ಸುದ್ದಿ
ಬೂದಿಹಾಳ ಪಿ ಹೆಚ್ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ
ಸಿಂದಗಿ : ಪರಿಸರವನ್ನು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ಧಲಿಂಗ ಚೌಧರಿ ಹೇಳಿದರು.
ತಾಲೂಕಿನ ಬೂದಿಹಾಳ ಪಿ ಹೆಚ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರರಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನದ ಪ್ರಯುಕ್ತ “ವಿಶ್ವ ಬಂಧು ಪರಿಸರ ಬಳಗ” ಅಧಿಕೃತ ಉದ್ಘಾಟನೆಗೊಳ್ಳುವ ಮೂಲಕ ಶಾಲಾ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡೆಸುವ ಮೂಲಕ ಅವರು ಮಾತನಾಡಿ ಪರಿಸರ ರಕ್ಷಣೆ ನಮ್ಮಲ್ಲರ ಹೊಣೆಯಾಗಬೇಕು.ಊರಿಗೊಂದು ವನ, ಮನೆಗೊಂದು ಮರ ಎನ್ನುವ ಧ್ಯೇಯವಾಕ್ಯವನ್ನು ಪಾಲಿಸಿದರೆ ಮಾತ್ರ ಮುಂಬರುವ ದಿನಗಳಲ್ಲಿ ಭೂಮಿ ಮೇಲೆ ಜೀವರಾಶಿಗಳು ಬದುಕಲು ಸಾಧ್ಯ ಎಂದರು.
ವಿಶ್ವ ಬಂಧ ಪರಿಸರ ಬಳಗವು ಮುಂಬರುವ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮದ ಪ್ರತಿ ಮನೆ ಮನೆಯ ಅಂಗಳಗಳಲ್ಲಿ ಆಮ್ಲಜನಿಕದ ಸಮತೋಲನಕ್ಕೆ ಗಿಡ ಮರವು ಸಹಕಾರಿಯಾಗುವು ಇದು ಮಹತ್ಕಾರ್ಯ ಮಾಡಲಾಗುವುದು ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ ಕಾಡುಗಳು ನಾಶವಗಿ ಕಾಂಕ್ರೀಟ್ ಕಾಡುಗಳಾಗುತ್ತವೆ. ಕಾಂಕ್ರೀಟ್ ರಸ್ತೆಗಳಿಂದ ಮಳೆ ನೀರು ಇಂಗದೇ ಅಂತರ್ಜಲ ಕೊರತೆ ಕಾಡುತ್ತಿದೆ. ಕಾರಣ ಮನೆ ಕಟ್ಟಲು ಪರವಾನಿಗೆ ಕೊಡುವ ಸಂದರ್ಭದಲ್ಲಿ ಪಂಚಾಯ್ತಿ ಮತ್ತು ನಗರ ಸಭೆಗಳು ಕಡ್ಡಾಯವಾಗಿ ಮರ ಬೆಳೆಸಬೇಕೆನ್ನುವ ಕಾನೂನು ಜಾರಿ ಮಾಡಬೇಕು .ಅಲ್ಲದೆ ಸಿ ಸಿ ರಸ್ತೆಗಳ ಪಕ್ಕದಲ್ಲಿ ಗಿಡ ಮರ ಬೆಳೆಸಲು ಸ್ಥಳ ಬಿಡಬೇಕು ಹಸಿರು ಸಿರಿ ಬೆಳೆಯಲು ಸಾಧ್ಯ .ವರ್ಷಕ್ಕೊಮ್ಮೆ ಮಾತ್ರ ಪರಿಸರ ದಿನಾಚರಣೆ ಮಾಡದೆ ದಿನವೂ ಪರಿಸರದ ಕಾಳಜಿ ಮಾಡಬೇಕು ಎಂದರು.
ಸುನಂದ ಯಂಪೂರೆ ಮಾತನಾಡಿ ಮನೆಯ ಮುಂದೆ ಗಿಡ ಮರ ನಡೆಸಲು ಮಹಿಳೆಯರು ಮುಂದಾಗಬೇಕು ಎಂದರು,
ಕಾರ್ಯಕ್ರಮದಲ್ಲಿ ಬಂದಾಳ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಎ.ಎ.ದುರ್ಗದ ಹಾಗೂ ಕಾರ್ಯದರ್ಶಿ ಆರ್ ಎಂ.ಮುಜಾವರ, ಅಬಕಾರಿ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿ ಮಿಟ್ಟೆಸಾಬ ಮುಲ್ಲಾ , ಪ್ರೌಢ ಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಎಚ್ ಬಿರಾದಾರ, ವಿಸ್ತರಣಾಧಿಕಾರಿ ಸುಭಾಸ ಪಾಟೀಲ ಹಾಗೂ ಡಿ .ವಿ. ರಜಪೂತ ಅಬಕಾರಿ ಉಪ ನೀರಿಕ್ಷಕರು ಸಿಂದಗಿ ವಲಯ ಹಾಗೂ ಸಿಬ್ಬಂದಿ ಎನ್ ಎಸ್ ಸಾತಲಗಾಂವ, ಪ್ರಶಾಂತ ಗೌಡ ಪಾಟೀಲ, ಸಂಗನಗೌಡ ಪಾಟೀಲ, ಶಿಕ್ಷಕ ಮಾಹಾಂತಗೌಡ ತ.ಪಾಟೀಲ.ಶಿಕ್ಷಣ ಇಲಾಖೆಯ, ಶಿಕ್ಷಣ ಸಂಯೋಜಕ ಆನಂದ ಮಾಡಗಿ, ಶಿಕ್ಷಕರಾದ ಬಿ ಎಸ್ ದೇವರಮನಿ .ಆರ್ ಪಿ ಕಾಂಬಳೆ.ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಅಗಸರ. ದೇವರ ಹಿಪ್ಪರಗಿ ಎನ್ ಪಿ ಎಸ್ ಶಿಕ್ಷಕರ ಸಂಘದ ಅಧ್ಯಕ್ಷ ಶಿವುಕುಮಾರ ಕಲ್ಲೂರ , ಮಾಹಾಂತೇಶ ನೂಲನವರ .ಪತ್ರಕರ್ತ ಪಂಡಿತ ಯಂಪೂರೆ. ಜಿ.ಎಂ.ಬಿರಾದಾರ , ವಿಜಯಲಕ್ಷ್ಮೀ ನಾಗಾವಿ.ಗಂಗಾಬಾಯಿ ಮುರ್ನಾಳ .ನೀಲಮ್ಮ ನಾಟಿಕಾರ್, ಪರಸು ಬ್ಯಾಕೋಡ , ಹಾಗೂ ಬೂದಿಹಾಳ ಪಿ ಹೆಚ್ ಗ್ರಾಮಸ್ಥರು ಇದ್ದರು.
ವರದಿ: ರಾಘವೇಂದ್ರ ಭಜಂತ್ರಿ
ಕೊರೊನಾ
DS FOUNDATION ವತಿಯಿಂದ ಆಕ್ಸಿಜನ್ ಕಾನಸಂಟ್ರೆಟರಗಳ ವಿತರಣೆ
ತಾಳಿಕೋಟಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು DS FOUNDATION ಅವರ ವತಿಯಿಂದ ತಾಳಿಕೋಟಿ ಮತ್ತು ಕೊಣ್ಣೂರ ಆರೋಗ್ಯ ಕೇಂದ್ರಗಳಿಗೆ ತಲಾ ಒಂದರಂತೆ ಎರಡು ಆಕ್ಸಿಜನ್ ಕಾನಸಂಟ್ರೆಟರಗಳನ್ನು ವಿತರಣೆ ಮಾಡಿದರು.
ಮಾಜಿ ಶಾಸಕ ಸಿ.ಎಸ್.ನಾಡಗೌಡ ಅವರು ಮಾತನಾಡಿ ಕೊರೋನಾ ಸಾಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರೋಗಿಗಳಿಗೆ ಆಕ್ಸಿಜನ್ ತೊಂದರೆಯೂ ಎಲ್ಲೆಡೆ ಹೆಚ್ಚಾಗಿ ಕಂಡು ಬರುತ್ತಿದ್ದು ಕಾರಣ ಸಮುದಾಯ ಆರೋಗ್ಯ ಕೇಂದ್ರ ತಾಳಿಕೋಟಿ ಮತ್ತು ಕೊಣ್ಣೂರ ಆರೋಗ್ಯ ಕೇಂದ್ರಗಳಿಗೆ ಎರಡು ಆಕ್ಸಿಜನ್ ಕಾನಸಂಟ್ರೆಟರಗಳನ್ನು DS FOUNDATION ವತಿಯಿಂದ ನೀಡಿದ್ದೇವೆ.
ಈ ಆಕ್ಸಿಜನ್ ಕಾನಸಂಟ್ರೆಟರಗಳು ರೋಗಿಗಳಿಗೆ ಉಪಯೋಗ ವಾಗಬೇಕು ಹೊರತು ತೆಗೆದುಕೊಂಡು ಸುಮ್ಮನೆ ಇಡಬೇಡಿ ಎಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಈ ಎರಡು ಆಕ್ಸಿಜನ್ ಕಾನಸಂಟ್ರೆಟರಗಳ ಮೊತ್ತ ಎಷ್ಟು ರೂಪಾಯಿಗಳು ಇವೆ ಎಂಬುದು ಮುಖ್ಯವಲ್ಲ ಇದರಿಂದ ಎಷ್ಟು ಜನರ ಪ್ರಾಣ ಉಳಿಯುತ್ತದೆ ಎನ್ನುವುದು ಮುಖ್ಯ ನಾವು ನೀಡಿರುವ ಈ ಎರಡು ಆಕ್ಸಿಜನ್ ಕಾನಸಂಟ್ರೆಟರಗಳಿಂದ ಕನಿಷ್ಠ ಇಬ್ಬರಿಗಾದರು ಉಪಯೋಗವಾಗಿ ಅವರು ಕೊರೋನಾದಿಂದ ಗುಣಮುಖರಾಗಬೇಕು ಅಂದಾಗ ಮಾತ್ರ ನಾವು ನೀಡಿರುವುದಕ್ಕೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಿ.ಎಸ್.ನಾಡಗೌಡ, ತಾಳಿಕೋಟೆಯ ನಡೆದಾಡುವ ದೇವ ಸಿದ್ದಲಿಂಗ ದೇವರು, ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಶ್ರೀಶೈಲ ಹುಕ್ಕೇರಿ, ನಿವೃತ್ತ ವೃತ್ತ ನಿರೀಕ್ಷಕ ಎಸ್.ಬಿ. ಕಟ್ಟಿಮನಿ, ಸಂಗನಗೌಡ ಅಸ್ಕಿ ಮತ್ತು ಮುಂತಾದವರು ಉಪಸ್ಥಿತರಿದ್ದರು.
ವರದಿ : ದೇವು ಕುಚಬಾಳ
ಸುದ್ದಿ
ಪೂರ್ವ ಸಿದ್ಧತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ
ಬೆಂಗಳೂರು : ರಾಜ್ಯದಾದ್ಯಂತ ಈ ಸಾಲಿನ ಮುಂಗಾರು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾದ ಪೂರ್ವ ಸಿದ್ಧತಾ ಕ್ರಮಗಳ ಕುರಿತು ಇಂದು ಆರ್. ಅಶೋಕ್ ರವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಪ್ರವಾಹವನ್ನ ಎದುರಿಸಲು ಹೇಗೆಲ್ಲಾ ಸಿದ್ಧತೆಗಳಾಗಿದೆ ಎಂಬುದರ ಕುರಿತು ಮಾಹಿತಿ ಪಡೆಯಲಾಯಿತು. ರಕ್ಷಣಾ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಕೆಲ ಸೂಚನೆಗಳನ್ನ ನೀಡಲಾಗಿದೆ. ಅನಿರೀಕ್ಷಿತ ವಿಪತ್ತುಗಳನ್ನ ಎದುರಿಸಲು ಎಲ್ಲಾ ರೀತಿಯಲ್ಲಿಯೂ ತಯಾರಿ ಮಾಡಿಕೊಳ್ಳಲಾಗಿದೆ.
ಈ ಸಭೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ
ಪುರಾತನ ಪರಂಪರೆಯೇ ವಿಶ್ವ ಪರಿಸರ ದಿನವನ್ನು ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಆಚರಣೆ
ಮಸ್ಕಿ :- ಪರಿಸರ ಶುಚಿಯಾಗಿ ಇದ್ದರೆ ಜಗತ್ತು ಆರೋಗ್ಯದಿಂದ ಉತ್ತಮವಾಗಿ ಇರುತ್ತದೆ ಇಲ್ಲದೆ ಹೋದರೆ ಆಯಾ ತಪ್ಪುತ್ತದೆ.
ಜೂನ್ 05 ನೇ ಎನ್ವಿರಾನ್ಮೆಂಟ್ ಡೇ ಪರಿಸರ ದಿನಾಚರಣೆ ಎಂದು ಆಚರಿಸುತ್ತೇವೆ.
ಇಂದಿನ ಕೊರೊನಾ ಸಂದರ್ಭದಲ್ಲಿ ಪರಿಸರದ ಮಹತ್ವತೆಯ ಕುರಿತು ನಮಗೆ ನಾವೇ ಜಾಗೃತರಾಗುವ ರೀತಿ ಪರಿಸರ ಕಿವಿ ಹಿಂಡಿದೆ ನಿಸರ್ಗದಲ್ಲಿ ಇರುವ ಅನೇಕ ಗಿಡಗಳು ಬಹಳಷ್ಟು ಮಹತ್ವವನ್ನು ಪಡೆದಿವೆ.
ವೇದಗಳ ಕಾಲದಲ್ಲಿ ಅಶ್ವಿನಿ ಮಾಸದ ಕೊನೆಯಲ್ಲಿ ನಿಸರ್ಗವನ್ನು ಪೂಜಿಸಿ ಪಶುಗಳನ್ನು ಪರಿಸರ ಮತ್ತು ಪಶುಗಳೆ ಆಸ್ತಿ ಎಂದು ಭಾವಿಸಿದ್ದರು.
ಅರಳಿ ಗಿಡ ಮಹಾನ್ ಗಿಡ ಸಾಕ್ಷಾತ್ ವಿಷ್ಣುವಿನ ವಾಸಸ್ಥಳ ಎಂದು , ಬೇವಿನ ಗಿಡ ದೇವಿಯ ವಾಸ ಎಂದು, ತುಳಸಿ ಗಿಡ ಲಕ್ಷ್ಮಿಯ ವಾಸ ಎಂದು ಪೂಜಿಸುತ್ತಿದ್ದರು.
ಇಂದಿನ ದಿನಗಳಲ್ಲಿ ಆ ಪುರಾತನ ಪರಂಪರೆಯೇ ವಿಶ್ವ ಪರಿಸರ ದಿನಾಚರಣೆ ಹಾಗಿದೆ.
ಈ ದಿನವನ್ನು ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಮಸ್ಕಿ ತಾಲೂಕ ದಂಡಾಧಿಕಾರಿ ಗಳು ಮತ್ತು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಶ್ರೀ ಮಲ್ಲಿಕಾರ್ಜುನ್ ಇತ್ಲಿ ಹಾಗೂ ಸಾಹಿತಿಗಳಾದ ಮಹಾಂತೇಶ್ ಮಸ್ಕಿ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತರು ಪಾರ್ಶ್ವನಾಥ ಕೋಲಾರ ಭಾರತ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷರು , ಕಾರ್ಯದರ್ಶಿಗಳಾದ ಶಿವಪ್ಪ ಹಸಮಕಲ್ , ಮಸ್ಕಿ ಲಯನ್ಸ್ ಕ್ಲಬ್ ನ ಗಣ್ಯರಾದ ಡಾಕ್ಟರ್ ಬಿ. ಎಚ್. ದಿವಾಟರ್ ಹಾಗೂ ಉಪಸ್ಥಿತರಿದ್ದರು.
-
Politics2 weeks ago
ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಎನ್. ಎಚ್.ಶಿವಶಂಕರ್ ರೆಡ್ಡಿ
-
Politics3 weeks ago
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
-
ಸುದ್ದಿ3 weeks ago
ಹರಳಕೆರೆ ಗ್ರಾಮದಲ್ಲಿ ಹಸುವನ್ನು ಬಲಿತೆಗೆದುಕೊಂಡ ಚಿರತೆ : ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
-
ಕೊರೊನಾ2 weeks ago
ವಿದುರಾಶ್ವತ್ಥದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ವಿತರಣೆ