Connect with us
Ad Widget

ಕೊರೊನಾ

ವಿದುರಾಶ್ವತ್ಥದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ವಿತರಣೆ

Published

on

ಗೌರಿಬಿದನೂರು : ತಾಲ್ಲೂಕಿನ ದೊಡ್ಡಕುರುಗೋಡು ಗ್ರಾ.ಪಂ ಹಾಗೂ ಆರ್.ಎಲ್ ಪೈನ್ ಕೆಮಿಕಲ್ ಪ್ರೈ. ಲಿಮಿಟೆಡ್ ವತಿಯಿಂದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಯವರ ನೇತೃತ್ವದಲ್ಲಿ ವಿದುರಾಶ್ವತ್ಥದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ವಿತರಣೆ ಮಾಡಲಾಯಿತು.

ಸ್ಥಳೀಯ ಆರೋಗ್ಯ ಸೇವಾ ಕೇಂದ್ರಗಳನ್ನು ಬಲಪಡಿಸುವ ಜತೆಗೆ ಜನತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸನ್ನದ್ಧರಾಗಬೇಕಿದೆ ಎಂದು‌ ಹೇಳಿದರು.

ಬಳಿಕ ಆಸ್ಪತ್ರೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ, ಜನತೆಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ತಹಸೀಲ್ದಾರ್ ಎಚ್.ಶ್ರೀನಿವಾಸ್, ತಾ.ಪಂ ಎನ್‌.ಮುನಿರಾಜು, ಟಿಎಚ್ ಒ ಓ.ರತ್ನಮ್ಮ, ಗ್ರಾ.ಪಂ ಅಧ್ಯಕ್ಷೆ ಕೆ.ಎಂ.ಮನುಜ, ಪಿಡಿಒ ಎನ್‌.ಚಂದ್ರಶೇಖರ್ ಕಾರಟಗಿ ಸೇರಿದಂತೆ ಇತರರು ಭಾಗವಹಿಸಿದ್ದರು.

  • ಕೆ.ವಿ.ಪ್ರಸನ್ನ ಕುಮಾರ್, ಕುದುರೆಬ್ಯಾಲ್ಯ
Continue Reading
Advertisement
Click to comment

Leave a Reply

Your email address will not be published. Required fields are marked *

ಕೊರೊನಾ

ಚೆಂಚುರಾಯನಪಲ್ಲಿಯಲ್ಲಿ ಕೋವಿಡ್ ಪ್ರಥಮ ಚಿಕಿತ್ಸಾ ಕೇಂದ್ರ ಆರಂಭ

Published

on

ಬಾಗೇಪಲ್ಲಿ: ತಾಲ್ಲೂಕಿನ ತಿಮ್ಮಂಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪಲ್ಸ್ ಆ್ಯಕ್ಸೀಮೀಟರ್ ಮತ್ತು ಥರ್ಮಲ್ ಸ್ಕ್ಯಾನರ್ ಗಳ ಜೊತೆಗೆ ಔಷಧಗಳನ್ನೂ ವಿತರಿಸಲಾಯಿತು. ಈ ಮೂಲಕ ಜ್ವರ ಮತ್ತು ವ್ಯಕ್ತಿ ದೇಹದ ರಕ್ತದಲ್ಲಿನ ಆಮ್ಲಜನಕ ಪ್ರಮಾಣಗಳನ್ನು ಪರಿಶೀಲಿಸಲಾಗುತ್ತದೆ.

ಈ ಸಂದರ್ಭದಲ್ಲಿ ಚೆಂಚುರಾಯನಪಲ್ಲಿ ಡಿವೈಎಫ್ಐ ಮುಖಂಡ ಮಾತನಾಡಿ ಪ್ರಜಾವೈಧ್ಯರಾದ ಡಾ.ಅನಿಲ್ ಕುಮಾರ್ ಆವುಲಪ್ಪ, ರೈಟ್ ಟು ಲೀವ್ ಫೌಂಡೇಶನ್, ರೋಟರಿ ಸ್ಪಂದನಾ ,ಡಿವೈಎಫ್ಐ, ಯಂಗ್ ಲೈವ್ಸ್ ಫೌಂಡೇಶನ್, ಕರ್ನಾಟಕ ಪ್ರಾಂತ ಕೃಷಿಕಾರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಕೋವಿಡ್ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಸೋಂಕು ತೀವ್ರ ಸ್ವರೂಪಕ್ಕೆ ತಿರುಗುವ ಮೊದಲೇ ತಡೆಯುವ ನಿಟ್ಟಿನಲ್ಲಿ‌ ನಾವೆಲ್ಲರೂ ಶ್ರಮಿಸುತ್ತೇವೆ. ಚೆಂಚುರಾಯನಪಲ್ಲಿ ಗ್ರಾಮಸ್ಥರು ಈ ಪ್ರಥಮ ಚಿಕಿತ್ಸಾ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದರು.

ಈ ಸಂಧರ್ಭದಲ್ಲಿ ರೈಟ್ ಟು ಲೀವ್ ಫೌಂಡೇಶನ್ ನ ಪ್ರೋಗ್ರಾಂ ಕೋ-ಆರ್ಡಿನೇಟರ್ ಐವಾರಪಲ್ಲಿ ವೈ.ಎನ್ ಹರೀಶ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ ಮುನಿವೆಂಕಟಪ್ಪ, ಸಿಪಿಐಎಂ ಪಕ್ಷದ ಮುಖಂಡ ರಘುರಾಮರೆಡ್ಡಿ, ಜನವಾದಿ ಮಹಿಳಾ ಸಂಘಟನೆಯ ಬಿ.ಸಾವಿತ್ರಮ್ಮ, ಗ್ರಾಮಸ್ಥರಾದ ಪರಮೇಶ್, ಪ್ರಕಾಶ್ ,ರಘು, ನಾರಾಯಣಪ್ಪ,ರಮೇಶ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

Continue Reading

Politics

ಜೂನ್ 7ರ ವರೆಗೆ ರಾಜ್ಯದಾದ್ಯಂತ ಕಠಿಣ ನಿರ್ಬಂಧ

Published

on

ಬೆಂಗಳೂರು : ‘ತಜ್ಞರ ಅಭಿಪ್ರಾಯ ಪರಿಗಣಿಸಿ, ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ರಾಜ್ಯಾದ್ಯಂತ ವಿಧಿಸಲಾಗಿದ್ದ ಕಠಿಣ ನಿರ್ಬಂಧಗಳನ್ನು ದಿನಾಂಕ 24.05.2021 ರಿಂದ 07.06.2021ರ ಬೆಳಿಗ್ಗೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ. ಜನರ ಆರೋಗ್ಯದ ದೃಷ್ಠಿಯಿಂದ ನಿರ್ಬಂಧಗಳನ್ನು ಮುಂದುವರೆಸಿದ್ದು, ಮುಂದೆಯೂ ಸಾರ್ವಜನಿಕರ ಸಹಕಾರ ಕೋರುತ್ತೇನೆ ಎಂದು ಇಂದು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ರವರು ತಿಳಿಸಿದರು.

‘ಸಾರ್ವಜನಿಕರು ಕೋವಿಡ್ ಹರಡುವಿಕೆ ತಡೆಯಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನಹರಿಸಿ ಹೆಚ್ಚು ಜಾಗರೂಕತೆಯಿಂದ ಇರಬೇಕು ಎಂದು ವಿನಂತಿಸುತ್ತೇನೆ. ಬ್ಲ್ಯಾಕ್ ಫಂಗಸ್ ಸೋಂಕಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ ಎಂದರು.

Continue Reading

ಕೊರೊನಾ

ಹೋಬಳಿಯಲ್ಲಿ ಮಾಸ್ಕ್‌ ಇಲ್ಲ, ಸ್ಯಾನಿಟೈಸರ್‌ ಕೊಟ್ಟಿಲ್ಲ!

Published

on

ಹೋಬಳಿಯಲ್ಲಿ ಮಾಸ್ಕ್‌ ಇಲ್ಲ, ಸ್ಯಾನಿಟೈಸರ್‌ ಕೊಟ್ಟಿಲ್ಲ! ಜೀವ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ ಕೊರೊನಾ ವಾರಿಯರ್ಸ್!

ಮಸ್ಕಿ : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು ಕೊರೊನಾ ನಿಯಂತ್ರಣ ಮಾಡು ನಿಟ್ಟಿನಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕಟ್ಟುನಿಟ್ಟಿನ ಲಾಕ್‌ಡೌನ್ ಪಾಲನೆ ಮಾಡಬೇಕು ಎಂದು ಸರ್ಕಾರದ ಸೂಚನೆ ನೀಡುತ್ತಲೇ ಇದೆ.

ಆದರೆ ಸರ್ಕಾರದ ಸೂಚನೆಗಳು ಹಾಗೂ ಕೊರೊನಾ ಅಪಾಯದ ಕುರಿತಾಗಿ ಗ್ರಾಮ ಗ್ರಾಮಗಳಲ್ಲಿ ಜನರಿಗೆ ಅರಿವು ಮೂಡಿಸುತ್ತಿರುವವರು ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು ಹಾಗೂ ಸಹಾಯಕರು ಸೂಕ್ತ ವೇತನ, ಗೌರವ ಧನ, ಪಿಂಚಣಿಗಾಗಿ ಸತತ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ,

ಈ ತಾಯಂದಿರು ಸರ್ಕಾರದಿಂದ ಸದಾ ನಿರ್ಲಕ್ಷಕ್ಕೆ ಒಳಗಾಗುತ್ತಾ ಬಂದವರು. ಆದರೆ ಕೊರೊನಾದಂತಹಾ ವಿಷಮ ಸ್ಥಿತಿಯಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಜನರಿಗೆ ಸಹಾಯ ಮಾಡುತ್ತಿದ್ದಾರೆ.

ಹೀಗಿದ್ದರೂ ಇವರ ಸುರಕ್ಷತೆಯ ಬಗ್ಗೆ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.

ರಾಜ್ಯದಲ್ಲಿ ಸುಮಾರು 1.25 ಲಕ್ಷ ಅಂಗನವಾಡಿ ನೌಕರರು ಹಾಗೂ ಸಹಾಯಕಿಯರು ಇದ್ದಾರೆ. ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಇದ್ದಾರೆ. ಕೊರೊನಾ ತುರ್ತು ಪರಿಸ್ಥಿತಿಯಲ್ಲೂ ರಾಜ್ಯದ ಮನೆ ಮನೆಗಳಿಗೆ ತೆರಳಿ ಜನರಲ್ಲಿ ಅರಿವು ಮೂಡಿಸುವುದು, ಆರೋಗ್ಯ ಕುರಿತಾಗಿ ಮಾಹಿತಿ ಸಂಗ್ರಹ ಮಾಡುವುದು ಹಾಗೂ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ನಿರಂತರ ಐ.ಸಿ.ಡಿ.ಎಸ್ ಸೇವೆಗಳನ್ನು ತಲುಪಿಸುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.

ಓರ್ವ ಆಶಾ ಕಾರ್ಯಕರ್ತೆ ದಿನಕ್ಕೆ 25 ಮನೆ ಭೇಟಿ ನೀಡಬೇಕು, ಗ್ರಾಮೀಣ ಭಾಗಗಳಲ್ಲಿ ಮನೆಗಳ ಅಂತರ ದೂರವಿರುತ್ತವೆ. ಪರಿಣಾಮ ಓರ್ವ ಮಹಿಳೆ ಒಂದು ದಿನಕ್ಕೆ ಕನಿಷ್ಠ 3 ರಿಂದ 5 ಕಿಲೋ ಮೀಟರ್ ನಡೆದುಕೊಂಡುಕೆಲಸ ಮಾಡಬೇಕು. ಹೋಗುವಾಗ ಜೊತೆಗೆ 7 ರಿಜಿಸ್ಟರ್ ಗಳು, ಬಿ.ಪಿ ಚೆಕ್ ಮಾಡುವ ಮಿಷನ್, ಓ.ಆರ್‌.ಎಸ್ ಪ್ಯಾಕೆಟ್ಸ್, ಮಾತ್ರೆಗಳನ್ನು ತಮ್ಮ ಜೊತೆಗೆ ಕೊಂಡೊಯ್ಯಬೇಕು.

ಜೊತೆಗೆ ಬಾಣಂತಿಯರಿಗೆ ಅಗತ್ಯವಿರುವ ಪೌಷ್ಠಿಕ ಆಹಾರವನ್ನು ಮನೆಗೆ ಸಾಗಿಸಬೇಕು.

ಮಸ್ಕಿ ತಾಲೂಕಿನಲ್ಲಿ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ಪತ್ತೆ, ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ

ಎಂದು ನಮ್ಮ ಪತ್ರಿಕೆ ಜೊತೆಗೆ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಶ್ರೀದೇವಿ ತಮ್ಮ ನೋವನ್ನು ಹೇಳಿಕೊಂಡರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್