Connect with us
Ad Widget

ಸುದ್ದಿ

ಸಂಕಷ್ಟಕ್ಕೊಳಗಾದವರಿಗೆ ಹಾಗೂ ಮಂಗಳಮುಖಿಯರಿಗೆ ಸಹಾಯಧನ

Published

on

ಬೆಂಗಳೂರು : ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.17 ಜೆ.ಪಿ.ಪಾರ್ಕ್ ಆಟದ ಮೈದಾನದಲ್ಲಿ ಕೊರೋನಾ ಲಾಕಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದವರಿಗೆ ಹಾಗೂ ಮಂಗಳಮುಖಿಯರಿಗೆ ಮುನಿರತ್ನ ರವರು ಉಚಿತವಾಗಿ ದಿನಸಿ, ಸೊಪ್ಪು ಮತ್ತು ತರಕಾರಿಗಳೊಂದಿಗೆ ಸಹಾಯಧನ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಲ್.ಸಿ. ಶ್ರೀ ಎನ್.ರವಿಕುಮಾರ್, ರಾಜ್ಯ ಮುಖಂಡರಾದ‌ ಶ್ರೀ ಚೇತನ್ ಸೋಮಣ್ಣ, ಬಿಬಿಎಂಪಿ ಮಾಜಿ ಸದಸ್ಯರಾದ ವೇಲು ನಾಯಕರ್, ರಾಮಚಂದ್ರು, ಹೆಚ್.ಎಸ್.ಸಿದ್ದೇಗೌಡ, ಮಂಡಲ ಅಧ್ಯಕ್ಷರಾದ ಶಿವಣ್ಣಗೌಡ, ಮುಖಂಡರಾದ ಶ್ರೀಮತಿ ಸುನಂದ ಬೋರೇಗೌಡ ಸೇರಿದಂತೆ ಅನೇಕರಿದ್ದರು.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಸರ್ಕಾರಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿವೀಕ್ಷಣೆ

Published

on

ಬೆಂಗಳೂರು : ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಮುನ್ನೇಕೊಳಾಲು ಗ್ರಾಮದ ಸರ್ವೆ ನಂ. 36 ರಲ್ಲಿ 250 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಆರೋಗ್ಯ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳೊಂದಿಗೆ ಅರವಿಂದ ಲಿಂಬಾವಳಿ ರವರು ಸ್ಥಳ ಪರಿವೀಕ್ಷಣೆ ನಡೆಸಿದರು.

ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಂತಹ ಸರ್ಕಾರಿ ಆಸ್ಪತ್ರೆಯ ಕುರಿತು ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವೆದ್ ಅಕ್ತರ್ ಅವರೊಂದಿಗೆ ಇತ್ತಿಚೆಗೆ ಸಭೆ ನಡೆಸಿ, ಸಿದ್ದಾಪುರದಲ್ಲಿದ್ದ ಆಸ್ಪತ್ರೆಯನ್ನು (ಬಿಎಂಟಿಸಿ ಜಾಗ ಬಿಡದ ಕಾರಣ) ಸ್ಥಳಾಂತರಿಸಿ ಸದ್ಯ ದೊಡ್ಡೆನೆಕ್ಕುಂದಿ ವಾರ್ಡ್ ನ ಮುನ್ನೇಕೊಳಾಲು ನವಪ್ರಜ್ಞಾ ಶಾಲೆಯ ಹಿಂದಿನ ಸುಮಾರು 4 ಎಕರೆ 07 ಗುಂಟೆ ಜಾಗದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಲು ಅಧಿಕಾರಿಗಳೊಂದಿಗೆ ತೆರಳಿ ಪರಿವೀಕ್ಷಣೆ ನಡೆಸಿ, ಆದಷ್ಟು ಬೇಗ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.

ಅಲ್ಲದೇ ಕರ್ನಾಟಕ ಟಾಸ್ಕ್ ಫೋರ್ಸ್‌ ಕೂಡ ಬೆಂಗಳೂರನಲ್ಲಿ ಸ್ಥಳಾವಕಾಶ ಇದ್ದಲ್ಲಿ ಹೆಚ್ಚು ಆಸ್ಪತ್ರೆಗಳನ್ನು ನಿರ್ಮಿಸಲು ಸೂಚಿಸಿದೆ, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಮುನ್ನೇಕೊಳಾಲು ನಲ್ಲಿ 250 ಬೆಡ್ ಗಳ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಸಿಗಲಿವೆ ಜೊತೆಗೆ ಹೆರಿಗೆ ಆಸ್ಪತ್ರೆ, ಚಿಕ್ಕ ಮಕ್ಕಳ ಆಸ್ಪತ್ರೆ ಕೂಡ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಜಾವೆದ್ ಅಕ್ತರ್, ಜಿಲ್ಲಾಧಿಕಾರಿಗಳಾದ ಶ್ರೀ ಮಂಜುನಾಥ್, ಮುಖ್ಯ ಅಭಿಯಂತರಾದ ಶ್ರೀ ಮಂಜಪ್ಪ, ಜಿಂಟಿ ಆಯುಕ್ತರು, ತಹಶೀಲ್ದಾರರು, ಆರೋಗ್ಯ ಅಧಿಕಾರಿಗಳು , ಇತರ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Continue Reading

ಕೊರೊನಾ

ಖಾಸಗಿ ಶಿಕ್ಷಕರ ಪಾಲಿಗೆ ಸಂಜೀವಿನಿಯಾದ ಶ್ರೀ ಅಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಮಸ್ಕಿ

Published

on

ಮಸ್ಕಿ : ತಾಲೂಕಿನ ಶ್ರೀ ಅಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಖಾಸಗಿ ಕಾಲೇಜು ಉಪನ್ಯಾಸಕರಿಗೆ, ಹೈಸ್ಕೂಲ್ ಶಿಕ್ಷಕರಿಗೆ, ಪ್ರೈಮರಿ ಶಿಕ್ಷಕರಿಗೆ ಮತ್ತು ಬಡ ಕುಟುಂಬಗಳಿಗೆ 101 ಆಹಾರದ ಕಿಟ್ ಗಳನ್ನು ಗಚ್ಚಿನ ಮಠ ಶ್ರೀ ವರರುದ್ರಮುನಿ ಸ್ವಾಮಿಗಳು, ಪ್ರತಾಪ್‌ ಗೌಡ ಪಾಟೀಲ್ ಮಸ್ಕಿ ಮತ್ತು ಬ್ಯಾಂಕ್ ನ ಅಧ್ಯಕ್ಷ ಸೂಗಣ್ಣ ಬಾಳೇಕಾಯಿ ಮಸ್ಕಿ ವಿತರಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಶಾರದಾ ಪ್ರೌಢ ಶಾಲೆ ಮುಖ್ಯಗುರುಗಳಾದ ಮಲ್ಲಿಕಾರ್ಜುನ್ ಹಿರೇಮಠ ಅವರು, ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಬಡವರಿಗೆ, ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಆಹಾರದ ಕಿಟ್ ಗಳನ್ನು ವಿತರಿಸುವ ಇಂತಹ ಸಹಕಾರಿ ನಿಯಮಿತ ಸಂಸ್ಥೆಗಳನ್ನು ನೋಡುವುದು ಇದೇ ಮೊದಲು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಸೂಗಣ್ಣ ಬಾಳೆಕಾಯಿ , ಗುರುರಾಜ ಹಂಚಿನಾಳ , ಸುರೇಶ ಅರಳಿ , ಸಂತೋಷ ಬಾಳೇಕಾಯಿ ,
ಬಸವರಾಜ ಬುಕ್ಕಣ್ಣ , ಬಸವರಾಜ ನಾಯಕ ಕಡಬೂರು ಹಾಗೂ ಬ್ಯಾಂಕ್ ನ ಎಲ್ಲ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಗ್ರಾಮೀಣ ಮಟ್ಟದಲ್ಲೂ ವೈದ್ಯಕೀಯ ಸೌಲಭ್ಯಗಳ ಹೆಚ್ಚಳ

Published

on

ಗ್ರಾಮೀಣ ಮಟ್ಟದಲ್ಲೂ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಮನವಿ

ಮಸ್ಕಿ :- ಸದಸ್ಯರು ಸಂತೆಕೆಲ್ಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯಾಧ್ಯಂತ ಕೋವಿಡ್-19 ಉಲ್ಬಣಿಸಿ ಸಾಂಕ್ರಾಮಿಕವು ಸಾಕಷ್ಟು ಜೀವಗಳನ್ನು ಬಲಿ ಪಡೆದಿದೆ. ಕಳೆದ 15 ದಿನಗಳಿಂದ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಈ ರೋಗದ ಪ್ರಕರಣಗಳು ಹೆಚ್ಚಿಗೆ ಕಾಣಿಸಿಕೊಂಡದ್ದು ಎಲ್ಲರನ್ನು ಆತಂಕಕ್ಕೆ ಈಡುಮಾಡಿದೆ.

2ನೇ ಅಲೆಗೆ ತಜ್ಞರ ಮುನ್ನೆಚ್ಚರಿಕೆಯಂತೆ ಸೂಕ್ತ ಮುಂಜಾಗ್ರತೆ ವಹಿಸಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು.

ಈಗಾಗಲೇ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರಗಳ ಕೊರತೆ ಹೆಚ್ಚಿದ್ದು, ಹಳ್ಳಿಯ ಜನತೆ ಪರದಾಡುವಂತಾಗಿದೆ.

ಸೊಂಕಿತರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತ್ಯೇಕವಾಗಿರಲು ಹಳ್ಳಿ ಮನೆಗಳಲ್ಲಿ ಸೌಲಭ್ಯಗಳ ಲಭ್ಯತೆ ಇರುವುದಿಲ್ಲ ಆದ್ದರಿಂದ ರೋಗಿಗಳಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ.

ಗ್ರಾಮದ ಮುಖಂಡರನ್ನು ಒಳಗೊಂಡು ಗ್ರಾಮೀಣ ಟಾಸ್ಕ್ ಫೋರ್ಸ್ ಸಮಿತಿಯ ಸಭೆಗಳನ್ನು ನಡೆಸಬೇಕು ಹಾಗೂ ಹೆಚ್ಚಿನ ಸಂಖ್ಯೆಯ ಬಡ ರೈತರು ಆದಾಯದ ಕೊರತೆಯಿಂದಾಗಿ ಸರ್ಕಾರಿ ವೈದ್ಯಕೀಯ ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ ಇನ್ನೊಂದೆಡೆ ಗಾಮೀಣ ಭಾಗದಲ್ಲಿ ವೈಧ್ಯಕೀಯ ಸಿಬ್ಬಂದಿಯ ಕೊರತೆ ಕಾಡುತ್ತಿದೆ.

ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬಿಬ್ಬರು ಸಿಬ್ಬಂದಿಯೇ ಲಭ್ಯವಿದ್ದಾರೆ ಅವಶ್ಯಕ ಔಷಧಿಗಳು ರೋಗಿಗಳಿಗೆ ಸಕಾಲಕ್ಕೆ ಸಿಗುವಂತಾಗಬೇಕು.

ಹಾಗೂ ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿಸಿ, ಕೂಡಲೇ ಪಲಿತಾಂಶ ನೀಡಬೇಕು. ಲಸಿಕೆ ಕಾರ್ಯಕ್ರಮವನ್ನು ಹೆಚ್ಚಿಸಬೇಕು.

ಇನ್ನು 3 ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜೆನ್ ಬೆಡ್, ಐಸಿಯುಗಳ ಹೆಚ್ಚಿನ ಲಭ್ಯತೆ ಆಗಬೇಕು.

ಈಗ ಬಸ್‌ಗಳು ಇಲ್ಲ ಹಾಗೂ ಹಳ್ಳಿಗಳಲ್ಲಿ ಸಾರಿಗೆ ಸಂಪರ್ಕದ ತೊಂದರೆಗೆ ಪರ್ಯಾಯವಾಗಿ ಗಂಭೀರ ರೋಗಿಗಳನ್ನು ಸಾಗಿಸಲು ಮೋಬೈಲ್ ಆಕ್ಸಿಜೆನ್ ವಾಹನಗಳು ಹಾಗೂ ತೀವ್ರ ನಿಗಾ ಸೌಲಭ್ಯವಿರುವ ಅಂಬ್ಯುಲೆನ್ಸ್ಗಳನ್ನು ಒದಗಿಸಬೇಕು. ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಲಭ್ಯವಿರುವ ಶಾಲೆಗಳು, ಸಮುದಾಯ ಭವನ, ಹಾಸ್ಟೆಲ್, ವಸತಿಗಳನ್ನು ಆರೈಕೆ ಕೇಂದ್ರಗಳಾಗಿ ಬಳಸಿಕೊಂಡು ಜನಗಳು ಬಂದು ಇರುವಂತೆ ಯೋಗ್ಯ ರೀತಿಯಲ್ಲಿ ನಿರ್ವಹಣೆ ಮಾಡಬೇಕು.

ಆದ್ದರಿಂದ ಈ ಕೋವಿಡ್ 2 ನೇ ಅಲೆಯನ್ನು ನಿಯಂತ್ರಿಸಲು ಹಾಗೂ 3 ನೇ ಅಲೆಯ ಭೀತಿಯಿಂದ ರಕ್ಷಿಸಿಕೊಳ್ಳಲು ಕೂಡಲೇ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಎ.ಐ.ಡಿ.ವೈ.ಓ ಆಗ್ರಹಿಸುತ್ತದೆ.

ಹಕ್ಕೋತ್ತಾಯಗಳು :-
ಪಂಚಾಯತಿ ಮಟ್ಟದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ.

ಆಕ್ಸಿಜೆನ್ ಸಹಿತ ಆಂಬುಲೆನ್ಸ್ ಗಳಿಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಗೂ ಒದಗಿಸಿ.

ಆರೋಗ್ಯ ಕೇಂದ್ರ ಇರದ ಗ್ರಾಮಗಳಲ್ಲಿ ವೈಧ್ಯಕೀಯ ಶಿಬಿರಗಳನ್ನು ನಡೆಸಿ.
18 ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕಲು ಕ್ರಮ ಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಎ.ಐ.ಡಿ.ವೈ.ಒ ಜಿಲ್ಲಾ ಉಪಾಧ್ಯಕ್ಷರಾದ ತಿರುಪತಿ ಗೋನವಾರ, ಸದಸ್ಯರಾದ ನವೀನ್, ಶ್ರೀನಿವಾಸ್, ಮನವಿ ಪತ್ರವನ್ನು ಪಿ.ಡಿ.ಒ ಅವರಿಗೆ ಸಲ್ಲಿಸಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್