Connect with us
Ad Widget

ಸುದ್ದಿ

ಕುಸುಮ ನ್ಯೂಸ್ ವರದಿಗೆ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು..!!

Published

on

ಮಸ್ಕಿ :- ತಾಲೂಕಿನಾದ್ಯಂತ ಮಳೆಯಾದರೆ ಸಾಕು ಮಸ್ಕಿ ಯಿಂದ ಸಿಂಧನೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದ ಚರಂಡಿಗಳಲ್ಲಿ ಕಸ-ಕಡ್ಡಿಗಳು ಹಾಗೂ ಗರಿಕೆ ಹುಲ್ಲು ಬೆಳೆದಿದ್ದು . ಮಳೆ ಬಂದರೆ ಸಾಕು ರಸ್ತೆಯ ಮೇಲಿನಿಂದ ನೀರು ಜಾರಿ ಅಕ್ಕಪಕ್ಕದ ಚರಂಡಿಯೊಳಗೆ ನೀರು ನುಗ್ಗಿ ಮುಂದಕ್ಕೆ ಹೋಗದ ಅಲ್ಲೇ ನಿಂತು ದುರ್ವಾಸನೆ ಬರುತ್ತಿದ್ದು ಇದರಿಂದ ಸರಿಸೃಪ ಹಾಗೂ ಕೆಟ್ಟ ಹುಳುಗಳು ಬರುತ್ತಿದ್ದರಿಂದ ಅಕ್ಕಪಕ್ಕದ ಅಂಗಡಿಗಳು ಹಾಗೂ ಮನೆಯವರಿಗೆ ತೊಂದರೆಯಾಗಿದ್ದು ಎಷ್ಟು ಬಾರಿ ಅಧಿಕಾರಿಗಳಿಗೂ ತಿಳಿಸಿದ್ದರು ಕ್ಯಾರೆ ಅನ್ನದ ಅಧಿಕಾರಿಗಳು

ನಂತರ ಅಂಗಡಿ ಹಾಗೂ ಮನೆಯವರು ಕುಸುಮ ನ್ಯೂಸ್ ವರದಿ ನೀಡಿದ್ದು ಎಷ್ಟು ಬಾರಿ ಅಧಿಕಾರಿಗಳಿಗೆ ಸೂಚಿಸಿದರು ಸ್ವಚ್ಛಗೊಳಿಸದೆ ಇರುವರು ಎಂದು ತಿಳಿಸಿದರು.

ತದನಂತರ ಕುಸುಮ ನ್ಯೂಸ್ ಹಾಗೂ ಇನ್ನಿತರ ಪತ್ರಿಕೆಯಲ್ಲಿ ಅಧಿಕಾರಿಗಳ ಮೇಲೆ ವರದಿ ಮಾಡಿದ ನಂತರ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಕೊಂಡಿದ್ದು ಚರಂಡಿ ಸ್ವಚ್ಛತೆಯ ಕೆಲಸವನ್ನು ನಡೆಸಿದ್ದಾರೆ.

ಇದರಿಂದಾಗಿ ಅಂಗಡಿ ಮತ್ತು ಅಕ್ಕಪಕ್ಕದ ಮನೆಯವರು ಹಾಗೂ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು ಸೇರಿ ಅಧಿಕಾರಿಗಳ ಮೇಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ರಾಯಚೂರು ವಾಹಿನಿ ದಿನಪತ್ರಿಕೆ ವರದಿಗೆ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು..!!

Published

on

ಮಸ್ಕಿ :- ತಾಲೂಕಿನಾದ್ಯಂತ ಮಳೆಯಾದರೆ ಸಾಕು ಮಸ್ಕಿ ಯಿಂದ ಸಿಂಧನೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದ ಚರಂಡಿಗಳಲ್ಲಿ ಕಸ-ಕಡ್ಡಿಗಳು ಹಾಗೂ ಗರಿಕೆ ಹುಲ್ಲು ಬೆಳೆದಿದ್ದು, ಮಳೆ ಬಂದರೆ ಸಾಕು ರಸ್ತೆಯ ಮೇಲಿನಿಂದ ನೀರು ಜಾರಿ ಅಕ್ಕಪಕ್ಕದ ಚರಂಡಿಯೊಳಗೆ ನೀರು ನುಗ್ಗಿ ಮುಂದಕ್ಕೆ ಹೋಗದ ಅಲ್ಲೇ ನಿಂತು ದುರ್ವಾಸನೆ ಬರುತ್ತಿದ್ದು ಇದರಿಂದ ಸರಿಸೃಪ ಹಾಗೂ ಕೆಟ್ಟ ಹುಳುಗಳು ಬರುತ್ತಿದ್ದರಿಂದ ಅಕ್ಕಪಕ್ಕದ ಅಂಗಡಿಗಳು ಹಾಗೂ ಮನೆಯವರಿಗೆ ತೊಂದರೆಯಾಗಿದ್ದು ಎಷ್ಟು ಬಾರಿ ಅಧಿಕಾರಿಗಳಿಗೂ ತಿಳಿಸಿದ್ದರು ಕ್ಯಾರೆ ಅನ್ನದ ಅಧಿಕಾರಿಗಳು.

ನಂತರ ಅಂಗಡಿ ಹಾಗೂ ಮನೆಯವರು ರಾಯಚೂರು ವಾಹಿನಿ ಪತ್ರಿಕೆಗೆ ವರದಿ ನೀಡಿದ್ದು ಎಷ್ಟು ಬಾರಿ ಅಧಿಕಾರಿಗಳಿಗೆ ಸೂಚಿಸಿದರೂ ಸ್ವಚ್ಛಗೊಳಿಸದೆ ಇರುವರು ಎಂದು ತಿಳಿಸಿದರು.

ತದನಂತರ ರಾಯಚೂರು ವಾಹಿನಿ ದಿನಪತ್ರಿಕೆಯಲ್ಲಿ ಹಾಗೂ ಇನ್ನಿತರ ಪತ್ರಿಕೆಯಲ್ಲಿ ಅಧಿಕಾರಿಗಳ ಮೇಲೆ ವರದಿ ಮಾಡಿದ ನಂತರ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಕೊಂಡಿದ್ದು ಚರಂಡಿ ಸ್ವಚ್ಛತೆಯ ಕೆಲಸವನ್ನು ನಡೆಸಿದ್ದಾರೆ.

ಇದರಿಂದಾಗಿ ಅಂಗಡಿ ಮತ್ತು ಅಕ್ಕಪಕ್ಕದ ಮನೆಯವರು ಹಾಗೂ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು ಸೇರಿ ಅಧಿಕಾರಿಗಳ ಮೇಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ದಲಿತ ಯುವಕನ ಮೇಲೆ ಅಮಾನವೀಯ ಕೃತ್ಯ ಖಂಡಿಸಿ ಪ್ರತಿಭಟನೆ

Published

on

ಮದ್ದೂರು : ಜನಸಾಮಾನ್ಯರಿಗೆ ಮತ್ತು ಅಮಾಯಕರಿಗೆ ರಕ್ಷಣೆ ಕೊಡಬೇಕಾದ ಚಿಕ್ಕಮಗಳೂರು ಜಿಲ್ಲೆಯ ಗೋಣಿ ಬೀಡಿ ಪೋಲೀಸ್ ಇನ್ಸಪೆಕ್ಟರ್ ಅರ್ಜುನನ ಅಮಾನವೀಯ ಕೃತ್ಯ ಖಂಡಿಸಿ ಕೊಪ್ಪದಲ್ಲಿ ಸಮಾನ ಮನಸ್ಕರರ ವೇದಿಕೆಯು ಪ್ರತಿಭಟನೆ ನಡೆಸಿತು. ಕಿರುಗುಂದದ ಪುನೀತ್ ಎಂಬ ಅಮಾಯಕ ದಲಿತ ಯುವಕನನ್ನು ಯಾವುದೋ ಒಂದು ಕೇಸಿನ ನೆಪದಲ್ಲಿ ಎಳೆದು ತಂದು ಚಿತ್ರ ಹಿಂಸೆ ನೀಡಿದ ಇನ್ಸಪೆಕ್ಟರ್ ಅರ್ಜುನ್, ನೀನು ಎಸ್ ಸಿ ನಾ ಎಂದು ಹೀಯಾಳಿಸಿ, ಹಿಂಸಿಸಿ ಬಲವಂತವಾಗಿ ಮೂತ್ರ ಕುಡಿಸಿದ್ದಾನೆ. ಅಲ್ಲದೆ ಕೆಳಗೆ ಚಲ್ಲಿದ್ದ ಮೂತ್ರವನ್ನು ಬಲವಂತವಾಗಿ ನೆಕ್ಕಿಸಿದ್ದಾನೆ. ಇಂತಹ ಹೇಯ ಕೃತ್ಯವೆಸಗಿರುವ ಇನ್ಸಪೆಕ್ಟರ್ ಅರ್ಜುನನನ್ನು ಸೇವೆಯಿಂದ ವಜಾಗೊಳಿಸಬೇಕು, ಎಸ್ ಸಿ ಎಸ್ ಟಿ ದೌರ್ಜನ್ಯ ಕಾಯ್ದೆ ಅಡಿ ಆತನನ್ನು ಬಂದಿಸಿ ಶಿಕ್ಷಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮಾನವ ಕುಲಕ್ಕೇ ಕಳಂಕ ತರುವ ಅಮಾನವೀಯ ಕೃತ್ಯವ್ಯಸಗಿರುವ ಇನ್ಸಪೆಕ್ಟರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯಂಬಾರ್ಜಿಯರ್ ಮಠದ ಅದ್ಯಕ್ಷ ಕುಮಾರ್ ಕೊಪ್ಪ, ಗಾಯಕ ಮತ್ತು ಹೋರಾಟಗಾರ ಹುರುಗಲವಾಡಿ ರಾಮಯ್ಯ, ಜಯಕರ್ನಾಟಕ ಸಂಘಟನೆಯ ಮೊಹಮ್ಮದ್ ಇಲಿಯಾಜ್, ಧರ್ಶನ್, ಸಮಾನ ಮನಸ್ಕರರ ವೇಧಿಕೆಯ ತಗ್ಗಹಳ್ಳಿ ಸುಂದರೇಶ್, ಸಿದ್ದಲಿಂಗಯ್ಯ, ವಿನಯ್, ವೆಂಕಟೇಶ್, ಶಿವರುದ್ರ, ರೈತ ಸಂಘದ ಶಿವಕುಮಾರ್, ಚನ್ನೇಗೌಡ, ಹುರುಗಲವಾಡಿ ಉಮೇಶ್, ರಾಮೇಗೌಡ, ಡಿ ಎಸ್ ಎಸ್ ರಮಾನಂದ್ ಇತರರು ನೇತೃತ್ವ ವಹಿಸಿದ್ದರು.

Continue Reading

ರಾಜ್ಯ

ಸಿಬಿಎಸ್ ಇ 10 ನೇ ತರಗತಿ ಫಲಿತಾಂಶ ಮುಂದೂಡಿಕೆ

Published

on

ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿಬಿಎಸ್ ಇ 10 ನೇ ತರಗತಿ ಫಲಿತಾಂಶ ಮುಂದೂಡಿಕೆ ಮಾಡಲಾಗಿದೆ.

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ ಇ) 10 ನೇ ತರಗತಿ ಫಲಿತಾಂಶ ಪ್ರಕಟಿಸುವ ದಿನಾಂಕವನ್ನು ಮುಂದೂಡಿದೆ. ಈಗಾಗಲೇ ಪರೀಕ್ಷೆಯನ್ನು ರದ್ದು ಮಾಡಿರುವ ಸಿಬಿಎಸ್ ಇ ಶಾಲೆಗಳಿಗೆ ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಗಳಲ್ಲಿ ಮತ್ತು ಇತರ ಅಭ್ಯಾಸ ಪುಸ್ತಕಗಳಲ್ಲಿ ನೀಡಲಾಗಿರುವ ಅಂಕಗಳನ್ನು ಪರಿಶೀಲನೆ ನಡೆಸಿ, ಸಲ್ಲಿಸಲು ಹೆಚ್ಚಿನ ಸಮಯ ಬೇಕಾದ ಹಿನ್ನೆಲೆಯಲ್ಲಿ ಫಲಿತಾಂಶ ದಿನಾಂಕವನ್ನು ಮುಂದೂಡಿದೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್