಿದ್ದಾರೆ, ಎಲ್ಲಾ ರಾಜಕೀಯ ಪಕ್ಷದವರು ಒಂದುಗೂಡಿ ಕೊರೋನ ಹೇಗೆ ಕಡಿಮೆ ಮಾಡಬೇಕು ಅನ್ನುವುದು ಯೋಚನೆ ಮಾಡೋದು ಬಿಟ್ಟು ದಿನದಿನಕ್ಕೆ ಪತ್ರಿಕೆಯಲ್ಲಿ ಹೇಳಿಕೆ ಕೊಡುವುದನ್ನು ಬಿಟ್ಟು ಜನಸಾಮಾನ್ಯರಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ನಾವು ಮಾಡಬೇಕು ಎಂದು ಹೇಳಿದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
Politics
ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ
ಗೌರಿಬಿದನೂರು – ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಸೋಂಕಿತರ ಸಂಖ್ಯೆ, ಗುಣಮುಖರಾದವರ ಸಂಖ್ಯೆ, ಸಕ್ರಿಯವಾಗಿರುವ ಸೋಂಕಿತರ ಸಂಖ್ಯೆ ,ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಹೊರಗಿನಿಂದ ಬಂದವರಿಗೆ ಸೋಂಕು ಪರೀಕ್ಷೆಯ ಕುರಿತು ಕೈಗೊಂಡಿರುವ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ ಕರೋನ ನಿಯಂತ್ರಿಸಲು ನೇಮಕಗೊಂಡ ಎಲ್ಲಾ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಮಾನ್ಯ ಶಾಸಕರಾದ ಎನ್.ಎಚ್.ಶಿವಶಂಕರರೆಡ್ಡಿ ರವರು ತಾಲ್ಲೂಕಿನ ವ್ಯಾಪ್ತಿಗೆ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ತಾಲೂಕು ಆರೋಗ್ಯಧಿಕಾರಿ, ಹಾಗೂ ತಹಸಿಲ್ದಾರ್ ರೊಂದಿಗೆ ಅಂತರ್ಜಾಲ ಬಳಸಿಕೊಂಡು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅತ್ಯಗತ್ಯವಿರುವ ಪರಿಕರಗಳು, ಔಷಧಿಗಳನ್ನು, ಸೇರಿದಂತೆ ಸೋಂಕಿತರ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕುರಿತು ಸಮಾಲೋಚನೆ ನಡೆಸಿದರು.
Politics
ಎಚ್.ಡಿ.ದೇವೇಗೌಡರ 89 ನೇ ಹುಟ್ಟುಹಬ್ಬ : ಏಳು ಆಮ್ಲಜನಕ ಸಾಂದ್ರಕ ಮತ್ತು ದಿನಸಿ ಕಿಟ್‌ಗಳನ್ನು ವಿತರಣೆ
ಶಿಡ್ಲಘಟ್ಟ : ಜೆಡಿಎಸ್ ಪಕ್ಷದ ರಾಷ್ಟೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ 89 ನೇ ಹುಟ್ಟುಹಬ್ಬದ ಅಂಗವಾಗಿ ನಗರದ ನಗರ ಸಭೆ ಮತ್ತು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಶ್ರೀ ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಏಳು ಆಮ್ಲಜನಕ ಸಾಂದ್ರಕ (ಆಕ್ಸಿಜನ್ ಕಾನ್ಸಂಟ್ರೇಟರ್) ಹಾಗೂ ತಾಲ್ಲೂಕಿನಾದ್ಯಂತ ಇರುವ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನಗರದ ಪೌರಕಾರ್ಮಿಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿದರು.
ನಮ್ಮ ಭಾರತ ದೇಶದ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರು ಅಪರೂಪದ ವ್ಯಕ್ತಿ. ದೇಶದ ಹನ್ನೊಂದನೇ ಪ್ರಧಾನಿಯಾಗಿ ಎಚ್.ಡಿ.ದೇವೇಗೌಡ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿಯನ್ನು ಪ್ರತಿಯೊಬ್ಬರು ನೆನಪಿಡಬೇಕಾಗುತ್ತದೆ. ಬಡವರ ಏಳಿಗೆಯೇ ಅವರ ಗುರಿ. ಜನಪರ ಚಿಂತನೆ ಹಾಗೂ ರೈತರ ಬಗ್ಗೆ ಕಾಳಜಿಯೊಂದಿಗೆ ಮತ್ತು ಅವರ ಮಾನವೀಯ ಗುಣ ನಮಗೆಲ್ಲಾ ಪ್ರೇರಣೆ ಆಗಬೇಕು. ಅಂತಹ ಮಹನೀಯರ ಹುಟ್ಟುಹಬ್ಬವನ್ನು ತಾಲ್ಲೂಕಿನ ಜನತೆಯ ಆರೋಗ್ಯ ಕಾಪಾಡುವುದು ಹಾಗೂ ಕೋವಿಡ್ 19 ರ ಮುಂಚೂಣಿ ಕಾರ್ಯಕರ್ತರಿಗೆ ನೆರವಾಗುವ ಮೂಲಕ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಳೆದೊಂದು ವರ್ಷದಿಂದ ಕೋವಿಡ್ 19 ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನಗರದ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರಿಗೆ ಮನೋಸ್ಥೈರ್ಯ ತುಂಬುವುದು ಮತ್ತು ಕೊರೊನಾ ವಿರುದ್ದ ಹೋರಾಡಲು ಮತ್ತಷ್ಟು ಪ್ರೋತ್ಸಾಹ ನೀಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು ಮಾತನಾಡಿ, ತಾಲ್ಲೂಕಿನ ಜನತೆ ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ನಲುಗಿಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಟ್ರಸ್ಟಿನ ಅಧ್ಯಕ್ಷ ಬಿ.ಎನ್.ರವಿಕುಮಾರ್ ರ ನೇತೃತ್ವದಲ್ಲಿ 7 ಆಮ್ಲಜನಕ ಸಾಂದ್ರಕಗಳನ್ನು ನಗರದ ಆಸ್ಪತ್ರೆಗೆ ನೀಡುವ ಜೊತೆಗೆ 230 ಆರೋಗ್ಯ ಸಿಬ್ಬಂದಿ, 185 ಆಶಾ ಕಾರ್ಯಕರ್ತೆಯರು, 365 ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 130 ಪೌರ ಕಾರ್ಮಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ವೈದ್ಯಾಧಿಕಾರಿ ಡಾ.ವಾಣಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಸದಸ್ಯರಾದ ಲಕ್ಷ್ಮಯ್ಯ, ವೆಂಕಟಸ್ವಾಮಿ, ಪಿ.ಎಲ್.ಡಿ.ಬ್ಯಾಂಕ್ ನ ಮಾಜಿ ನಿರ್ದೇಶಕ ಹೆಚ್.ಶಂಕರ್, ಮುಖಂಡರಾದ ಎಚ್.ಜಿ.ಶಶಿಕುಮಾರ್, ಎಸ್.ಎಂ.ರಮೇಶ್, ಪಿ.ಕೆ.ಕಿಶನ್(ನಂದು), ಬಾಲಕೃಷ್ಣ ಸೇರಿದಂತೆ ಮುಂತಾದವರು ಹಾಜರಿದ್ದರು.
ವರದಿ : ಕೆ.ಮಂಜುನಾಥ್. ಶಿಡ್ಲಘಟ್ಟ
-
Politics2 weeks ago
ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
-
ಸುದ್ದಿ2 days ago
ಹರಳಕೆರೆ ಗ್ರಾಮದಲ್ಲಿ ಹಸುವನ್ನು ಬಲಿತೆಗೆದುಕೊಂಡ ಚಿರತೆ : ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
-
ಸುದ್ದಿ1 week ago
ಸಿಎಂ ತವರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟ, 10 ಕ್ಕೂ ಹೆಚ್ಚು ಕಾರ್ಮಿಕರು ಬಲಿ
-
ಕೊರೊನಾ3 days ago
“ಕೋವಿಡ್ ಸೋಂಕಿತರ ಗೌರವಯುತ ಅಂತ್ಯಕ್ರಿಯೆ”