Connect with us
Ad Widget

ಸುದ್ದಿ

2565 ನೇ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜವಾದಿ ವೇದಿಕೆ ಸಂಚಾಲಕ ಹುರುಗಲವಾಡಿ ರಾಮಯ್ಯ

Published

on

ಮದ್ದೂರು : ಹುರುಗಲವಾಡಿ ಗ್ರಾಮದಲ್ಲಿ ಅಂಬೇಡ್ಕರ್ ಯುವಕರ ಸಂಘವು ಆಯೋಜಿಸಿದ್ದ 2565 ನೇ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜವಾದಿ ವೇದಿಕೆ ಸಂಚಾಲಕ ಹುರುಗಲವಾಡಿ ರಾಮಯ್ಯ, ಸರಿಯಾದ ಪ್ರೀತಿ, ಪ್ರೇಮ, ಕರುಣೆ, ಮೈತ್ರಿ, ಶಾಂತಿ, ನ್ಯಾಯ, ನೀತಿ, ಸಮ್ಯಮ ಗೌತಮ ಬುದ್ಧನ ಈ ಭೋದನೆಗಳೇ ಮಾನವ ಕುಲದ ನೆಮ್ಮದಿಗೆ ಕಾರಣ ಎಂದು ತಿಳಿಸಿದರು. ಅವರು ಭಾರತ ದೇಶ ಬುದ್ಧನ ದೇಶ. ಬೋಧಿ ವೃಕ್ಷ ಅಂದರೆ ಅರಳೀ ಮರದ ಕೆಳಗೆ ಧ್ಯಾನ ಮಾಡಿ ಜ್ಞಾನ ಪಡೆದ ಗೌತಮ ಬುದ್ಧನ ಧಮ್ಮವನ್ನು ಅಳವಡಿಸಿಕ್ಕೊಂಡಿದ್ದ ದೇಶ ನಮ್ಮದು. ಭಾರತದ ಹಳ್ಳಿ ಹಳ್ಳಿಗಳಲ್ಲಿ ಅರಳೀಕಟ್ಟೆಗಳಿರುವುದೇ ಇದಕ್ಕೆ ಸಾಕ್ಷಿ. ಅಂದಿನ ಕಾಲದಲ್ಲಿ ಭಾರತೀಯರು ಅರಳಿ ಮರವನ್ನು ನ್ಯಾಯ, ಸತ್ಯದ ಸಂಕೇತವಾಗಿ ಇಟ್ಟುಕ್ಕೊಂಡು ಪೂಜ್ಯಾ ಭಾವನೆಯಿಂದ ನೀತಿವಂತರಾಗಿ ಸಂಮೃದ್ದಿಯಿಂದ ಬದುಕುತಿದ್ದರು ಎಂದರು. ಎನ್ ಎಂ ಸ್ವಾಮಿ ಮಾತನಾಡಿ ನಿಮಗೆ ನೀವೇ ಬೆಳಕಾಗಿ ಎಂದ ಗೌತಮ ಬುದ್ಧರ ಮಾರ್ಗದಲ್ಲಿ. ಅಂಬೇಡ್ಕರರು ನಡೆದಂತೆ ನಾವೆಲ್ಲರೂ ಬುದ್ಧ ಮಾರ್ಗದಲ್ಲಿ ನಡೆಯೋಣವೆಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕುಂಡಯ್ಯ, ಎಚ್ ಬಿ ರಾಮು, ಟಿ ಎಸ್ ಕುಮಾರ್, ಕೃಷ್ಣ ಇತರರಿದ್ದರು. ಬುದ್ಧ ಗೀತೆಗಳನ್ನು ಹಾಡಲಾಯಿತು.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಕರ್ನಾಟಕ ರಕ್ಷಣಾ ಪಡೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಗೆ ನಮನ

Published

on

ಮಸ್ಕಿ :- ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರಿಗೆ ಕರ್ನಾಟಕ ರಕ್ಷಣಾ ಪಡೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಆಲಮ್ ಭಾಷಾ ಅವರು
ಕಳೆದ ಬಾರಿ ಲಾಕ್‌ಡೌನ್‌ ನಡುವೆಯೂ ದೊರೆಸ್ವಾಮಿ ಅವರು ನಮ್ಮ ಹೋರಾಟಕ್ಕೆ ಕೈ ಜೋಡಿಸಿದ್ದರು ಎಂದು ಸ್ಮರಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಬಳಿಕ ನಡೆಸಲಾದ ವಿದ್ಯಾರ್ಥಿಗಳ ಹೋರಾಟ,‌ ರೈತ ಕಾರ್ಮಿಕ ಚಳವಳಿಗಳು, ಮೈಸೂರು ಚಲೋ ಹೋರಾಟ, ಗೋವಾ ವಿಮೋಚನಾ ಚಳವಳಿ ಹಾಗೂ ನರಗುಂದ ರೈತ ಚಳವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದರು.

ಆಳುವವರು ತಪ್ಪು ಮಾಡಿದಾಗ ಅದು ಯಾರೇ ಆಗಿರಲಿ ಟೀಕಿಸಲು ಹಿಂಜರಿಯುತ್ತಿರಲಿಲ್ಲ ಅಂತಹ ಮೇರು ವ್ಯಕ್ತಿತ್ವ ದೂರವಾಗಿದ್ದು ರಾಜ್ಯದ ಜನ ಚಳುವಳಿಗೆ ಆದ ಅಪಾರ ನಷ್ಟ ಎಂದರು.

ಸ್ವಾತಂತ್ರ್ಯ ಸಂಗ್ರಾಮ ಮತ್ತು ಸ್ವಾತಂತ್ರ್ಯದನಂತರ ಎಲ್ಲ ರೀತಿಯ ಅನ್ಯಾಯಗಳ ವಿರುದ್ಧ ದೊರೆಸ್ವಾಮಿಯವರು ಧ್ವನಿ ಎತ್ತಿದ್ದರು.

ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೋಮುವಾದಿಕರಣದ ವಿರುದ್ಧವೂ ಅವರು ಹೋರಾಡಿದ್ದರು‌ ಎಂದು ನೆನಪು ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾಪಡೆಯ ತಾಲೂಕ ಅಧ್ಯಕ್ಷ ಎಂ.ಡಿ ಆಲಮ್ ಭಾಷಾ , ನಗರ ಘಟಕ ಅಧ್ಯಕ್ಷ ಶಂಕರ್ ಚೌಡಕಿ , ನಗರ ಘಟಕ ಉಪಾಧ್ಯಕ್ಷರಾದ ರವಿ ಚಲವಾದಿ , ಮೈಬೂಬ್ ಹಾಗೂ ಇತರರು ಭಾಗಿಯಾಗಿದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಸ್ಮರಣೆ ಹಾಗೂ ಎಚ್.ಎಸ್ ದೊರೆಸ್ವಾಮಿ ಅವರಿಗೆ ಶ್ರದ್ಧಾಂಜಲಿ

Published

on

ಮಸ್ಕಿ :- ತಾಲೂಕಿನ ಕಾಂಗ್ರೆಸ್ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಸ್ಮರಣೆ ಹಾಗೂ ಎಚ್.ಎಸ್ ದೊರೆಸ್ವಾಮಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ನಂತರ ಬಸನಗೌಡ ಮೂದುವಾಳ್ ಮಾತನಾಡಿದರು ಆರ್ಥಿಕ ಹಾಗೂ ರಾಜಕೀಯವಾಗಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಮಾಜಿ ಪ್ರಧಾನಿ ದಿ.ಜವಹರಲಾಲ್ ನೆಹರೂ ಅವರ ದೂರದೃಷ್ಟಿಯೇ ಕಾರಣ
ದೇಶದ ಅಭಿವೃದ್ಧಿಯ ಶ್ರೇಯ ನೆಹರೂ ಅವರಿಗೆ ಸಲ್ಲಬೇಕು ಎಂದರು.

ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ನೆಹರೂ ಭದ್ರ ಬುನಾದಿ ಹಾಕಿದರು.

ಕೃಷಿ , ನೀರಾವರಿ , ಕೈಗಾರಿಕೆ , ವಿಜ್ಞಾನ , ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ದೇಶ ಉನ್ನತಿ ಸಾಧಿಸಲು ನೆಹರೂ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡಿದ ದೇಶದ ಮೊದಲ ನಾಯಕ ನೆಹರೂ. ದೇಶದ ಐಕ್ಯತೆ ಹಾಗೂ ಸಮಗ್ರತೆ ಕಾಪಾಡಲು ಅವರ ಕೊಡುಗೆ ಅಪಾರವಾಗಿದೆ. ನಾವೆಲ್ಲರೂ ಅವರ ದಾರಿಯಲ್ಲಿ ಸಾಗೋಣ ಎಂದರು.

ದೇಶ ಇಬ್ಬಾಗವಾದರೂ ಇಷ್ಟೊಂದು ಬೃಹತ್ ಪ್ರಮಾಣದ ಅಲ್ಪಸಂಖ್ಯಾತ ಸಮುದಾಯ ಭಾರತದಲ್ಲೇ ಉಳಿಯಲು ನೆಹರೂ ಅವರ ಜಾತ್ಯತೀತ ಧೋರಣೆಯೇ ಕಾರಣ ಎಂದು ತಿಳಿಸಿದರು.

ಮಸ್ಕಿ ಕಾಂಗ್ರೆಸ್ ಕಚೇರಿಯಲ್ಲಿ ಎಚ್ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ :-

ಎಚ್.ಎಸ್ ದೊರೆಸ್ವಾಮಿ
ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದ್ದು ಸಭೆಯಲ್ಲಿ 5 ನಿಮಿಷಗಳ ಮೌನಾಚರಣೆ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಈ ಸಂದರ್ಭದಲ್ಲಿ ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಹೆಚ್.ಎಸ್ ದೊರೆ ಸ್ವಾಮಿಯವರು ಇಂದು ಎಲ್ಲರನ್ನು ಅಗಲಿದ್ದಾರೆ ಅವರ ಅಗಲಿಕೆಯಿಂದ ನಾಡಿನ ಜನತೆಗೆ ಮತ್ತು ಯುವ ಹೋರಾಟಗಾರರಿಗೆ ತುಂಬಲಾರದ ನಷ್ಟ ಉಂಟಾಗಿದ್ದು ರಾಜ್ಯದ ಪ್ರತಿಯೊಂದು ಹೋರಾಟಗಳಿಗೂ ಭಾಗವಹಿಸಿ ದಲಿತರ ಕಾರ್ಮಿಕರ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಹೀಗೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಎಲ್ಲಾ ಹೋರಾಟಗಳಲ್ಲಿ ಮುಂಚೂಣಿಯ ಇದ್ದಂಥ ಎಚ್.ಎಸ್ ದೊರೆಸ್ವಾಮಿ ಅವರು ಇಂದು ನಮ್ಮನ್ನಗಲಿದ್ದಾರೆ ಅವರ ಅಗಲುವಿಕೆಯಿಂದ ಎಲ್ಲಾ ವರ್ಗದ ಎಲ್ಲಾ ಜನರಿಗೆ ನೋವು ಉಂಟಾಗಿದೆ ಯಾವುದೇ ರಾಜಕೀಯ ಲಾಬಿಗಳಿಗೆ ಬಲಿಯಾಗದೆ ಭ್ರಷ್ಟ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿ ಬಡಜನರ ದಲಿತರ ಕಾರ್ಮಿಕರ ಅನ್ಯಾಯಕ್ಕೊಳಗಾದವರ ಬೆಂಗಾವಲಾಗಿ ನಿಂತು ಹೋರಾಟಗಾರರಿಗೆ ಆಶಾ ದೀಪವಾಗಿದ್ದ ಅವರು ಇಂದು ನಮ್ಮನ್ನ ಅಗಲಿರುವುದು ತುಂಬಾ ದುಃಖಕರ ವಿಷಯ ವಾಗಿದೆ ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದು ಅವರ ಆಶಯಗಳನ್ನು ಮತ್ತು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯೋಣ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಿಸನ್ ಘಟಕದ ಅಧ್ಯಕ್ಷರು ಮೈಬು ಸಾಬ್ ಮುದ್ದಾಪುರ್ , ಬಸನಗೌಡ , ಅಮರೇಗೌಡ ಕಡಬೂರು , ಶರಣಪ್ಪ ಎಲಿಗಾರ್ , ಪಾರ್ಕ್ ಸಾಬ್ ತುರುವಿಹಾಳ , ಯೂತ್ ಕಾಂಗ್ರೆಸ್ ಆಲಮ್ ಭಾಷಾ ಗೋನಾಳ್ , ಚಾಂದ್ ಪಾಷ ಮಸ್ಕಿ , ಮಹಿಬೂಬ್ ಮಸ್ಕಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ವರದಿ :ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಬಾರ್ಡರ್ ಗೆ ಬಂದ ಬಾತುಕೋಳಿಗಳ ಹಿಂಡು!

Published

on

ಬಾಗೇಪಲ್ಲಿ: ತಾಲ್ಲೂಕು ಗಡಿ ಗ್ರಾಮಗಳಾದ ಕೊತ್ತಕೋಟೆ, ಕೃಷ್ಣಾಪುರ, ಕೊಲಿಂಪಲ್ಲಿ ಗ್ರಾಮಗಳ ಗದ್ದೆಗಳಿಗೆ ಲಗ್ಗೆ ಇಟ್ಟ ಬಾತುಕೋಳಿಗಳ ಹಿಂಡು.

ಆಂಧ್ರಪ್ರದೇಶದಿಂದ ಕರ್ನಾಟಕದ ಗಡಿ ಗ್ರಾಮಗಳಿಗೆ ವಲಸೆ ಬಂದು ಬಾತುಕೋಳಿ ಮೇಯಿಸುತ್ತಿದ್ದಾರೆ. ಸಾಮಾನ್ಯವಾಗಿ ಇವರು ಹೆಚ್ಚಾಗಿ ಭತ್ತದ ಗದ್ದೆಗಳು ಕೊಯ್ಲು ಮಾಡಿರುವ ಪ್ರದೇಶಗಳಲ್ಲಿ ಗ್ರಾಮದ ಹೊರವಲಯದಲ್ಲಿ ತಂತಿ ಬೇಲಿ ನಿರ್ಮಿಸುತ್ತಾರೆ. ಆ ಬೇಲಿಯೊಳಗೆ ರಾತ್ರಿ ಸಮಯದಲ್ಲಿ ಬಾತುಕೋಳಿಗಳನ್ನು ವಿಶ್ರಮಿಸಲು ಬಿಡುತ್ತಾರೆ. ಅದರ ಸಮೀಪದಲ್ಲೇ ಸಾಕಾಣಿಕೆದಾರರು ಟೆಂಟನ್ನು ನಿರ್ಮಿಸಿಕೊಂಡು ತಮ್ಮ ವಾಸಸ್ಥಳವನ್ನಾಗಿಸುತ್ತಾರೆ.

ಕೊತ್ತಕೋಟೆ ಗ್ರಾಮ ಪಂಚಾಯಿತಿ ಕೆಲ ಭಾಗಗಳಲ್ಲಿ ಭತ್ತದ ಗದ್ದೆಗಳು ಕೊಯ್ಲು ಆಗಿದ್ದು ಉತ್ತಮವಾಗಿ ನೀರಿನ ಆಸರೆಯಿದೆ. ಭತ್ತದ ಗದ್ದೆಗಳಲ್ಲಿ ಉದುರಿದ ಭತ್ತ, ಮಿಡತೆಗಳು, ಕಪ್ಪೆ ಮರಿ,ಮೀನುಗಳು ಸೇರಿದಂತೆ ಕೀಟ, ಹುಳುಉಪ್ಪಟಗಳನ್ನು ಬಾತುಕೋಳಿಗಳು ತಿನ್ನುತ್ತವೆ. ಈ ಪ್ರದೇಶದಲ್ಲಿ ಮೇವು ಮುಗಿದ ನಂತರ ಬೇರೆಡೆಗೆ ವಲಸೆ ಹೋಗುತ್ತಾರೆ. ಹೀಗೆ ನಿರಂತರವಾಗಿ ಇವರ ಜೀವನಚಕ್ರ ಸಾಗುತ್ತಿರುತ್ತದೆ

ಲಾಕ್ಡೌನ್ ನ ಪರಿಣಾಮ ಈ ಬಾತುಕೋಳಿ ಸಾಕಾಣಿಕೆದಾರರು ತಮ್ಮ ಅಗತ್ಯ ಸಾಮಾಗ್ರಿಗಳನ್ನು ಪಡೆಯುವಲ್ಲಿ ಪರದಾಡುವಂತಾಗಿದೆ. ಇವರ ನೆರವಿಗೂ ಸ್ಥಳೀಯ ದಾನಿಗಳು ಸಹಾಯ ಮಾಡಿದರೆ ಉತ್ತಮವಾಗಿರುತ್ತದೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್