ಕೊರೊನಾ
DS FOUNDATION ವತಿಯಿಂದ ಆಕ್ಸಿಜನ್ ಕಾನಸಂಟ್ರೆಟರಗಳ ವಿತರಣೆ
ತಾಳಿಕೋಟಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು DS FOUNDATION ಅವರ ವತಿಯಿಂದ ತಾಳಿಕೋಟಿ ಮತ್ತು ಕೊಣ್ಣೂರ ಆರೋಗ್ಯ ಕೇಂದ್ರಗಳಿಗೆ ತಲಾ ಒಂದರಂತೆ ಎರಡು ಆಕ್ಸಿಜನ್ ಕಾನಸಂಟ್ರೆಟರಗಳನ್ನು ವಿತರಣೆ ಮಾಡಿದರು.
ಮಾಜಿ ಶಾಸಕ ಸಿ.ಎಸ್.ನಾಡಗೌಡ ಅವರು ಮಾತನಾಡಿ ಕೊರೋನಾ ಸಾಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರೋಗಿಗಳಿಗೆ ಆಕ್ಸಿಜನ್ ತೊಂದರೆಯೂ ಎಲ್ಲೆಡೆ ಹೆಚ್ಚಾಗಿ ಕಂಡು ಬರುತ್ತಿದ್ದು ಕಾರಣ ಸಮುದಾಯ ಆರೋಗ್ಯ ಕೇಂದ್ರ ತಾಳಿಕೋಟಿ ಮತ್ತು ಕೊಣ್ಣೂರ ಆರೋಗ್ಯ ಕೇಂದ್ರಗಳಿಗೆ ಎರಡು ಆಕ್ಸಿಜನ್ ಕಾನಸಂಟ್ರೆಟರಗಳನ್ನು DS FOUNDATION ವತಿಯಿಂದ ನೀಡಿದ್ದೇವೆ.
ಈ ಆಕ್ಸಿಜನ್ ಕಾನಸಂಟ್ರೆಟರಗಳು ರೋಗಿಗಳಿಗೆ ಉಪಯೋಗ ವಾಗಬೇಕು ಹೊರತು ತೆಗೆದುಕೊಂಡು ಸುಮ್ಮನೆ ಇಡಬೇಡಿ ಎಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಈ ಎರಡು ಆಕ್ಸಿಜನ್ ಕಾನಸಂಟ್ರೆಟರಗಳ ಮೊತ್ತ ಎಷ್ಟು ರೂಪಾಯಿಗಳು ಇವೆ ಎಂಬುದು ಮುಖ್ಯವಲ್ಲ ಇದರಿಂದ ಎಷ್ಟು ಜನರ ಪ್ರಾಣ ಉಳಿಯುತ್ತದೆ ಎನ್ನುವುದು ಮುಖ್ಯ ನಾವು ನೀಡಿರುವ ಈ ಎರಡು ಆಕ್ಸಿಜನ್ ಕಾನಸಂಟ್ರೆಟರಗಳಿಂದ ಕನಿಷ್ಠ ಇಬ್ಬರಿಗಾದರು ಉಪಯೋಗವಾಗಿ ಅವರು ಕೊರೋನಾದಿಂದ ಗುಣಮುಖರಾಗಬೇಕು ಅಂದಾಗ ಮಾತ್ರ ನಾವು ನೀಡಿರುವುದಕ್ಕೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಿ.ಎಸ್.ನಾಡಗೌಡ, ತಾಳಿಕೋಟೆಯ ನಡೆದಾಡುವ ದೇವ ಸಿದ್ದಲಿಂಗ ದೇವರು, ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಶ್ರೀಶೈಲ ಹುಕ್ಕೇರಿ, ನಿವೃತ್ತ ವೃತ್ತ ನಿರೀಕ್ಷಕ ಎಸ್.ಬಿ. ಕಟ್ಟಿಮನಿ, ಸಂಗನಗೌಡ ಅಸ್ಕಿ ಮತ್ತು ಮುಂತಾದವರು ಉಪಸ್ಥಿತರಿದ್ದರು.
ವರದಿ : ದೇವು ಕುಚಬಾಳ
ಕೊರೊನಾ
ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಡಿ ಕೆ ಶಿವಕುಮಾರ್
ಬೆಂಗಳೂರು : ದಾವಣಗೆರೆಯಲ್ಲಿ ‘3 ಲಕ್ಷ ಉಚಿತ ಲಸಿಕೆ ಅಭಿಯಾನ’ವನ್ನು ಉದ್ಘಾಟಿಸಿದ ನಂತರ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು 3 ಸಾವಿರಕ್ಕೂ ಅಧಿಕ ಜನರಿರುವ ಮಹದೇವಪುರ ಕ್ಷೇತ್ರದ ಬಿದರಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿರುವ ‘ಉಚಿತ ಲಸಿಕೆ ಅಭಿಯಾನ’ಕ್ಕೆ ಚಾಲನೆ ನೀಡಿದರು.
ಈ ಸಮಯದಲ್ಲಿ ಕಾರ್ಯಕ್ರಮದ ಆಯೋಜಕರಾದ ವಿಧಾನಪರಿಷತ್ ಸದಸ್ಯರಾದ ಶ್ರೀ ನಾರಾಯಣಸ್ವಾಮಿ, ಶಾಸಕರಾದ ಶ್ರೀ ರಿಜ್ವಾನ್ ಅರ್ಶದ್ ಮತ್ತು ಶ್ರೀ ಶರತ್ ಬಚ್ಚೇಗೌಡ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ ಅವರು ಸರ್ಕಾರವು ನಮ್ಮ ‘100 ಕೋಟಿ ಯೋಜನೆ’ಗೆ ಅನುಮತಿ ನೀಡಿದರೆ, ಇಡೀ ಕರ್ನಾಟಕದಲ್ಲಿ ಲಸಿಕೆ ವಿತರಣೆಯನ್ನು ಚುರುಕುಗೊಳಿಸುತ್ತೇವೆ ಎಂದರು.
ಬಿದರಹಳ್ಳಿಯಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಇಡೀ ಗ್ರಾಮಕ್ಕೆ ಉಚಿತ ಲಸಿಕೆ ಅಭಿಯಾನದಲ್ಲಿ ಲಸಿಕೆ ಪಡೆಯಲು ಆಗಮಿಸಿದ ಜನರೊಡನೆ ಮಾತನಾಡಿದ ಇವರು ತಪ್ಪದೇ 2 ಡೋಸ್ ಲಸಿಕೆ ಪಡೆಯುವಂತೆ ಮತ್ತು ಪ್ರಮಾಣಪತ್ರವನ್ನು ಪಡೆಯುವಂತೆ ಮಾಹಿತಿ ನೀಡಿ, ಸ್ಥಳದಲ್ಲಿ ಎಲ್ಲ ಸೌಲಭ್ಯಗಳು ಇರುವ ಕುರಿತು ಖಚಿತಪಡಿಸಿಕೊಳ್ಳುತ್ತಿದ್ದರು
Politics
ತಜ್ಞರ ಜೊತೆ ಮಹತ್ವದ ಸಭೆ : ಜೂನ್ 14ರ ನಂತರ ಅನ್ ಲಾಕ್ ಗೆ ಇಂದೆ ಮುಹೂರ್ತ
ಬೆಂಗಳೂರು : ಕೊರೊನಾ ಮಹಾಮಾರಿ ಕಟ್ಟಿ ಹಾಕಲು ವಿಧಿಸಲಾಗಿರೋ ಸೆಕೆಂಡ್ ರೌಂಡ್ ಲಾಕ್ಡೌನ್ ಇಂದಿಗೆ ಮುಗಿಯಲಿದೆ. ಆದ್ರೆ ಇವತ್ತಿನಿಂದ ಇನ್ನೂ ಒಂದು ವಾರ ಕರುನಾಡು ಕಂಪ್ಲೀಟ್ ಲಾಕ್ ಆಗೇ ಇರಲಿದೆ. ಹಿಂದಿನ ಗೈಡ್ಲೈನ್ಸ್ ಪ್ರಕಾರವೇ ಜೂನ್ 14ರವರೆಗೂ ಜನ ಮನೆಯಲ್ಲೇ ಲಾಕ್ ಆಗಿರ್ಬೇಕಾಗುತ್ತೆ. ಆದ್ರೆ ಜೂನ್ 14 ರ ಬಳಿಕ ರಾಜ್ಯ ಅನ್ಲಾಕ್ ಆಗುತ್ತಾ ಅಥವಾ ಮುಂದುವರಿಯುತ್ತಾ ಅನ್ನೋ ಕುತೂಹಲ ಈಗ ಜನರಿಗೆ ಉಳಿದಿದೆ.
ಇವತ್ತಿನಿಂದ ಮತ್ತೊಂದು ಸುತ್ತಿನ ಒಂದು ವಾರದ ಲಾಕ್ ಡೌನ್ ಶುರುವಾಗಲಿದೆ. ಆದ್ರೆ ಜೂನ್ 14 ರವರೆಗೂ ವಿಸ್ತರಣೆಯಾಗಿರೋ ಈ ಲಾಕ್ಡೌನ್ಗೆ ತೆರೆ ಎಳೆಯೋ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ. ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಜನ ಗೃಹ ಬಂಧನದಿಂದ ಹೊರ ಬರೋಕೆ ಮುಹೂರ್ತ ಫಿಕ್ಸ್ ಆಗೋ ಸಮಯ ಹತ್ತಿರವಾಗಿದೆ ಅಂತಾ ಹೇಳಲಾಗ್ತಿದೆ.
ಪಾಸಿಟಿವಿಟಿ ರೇಟ್ ಶೇಕಡಾ 5 ರೊಳಗೆ ಬಂದ್ರೆ ಲಾಕ್ಡೌನ್ ತೆರುವು ಮಾಡ್ತೀವಿ ಅಂತಾ ಸಿಎಂ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಸದ್ಯ ಪಾಸಿಟಿವಿಟಿ ರೇಟ್ ಕಡಿಮೆಯಾಗ್ತಿದ್ದು ಇನ್ನೊಂದು ವಾರದೊಳಗೆ ಸೋಂಕಿತರ ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇದನ್ನಾಧರಿಸಿ ಇವತ್ತು ಡಿಸಿಎಂ ಅಶ್ವಥ್ ನಾರಾಯಣ ನೇತೃತ್ವದಲ್ಲಿ ಮಧ್ಯಾಹ್ನ ವಿಧಾನ ಸೌಧದಲ್ಲಿ ತಜ್ಞರ ಜೊತೆ ಟಾಸ್ಕ್ಫೋರ್ಸ್ನ ಮಹತ್ವದ ಸಭೆ ನಡೆಯಲಿದೆ.
ಕೊರೊನಾ
45 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ : ಶಾಸಕ ಆರ್ ಬಸನಗೌಡ ತುರುವಿಹಾಳ
ಮಸ್ಕಿ : ಮಸ್ಕಿ ನಗರದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಗೆ ಚಾಲನೆ ನೀಡಲಾಯಿತು.
ಲಸಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಂತರ ಮಾತನಾಡಿದ ಶಾಸಕರು ನಗರ ಜನರಿಗೆ ಸರಕಾರದಿಂದ ನೀಡುವ ಕೋವಿಡ್ ಲಸಿಕೆ ಉತ್ತಮವಾಗಿದ್ದು,ಎಲ್ಲರೂ ಧೈರ್ಯದಿಂದ ಹಾಕಿಸಿಕೊಂಡು ಆರೋಗ್ಯವಾಗಿರಲು ತಿಳಿಸಿದರು.
ದೇಶದಲ್ಲಿ ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗಿದೆ ನಾನು ಲಸಿಕೆ ಹಾಕಿಸಿಕೊಂಡಿರುವೆ ಯಾವುದೇ ತೊಂದರೆ ಆಗಿಲ್ಲ ಎಲ್ಲರೂ ಲಸಿಕೆಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು, ಹಾಗೂ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಕೊರೊನಾ ರೋಗ ಬರದಂತೆ ಜಾಗೃತರಾಗೋಣ ನಗರದ ಜನರಲ್ಲಿ ಭಯಬೇಡ 45 ವರ್ಷಮೇಲ್ಪಟ್ಟವರು ಪ್ರತಿಯೊಬ್ಬರೂ ಲಸಿಕೆಹಾಕಿಸಿಕೊಂಡು ಆರೋಗ್ಯವಂತರಾಗಿರಲು ವಿನಂತಿಸಿದರು.
ಈ ಸಂದರ್ಭದಲ್ಲಿ ಮಸ್ಕಿಯ ತಹಸಿಲ್ದಾರ್ ಬಲರಾಮ ಕಟ್ಟಿಮನಿ , ಹಿರಿಯರಾದ ಮಹಾಂತೇಶ ಮಸ್ಕಿ , ಅಪ್ಪಾಜಿಗೌಡ , ಜಿಲಾನಿ ಖಾಜಿ , ಮಲ್ಲಯ್ಯ ಬುಳ್ಳಾ , ಮಲ್ಲಿಕಾರ್ಜುನ ಪಾಟೀಲ್ ಯದಲದಿನ್ನಿ , ಹನುಮಂತಪ್ಪ ಮುದ್ದಾಪೂರ ಹಾಗೂ ಗದ್ದೆಪ್ಪ ಆರೋಗ್ಯ ನಿರೀಕ್ಷಣಾ ಅಧಿಕಾರಿ, ಹುಸೇನಪ್ಪನಿರೀಕ್ಷಣಾ ಅಧಿಕಾರಿ, ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಮಂಜುಳಾ, ಶಶಿರೇಖಾ ಆರೋಗ್ಯ ಸುರಕ್ಷಾ ಅಧಿಕಾರಿ, ಈರಮ್ಮ ಅಂಗನವಾಡಿ ಕಾರ್ಯಕರ್ತೆ, ಇತರರು ಭಾಗಿಯಾಗಿದ್ದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
-
Politics2 weeks ago
ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಎನ್. ಎಚ್.ಶಿವಶಂಕರ್ ರೆಡ್ಡಿ
-
Politics3 weeks ago
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
-
ಸುದ್ದಿ3 weeks ago
ಹರಳಕೆರೆ ಗ್ರಾಮದಲ್ಲಿ ಹಸುವನ್ನು ಬಲಿತೆಗೆದುಕೊಂಡ ಚಿರತೆ : ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
-
ಕೊರೊನಾ3 weeks ago
ವಿದುರಾಶ್ವತ್ಥದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ವಿತರಣೆ