ಮನರಂಜನೆ
ತೋಟದ ಕೆಲಸದಲ್ಲಿ ರವೀನಾ ಟಂಡನ್
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಮಂದಿ ನಟರು ಹಳ್ಳಿಗಳಿಗೆ, ತಮ್ಮ ಫಾರಂ ಹೌಸ್‌ಗಳಿಗೆ ತಮ್ಮ ವಾಸ್ತವ್ಯ ಬದಲಾಯಿಸಿಕೊಂಡು, ‘ಸಾಂಧರ್ಭಿಕ ಕೃಷಿ’ಯಲ್ಲಿ ತೊಡಗಿದ್ದಾರೆ.
ಆದರೆ ನಟಿಯರು ಹೀಗೆ ಕೃಷಿಗೆ ಇಳಿದಿರುವುದು ಕಡಿಮೆ. ಕನ್ನಡದಲ್ಲಿಯೂ ನಟಿಸಿರುವ ಬಾಲಿವುಡ್ ನಟಿ ರವೀನಾ ಟಂಡನ್ ಈ ಲಾಕ್‌ಡೌನ್ ಅವಧಿಯಲ್ಲಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಟಿ ರವೀನಾ ಟಂಡನ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವಿಡಿಯೋದಲ್ಲಿ ರವೀನಾ ಸಲಿಕೆ ಹಿಡಿದು ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿಡಿಯೋ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ರವೀನಾ ಟಂಡನ್, ‘ತೋಟದಲ್ಲಿ ಕೆಲಸಗಾರರು ಉಳಿಸಿ ಹೋಗಿದ್ದ ಪ್ಲಾಸ್ಟಿಕ್ ಅನ್ನು ಹೆಕ್ಕಿ ತೆಗೆಯುವ ಕಾರ್ಯ ಮಾಡಿದೆ. ನನ್ನ ತೋಟದಲ್ಲಿ ಮಾತ್ರವಲ್ಲದೆ ಅಕ್ಕ-ಪಕ್ಕದ ಜಮೀನಿನಲ್ಲಿಯೂ ಇದ್ದ ಪ್ಲಾಸ್ಟಿಕ್ ಅನ್ನು ಆಯ್ದು ಸ್ವಚ್ಛತೆ ಕಾರ್ಯ ಮಾಡಿದೆವು.
ಈ ವೀಕೆಂಡ್ ಹೀಗೆ ಉತ್ತಮ ಕಾರ್ಯದೊಂದಿಗೆ ಸಮಾಪ್ತಿಯಾಯಿತು’ ಎಂದಿದ್ದಾರೆ ರವೀನಾ ಟಂಡನ್.
ಮನರಂಜನೆ
ನಟ ಪ್ರಭಾಸ್ ಜೊತೆ ನಟಿ ರಶ್ಮಿಕಾ ಮಂದಣ್ಣ ಡೇಟಿಂಗ್
ಹೈದರಾಬಾದ್ : ಸ್ಯಾಂಡಲ್ ವುಡ್, ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್ ನಲ್ಲಿಯೂ ಅವಕಾಶ ಪಡೆದುಕೊಳ್ಳುತ್ತಿರುವ ಖ್ಯಾತ ನಟಿಯರಲ್ಲಿ ರಶ್ಮಿಕಾ ಮಂದಣ‍್ಣ ಕೂಡ ಒಬ್ಬರು
ಇಂತಹ ನಟಿ ಟಾಲಿವುಡ್ ನ ಸ್ಟಾರ್ ನಟನೊಂದಿಗೆ ಡೇಟಿಂಗ್ ಮಾಡಲು ಇಷ್ಟಪಡುತ್ತಾರಂತೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ‍್ಣ ಅವರು ಈ ವಿಚಾರಚವನ್ನು ಬಹಿರಂಗಪಡಿಸಿದ್ದಾರೆ. ಒಂದು ವೇಳೆ ಡೇಟಿಂಗ್ ಗೆ ಹೋಗಲು ಅವಕಾಶ ಸಿಕ್ಕರೆ ಸ್ಟಾರ್ ನಟ ಪ್ರಭಾಸ್ ಅವರ ಜೊತೆ ಹೋಗುವುದಾಗಿ ತಿಳಿಸಿದ್ದಾರೆ.
ಕೊರೊನಾ
ಕೊರೊನಾದಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ್
ಬೆಂಗಳೂರು: ಕೊರೊನಾದಿಂದ ಸಂಕಷ್ಟದಲ್ಲಿರುವವರಿಗೆ ಸಿನಿ ತಾರೆಯರು ತಮ್ಮದೇ ಆದ ನೆರವು ನೀಡುತ್ತಿದ್ದು, ನಟ ಕಿಚ್ಚ ಸುದೀಪ್ ಅವರು ಕೂಡ ಸಹಾಯ ಹಸ್ತ ಚಾಚಿದ್ದಾರೆ.
ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಅವರು ನೆರವಾಗುತ್ತಿದ್ದಾರೆ. ಈಗ ಸುದೀಪ್ ಗುರುಗಳಿಗೆ ನೆರವಾಗಲು ಮುಂದಾಗಿದ್ದು, ಖಾಸಗಿ ಶಾಲೆಯ ಶಿಕ್ಷಕರಿಗೆ ತಲಾ ಎರಡು ಸಾವಿರ ರೂಪಾಯಿ ಗೌರವಧನ ನೀಡಲಿದ್ದಾರೆ.
ಮೊದಲ ಹಂತದಲ್ಲಿ ಗುರುಗಳಿಗೆ ನಮನ ಕಾರ್ಯಕ್ರಮದಡಿ 50 ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯ ಮಾಡಲಿದ್ದು, ಆರ್ಥಿಕ ಸಂಕಷ್ಟದಲ್ಲಿ ಇರುವವರು ಈ 6360334455 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.
ಮನರಂಜನೆ
ಸ್ಟಾರ್ ನಟರ ಸಿನಿಮಾಗಳ ಆಫರ್ ಗಳನ್ನೇ ಒಪ್ಪಿಕೊಳ್ಳದಷ್ಟು ಬ್ಯುಝಿಯಾದ ನಟಿ ಕೃತಿ ಶೆಟ್ಟಿ
ಹೈದರಾಬಾದ್ : ‘ಉಪ್ಪೆನ’ ಸಿನಿಮಾ ಮೂಲಕ ಖ್ಯಾತಿ ಪಡೆದುಕೊಂಡ ನಟಿ ಕೃತಿ ಶೆಟ್ಟಿ ಈಗ ಎಷ್ಟರ ಮಟ್ಟಿಗೆ ಬ್ಯುಝಿಯಾಗಿದ್ದಾರೆ. ಅದು ಸ್ಟಾರ್ ನಟರ ಸಿನಿಮಾಗಳ ಆಫರ್ ಗಳನ್ನೇ ಒಪ್ಪಿಕೊಳ್ಳದಷ್ಟು.
ಕೃತಿ ಟಾಲಿವುಡ್ ನಲ್ಲಿ ಮನೆ ಮಾತಾಗಿದ್ದಾರೆ. ನಟಿಸಿದ ಮೊದಲ ಚಿತ್ರವೇ ಸೂಪರ್ ಹಿಟ್ ಆಗಿದ್ದರಿಂದ ಎಲ್ಲರ ಗಮನ ತನ್ನತ್ತ ಸೆಳೆದುಕೊಂಡಿದ್ದಾರೆ. ಉಪ್ಪೆನ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಈ ಚೆಲುವೆಯ ಮನೆ ಬಾಗಿಲಿಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕೃತಿ, ಇದೀಗ ತೆಲುಗು ನಟ ಸಾಯಿ ಧರಮ್ ತೇಜ್ ಅವರ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರಂತೆ.
ಮೊದಲ ಸಿನಿಮಾವೇ ಬ್ಲಾಕ್ ಬಸ್ಟರ್ ಆಗಿದ್ದರಿಂದ ಕೃತಿ ಬಹಳ ಎಚ್ಚರಿಕೆಯಿಂದ ಮುಂದಿನ ಸಿನಿಮಾಗಳ ಒಪ್ಪಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಅದಕ್ಕಾಗಿ ಅಳೆದುತೂಗಿ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡುವುದಕ್ಕೆ ಅವರು ಮುಂದಾಗಿದ್ದಾರೆ. ಆ ಕಾರಣದಿಂದಲೇ ಸಾಯಿ ತೇಜ್ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಡೇಟ್ ಹೊಂದಾಣಿಕೆಯಾಗಿದ್ದರಿಂದ ಈ ಚಿತ್ರಕ್ಕೆ ಅವರು ನೋ ಎಂದಿದ್ದಾರಂತೆ.
-
Politics1 week ago
ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಎನ್. ಎಚ್.ಶಿವಶಂಕರ್ ರೆಡ್ಡಿ
-
Politics2 weeks ago
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
-
Politics4 weeks ago
ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
-
ಸುದ್ದಿ3 weeks ago
ಸಿಎಂ ತವರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟ, 10 ಕ್ಕೂ ಹೆಚ್ಚು ಕಾರ್ಮಿಕರು ಬಲಿ