Connect with us
Ad Widget

ಮನರಂಜನೆ

ಮತ್ತೆ ಕಿರಿಕ್ ಮಾಡಲ್ಲ ಎಂದ ನಟಿ ರಶ್ಮಿಕಾ ಮಂದಣ್ಣ

Published

on

ಬೆಂಗಳೂರು : ಕಿರಿಕ್​ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೊಡಗಿನ ​ ಬೆಡಗಿ ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್​ ಕ್ರಶ್​. ಸದಾ ಒಂದಲ್ಲ ಒಂದು ವಿಚಾರದಿಂದ ಮುಖ್ಯಭೂಮಿಕೆಯಲ್ಲಿರುವ ರಶ್ಮೀಕಾ ಇದೀಗ ಮತ್ತೆ ಕಿರಿಕ್​ ಮಾಡಲ್ಲ ಅಂತ ಸುದ್ದಿಯಾಗಿದ್ದಾರೆ.

ಸಾನ್ವಿ ಪಾತ್ರದ ಮೂಲಕ ಯುವಕರ ನಿದ್ದೆ ಗೆಡಿಸಿದ್ದ ರಶ್ಮಿಕಾಗೆ, ಕಿರಿಕ್​ ಪಾರ್ಟಿ ನಂತ್ರ ಆಫರ್​ಗಳ ಸುರಿಮಳೆನೇ ಹರಿದು ಬಂತು. ಒಂದಾದ ಮೇಲೊಂದು ಹಿಟ್ ಸಿನಿಮಾ ಕೊಟ್ಟು ಅಭಿಮಾನಿಗಳನ್ನು ರಂಜಿಸಿದ ರಶ್ಮಿಕಾ ಕರ್ನಾಟಕ ಕ್ರಶ್​ನಿಂದ ನ್ಯಾಶನಲ್​ ಕ್ರಶ್ ಪಟ್ಟ ಗಳಿಸಿಕೊಂಡ್ರು. ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಕಾಲ್​ ಶೀಟ್​​ಗೆ ಅನೇಕ ನಿರ್ದೇಶಕರು ಕೂಡ ಕಾಯಬೇಕಾಯ್ತು. ಈಗಾಗಲೇ ಬಾಲಿವುಡ್​ಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದ ಹಿಂದಿ ರಿಮೇಕ್ನಲ್ಲಿ ನಟಿಸುವುದಿಲ್ಲ ಅಂತ ಹೇಳಿದ್ದಾರೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಮನರಂಜನೆ

ಬಾಲಿವುಡ್ ನಟಿ ಹುಟ್ಟುಹಬ್ಬಕ್ಕೆ ಶುಭಕೋರಿ ಬೃಹತ್ ಫ್ಲೆಕ್ಸ್ : ಅಭಿಮಾನಕ್ಕೆ ಸಂತಸ ವ್ಯಕ್ತಪಡಿಸಿದ ಸನ್ನಿ ಲಿಯೋನ್

Published

on

ಮಂಡ್ಯ: ಮೇ 13 ರಂದು ಖ್ಯಾತ ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ 40ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ದೇಶದಾದ್ಯಂತ ಶುಭಾಶಯ ಕೋರಿದ್ದರು. ಅದರಲ್ಲೂ ಕರ್ನಾಟಕದಲ್ಲಿ ಈ ಬಾರಿ ಸನ್ನಿಗೆ ಅಭಿಮಾನಿಗಳು ಶುಭಾಶಯ ಕೋರಿದ ರೀತಿ ಸ್ವಲ್ಪ ಭಿನ್ನವಾಗಿದ್ದು, ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ಕೂಡ ಸಂತಸ ವ್ಯಕ್ತಪಡಿಸಿದ್ದರು.

ವಿಶಾಲವಾದ ಅಭಿಮಾನಿ ಬಳಗವನ್ನು ಹೊಂದಿರುವ ಸನ್ನಿ ಲಿಯೋನ್​ಗೆ ಹಳ್ಳಿಯೊಂದರಲ್ಲಿ ಫ್ಲೆಕ್ಸ್ ಹಾಕಿಸಿ ಅದರ ಮೇಲೆ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ‌ ದೇವತೆ ಎಂದು ಬರೆದು ಶುಭಕೋರಿ ಹಾಕಿದ್ದರು. ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗಿತ್ತು ಮತ್ತು ಇದೇ ಫೋಟೋವನ್ನು ಸನ್ನಿ ಲಿಯೋನ್ ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿ ಕರ್ನಾಟಕದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು.
ಆದರೆ ಇದು ಯಾವ ಹಳ್ಳಿಯಲ್ಲಿನ ಫೋಟೊ ಎಂದು ಯಾರಿಗೂ ತಿಳಿದಿರಲಿಲ್ಲ ಸದ್ಯ ಸನ್ನಿ ಲಿಯೋನ್​ಗೆ ಶುಭಕೋರಿ ಹಾಕಿದ ಈ ಫ್ಲೆಕ್ಸ್ ಸಕ್ಕರೆನಾಡು ಮಂಡ್ಯದ್ದು ಎಂದು ಗೊತ್ತಾಗಿದೆ. ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಯುವಕರ ತಂಡವೊಂದು ಮೇ 13 ರಂದು ತಮ್ಮೂರಿನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್​ಗೆ ಶುಭಕೋರಿ ಬೃಹತ್ ಫ್ಲೆಕ್ಸ್ ಹಾಕಿ ಕೇಕ್ ಕಟ್ ಮಾಡಿರುವುದರ ಜೊತೆಗೆ ನೆರೆದಿದ್ದವರಿಗೆ ಬಿರಿಯಾನಿ ಕೂಡ ಹಂಚಿದ್ದರು ಎಂದು ಮೂಲಗಳು ತಿಳಿಸಿವೆ.

Continue Reading

ಮನರಂಜನೆ

ಡ್ರಗ್ಸ್ ಕೇಸ್ ನಿಂದ ಹೊರಬಂದ ನಟಿ ಮೇಲೆ ಮತ್ತೊಂದು ಎಫ್ ಐ ಆರ್

Published

on

ಬೆಂಗಳೂರು : ಸ್ಯಾಂಡಲ್​ವುಡ್​ ಡ್ರಗ್​ ಕೇಸ್​ನಲ್ಲಿ ನಟಿ ಸಂಜನಾ ಗಲ್ರಾನಿ ಜೈಲು ಸೇರಿದ್ದರು. ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಅವರು ಜೈಲಿನಿಂದ ಹೊರ ಬಂದಿದ್ದರು. ಕೊವಿಡ್​ ಸಂದರ್ಭದಲ್ಲಿ ಅವರು ಸಾಮಾನ್ಯರ ಸಹಾಯಕ್ಕೆ ನಿಂತಿದ್ದಾರೆ. ಈ ಮಧ್ಯೆ, ಸಂಜನಾ ವಿರುದ್ಧ ಮತ್ತೊಂದು ಎಫ್​ಐಆರ್​ ದಾಖಲಾಗಿದೆ. ಇದರಿಂದ ಅವರು ಮತ್ತೆ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಸಂಜನಾ ಡ್ರಗ್​ ಕೇಸ್​ನಲ್ಲಿ ಬೇಲ್​ ಪಡೆದು ಹೊರ ಬಂದಿದ್ದಾರೆ. ಹೀಗಿರುವಾಗಲೇ ಹಳೆಯ ಕೇಸ್​ ಒಂದಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಡೆಲ್ ವಂದನಾ ಜೈನ್ ನೀಡಿದ ದೂರಿನ್ವಯ ಕಬ್ಬನ್ ಪಾರ್ಕ್ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

2019ರಲ್ಲಿ ಲಾವೆಲಿ ರಸ್ತೆಯ ಕ್ಲಬ್​ಒಂದಕ್ಕೆ ವಂದನಾ ತೆರಳಿದ್ದರು.
ಅದೇ ಕ್ಲಬ್​ನಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಇದ್ದರು. ಆಗ ಸಂಜನಾ ಅವರು ವಂದನಾ ಜೈನ್ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದರು ಎನ್ನಲಾಗಿದೆ.

ಅವಾಚ್ಯ ಶಬ್ದಗಳನ್ನು ಬಳಸದಂತೆ ವಂದನಾ ಜೈನ್ ಸೂಚನೆ ನೀಡಿದ್ದರು. ಈ ವೇಳೆ ವಂದನಾ ಮುಖಕ್ಕೆ ವಿಸ್ಕಿ ಎರಚಿದ ಸಂಜನಾ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಇದೆ. ಈ ಘಟನೆ ವೇಳೆ ವಂದನಾ ಕಣ್ಣಿಗೆ ಗಾಯ ಆಗಿತ್ತು. ಘಟನೆ ಬಳಿಕ ವಂದನಾಗೆ ಸಂಜನಾ ಬೆದರಿಕೆ ಹಾಕಿದ್ದರಂತೆ.

ಈ ಪ್ರಕರಣದ ಬಗ್ಗೆ ವಂದನಾ ಕೋರ್ಟ್​ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಕೋರ್ಟ್​ ನಿರ್ದೇಶನದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕೊರೊನಾ

ಚಿತ್ರರಂಗದ ಕಾರ್ಮಿಕರಿಗೆ ರಿಯಲ್ ಸ್ಟಾರ್ ಉಪೇಂದ್ರ ನೆರವು

Published

on

ಬೆಂಗಳೂರು: ಚಿತ್ರೀಕರಣವಿಲ್ಲದೇ ಕಾರ್ಮಿಕರಿಗೆ ಒಪ್ಪೊತ್ತಿನ ಊಟಕ್ಕೂ ತೊಂದರೆಯಾಗಿದೆ. ಹೀಗಾಗಿ ಕಾರ್ಮಿಕರಿಗೆ ದೈನಂದಿನ ದಿನಸಿ ಕಿಟ್ ನ್ನು ಕಾರ್ಮಿಕರ ಸಂಘದ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ವಿತರಿಸಲಿದ್ದಾರೆ.

ಕೊರೋನಾದಿಂದಾಗಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರಿಗೆ ರಿಯಲ್ ಸ್ಟಾರ್ ಉಪೇಂದ್ರ ನೆರವಾಗಲು ಮುಂದೆ ಬಂದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಉಪೇಂದ್ರ ಅಗತ್ಯವಿದ್ದವರು ಕಾರ್ಮಿಕರ ಒಕ್ಕೂಟವನ್ನು ಸಂಪರ್ಕಿಸಿ ಎಂದಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ದೇಣಿಗೆಯಾಗಿ ಬಂದ ಹಣವನ್ನು ಕಿರುತೆರೆ ಕಾರ್ಮಿಕರ ನೆರವಿಗೆ ಒದಗಿಸಲಿದ್ದಾರೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್