Connect with us
Ad Widget

ಸುದ್ದಿ

ಜನರ ಹಸಿವನ್ನು ನೀಗಿಸುವ ಹಾದಿಯಲ್ಲಿ ಅಭಿನಂದನ್ ಸಂಸ್ಥೆಯ ರಾಮಣ್ಣ ಹಂಪರಗುಂದಿ ವಿನೂತನ ಹೆಜ್ಜೆ

Published

on

ಮಸ್ಕಿ :- ಪಟ್ಟಣದಲ್ಲಿ ಕೋವಿಡ್- 19 (2ನೇ) ಅಲೆಯ ಕಾರಣದಿಂದಾಗಿ ಮಾಡಲಾಗಿರುವ ಲಾಕ್ ಡೌನ್ ನಿಂದಾಗಿ ತೊಂದರೆಗೀಡಾದ ಕಡು ಬಡ ಕುಟುಂಬಗಳಿಗೆ ನೆರವಾಗಲು ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಅಭಿಯಾನವನ್ನು ಆರಂಭಿಸಿದ್ದು.

ಈ ಅಭಿಯಾನದ ಅಡಿಯಲ್ಲಿ ಮಸ್ಕಿ ಪಟ್ಟಣದ 9 ಮತ್ತು 16 ನೇ ವಾರ್ಡಿನಲ್ಲಿ 60 ಕ್ಕೂ ಅಧಿಕ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ನಾಗರಾಜ ಶೆಟ್ಟಿ ಅಭಿನಂದನ್ ಸಂಸ್ಥೆಯು ಬಡ ಕುಟುಂಬಗಳಿಗೆ ಆಹಾರವನ್ನು ಒದಗಿಸುವುದರ ಜೊತೆಗೆ ಔಷಧಗಳನ್ನು ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಿನಂದನ್ ಸಂಸ್ಥೆಗೆ ಹೇಳಿ ಸಾರ್ವಜನಿಕರಲ್ಲಿ ಧೈರ್ಯ ತುಂಬುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ ಎಂದು ನಾಗರಾಜ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಸಿದ್ದಪ್ಪ ಹಳ್ಳಿ , ಶಿಕ್ಷಕರಾದ ಕಳಕಪ್ಪ ಹಾದಿಮನಿ ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ , ಸಂಸ್ಥೆಯ ಸದಸ್ಯರಾದ ಶೃತಿ ಹಂಪರಗುಂದಿ , ರೇಣುಕಾ ಹಂಪರಗುಂದಿ , ವಿದ್ಯಾ ಕೊಪ್ಪರದ , ಬಸವರಾಜ್ ಸ್ವಾಮಿ , ರವಿಕುಮಾರ್ ಸ್ಥಾವರಮಠ , ಮಲ್ಲಿಕಾರ್ಜುನ ಬಡಿಗೇರ್, ಅಮೀತ್ ಕುಮಾರ್ ಪುಟ್ಟಿ , ಕಾರ್ತಿಕ್ ಜೋಗೀನ್, ಕೀಶೋರ್, ಪವನ್ ಮುಕ್ತಿ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ವಿದ್ಯಾರ್ಥಿ ವೇತನಕ್ಕೆ ಅರ್ಜಿ : ದಿನಾಂಕ ವಿಸ್ತರಣೆ

Published

on

ಕಲಬುರಗಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ 2020-21ನೇ ಸಾಲಿಗೆ “ಮೆಟ್ರಿಕ್-ನಂತರದ ವಿದ್ಯಾರ್ಥಿ ವೇತನ”, “ಶುಲ್ಕ ವಿನಾಯಿತಿ”, “ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ” ಹಾಗೂ “ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ” ಸೌಲಭ್ಯ ನೀಡಲಾಗುವುದು,

ಇದಕ್ಕಾಗಿ ಜಿಲ್ಲೆಯ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ ಅರೆ-ಅಲೆಮಾರಿ ವಿದ್ಯಾರ್ಥಿಗಳಿಂದ (ಈಗಾಗಲೇ ಎಸ್‍ಎಸ್‍ಪಿ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿ, ಅರ್ಜಿಯನ್ನು ಪೂರ್ಣಗೊಳಿಸದೇ ಇರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುವಂತೆ) ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2021ರ ಜೂನ್ 20 ರವರೆಗೆ ವಿಸ್ತರಿಸಲಾಗಿದೆ.
ವಿದ್ಯಾರ್ಥಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಸುದ್ದಿ

ಸಂಕಷ್ಟಕ್ಕೊಳಗಾದವರಿಗೆ ಹಾಗೂ ಮಂಗಳಮುಖಿಯರಿಗೆ ಸಹಾಯಧನ

Published

on

ಬೆಂಗಳೂರು : ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.17 ಜೆ.ಪಿ.ಪಾರ್ಕ್ ಆಟದ ಮೈದಾನದಲ್ಲಿ ಕೊರೋನಾ ಲಾಕಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದವರಿಗೆ ಹಾಗೂ ಮಂಗಳಮುಖಿಯರಿಗೆ ಮುನಿರತ್ನ ರವರು ಉಚಿತವಾಗಿ ದಿನಸಿ, ಸೊಪ್ಪು ಮತ್ತು ತರಕಾರಿಗಳೊಂದಿಗೆ ಸಹಾಯಧನ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಲ್.ಸಿ. ಶ್ರೀ ಎನ್.ರವಿಕುಮಾರ್, ರಾಜ್ಯ ಮುಖಂಡರಾದ‌ ಶ್ರೀ ಚೇತನ್ ಸೋಮಣ್ಣ, ಬಿಬಿಎಂಪಿ ಮಾಜಿ ಸದಸ್ಯರಾದ ವೇಲು ನಾಯಕರ್, ರಾಮಚಂದ್ರು, ಹೆಚ್.ಎಸ್.ಸಿದ್ದೇಗೌಡ, ಮಂಡಲ ಅಧ್ಯಕ್ಷರಾದ ಶಿವಣ್ಣಗೌಡ, ಮುಖಂಡರಾದ ಶ್ರೀಮತಿ ಸುನಂದ ಬೋರೇಗೌಡ ಸೇರಿದಂತೆ ಅನೇಕರಿದ್ದರು.

Continue Reading

ಸುದ್ದಿ

ಸರ್ಕಾರಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿವೀಕ್ಷಣೆ

Published

on

ಬೆಂಗಳೂರು : ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಮುನ್ನೇಕೊಳಾಲು ಗ್ರಾಮದ ಸರ್ವೆ ನಂ. 36 ರಲ್ಲಿ 250 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಆರೋಗ್ಯ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳೊಂದಿಗೆ ಅರವಿಂದ ಲಿಂಬಾವಳಿ ರವರು ಸ್ಥಳ ಪರಿವೀಕ್ಷಣೆ ನಡೆಸಿದರು.

ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಂತಹ ಸರ್ಕಾರಿ ಆಸ್ಪತ್ರೆಯ ಕುರಿತು ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವೆದ್ ಅಕ್ತರ್ ಅವರೊಂದಿಗೆ ಇತ್ತಿಚೆಗೆ ಸಭೆ ನಡೆಸಿ, ಸಿದ್ದಾಪುರದಲ್ಲಿದ್ದ ಆಸ್ಪತ್ರೆಯನ್ನು (ಬಿಎಂಟಿಸಿ ಜಾಗ ಬಿಡದ ಕಾರಣ) ಸ್ಥಳಾಂತರಿಸಿ ಸದ್ಯ ದೊಡ್ಡೆನೆಕ್ಕುಂದಿ ವಾರ್ಡ್ ನ ಮುನ್ನೇಕೊಳಾಲು ನವಪ್ರಜ್ಞಾ ಶಾಲೆಯ ಹಿಂದಿನ ಸುಮಾರು 4 ಎಕರೆ 07 ಗುಂಟೆ ಜಾಗದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಲು ಅಧಿಕಾರಿಗಳೊಂದಿಗೆ ತೆರಳಿ ಪರಿವೀಕ್ಷಣೆ ನಡೆಸಿ, ಆದಷ್ಟು ಬೇಗ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.

ಅಲ್ಲದೇ ಕರ್ನಾಟಕ ಟಾಸ್ಕ್ ಫೋರ್ಸ್‌ ಕೂಡ ಬೆಂಗಳೂರನಲ್ಲಿ ಸ್ಥಳಾವಕಾಶ ಇದ್ದಲ್ಲಿ ಹೆಚ್ಚು ಆಸ್ಪತ್ರೆಗಳನ್ನು ನಿರ್ಮಿಸಲು ಸೂಚಿಸಿದೆ, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಮುನ್ನೇಕೊಳಾಲು ನಲ್ಲಿ 250 ಬೆಡ್ ಗಳ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಸಿಗಲಿವೆ ಜೊತೆಗೆ ಹೆರಿಗೆ ಆಸ್ಪತ್ರೆ, ಚಿಕ್ಕ ಮಕ್ಕಳ ಆಸ್ಪತ್ರೆ ಕೂಡ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಜಾವೆದ್ ಅಕ್ತರ್, ಜಿಲ್ಲಾಧಿಕಾರಿಗಳಾದ ಶ್ರೀ ಮಂಜುನಾಥ್, ಮುಖ್ಯ ಅಭಿಯಂತರಾದ ಶ್ರೀ ಮಂಜಪ್ಪ, ಜಿಂಟಿ ಆಯುಕ್ತರು, ತಹಶೀಲ್ದಾರರು, ಆರೋಗ್ಯ ಅಧಿಕಾರಿಗಳು , ಇತರ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್