Connect with us
Ad Widget

ಸುದ್ದಿ

ಜಲಜೀವನ ಮಿಷನ್ ಅಡಿ ಕುಡಿಯುವ ನೀರಿಗಾಗಿ 1988 ಕೋಟಿ ರೂಪಾಯಿ ಬಿಡುಗಡೆ

Published

on

ಮಸ್ಕಿ :- ಮಸ್ಕಿ ಕ್ಷೇತ್ರ ಒಳಗೊಂಡಂತೆ ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಕುಡಿಯುವ ನೀರಿನ ಯೋಜನೆಗೆ 1988 ಕೋಟಿ ರೂಪಾಯಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು ಜನರ ಪರವಾಗಿ ಕೃತಜ್ಞತೆಗಳು ಹೇಳುವೆ ಎಂದು ಶಾಸಕ ಆರ್ ಬಸನಗೌಡ ತುರುವಿಹಾಳ ಹೇಳಿದರು.,

ಮಸ್ಕಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಲ ಜೀವನ ಮಿಷನ್ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಈ ಅನುದಾನ ಬಿಡುಗಡೆ ಮಾಡಲಾಗಿದ್ದು, ತಾಲೂಕಿನ ಹಲವು ಗ್ರಾಮಗಳಿಗೆ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರಿನ ಭಾಗ್ಯ ದೊರೆತಿದೆ.

ಹಲವು ವರ್ಷಗಳಿಂದ ಮಸ್ಕಿ ತಾಲೂಕು ಸುತ್ತಮುತ್ತಲಿನ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯಗಳು ಇರಲಿಲ್ಲ ಆದರೆ ಈಗ ಬಹುಕೋಟಿ ಮೋತ್ತ ಬಿಡುಗಡೆಯಿಂದ ಇನ್ನೂ ಮೂರು ವರ್ಷದಲ್ಲಿಯೇ ಈ ಭಾಗದಲ್ಲಿ ಎಲ್ಲಾ ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ದೊರೆಯಲಿದೆ ಎಂದು ಹೇಳಿದರು.

ಅಗತ್ಯ ಕ್ರಮ ಮಸ್ಕಿಯಲ್ಲಿ ಕೋವಿಡ್- 19 ನಿಯಂತ್ರಣಕ್ಕಾಗಿ ಅಧಿಕಾರಿಗಳ ಸಭೆ ಮಾಡಲಾಗಿದ್ದು ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲು ಸೋಂಕಿತರು ಆಯ್ಕೆ ಆರೈಕೆ ಸೂಕ್ತ ಚಿಕಿತ್ಸೆಗಾಗಿ ನಿರ್ದೇಶನ ನೀಡಲಾಗಿದೆ.

ಗ್ರಾಮಮಟ್ಟದಲ್ಲಿ ಕೊರೊನಾ ಹಬ್ಬಾದಂತೆ ಗ್ರಾಮ ಮೊದಲು ಫೋರ್ಸ್ರಚನೆ ಮಾಡಲಾಗಿದ್ದು. ಸ್ವಚ್ಛತೆ ಕಾಪಾಡಿಕೊಳ್ಳುವುದು,ಎಲ್ಲಾ ಕಡೆ ಸ್ಯಾನಿಟೈಸರ್ ಮಾಡುವುದು ಸೇರಿ ಎಲ್ಲಾ ರೀತಿಯಿಂದಲೂ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಮಾಣವಚನ ಸ್ವೀಕರಿಸಲು ಕಾರಣಾಂತರದಿಂದ ಸಮಸ್ಯೆಯಾಗಿದ್ದು ಸ್ಪೀಕರ್ ಅವರಿಗೆ ಕೋವಿಡ್- 19 ಪಾಸಿಟಿವ್ ಹಿನ್ನೆಲೆ ಶಾಸಕ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕಾರಕ್ಕೆ ವಿಳಂಬವಾಗಿದೆ.

ಇನ್ನು ಕೆಲವು ದಿನಗಳಲ್ಲಿ ಪ್ರಮಾಣವಚನ ಸ್ವೀಕಾರಕ್ಕೆ ಅನುಮತಿ ಸಿಗಲಿದೆ. ಆದರೆ ಪ್ರಮಾಣ ವಚನ ಸ್ವೀಕಾರ ದವರಿಗೂ ಕಾಯದೆ ಈಗಾಗಲೇ ಕ್ಷೇತ್ರದಲ್ಲಿ ಹಲವು ರೀತಿ ಕೆಲಸ ಮಾಡಲಾಗುತ್ತದೆ.. ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ , ಗ್ರಾಮೀಣ ಘಟಕ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ್ , ಶ್ರೀಶೈಲಪ್ಪ ಬ್ಯಾಳಿ , ಬಸವಂತರಾಯ ಮಟ್ಟುರ್, ಸಿದ್ದಣ್ಣ ಹೊವಿನಭಾವಿ ,ಆನಂದ್ ವೀರಾಪುರ್, ಸಿದ್ದನಗೌಡ ತುರ್ವಿಹಾಳ್, ಶಿವಣ್ಣ ನಾಯಕ್, ಇತರರು ಭಾಗಿಯಾಗಿದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

2565 ನೇ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜವಾದಿ ವೇದಿಕೆ ಸಂಚಾಲಕ ಹುರುಗಲವಾಡಿ ರಾಮಯ್ಯ

Published

on

ಮದ್ದೂರು : ಹುರುಗಲವಾಡಿ ಗ್ರಾಮದಲ್ಲಿ ಅಂಬೇಡ್ಕರ್ ಯುವಕರ ಸಂಘವು ಆಯೋಜಿಸಿದ್ದ 2565 ನೇ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜವಾದಿ ವೇದಿಕೆ ಸಂಚಾಲಕ ಹುರುಗಲವಾಡಿ ರಾಮಯ್ಯ, ಸರಿಯಾದ ಪ್ರೀತಿ, ಪ್ರೇಮ, ಕರುಣೆ, ಮೈತ್ರಿ, ಶಾಂತಿ, ನ್ಯಾಯ, ನೀತಿ, ಸಮ್ಯಮ ಗೌತಮ ಬುದ್ಧನ ಈ ಭೋದನೆಗಳೇ ಮಾನವ ಕುಲದ ನೆಮ್ಮದಿಗೆ ಕಾರಣ ಎಂದು ತಿಳಿಸಿದರು. ಅವರು ಭಾರತ ದೇಶ ಬುದ್ಧನ ದೇಶ. ಬೋಧಿ ವೃಕ್ಷ ಅಂದರೆ ಅರಳೀ ಮರದ ಕೆಳಗೆ ಧ್ಯಾನ ಮಾಡಿ ಜ್ಞಾನ ಪಡೆದ ಗೌತಮ ಬುದ್ಧನ ಧಮ್ಮವನ್ನು ಅಳವಡಿಸಿಕ್ಕೊಂಡಿದ್ದ ದೇಶ ನಮ್ಮದು. ಭಾರತದ ಹಳ್ಳಿ ಹಳ್ಳಿಗಳಲ್ಲಿ ಅರಳೀಕಟ್ಟೆಗಳಿರುವುದೇ ಇದಕ್ಕೆ ಸಾಕ್ಷಿ. ಅಂದಿನ ಕಾಲದಲ್ಲಿ ಭಾರತೀಯರು ಅರಳಿ ಮರವನ್ನು ನ್ಯಾಯ, ಸತ್ಯದ ಸಂಕೇತವಾಗಿ ಇಟ್ಟುಕ್ಕೊಂಡು ಪೂಜ್ಯಾ ಭಾವನೆಯಿಂದ ನೀತಿವಂತರಾಗಿ ಸಂಮೃದ್ದಿಯಿಂದ ಬದುಕುತಿದ್ದರು ಎಂದರು. ಎನ್ ಎಂ ಸ್ವಾಮಿ ಮಾತನಾಡಿ ನಿಮಗೆ ನೀವೇ ಬೆಳಕಾಗಿ ಎಂದ ಗೌತಮ ಬುದ್ಧರ ಮಾರ್ಗದಲ್ಲಿ. ಅಂಬೇಡ್ಕರರು ನಡೆದಂತೆ ನಾವೆಲ್ಲರೂ ಬುದ್ಧ ಮಾರ್ಗದಲ್ಲಿ ನಡೆಯೋಣವೆಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕುಂಡಯ್ಯ, ಎಚ್ ಬಿ ರಾಮು, ಟಿ ಎಸ್ ಕುಮಾರ್, ಕೃಷ್ಣ ಇತರರಿದ್ದರು. ಬುದ್ಧ ಗೀತೆಗಳನ್ನು ಹಾಡಲಾಯಿತು.

Continue Reading

ಸುದ್ದಿ

ಕರ್ನಾಟಕ ರಕ್ಷಣಾ ಪಡೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಗೆ ನಮನ

Published

on

ಮಸ್ಕಿ :- ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರಿಗೆ ಕರ್ನಾಟಕ ರಕ್ಷಣಾ ಪಡೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಆಲಮ್ ಭಾಷಾ ಅವರು
ಕಳೆದ ಬಾರಿ ಲಾಕ್‌ಡೌನ್‌ ನಡುವೆಯೂ ದೊರೆಸ್ವಾಮಿ ಅವರು ನಮ್ಮ ಹೋರಾಟಕ್ಕೆ ಕೈ ಜೋಡಿಸಿದ್ದರು ಎಂದು ಸ್ಮರಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಬಳಿಕ ನಡೆಸಲಾದ ವಿದ್ಯಾರ್ಥಿಗಳ ಹೋರಾಟ,‌ ರೈತ ಕಾರ್ಮಿಕ ಚಳವಳಿಗಳು, ಮೈಸೂರು ಚಲೋ ಹೋರಾಟ, ಗೋವಾ ವಿಮೋಚನಾ ಚಳವಳಿ ಹಾಗೂ ನರಗುಂದ ರೈತ ಚಳವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದರು.

ಆಳುವವರು ತಪ್ಪು ಮಾಡಿದಾಗ ಅದು ಯಾರೇ ಆಗಿರಲಿ ಟೀಕಿಸಲು ಹಿಂಜರಿಯುತ್ತಿರಲಿಲ್ಲ ಅಂತಹ ಮೇರು ವ್ಯಕ್ತಿತ್ವ ದೂರವಾಗಿದ್ದು ರಾಜ್ಯದ ಜನ ಚಳುವಳಿಗೆ ಆದ ಅಪಾರ ನಷ್ಟ ಎಂದರು.

ಸ್ವಾತಂತ್ರ್ಯ ಸಂಗ್ರಾಮ ಮತ್ತು ಸ್ವಾತಂತ್ರ್ಯದನಂತರ ಎಲ್ಲ ರೀತಿಯ ಅನ್ಯಾಯಗಳ ವಿರುದ್ಧ ದೊರೆಸ್ವಾಮಿಯವರು ಧ್ವನಿ ಎತ್ತಿದ್ದರು.

ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೋಮುವಾದಿಕರಣದ ವಿರುದ್ಧವೂ ಅವರು ಹೋರಾಡಿದ್ದರು‌ ಎಂದು ನೆನಪು ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾಪಡೆಯ ತಾಲೂಕ ಅಧ್ಯಕ್ಷ ಎಂ.ಡಿ ಆಲಮ್ ಭಾಷಾ , ನಗರ ಘಟಕ ಅಧ್ಯಕ್ಷ ಶಂಕರ್ ಚೌಡಕಿ , ನಗರ ಘಟಕ ಉಪಾಧ್ಯಕ್ಷರಾದ ರವಿ ಚಲವಾದಿ , ಮೈಬೂಬ್ ಹಾಗೂ ಇತರರು ಭಾಗಿಯಾಗಿದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಸ್ಮರಣೆ ಹಾಗೂ ಎಚ್.ಎಸ್ ದೊರೆಸ್ವಾಮಿ ಅವರಿಗೆ ಶ್ರದ್ಧಾಂಜಲಿ

Published

on

ಮಸ್ಕಿ :- ತಾಲೂಕಿನ ಕಾಂಗ್ರೆಸ್ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಸ್ಮರಣೆ ಹಾಗೂ ಎಚ್.ಎಸ್ ದೊರೆಸ್ವಾಮಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ನಂತರ ಬಸನಗೌಡ ಮೂದುವಾಳ್ ಮಾತನಾಡಿದರು ಆರ್ಥಿಕ ಹಾಗೂ ರಾಜಕೀಯವಾಗಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಮಾಜಿ ಪ್ರಧಾನಿ ದಿ.ಜವಹರಲಾಲ್ ನೆಹರೂ ಅವರ ದೂರದೃಷ್ಟಿಯೇ ಕಾರಣ
ದೇಶದ ಅಭಿವೃದ್ಧಿಯ ಶ್ರೇಯ ನೆಹರೂ ಅವರಿಗೆ ಸಲ್ಲಬೇಕು ಎಂದರು.

ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ನೆಹರೂ ಭದ್ರ ಬುನಾದಿ ಹಾಕಿದರು.

ಕೃಷಿ , ನೀರಾವರಿ , ಕೈಗಾರಿಕೆ , ವಿಜ್ಞಾನ , ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ದೇಶ ಉನ್ನತಿ ಸಾಧಿಸಲು ನೆಹರೂ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡಿದ ದೇಶದ ಮೊದಲ ನಾಯಕ ನೆಹರೂ. ದೇಶದ ಐಕ್ಯತೆ ಹಾಗೂ ಸಮಗ್ರತೆ ಕಾಪಾಡಲು ಅವರ ಕೊಡುಗೆ ಅಪಾರವಾಗಿದೆ. ನಾವೆಲ್ಲರೂ ಅವರ ದಾರಿಯಲ್ಲಿ ಸಾಗೋಣ ಎಂದರು.

ದೇಶ ಇಬ್ಬಾಗವಾದರೂ ಇಷ್ಟೊಂದು ಬೃಹತ್ ಪ್ರಮಾಣದ ಅಲ್ಪಸಂಖ್ಯಾತ ಸಮುದಾಯ ಭಾರತದಲ್ಲೇ ಉಳಿಯಲು ನೆಹರೂ ಅವರ ಜಾತ್ಯತೀತ ಧೋರಣೆಯೇ ಕಾರಣ ಎಂದು ತಿಳಿಸಿದರು.

ಮಸ್ಕಿ ಕಾಂಗ್ರೆಸ್ ಕಚೇರಿಯಲ್ಲಿ ಎಚ್ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ :-

ಎಚ್.ಎಸ್ ದೊರೆಸ್ವಾಮಿ
ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದ್ದು ಸಭೆಯಲ್ಲಿ 5 ನಿಮಿಷಗಳ ಮೌನಾಚರಣೆ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಈ ಸಂದರ್ಭದಲ್ಲಿ ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಹೆಚ್.ಎಸ್ ದೊರೆ ಸ್ವಾಮಿಯವರು ಇಂದು ಎಲ್ಲರನ್ನು ಅಗಲಿದ್ದಾರೆ ಅವರ ಅಗಲಿಕೆಯಿಂದ ನಾಡಿನ ಜನತೆಗೆ ಮತ್ತು ಯುವ ಹೋರಾಟಗಾರರಿಗೆ ತುಂಬಲಾರದ ನಷ್ಟ ಉಂಟಾಗಿದ್ದು ರಾಜ್ಯದ ಪ್ರತಿಯೊಂದು ಹೋರಾಟಗಳಿಗೂ ಭಾಗವಹಿಸಿ ದಲಿತರ ಕಾರ್ಮಿಕರ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಹೀಗೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಎಲ್ಲಾ ಹೋರಾಟಗಳಲ್ಲಿ ಮುಂಚೂಣಿಯ ಇದ್ದಂಥ ಎಚ್.ಎಸ್ ದೊರೆಸ್ವಾಮಿ ಅವರು ಇಂದು ನಮ್ಮನ್ನಗಲಿದ್ದಾರೆ ಅವರ ಅಗಲುವಿಕೆಯಿಂದ ಎಲ್ಲಾ ವರ್ಗದ ಎಲ್ಲಾ ಜನರಿಗೆ ನೋವು ಉಂಟಾಗಿದೆ ಯಾವುದೇ ರಾಜಕೀಯ ಲಾಬಿಗಳಿಗೆ ಬಲಿಯಾಗದೆ ಭ್ರಷ್ಟ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿ ಬಡಜನರ ದಲಿತರ ಕಾರ್ಮಿಕರ ಅನ್ಯಾಯಕ್ಕೊಳಗಾದವರ ಬೆಂಗಾವಲಾಗಿ ನಿಂತು ಹೋರಾಟಗಾರರಿಗೆ ಆಶಾ ದೀಪವಾಗಿದ್ದ ಅವರು ಇಂದು ನಮ್ಮನ್ನ ಅಗಲಿರುವುದು ತುಂಬಾ ದುಃಖಕರ ವಿಷಯ ವಾಗಿದೆ ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದು ಅವರ ಆಶಯಗಳನ್ನು ಮತ್ತು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯೋಣ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಿಸನ್ ಘಟಕದ ಅಧ್ಯಕ್ಷರು ಮೈಬು ಸಾಬ್ ಮುದ್ದಾಪುರ್ , ಬಸನಗೌಡ , ಅಮರೇಗೌಡ ಕಡಬೂರು , ಶರಣಪ್ಪ ಎಲಿಗಾರ್ , ಪಾರ್ಕ್ ಸಾಬ್ ತುರುವಿಹಾಳ , ಯೂತ್ ಕಾಂಗ್ರೆಸ್ ಆಲಮ್ ಭಾಷಾ ಗೋನಾಳ್ , ಚಾಂದ್ ಪಾಷ ಮಸ್ಕಿ , ಮಹಿಬೂಬ್ ಮಸ್ಕಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ವರದಿ :ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್