Connect with us
Ad Widget

ಸುದ್ದಿ

ಜಿಲ್ಲೆಗಳ ಶಾಸಕರು, ಸಂಸದರೊಂದಿಗೆ ವೀಡಿಯೋ ಸಂವಾದ

Published

on

ಬೆಂಗಳೂರು : ಕೋವಿಡ್-19 ಸಾಂಕ್ರಾಮಿಕವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಚರ್ಚಿಸಲು ಮೈಸೂರು, ಹಾಸನ, ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಶಾಸಕರು, ಸಂಸದರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ವೀಡಿಯೋ ಸಂವಾದ ನಡೆಸಿದರು.

ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ|| ಸಿ.ಎನ್.ಅಶ್ವತ್ಥ್ ನಾರಾಯಣ್, ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಗ್ರಾಮೀಣ ಮಟ್ಟದಲ್ಲೂ ವೈದ್ಯಕೀಯ ಸೌಲಭ್ಯಗಳ ಹೆಚ್ಚಳ

Published

on

ಗ್ರಾಮೀಣ ಮಟ್ಟದಲ್ಲೂ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಮನವಿ

ಮಸ್ಕಿ :- ಸದಸ್ಯರು ಸಂತೆಕೆಲ್ಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯಾಧ್ಯಂತ ಕೋವಿಡ್-19 ಉಲ್ಬಣಿಸಿ ಸಾಂಕ್ರಾಮಿಕವು ಸಾಕಷ್ಟು ಜೀವಗಳನ್ನು ಬಲಿ ಪಡೆದಿದೆ. ಕಳೆದ 15 ದಿನಗಳಿಂದ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಈ ರೋಗದ ಪ್ರಕರಣಗಳು ಹೆಚ್ಚಿಗೆ ಕಾಣಿಸಿಕೊಂಡದ್ದು ಎಲ್ಲರನ್ನು ಆತಂಕಕ್ಕೆ ಈಡುಮಾಡಿದೆ.

2ನೇ ಅಲೆಗೆ ತಜ್ಞರ ಮುನ್ನೆಚ್ಚರಿಕೆಯಂತೆ ಸೂಕ್ತ ಮುಂಜಾಗ್ರತೆ ವಹಿಸಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು.

ಈಗಾಗಲೇ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರಗಳ ಕೊರತೆ ಹೆಚ್ಚಿದ್ದು, ಹಳ್ಳಿಯ ಜನತೆ ಪರದಾಡುವಂತಾಗಿದೆ.

ಸೊಂಕಿತರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತ್ಯೇಕವಾಗಿರಲು ಹಳ್ಳಿ ಮನೆಗಳಲ್ಲಿ ಸೌಲಭ್ಯಗಳ ಲಭ್ಯತೆ ಇರುವುದಿಲ್ಲ ಆದ್ದರಿಂದ ರೋಗಿಗಳಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ.

ಗ್ರಾಮದ ಮುಖಂಡರನ್ನು ಒಳಗೊಂಡು ಗ್ರಾಮೀಣ ಟಾಸ್ಕ್ ಫೋರ್ಸ್ ಸಮಿತಿಯ ಸಭೆಗಳನ್ನು ನಡೆಸಬೇಕು ಹಾಗೂ ಹೆಚ್ಚಿನ ಸಂಖ್ಯೆಯ ಬಡ ರೈತರು ಆದಾಯದ ಕೊರತೆಯಿಂದಾಗಿ ಸರ್ಕಾರಿ ವೈದ್ಯಕೀಯ ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ ಇನ್ನೊಂದೆಡೆ ಗಾಮೀಣ ಭಾಗದಲ್ಲಿ ವೈಧ್ಯಕೀಯ ಸಿಬ್ಬಂದಿಯ ಕೊರತೆ ಕಾಡುತ್ತಿದೆ.

ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬಿಬ್ಬರು ಸಿಬ್ಬಂದಿಯೇ ಲಭ್ಯವಿದ್ದಾರೆ ಅವಶ್ಯಕ ಔಷಧಿಗಳು ರೋಗಿಗಳಿಗೆ ಸಕಾಲಕ್ಕೆ ಸಿಗುವಂತಾಗಬೇಕು.

ಹಾಗೂ ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿಸಿ, ಕೂಡಲೇ ಪಲಿತಾಂಶ ನೀಡಬೇಕು. ಲಸಿಕೆ ಕಾರ್ಯಕ್ರಮವನ್ನು ಹೆಚ್ಚಿಸಬೇಕು.

ಇನ್ನು 3 ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜೆನ್ ಬೆಡ್, ಐಸಿಯುಗಳ ಹೆಚ್ಚಿನ ಲಭ್ಯತೆ ಆಗಬೇಕು.

ಈಗ ಬಸ್‌ಗಳು ಇಲ್ಲ ಹಾಗೂ ಹಳ್ಳಿಗಳಲ್ಲಿ ಸಾರಿಗೆ ಸಂಪರ್ಕದ ತೊಂದರೆಗೆ ಪರ್ಯಾಯವಾಗಿ ಗಂಭೀರ ರೋಗಿಗಳನ್ನು ಸಾಗಿಸಲು ಮೋಬೈಲ್ ಆಕ್ಸಿಜೆನ್ ವಾಹನಗಳು ಹಾಗೂ ತೀವ್ರ ನಿಗಾ ಸೌಲಭ್ಯವಿರುವ ಅಂಬ್ಯುಲೆನ್ಸ್ಗಳನ್ನು ಒದಗಿಸಬೇಕು. ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಲಭ್ಯವಿರುವ ಶಾಲೆಗಳು, ಸಮುದಾಯ ಭವನ, ಹಾಸ್ಟೆಲ್, ವಸತಿಗಳನ್ನು ಆರೈಕೆ ಕೇಂದ್ರಗಳಾಗಿ ಬಳಸಿಕೊಂಡು ಜನಗಳು ಬಂದು ಇರುವಂತೆ ಯೋಗ್ಯ ರೀತಿಯಲ್ಲಿ ನಿರ್ವಹಣೆ ಮಾಡಬೇಕು.

ಆದ್ದರಿಂದ ಈ ಕೋವಿಡ್ 2 ನೇ ಅಲೆಯನ್ನು ನಿಯಂತ್ರಿಸಲು ಹಾಗೂ 3 ನೇ ಅಲೆಯ ಭೀತಿಯಿಂದ ರಕ್ಷಿಸಿಕೊಳ್ಳಲು ಕೂಡಲೇ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಎ.ಐ.ಡಿ.ವೈ.ಓ ಆಗ್ರಹಿಸುತ್ತದೆ.

ಹಕ್ಕೋತ್ತಾಯಗಳು :-
ಪಂಚಾಯತಿ ಮಟ್ಟದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ.

ಆಕ್ಸಿಜೆನ್ ಸಹಿತ ಆಂಬುಲೆನ್ಸ್ ಗಳಿಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಗೂ ಒದಗಿಸಿ.

ಆರೋಗ್ಯ ಕೇಂದ್ರ ಇರದ ಗ್ರಾಮಗಳಲ್ಲಿ ವೈಧ್ಯಕೀಯ ಶಿಬಿರಗಳನ್ನು ನಡೆಸಿ.
18 ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕಲು ಕ್ರಮ ಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಎ.ಐ.ಡಿ.ವೈ.ಒ ಜಿಲ್ಲಾ ಉಪಾಧ್ಯಕ್ಷರಾದ ತಿರುಪತಿ ಗೋನವಾರ, ಸದಸ್ಯರಾದ ನವೀನ್, ಶ್ರೀನಿವಾಸ್, ಮನವಿ ಪತ್ರವನ್ನು ಪಿ.ಡಿ.ಒ ಅವರಿಗೆ ಸಲ್ಲಿಸಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಬಡಬಗ್ಗರ ಹಾಗೂ ಕೂಲಿ ಕಾರ್ಮಿಕರ ಸಹಾಯಕ್ಕೆ ಮುಂದಾದ ಎಸ್. ಎನ್. ಕ್ರಿಯಾ ಟ್ರಸ್ಟ್

Published

on

ಶಿಡ್ಲಘಟ್ಟ : ಮಹಾಮಾರಿ ಕೊರೊನ ಎರಡನೇ ಅಲೆಯಲ್ಲಿ ಬಡಬಗ್ಗರ ಹಾಗೂ ಕೂಲಿ ಕಾರ್ಮಿಕರ ಸಹಾಯಕ್ಕೆ ಮುಂದಾದ ಎಸ್. ಎನ್. ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಆಂಜಿನಪ್ಪ (ಪುಟ್ಟು)
ನಗರದ ಹೊರವಲಯದ ಹಂಡಿಗನಾಳ ಗ್ರಾಮದಲ್ಲಿರುವ ಶ್ರೀ ಬಾಲಾಜಿ ಕನ್ವೆಂಕ್ಷನ್ ಹಾಲ್ ನಲ್ಲಿ ಗೋಧಿ ಹಿಟ್ಟು ಹಾಗೂ ಎಣ್ಣೆ ಪಾಕೆಟ್ ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯಾದ್ಯಂತ ಈಗಾಗಲೇ ಕೊರೊನ ಎರಡನೇ ಅಲೆಯಲ್ಲಿ ತನ್ನ ಅಟ್ಟಹಾಸ ಮೇರಿಯುತ್ತಿರುವ ಹಿನ್ನಲೆ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಕೆಲಸಗಳಲ್ಲದೆ ಒಂದು ಹೊತ್ತು ಊಟಕ್ಕೂ ಪರದಾಡುವಂತಾಗಿದೆ ಅದ್ದರಿಂದ ಇಂತಹ ಸಂಕಷ್ಟ ಸಮಯದಲ್ಲಿ ನಮ್ಮ ಟ್ರಸ್ಟ್ ನ ವತಿಯಿಂದ ಅಳಿಲು ಸೇವೆ ಮಾಡಲು ಆವಕಾಶ ಸಿಕ್ಕಿದೆ ಎಂದು ಹೇಳಿದರು
ನಗರದಲ್ಲಿ ಆಂಜಿನಪ್ಪ (ಪುಟ್ಟು) ಅವರ ಬೆಂಬಲಿಗರು ಪ್ರತಿ ಮನೆ ಮನೆಗೂ ತೆರಳಿ 05 ಪ್ರಮಾಣದ ಗೋಧಿ ಹಿಟ್ಟು ಹಾಗೂ ಅರ್ಧ ಕೆ.ಜಿ.ಪ್ರಮಾಣದ ಅಡುಗೆ ಎಣ್ಣೆಯನ್ನು ವಿತರಿಸಿದರು
ಈ ಸಂಧರ್ಭದಲ್ಲಿ ಕೆಪಿಸಿಸಿ ಸದ್ಯಸ ಗುಡಿಹಳ್ಳಿ ನಾರಾಯಣಸ್ವಾಮಿ (ಬಂಗಾರಪ್ಪ) . ಆನೂರು ದೇವರಾಜು. ಆನೂರು ಆನಂದ್. ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು

ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

ಸಮಾಜ ಸೇವೆ

ನೊಂದವರ ಪಾಲಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ

Published

on

ನೊಂದವರ ಪಾಲಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ :- ಮಂಜುನಾಥ್ ಪಾಟೀಲ್ ಮತ್ತು ಗೆಳೆಯರ ಬಳಗ

ಮಸ್ಕಿ :- ಜಿಲ್ಲೆಯಲ್ಲಿ ಕೋವಿಡ್‌-19 ಮುಕ್ತವಾಗಿರಲು ಶ್ರಮಿಸುತ್ತಿರುವ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವ ಸ್ವಯಂ ಸೇವಕರ ಬಳಗವೊಂದು ಒಂದೂವರೆ ತಿಂಗಳಿನಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜಿಲ್ಲೆಯಾದ್ಯಂತ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ.

ಬಳಗದ ಸದಸ್ಯರೆಲ್ಲ ಕೊರೊನಾ ಸೈನಿಕರು ಹೌದು ಮಂಜುನಾಥ್ ಪಾಟೀಲ್ ವೃತ್ತಿಯಲ್ಲಿ ಗುತ್ತೇದಾರ ಸಮಾಜಸೇವೆಯನ್ನು ನೋಡಿ ಯುವಕರೆಲ್ಲಾ ಕೈಜೋಡಿಸುತ್ತಿದ್ದಾರೆ
ಸುದ್ದಿ ಇಲ್ಲದೆ ಇವರ ಕೆಲಸಕ್ಕೆ ಎಲ್ಲರೂ ಬೆರಗಾಗಿದ್ದಾರೆ.

ಕೋವಿಡ್‌-19 ಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವ, ಅವರ ಸಂಕಷ್ಟಕ್ಕೆ ನೆರವಾಗುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಮಾನ್ವಿ ಪಟ್ಟಣದ ಕೂಲಿಕಾರ್ಮಿಕರಿಗೆ ಬಡಜನರಿಗೆ ದಿನಸಿ ಕಿಟ್ ಗಳನ್ನು ಹಾಗೂ ಲಾರಿ ಚಾಲಕರಿಗೆ ಊಟದ ವ್ಯವಸ್ಥೆಯನ್ನು ಮಾಡಿ ಯುವಕರಿಗೆ ಮಾದರಿಯಾಗಿದ್ದಾರೆ ಏನೇ ಆಗಲಿ ಜನಪ್ರತಿನಿಧಿ ಮಾಡುವ ಕೆಲಸವನ್ನು ಮಂಜುನಾಥ್ ಪಾಟೀಲ್ ಅವರು ಮಾಡುತ್ತಿದ್ದಾರೆ ಅವರಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸಲೇಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್

satta king gali