Connect with us
Ad Widget

ಸುದ್ದಿ

ವಿನಾಯಕ ಗೆಳೆಯರ ಬಳಗದಿಂದ ಶ್ಲಾಘನೀಯ ಕಾರ್ಯ ಮೆರೆದ ಯುವಕರು

Published

on

ಮಸ್ಕಿ :- ದೇಶದಾದ್ಯಂತ ಕಾಡುತ್ತಿರುವ ಕೋವಿಡ-19 ಎರಡನೇ ಅಲೆಯ ಕಾರಣಕ್ಕಾಗಿ ಮಾಡಲಾಗಿರುವ ಲಾಕ್ ಡೌನ್ ನಿಂದ ಲಾರಿ ಮತ್ತು ಗೂಡ್ಸ್ ವಾಹನದ ಚಾಲಕರಿಗೆ ರಸ್ತೆಯ ಬದಿಯಲ್ಲಿ ಯಾವುದೇ ರೀತಿಯ ಅಂಗಡಿ ಮುಂಗಟ್ಟುಗಳು ತೆರೆಯದೇ ಇರುವುದರಿಂದ ಊಟ ಮತ್ತು ಉಪಹಾರ ಸಿಗದೆ ಪರದಾಡುವಂತಾಗಿದ್ದು ವಾಹನ ಚಾಲಕರ ಕಷ್ಟಕ್ಕೆ ಸಹಕರಿಸಲು ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಾಗೂ ಯುವಕರಿಂದ ಲಾರಿ ಮತ್ತು ಗೂಡ್ಸ್ ವಾಹನದ ಚಾಲಕರಿಗೆ 2 ನೇ ದಿನದ ಊಟದ ಪ್ಯಾಕೇಟ್ ಗಳನ್ನು ಮತ್ತು ನೀರಿನ ಪ್ಯಾಕೆಟ್ ಗಳನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಈ ಸಂದರ್ಭದಲ್ಲಿ ಡಾ॥ ನಾಗರಾಜ ಪಾಟೀಲ್,ವಿನೋದ್ ದೇಸಾಯಿ,ಮಂಜುನಾಥ್ ಪಾಟೀಲ್,ನೀಲಕಂಠ ಕೊಳ್ಳಿ (ಹಾಲ್ವಿ), ಅಮರಪ್ಪ ಪ್ಯಾಟ್ಯಾಳ, ಸಂಗನಗೌಡ,ಬಸವರಾಜ ಗದ್ದಗಿಮಠ,ಪ್ರಭು, ಸೋಮಶೇಖರ್, ನಾಗರಾಜ್ ಪ್ಯಾಟ್ಯಾಳ,ಮಲ್ಲಯ್ಯ, ಅಮರೇಶ್ ಹೂಗಾರ್, ಸಿದ್ದು ಪಾಟೀಲ್, ಮಲ್ಲು ಬಡಿಗೇರ ಅಮರೇಶ, ಕುಮಾರ, ನಾಗರಾಜ್ ಬಳಿಗಾರ್ ಮುತ್ತಣ್ಣ ಬಳಿಗಾರ್ ಅವಿನಾಶ್ ಹಾಗೂ ಇತರರು ಭಾಗವಹಿಸಿದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

Published

on

ಶಿಡ್ಲಘಟ್ಟ : ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ ರಾಜ್ಯದಲ್ಲಿ ಮಹಾಮಾರಿ ಕೊರೊನ ಎರಡನೆ ಅಲೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಮವಾರ ,ಮಂಗಳವಾರ ,ಬುಧವಾರ ಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳ್ಳಗೆ 06 ಘಂಟೆಯಿಂದ 10 ಘಂಟೆ ವರೆಗೂ ಆವಕಾಶ ವಿರುವುದ್ದರಿಂದ ನಗರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನ ಮುಂದಾಗಿರುವ ಚಿತ್ರ ಕಂಡು ಬಂದಿದೆ

ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

ಸುದ್ದಿ

ಕುಸುಮ ನ್ಯೂಸ್ ವರದಿಗೆ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು..!!

Published

on

ಮಸ್ಕಿ :- ತಾಲೂಕಿನಾದ್ಯಂತ ಮಳೆಯಾದರೆ ಸಾಕು ಮಸ್ಕಿ ಯಿಂದ ಸಿಂಧನೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದ ಚರಂಡಿಗಳಲ್ಲಿ ಕಸ-ಕಡ್ಡಿಗಳು ಹಾಗೂ ಗರಿಕೆ ಹುಲ್ಲು ಬೆಳೆದಿದ್ದು . ಮಳೆ ಬಂದರೆ ಸಾಕು ರಸ್ತೆಯ ಮೇಲಿನಿಂದ ನೀರು ಜಾರಿ ಅಕ್ಕಪಕ್ಕದ ಚರಂಡಿಯೊಳಗೆ ನೀರು ನುಗ್ಗಿ ಮುಂದಕ್ಕೆ ಹೋಗದ ಅಲ್ಲೇ ನಿಂತು ದುರ್ವಾಸನೆ ಬರುತ್ತಿದ್ದು ಇದರಿಂದ ಸರಿಸೃಪ ಹಾಗೂ ಕೆಟ್ಟ ಹುಳುಗಳು ಬರುತ್ತಿದ್ದರಿಂದ ಅಕ್ಕಪಕ್ಕದ ಅಂಗಡಿಗಳು ಹಾಗೂ ಮನೆಯವರಿಗೆ ತೊಂದರೆಯಾಗಿದ್ದು ಎಷ್ಟು ಬಾರಿ ಅಧಿಕಾರಿಗಳಿಗೂ ತಿಳಿಸಿದ್ದರು ಕ್ಯಾರೆ ಅನ್ನದ ಅಧಿಕಾರಿಗಳು

ನಂತರ ಅಂಗಡಿ ಹಾಗೂ ಮನೆಯವರು ಕುಸುಮ ನ್ಯೂಸ್ ವರದಿ ನೀಡಿದ್ದು ಎಷ್ಟು ಬಾರಿ ಅಧಿಕಾರಿಗಳಿಗೆ ಸೂಚಿಸಿದರು ಸ್ವಚ್ಛಗೊಳಿಸದೆ ಇರುವರು ಎಂದು ತಿಳಿಸಿದರು.

ತದನಂತರ ಕುಸುಮ ನ್ಯೂಸ್ ಹಾಗೂ ಇನ್ನಿತರ ಪತ್ರಿಕೆಯಲ್ಲಿ ಅಧಿಕಾರಿಗಳ ಮೇಲೆ ವರದಿ ಮಾಡಿದ ನಂತರ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಕೊಂಡಿದ್ದು ಚರಂಡಿ ಸ್ವಚ್ಛತೆಯ ಕೆಲಸವನ್ನು ನಡೆಸಿದ್ದಾರೆ.

ಇದರಿಂದಾಗಿ ಅಂಗಡಿ ಮತ್ತು ಅಕ್ಕಪಕ್ಕದ ಮನೆಯವರು ಹಾಗೂ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು ಸೇರಿ ಅಧಿಕಾರಿಗಳ ಮೇಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ರಾಯಚೂರು ವಾಹಿನಿ ದಿನಪತ್ರಿಕೆ ವರದಿಗೆ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು..!!

Published

on

ಮಸ್ಕಿ :- ತಾಲೂಕಿನಾದ್ಯಂತ ಮಳೆಯಾದರೆ ಸಾಕು ಮಸ್ಕಿ ಯಿಂದ ಸಿಂಧನೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದ ಚರಂಡಿಗಳಲ್ಲಿ ಕಸ-ಕಡ್ಡಿಗಳು ಹಾಗೂ ಗರಿಕೆ ಹುಲ್ಲು ಬೆಳೆದಿದ್ದು, ಮಳೆ ಬಂದರೆ ಸಾಕು ರಸ್ತೆಯ ಮೇಲಿನಿಂದ ನೀರು ಜಾರಿ ಅಕ್ಕಪಕ್ಕದ ಚರಂಡಿಯೊಳಗೆ ನೀರು ನುಗ್ಗಿ ಮುಂದಕ್ಕೆ ಹೋಗದ ಅಲ್ಲೇ ನಿಂತು ದುರ್ವಾಸನೆ ಬರುತ್ತಿದ್ದು ಇದರಿಂದ ಸರಿಸೃಪ ಹಾಗೂ ಕೆಟ್ಟ ಹುಳುಗಳು ಬರುತ್ತಿದ್ದರಿಂದ ಅಕ್ಕಪಕ್ಕದ ಅಂಗಡಿಗಳು ಹಾಗೂ ಮನೆಯವರಿಗೆ ತೊಂದರೆಯಾಗಿದ್ದು ಎಷ್ಟು ಬಾರಿ ಅಧಿಕಾರಿಗಳಿಗೂ ತಿಳಿಸಿದ್ದರು ಕ್ಯಾರೆ ಅನ್ನದ ಅಧಿಕಾರಿಗಳು.

ನಂತರ ಅಂಗಡಿ ಹಾಗೂ ಮನೆಯವರು ರಾಯಚೂರು ವಾಹಿನಿ ಪತ್ರಿಕೆಗೆ ವರದಿ ನೀಡಿದ್ದು ಎಷ್ಟು ಬಾರಿ ಅಧಿಕಾರಿಗಳಿಗೆ ಸೂಚಿಸಿದರೂ ಸ್ವಚ್ಛಗೊಳಿಸದೆ ಇರುವರು ಎಂದು ತಿಳಿಸಿದರು.

ತದನಂತರ ರಾಯಚೂರು ವಾಹಿನಿ ದಿನಪತ್ರಿಕೆಯಲ್ಲಿ ಹಾಗೂ ಇನ್ನಿತರ ಪತ್ರಿಕೆಯಲ್ಲಿ ಅಧಿಕಾರಿಗಳ ಮೇಲೆ ವರದಿ ಮಾಡಿದ ನಂತರ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಕೊಂಡಿದ್ದು ಚರಂಡಿ ಸ್ವಚ್ಛತೆಯ ಕೆಲಸವನ್ನು ನಡೆಸಿದ್ದಾರೆ.

ಇದರಿಂದಾಗಿ ಅಂಗಡಿ ಮತ್ತು ಅಕ್ಕಪಕ್ಕದ ಮನೆಯವರು ಹಾಗೂ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು ಸೇರಿ ಅಧಿಕಾರಿಗಳ ಮೇಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್