Connect with us
Ad Widget

ಸುದ್ದಿ

ಎಸ್ಎಫ್ಐ ವತಿಯಿಂದ ಕರಾಳ ದಿನಾಚರಣೆ ಆಚರಣೆ

Published

on

ಬಾಗೇಪಲ್ಲಿ: ಕೃಷಿ ಕಾಯ್ದೆಗಳ ತಿದ್ದುಪಡಿಗಳನ್ನು ವಿರೋಧಿಸಿ, ಹಿಂಪಡೆಯುವಂತೆ ಒತ್ತಾಯಿಸಿ ಕಳೆದ ಆರು ತಿಂಗಳುಗಳಿಂದ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಇಂದು ದೇಶವ್ಯಾಪಿ ಕರಾಳ ದಿನಾಚರಣೆ ಮಾಡಲಾಗುತ್ತಿದೆ. ಇದಕ್ಕೆ ತಾಲ್ಲೂಕು ಎಸ್ಎಫ್ಐ ಸಂಘಟನೆಯ ಸದಸ್ಯರು ಬೆಂಬಲ ನೀಡಿ ಮನೆಯಿಂದಲೇ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಎಫ್ಐ ತಾಲ್ಲೂಕು ಘಟಕದ ಅಧ್ಯಕ್ಷ ವಿ ಸತ್ತೀಶ್,
ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಆರು ತಿಂಗಳು ತುಂಬಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜನ ವಿರೋಧಿ ಆಡಳಿತಕ್ಕೆ ಏಳು ವರ್ಷಗಳಾಗಿವೆ ಎಂದರು. ಹಾಗಾಗಿ ಮೇ 26ರಂದು ದೇಶದಾದ್ಯಂತ ಕರಾಳ ದಿನಾಚರಣೆಗೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜಂಟಿಯಾಗಿ ನಡೆಸುತ್ತಿವೆ ಎಂದರು. ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಕೊರೋನಾ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ, ಬಡವರಿಗೆ ಮಾಸಿಕ ₹10 ಸಾವಿರ ರೂಪಾಯಿಗಳು ಕೊಡಬೇಕೆಂದ ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಬಾಲಾಜಿ, ಶಿವಪ್ಪ, ಸರಸ್ವತಮ್ಮ, ಪುರುಷೋತ್ತಮ,ಶ್ರೀನಾಥ್ ,ರಂಜಿತ್, ನಾಗಪ್ಪ ಮತ್ತಿತರರು ಹಾಜರಿದ್ದರು.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಇನ್ನಿಲ್ಲ

Published

on

ಬೆಂಗಳೂರು : ಹಿರಿಯ ಸ್ವಾತಂತ್ಯ್ರ ಹೋರಾಟಗಾರ, ಚಳುವಳಿಗಳ ಚೇತನರಾದ ಹೆಚ್‌.ಎಸ್‌. ದೊರೆಸ್ವಾಮಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಬುಧವಾರ ನಿಧನರಾಗಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು.

ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ಒಳಗಾಗಿದ್ದ ಅವರು ಚೇತರಿಸಿಕೊಂಡಿದ್ದರು. ಅದರ ನಂತರ ಉಸಿರಾಟದ ತೊಂದರೆಯಿಂದಾಗಿ ಚಿಕಿತ್ಸೆಗೆ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಹಿರಿಯ ಚೇತನದ ಅಗಲಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ, “ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ” ಎಂದು ಹೇಳಿದ್ದಾರೆ. ಹಿರಿಯ ಸ್ವಾತಂತ್ರ್ಯ ಹಾಗೂ ಗಾಂಧಿಯುಗದ ಕೊನೆಯ ಕೊಂಡಿ ಕಳಚಿತು.

Continue Reading

ಸುದ್ದಿ

ವಿನಾಯಕ ಗೆಳೆಯರ ಬಳಗದಿಂದ ಶ್ಲಾಘನೀಯ ಕಾರ್ಯ ಮೆರೆದ ಯುವಕರು

Published

on

ಮಸ್ಕಿ :- ದೇಶದಾದ್ಯಂತ ಕಾಡುತ್ತಿರುವ ಕೋವಿಡ-19 ಎರಡನೇ ಅಲೆಯ ಕಾರಣಕ್ಕಾಗಿ ಮಾಡಲಾಗಿರುವ ಲಾಕ್ ಡೌನ್ ನಿಂದ ಲಾರಿ ಮತ್ತು ಗೂಡ್ಸ್ ವಾಹನದ ಚಾಲಕರಿಗೆ ರಸ್ತೆಯ ಬದಿಯಲ್ಲಿ ಯಾವುದೇ ರೀತಿಯ ಅಂಗಡಿ ಮುಂಗಟ್ಟುಗಳು ತೆರೆಯದೇ ಇರುವುದರಿಂದ ಊಟ ಮತ್ತು ಉಪಹಾರ ಸಿಗದೆ ಪರದಾಡುವಂತಾಗಿದ್ದು ವಾಹನ ಚಾಲಕರ ಕಷ್ಟಕ್ಕೆ ಸಹಕರಿಸಲು ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಾಗೂ ಯುವಕರಿಂದ ಲಾರಿ ಮತ್ತು ಗೂಡ್ಸ್ ವಾಹನದ ಚಾಲಕರಿಗೆ 2 ನೇ ದಿನದ ಊಟದ ಪ್ಯಾಕೇಟ್ ಗಳನ್ನು ಮತ್ತು ನೀರಿನ ಪ್ಯಾಕೆಟ್ ಗಳನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಈ ಸಂದರ್ಭದಲ್ಲಿ ಡಾ॥ ನಾಗರಾಜ ಪಾಟೀಲ್,ವಿನೋದ್ ದೇಸಾಯಿ,ಮಂಜುನಾಥ್ ಪಾಟೀಲ್,ನೀಲಕಂಠ ಕೊಳ್ಳಿ (ಹಾಲ್ವಿ), ಅಮರಪ್ಪ ಪ್ಯಾಟ್ಯಾಳ, ಸಂಗನಗೌಡ,ಬಸವರಾಜ ಗದ್ದಗಿಮಠ,ಪ್ರಭು, ಸೋಮಶೇಖರ್, ನಾಗರಾಜ್ ಪ್ಯಾಟ್ಯಾಳ,ಮಲ್ಲಯ್ಯ, ಅಮರೇಶ್ ಹೂಗಾರ್, ಸಿದ್ದು ಪಾಟೀಲ್, ಮಲ್ಲು ಬಡಿಗೇರ ಅಮರೇಶ, ಕುಮಾರ, ನಾಗರಾಜ್ ಬಳಿಗಾರ್ ಮುತ್ತಣ್ಣ ಬಳಿಗಾರ್ ಅವಿನಾಶ್ ಹಾಗೂ ಇತರರು ಭಾಗವಹಿಸಿದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

Published

on

ಶಿಡ್ಲಘಟ್ಟ : ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ ರಾಜ್ಯದಲ್ಲಿ ಮಹಾಮಾರಿ ಕೊರೊನ ಎರಡನೆ ಅಲೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಮವಾರ ,ಮಂಗಳವಾರ ,ಬುಧವಾರ ಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳ್ಳಗೆ 06 ಘಂಟೆಯಿಂದ 10 ಘಂಟೆ ವರೆಗೂ ಆವಕಾಶ ವಿರುವುದ್ದರಿಂದ ನಗರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನ ಮುಂದಾಗಿರುವ ಚಿತ್ರ ಕಂಡು ಬಂದಿದೆ

ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್

satta king gali