Connect with us
Ad Widget

ಕೊರೊನಾ

ಖಾಸಗಿ ಶಿಕ್ಷಕರ ಪಾಲಿಗೆ ಸಂಜೀವಿನಿಯಾದ ಶ್ರೀ ಅಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಮಸ್ಕಿ

Published

on

ಮಸ್ಕಿ : ತಾಲೂಕಿನ ಶ್ರೀ ಅಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಖಾಸಗಿ ಕಾಲೇಜು ಉಪನ್ಯಾಸಕರಿಗೆ, ಹೈಸ್ಕೂಲ್ ಶಿಕ್ಷಕರಿಗೆ, ಪ್ರೈಮರಿ ಶಿಕ್ಷಕರಿಗೆ ಮತ್ತು ಬಡ ಕುಟುಂಬಗಳಿಗೆ 101 ಆಹಾರದ ಕಿಟ್ ಗಳನ್ನು ಗಚ್ಚಿನ ಮಠ ಶ್ರೀ ವರರುದ್ರಮುನಿ ಸ್ವಾಮಿಗಳು, ಪ್ರತಾಪ್‌ ಗೌಡ ಪಾಟೀಲ್ ಮಸ್ಕಿ ಮತ್ತು ಬ್ಯಾಂಕ್ ನ ಅಧ್ಯಕ್ಷ ಸೂಗಣ್ಣ ಬಾಳೇಕಾಯಿ ಮಸ್ಕಿ ವಿತರಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಶಾರದಾ ಪ್ರೌಢ ಶಾಲೆ ಮುಖ್ಯಗುರುಗಳಾದ ಮಲ್ಲಿಕಾರ್ಜುನ್ ಹಿರೇಮಠ ಅವರು, ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಬಡವರಿಗೆ, ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಆಹಾರದ ಕಿಟ್ ಗಳನ್ನು ವಿತರಿಸುವ ಇಂತಹ ಸಹಕಾರಿ ನಿಯಮಿತ ಸಂಸ್ಥೆಗಳನ್ನು ನೋಡುವುದು ಇದೇ ಮೊದಲು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಸೂಗಣ್ಣ ಬಾಳೆಕಾಯಿ , ಗುರುರಾಜ ಹಂಚಿನಾಳ , ಸುರೇಶ ಅರಳಿ , ಸಂತೋಷ ಬಾಳೇಕಾಯಿ ,
ಬಸವರಾಜ ಬುಕ್ಕಣ್ಣ , ಬಸವರಾಜ ನಾಯಕ ಕಡಬೂರು ಹಾಗೂ ಬ್ಯಾಂಕ್ ನ ಎಲ್ಲ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

ಕೊರೊನಾ

“ತರಿದಾಳು ಗ್ರಾಮ ಪಂಚಾಯಿತಿ ವತಿಯಿಂದ ಆಹಾರದ ಸಾಮಗ್ರಿಗಳುಳ್ಳ ಕಿಟ್ಟ್ ಗಳ ವಿತರಣೆ”

Published

on

ಗೌರೀಬಿದನೂರು : ತಾಲ್ಲೂಕಿನ ತರಿದಾಳು ಗ್ರಾಮ ಪಂಚಾಯಿತಿ ವತಿಯಿಂದ ದಿನಸಿ ಕಿಟ್, ಮಾಸ್ಕ್, ಸಾನಿಟೈಸ್ ರ,ಹೆಲ್ತ್ ಕಿಟ್ಟ್, ನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಗ್ರಾಮ ಪಂಚಾಯಿತಿ ಸಿಬ್ಬಂದಿಯವರಿಗೆ, ವಿತರಿಸಲಾಯಿತು. ಇದೇ ವೇಳೆ ಗ್ರಾ.ಪಂ.ಅಧ್ಯಕ್ಷರಾದ ಸಂತುರಾಮ್ (ರಾಮು), ಉಪಾಧ್ಯಕ್ಷರಾದ ಶಿವಮ್ಮ, ಮುಖಂಡರಾದ ಲಕ್ಷ್ಮಣ ರಾವ್, ಪಿ ಡಿ.ಓ ನಾಗೇಂದ್ರ, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಜರಿದ್ದರು.

Continue Reading

ಕೊರೊನಾ

ಗ್ರಾಮ ಪಂಚಾಯತಿಗಳಿಗೆ ನಿರಾಣಿ ಫೌಂಡೆಶನ್ ವತಿಯಿಂದ ಸಾನಿಟೈಜರ್ ವಿತರಣೆ

Published

on

ದೇವರ ಹಿಪ್ಪರಗಿ : ಮತಕ್ಷೆತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ 32 ಗ್ರಾಮ ಪಂಚಾಯತಿಗಳಿಗೆ ನಿರಾಣಿ ಫೌಂಡೆಶನ್ ವತಿಯಿಂದ ಸಾನಿಟೈಜರ್ ವಿತರಣೆ ಕಾರ್ಯಕ್ರಮ ದಲ್ಲಿ ನಮ್ಮ ಜನಪ್ರಿಯ ಶಾಸಕ ರಾದ ಶ್ರೀ ಸೋಮನಗೌಡ ಬ ಪಾಟಿಲ ಸಾಸನೂರ ಹಾಗೂ ವಿಧಾನ ಪರಿಷತ್ ಸದಸ್ಯ ರಾದ ಶ್ರೀ ಹಣಮಂತ ನಿರಾಣಿ ಮತ್ತು ಶ್ರೀ ಅರುಣ ಶಹಪೂರ ಜೊತೆಯಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಲ್ಲ ತಾಲ್ಲೂಕು ಪಂಚಾಯತ E O ಹಾಗೂ P D O ಗಳು, ಅಭಿಮಾನಿ ಕಾರ್ಯಕರ್ತರು ಭಾಗಿಯಾದರು.

ವರದಿ: ರಮೇಶ ಕಲಕೇರಿ ದೇವರ ಹಿಪ್ಪರಗಿ

Continue Reading

ಕೊರೊನಾ

ಲಘು ವಿಮಾನದ ಮೂಲಕ ಸಾವಯುವ ಔಷಧಿ ಸಿಂಪಡಿಸಿ ವೈರಸ್ ಹತೋಟಿಗೆ ತರುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

Published

on

ಬೆಂಗಳೂರು : ಕೋವಿಡ್-೧೯ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಜನನಿಬಿಡ ಪ್ರದೇಶಗಳಲ್ಲಿ ಏರಿಯಲ್ ವರ್ಕ್ಸ್ ಏರೋ ವತಿಯಿಂದ ಲಘು ವಿಮಾನದ ಮೂಲಕ ಸಾವಯುವ ಔಷಧಿ ಸಿಂಪಡಿಸಿ ವೈರಸ್ ಹತೋಟಿಗೆ ತರುವ ವಿನೂತನ ಕಾರ್ಯಕ್ರಮಕ್ಕೆ ಆರ್, ಅಶೋಕ್ ರವರು ಚಾಲನೆ ನೀಡಿದರು.

ಇದೊಂದು ಪ್ರಾಯೋಗಿಕ ಯೋಜನೆಯಾಗಿದ್ದು, ಫಲಿತಾಂಶದ ಆಧಾರದ ಮೇಲೆ ಇದನ್ನು ಅಳವಡಿಸಿಕೊಳ್ಳುವ ಕುರಿತು ಸರ್ಕಾರ ಚಿಂತನೆ ನಡೆಸಲಿದೆ ಎಂದರು.

ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷರಾದ ಶ್ರೀ ಎಸ್ ಆರ್ ವಿಶ್ವನಾಥ್ ಹಾಗೂ ಮಾನ್ಯ ಶಾಸಕರಾದ
ಶ್ರೀ ಕೃಷ್ಣಭೈರೇಗೌಡ ಉಪಸ್ಥಿತರಿದ್ದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್