Politics
“ಸಿಂದಗಿ ವಲಯದ ನಲಿ-ಕಲಿ ಶಿಕ್ಷಕರಿಗೆ ಗೂಗಲ್ ಮೀಟ್ ಮೂಲಕ ತರಬೇತಿ”
ಸಿಂದಗಿ; ನಲಿ- ಕಲಿ ಶಿಕ್ಷಣ ಪದ್ದತಿಯಲ್ಲಿ ವಿದ್ಯಾರ್ಥಿಗಳಿಗೆ ಹೊಸತನದ ಕಾರ್ಡ ಮೂಲಕ ಆಂಗ್ಲ ಭಾಷ ಶಿಕ್ಷಣ ಕೊಡಲಾಗುವದು ಎಂದು ತಾಲೂಕಿನ ಕೊಕಟನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಭಾಷಯ ಬೋಧಿಸುವ ಶಿಕ್ಷಕಿ ರೇಖಾ ಬಿಜ್ಜರಗಿ ಹೇಳಿದರು,
ಸಿಂದಗಿ ವಲಯದ ನಲಿ-ಕಲಿ ಶಿಕ್ಷಕರಿಗೆ ಗೂಗಲ್ ಮೀಟ್ ಮೂಲಕ ಗುರುವಾರ ನಲಿ -ಕಲಿ ಆಂಗ್ಲ ಭಾಷ ತರಬೇತಿ ನೀಡುವ ಮೂಲಕ ಅವರು ತಮ್ಮ ಮನೆಯಲ್ಲೆ ಇರುವ ಮಕ್ಕಳನ್ನು ಬಳಿಸಿಕೊಂಡು ಆಂಗ್ಲ ಭಾಷ ಸಂಪೂರ್ಣ ದೈಹಿಕ ಚಟುವಟಿಕೆ ಮೂಲಕ ವಿದ್ಯಾರ್ಥಿಗಳ ದೇಹದ ಭಾಗಗಳನ್ನು ಗುರುತಿಸುವ ಮೂಲಕ ಉತ್ತಮ ತರಬೇತಿ ನೀಡಿದರು,
ಈ ಪ್ರಕಾರವಾಗಿ ವಿದ್ಯಾರ್ಥಿಗಳಿಗೆ ವಿದ್ಯಾ ಕಲಿಸಿದಾಗ ಕಲಿಕೆಗೆ ಪೂರಕವಾಗುತ್ತದೆ ಎಂದರು,
ಯಲಗೋಡ ವಲಯದ ಸಮೂಹ ಸಂಪನ್ಮಲ ವ್ಯಕ್ತಿ (ಸಿ ಆರ್ ಪಿ) ವೀರೇಶ ಕರಕಳ್ಳಿಮಠ ಗೂಗಲ್ ಮೀಟ್ ತರಬೇತಿ ಪಡೆದ ಶಿಕ್ಷಕರು ತಮ್ಮ ನಲಿ- ಕಲಿ ತರಗತಿ ಕೋಣೆಯಲ್ಲಿ ಆಂಗ್ಲ ಭಾಷ ಅವದಿಯಲ್ಲಿ ಮಾತ್ರ ಆಂಗ್ಲ ಭಾಷ ಬೋಧಿಸದೆ ಉಳಿದ ವಿಷಯಗಳಲ್ಲಿವು ಆಂಗ್ಲ ಭಾಷ ಬಳಿಕೆ ಮಾಡುತ್ತಾ ಆಂಗ್ಲ ಭಾಷ ವಾತವರಣ ನಿರ್ಮಾಣ ಮಾಡಿದಾಗ ವಿದ್ಯಾರ್ಥಿಗಳು ಕಲಿಕೆಯಲ್ಲಿ ಚಟುವಟಿಕೆಯಿಂದ ಭಾಗವಹಿಸುವರು , ಜೊತೆಗೆ ನಲಿ- ಕಲಿ ತರಗತಿ ಕೋಣೆಯಲ್ಲಿ ಶಿಕ್ಷಕರು ತಂತ್ರಜ್ಞಾನದೊಂದಿಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ನಲಿ-ಕಲಿ ಶಿಕ್ಷಣ ಉತ್ತಮವಾಗಿದೆ ,
ನಲಿ-ಕಲಿ ಶಿಕ್ಷಕರು ಪೂರ್ವ ಸಿದ್ದತೆ ಮಾಡಿ ಕೊಂಡು,ಸ್ಥಳಿಯ ಕಚ್ಚ ವಸ್ತಗಳು ಬಳಿಸಿ ಕೊಂಡು ವಿಷಯದ ಅನುಗುಣವಾಗಿ ಮಾಡಲಗಳು ತಯಾರ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು,
ಕನ್ನೋಳ್ಳಿ ವಲಯದ ಸಿ ಆರ್ ಪಿ ಭೀಮನಗೌಡ ಬಿರಾದಾರ ನಲಿ- ಕಲಿ ಶಿಕ್ಷಕರಿಗೆ ಹಲವು ಸಲಹೆ ಕೊಡುವ ಮೂಲಕ ಶಿಕ್ಷಕರು ಲಾಕ್ ಡೌನ್ ಪ್ರಯುಕ್ತ ಶಿಕ್ಷಕರು ತಮ್ಮ ಮನೆಯಲ್ಲಿ ಆರೋಗ್ಯವಂತರಾಗಿ ಇರುವ ಮೂಲಕ ನಲಿ-ಕಲಿ ಪದ್ದತಿ ಶಿಕ್ಷಣಕ್ಕೆ ಬೇಕಾಗುವ ವಸ್ತುಗಳು ತಯಾರ ಮಾಡಬೇಕು ಎಂದರು , ಸಿಂದಗಿ ವಲಯದ ಶಿಕ್ಷಣ ಸಂಯೋಜಕ ಆನಂದ ಮಾಡಗಿ ಹಾಗೂ ತಾಲೂಕಾ ನಲಿ-ಕಲಿ ನೋಡಲ ಅಧಿಕಾರಿ ಶ್ರೀಮತಿ ವಿಜಯಲಕ್ಷ್ಮೀ ರೇಬಿನಾಳ , ಮಾರ್ಗದರ್ಶ ನೀಡಿದರು ,
ಗೋಗಲ್ ಮೀಟ್ ತರಬೇತಿಯಲ್ಲಿ ಸಿಂದಗಿ ವಲಯದ 58 ಶಿಕ್ಷಕರು ಭಾಗವಹಿಸಿದರು, ಕೊನೆಗೆ
ಶಿಕ್ಷಕ ಬಸವರಾಜ ಅಗಸರ ಅಭಿನಂದಿಸಿದರು.
ವರದಿ:- ರಾಘವೇಂದ್ರ ಭಜಂತ್ರಿ
Politics
“ಹಸಿರು ನಮ್ಮೆಲ್ಲರ ಉಸಿರಾಗಲಿ ಮಾಜಿ ಶಾಸಕ – ರಮೇಶ ಭೂಸನೂರ ಕರೆ “
ಸಿಂದಗಿ ; ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಗಿಡಮರಗಳ ಪಾತ್ರ ಮಹತ್ವದ್ದಾಗಿದೆ, ಹಸಿರು ನಮ್ಮ ಉಸಿರಾಗಬೇಕು ಹಾಗಿದ್ದಾಗ ಮಾತ್ರ ನಮಗೆ ಉಸಿರಾಗಿರುವ ಆಮ್ಲಜನಕ ದೊರೆಯಲು ಸಾಧ್ಯ ಎಂದು ಮಾಜಿ ಶಾಸಕ ರಮೇಶ ಭೂಸನೂರ ಅವರು ಮಾತನಾಡಿದರು.
ತಾಲೂಕಿನ ಪುರದಾಳದ ಶ್ರೀ ಭೀಮಾಶಂಕರ ಬ್ರಹ್ಮ ವಿದ್ಯಾಶ್ರಮ ಆವರಣದಲ್ಲಿ “ಸದ್ಗುರುವಿನ ಆಶ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮ” ದ ಅಂಗವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ನಮ್ಮ ಪೂರ್ವಜರು ಹಾಗೂ ಸಿಂಧೂ ನಾಗರಿಕತೆಯ ಕಾಲದಿಂದಲೂ ಗಿಡಮರಗಳನ್ನು ಪೂಜಿಸುವ ಸಂಸ್ಕೃತಿ ಭಾರತಿಯರಲ್ಲಿದೆ.ನಮಗೆ ಅದು ವೈಜ್ಞಾನಿಕ ಸತ್ಯ ಎಂಬುದು ಈ ಕರೋನಾ ಸಂಕಷ್ಟದಲ್ಲಿ ನಮ್ಮೆಲ್ಲರಿಗೂ ಅರ್ಥವಾಗಿದೆ. ಶ್ರೀಮಠದ ಆವರಣದಲ್ಲಿ ಸಸಿ ನೆಡುವ ಮೂಲಕ ಗ್ರಾಮದ ನಾಗರಿಕರು ಪರಿಸರ ಪ್ರೇಮವನ್ನು ಮೆರೆದಿದ್ದಾರೆ ಎಂದರು ,
ಇದೆ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಸಮಾಜ ಸೇವಕರಾದ ಸಂತೋಷ ಕುಮಾರ ಪಾಟೀಲ ಡಂಬಳ ಅವರು ಮಾತನಾಡಿ ಪುರದಾಳದ ನೆಲೆ ಆಧ್ಯಾತ್ಮಿಕ ಗಟ್ಟಿತನದಿಂದ ಕೂಡಿದೆ. ಯತಿರಾಜ ಭೀಮಾಶಂಕರ ಮಹಾರಾಜರಿಂದ ಹಾಗೂ ಅವರ ಪರಮ ಶಿಷ್ಯರಾದ ಯಮನೂರೇಶ ಶರಣರಿಂದ ಈ ನೆಲೆ ಪಾವನವಾಗಲು ಸಾಧ್ಯವಾಗಿದೆ.ಈ ಪಾವನ ನೆಲದಲ್ಲಿ ಸಸಿ ನೆಡುವ ಭಾಗ್ಯ ನಮಗೂ ದೊರಕಿದ್ದು ಖುಷಿ ತಂದಿದೆ ಎಂದರು.
ಸದ್ಗುರು ಯಮನೂರೇಶ ಶರಣರು ಸಾವಿರಾರು ಹಾಡುಗಳನ್ನು ರಚಿಸಿ, ತಮ್ಮ ಗುರುವಿನ ಹೆಸರಲ್ಲಿ ಆಶ್ರಮವನ್ನು ಸ್ಥಾಪಿಸಿ, ಗ್ರಾಮದ ಜನತೆಗೆ ಸದ್ಗುರುವಿನ ಆಶ್ರಮ ಕಲ್ಪವೃಕ್ಷವಾಗಿದೆ. ಅದರ ಸುಂದರ ಪರಿಸರಕ್ಕಾಗಿ ಆಶ್ರಮದ ಆವರಣದಲ್ಲಿ ಸಸಿಗಳನ್ನು ನೆಟ್ಟಿರುವದು ಪರಿಸರ ಕಾಳಜಿಯನ್ನು ಹಾಗೂ ಆಶ್ರಮದ ಬಗೆಗಿನ ತಮ್ಮ ಪ್ರೀತಿಯನ್ನು ತೋರುತ್ತದೆ ಎಂದು ಸಮಾಜ ಸೇವಕರಾದ ಸಿದ್ದು ಬುಳ್ಳಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಗ್ರಾಮಸ್ಥರು ಆಶ್ರಮಕ್ಕೆ ಕಲ್ಯಾಣ ಮಂಟಪ ಒದಗಿಸಲು ಬೇಡಿಕೆ ಇಟ್ಟಾಗ,ಮಾಜಿ ಶಾಸಕ ರಮೇಶ ಭೂಸನೂರ ಅವರು ಸರ್ಕಾರದ ಮೂಲಕ ಮೂರು ತಿಂಗಳಲ್ಲಿ ಕಲ್ಯಾಣ ಮಂಟಪ ಒದಗಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಡಿವಾಳಪ್ಪ ದ್ಯಾಪುರ,ಬಸವರಾಜ ತಾಳಿಕೋಟಿ, ಸಂತೋಷ ಬಿರಾದಾರ, ಮಲ್ಲಪ್ಪ ಮಾದರ, ಸದಾಶಿವ ಕಂನ್ಷೆ , ಭೀಮಾಶಂಕರ ಕಾಮನಕೇರಿ,
ಶಂಕರಗೌಡ ಕೊಳುರ, ನಿಂಗನಗೌಡ ಬಿರಾದಾರ, ಜ್ಯೋತಿಬಾ ಕಂನ್ಷೆ , ಈರನಗೌಡ ಪಾಟೀಲ, ರಾಜು ಮದರಖಾನ, ನಾಡಗೌಡ ಬಿರಾದಾರ, ಗುರಪ್ಪ ವಾಲಿಕಾರ, ಹಣಮಂತ್ರಾಯ ಕಂದಗನೂರ, ಸಿದ್ದರಾಮ ವಾಲಿಕಾರ, ಬೋಜು ಹದರಿ, ಈಶ್ವನಾಥ ಪುರದಾಳ, ಕೆಂಚಪ್ಪ ಮಾದರ ಪಾಲ್ಗೊಂಡಿದ್ದರು. ಶಿಕ್ಷಕ ಕನ್ನಪ್ಪ ಪೂಜಾರಿ ನಿರೂಪಿಸಿ ವಂದಿಸಿದರು.
ವರದಿ:- ರಾಘವೇಂದ್ರ ಭಜಂತ್ರಿ
Politics
ರಾಜ್ಯದಲ್ಲಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು : ಕೊರೊನಾ ಸಂದರ್ಭದಲ್ಲಿ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸುವ ರಾಜ್ಯ ಸರ್ಕಾರ ಆಯಾ ಕಟ್ಟಿನಲ್ಲಿದ್ದ ಕೆಲವು ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದೆ. ಅನ್ ಲಾಕ್ ಸುಳಿವು ದೊರೆಯುತ್ತಿದ್ದಂತೆ ಸರ್ಕಾರ 12 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರನ್ನು ಬೆಂಗಳೂರು ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಉಡುಪಿಯಲ್ಲಿ ಕರಾವಳಿ ಭದ್ರತಾ ಪೊಲೀಸ್ ಪಡೆಯ ಎಸ್‍ಪಿಯಾಗಿದ್ದ ಆರ್.ಚೇತನ್ ಅವರನ್ನು ಮೈಸೂರು ಎಸ್‍ಪಿಯಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಲಾಗಿದೆ.
ಕೋಲಾರ ಎಸ್‍ಪಿಯಾಗಿದ್ದ ಕಾರ್ತಿಕ್ ರೆಡ್ಡಿಯವರನ್ನು ಬೆಂಗಳೂರಿನ ವೈರ್‍ಲೆಸ್ ವಿಭಾಗಕ್ಕೆ, ಸಿಐಡಿ ಎಸ್‍ಪಿಯಾಗಿದ್ದ ರಾಹುಲ್ ಕುಮಾರ್ ಶಹಪೂರ್‍ವಾಡ್ ಅವರನ್ನು ತುಮಕೂರು ಎಸ್‍ಪಿಯಾಗಿ ವರ್ಗಾಯಿಸಲಾಗಿದೆ.
Politics
ಪ್ರಯಾಣಿಕರ ಸುರಕ್ಷತೆಗಾಗಿ ಸರ್ಕಾರಿ ಬಸ್ ಗಳಲ್ಲಿ ಹೊಸ ತಂತ್ರಜ್ಞಾನ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಇದೇ ಮೊದಲ ಬಾರಿಗೆ ಬಸ್ಸುಗಳಲ್ಲಿ ಎ.ಐ ಟೆಕ್ನಾಲಜಿ ಅಳವಡಿಸುವ ಮಹತ್ವದ ಯೋಜನೆ ಆರಂಭಿಸಲಾಗಿದೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಕುರಿತು ಫೇಸ್ ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. Artificial intelligence (AI) ತಂತ್ರಜ್ಞಾನ ಅಳವಡಿಸುವ ಮಹತ್ವದ ಯೋಜನೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 1044 ಬಸ್‌ಗಳಿಗೆ ಇದನ್ನು ಅಳವಡಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ
-
Politics3 weeks ago
ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಎನ್. ಎಚ್.ಶಿವಶಂಕರ್ ರೆಡ್ಡಿ
-
Politics3 weeks ago
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
-
ಸುದ್ದಿ3 weeks ago
ಹರಳಕೆರೆ ಗ್ರಾಮದಲ್ಲಿ ಹಸುವನ್ನು ಬಲಿತೆಗೆದುಕೊಂಡ ಚಿರತೆ : ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
-
ಕೊರೊನಾ3 weeks ago
ವಿದುರಾಶ್ವತ್ಥದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ವಿತರಣೆ