Connect with us
Ad Widget

ಸುದ್ದಿ

ದಿ.ಮಾದೇವಪ್ಪ ದೈಹಿಕ ಶಿಕ್ಷಕರು 6ನೇ ವರ್ಷದ ಭಾವಪೂರ್ಣ ಶ್ರದ್ಧಾಂಜಲಿ

Published

on

ಮಸ್ಕಿ :- ತಾಲೂಕಿನ ಬಳಗನೂರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಹದೇವಪ್ಪ ದೈಹಿಕ ಶಿಕ್ಷಕರ ಅಭಿಮಾನಿ ಬಳಗದಿಂದ ಮಹದೇವಪ್ಪ ದೈಹಿಕ ಶಿಕ್ಷಕರ 6ನೇ ವರ್ಷದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಳಗಾನೂರಿನ ವಿರಕ್ತಮಠದ ಸಿದ್ಧಬಸವ ಮಹಾಸ್ವಾಮಿಗಳು ಹಾಗೂ ಪ್ರಸಾದಿ ಮಠದ ಬಸಲಿಂಗಯ್ಯ ಸ್ವಾಮಿಗಳು ಹಾಗೂ ದೈಹಿಕ ಶಿಕ್ಷಕ ಬಳಗದವರು ಹಾಗೂ ಊರಿನ ಹಿರಿಯರು ಹಾಗೂ ಮಹದೇವಪ್ಪ ದೈಹಿಕ ಶಿಕ್ಷಕರ ಶಿಷ್ಯಂದಿರು ಭಾಗಿಯಾಗಿದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿರುವ ಪ್ರದೀಪ್ ಕುಮಾರ್ : ಹುಟ್ಟುಹಬ್ಬಕ್ಕೆ ಶುಭಕೋರಿದ ಗೆಳೆಯರ ಬಳಗ

Published

on

ಚನ್ನಪಟ್ಟಣ : ವಿದ್ಯಾರ್ಥಿದೆಸೆಯಿಂದಲೇ ಹೋರಾಟದ ಗೀಳನ್ನು ಮೈಗೂಡಿಸಿಕೊಂಡು, ವಿದ್ಯಾರ್ಥಿಗಳ ಆಶೋತ್ತರ ಈಡೇರಿಕೆ ಗಳಿಗಾಗಿ ಪ್ರತಿಭಟನೆ ಹಾಗೂ ಸಾಮಾಜಿಕ ಹೋರಾಟಗಳ ಮೂಲಕ ಹಾಗೂ ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳನ್ನು ಸಮಾಜಕ್ಕೆ ಹಂಚುತ್ತ ಮತ್ತು ಹಲವಾರು ವ್ಯಕ್ತಿತ್ವ ಶಿಬಿರಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿದ್ದಾರೆ ಅಪ್ಪಗೆರೆ ಪ್ರದೀಪ್ ಕುಮಾರ್.

ಕನ್ನಡ, ಸಮಾಜಶಾಸ್ತ್ರ, ಮನಶಾಸ್ತ್ರ ಹಾಗೂ ಗ್ರಾಮೀಣ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದ ಅಂಬೇಡ್ಕರ್ ಜಾನಪದ ಹೀಗೆ ಇನ್ನೂ ಹಲವು ವಿಭಾಗದಲ್ಲಿ ಡಿಪ್ಲೊಮೋ ಗಳಿಸಿದ್ದು ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಗ್ರಾಮೀಣ ಅಭಿವೃದ್ಧಿ ಅಧ್ಯಯನದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು 33 ವರ್ಷ ಕಳೆದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಬುದ್ಧ ಬಸವ ಅಂಬೇಡ್ಕರ್ ರವರಿಗೆ ನಮನಗಳನ್ನು ತಿಳಿಸುವ ಮೂಲಕ ಆಚರಿಸಿಕೊಂಡಿದ್ದಾರೆ.
ಈ ಸುಸಂದರ್ಭದಲ್ಲಿ ಮಹೇಶ ಮೌರ್ಯ, ಗ್ರಾಪಂ ಮಾಜಿ ಸದಸ್ಯ ಶಿವಮೂರ್ತಿ, ಶಿಕ್ಷಣ ಇಲಾಖೆ ಶಶಿಕುಮಾರ್, ರಾಜೇಶ್ ಯುವ ಮುಖಂಡರಾದ ಮಂಜುನಾಥ್, ಮನೋಜ್ ,ವಿನೋದ್, ಕುಮಾರ್ ,ಶ್ರೀನಿವಾಸ್, ನಾಗೇಶ್, ಕೃಷ್ಣಪ್ಪ ,ಲೋಕೇಶ್ ಸತೀಶ್ ಗೌಡ ಹಾಗೂ ಗೆಳೆಯ ಬಳಗ ಇವರ ಜನ್ಮದಿನಕ್ಕೆ ಶುಭಕೋರಿದ್ದಾರೆ.

Continue Reading

ಸುದ್ದಿ

ತರಬೇತಿ ಹಾಗೂ ಸಿಮ್ಯೂಲೇಷನ್ ಕಾರ್ಯಾಗಾರಕ್ಕೆ ನಿಮ್ಹಾನ್ಸ್ ನಲ್ಲಿ ಚಾಲನೆ

Published

on

ಬೆಂಗಳೂರು : ಕೋವಿಡ್ ಮೂರನೆಯ ಅಲೆಯ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕೋವಿಡ್-19 ಸೋಂಕು ನಿರ್ವಹಣೆಯ ಕುರಿತು ಬಿ ಬಿ ಎಂ ಪಿ ವೈದ್ಯರಿಗೆ ಮತ್ತು ಮಕ್ಕಳ ತಜ್ಞರಿಗೆ ರಾಜ್ಯದ ಮೊಟ್ಟ ಮೊದಲ ತರಬೇತಿ ಹಾಗೂ ಸಿಮ್ಯೂಲೇಷನ್ ಕಾರ್ಯಾಗಾರಕ್ಕೆ ನಿಮ್ಹಾನ್ಸ್ ನಲ್ಲಿ ಚಾಲನೆ ನೀಡಲಾಯಿತು. ಮೂರನೇ ಅಲೆ‌ ಮಕ್ಕಳಿಗೆ ಅಪಾಯಕಾರಿಯಾಗಿರಲಿದೆ ಎಂಬ‌ ಅಭಿಪ್ರಾಯ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆಯ ದೃಷ್ಟಿಯಿಂದ ವೈದ್ಯರು ಸಾಕಷ್ಟು ಅಧ್ಯಯನ‌ ನಡೆಸಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕೆಂದು ಕರೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಆರ್, ಅಶೋಕ್ ರವರು, ಬಿ ಬಿ ಎಮ್ ಪಿ ಮುಖ್ಯ ಆಯುಕ್ತರಾದ ಶ್ರೀ ಗೌರವ ಗುಪ್ತ ಹಾಗೂ ಇತರ ತಜ್ಞ ವೈದ್ಯರು ಉಪಸ್ಥಿತರಿದ್ದರು.

Continue Reading

ರಾಜ್ಯ

ಪರಿಸರ ಉಳಿಯುವಿಕೆಗಾಗಿ ಆಕ್ಸಿಜನ್ ಚ್ಯಾಲೆಂಜ್ ಎಂಬ ಕಾರ್ಯಕ್ರಮವನ್ನು ದೇಶಾದ್ಯಂತ ABVP ಪ್ರಾರಂಭ

Published

on

ಮಸ್ಕಿ :- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಸ್ಕಿ ವತಿಯಿಂದ ಜೂನ್ 5 ಪರಿಸರ ದಿನಾಚರಣೆಯಿಂದ ಪರಿಸರ ಉಳಿಯುವಿಕೆಗಾಗಿ ಆಕ್ಸಿಜನ್ ಚ್ಯಾಲೆಂಜ್ ಎಂಬ ಕಾರ್ಯಕ್ರಮವನ್ನು ದೇಶಾದ್ಯಂತ ABVP ಪ್ರಾರಂಭಿಸಿದ್ದು ಪ್ರತಿಯೊಬ್ಬ ಕಾರ್ಯಕರ್ತರು 5 ಸಸಿ ನೆಡುವುದರ ಜೊತೆ ಜೊತೆಗೆ ತನ್ನ ಗೆಳೆಯರಿಗೂ ಕೂಡ ಆ ಚಾಲೆಂಜ್ ಮಾಡುವುದರ ಮೂಲಕ ಹೆಚ್ಚು ಸಸಿಗಳನ್ನು ನೆಡುವಲ್ಲಿ ಹೆಜ್ಜೆ ಹಾಕಿದ್ದೇವೆ.

ಲಾಕ್ ಡೌನ್ ಸಂಧರ್ಭದಲ್ಲಿ ಕರೋನಾ ಮಹಾಮಾರಿಯ ಮದ್ಯೆ ಆಕ್ಸಿಜನ್ ಸಮಸ್ಯೆಯಾಗಿದ್ದು ಮುಂದಿನ ದಿನಮಾನಗಳಲ್ಲಿ ಈ ಸಮಸ್ಯೆಯಾಗಬಾರದೆಂದು ABVP ಕರ್ನಾಟಕವು ಈ ಚಾಲೆಂಜ್ ಅನ್ನು ಮಾಡಿ ರಾಜ್ಯಾದ್ಯಂತ 5 ಲಕ್ಷ ಸಸಿ ನೆಡುವುದರತ್ತ ಹೆಜ್ಜೆ ಹಾಕಿದ್ದೇವೆ ಅದರ ಅಡಿಯಲ್ಲಿ ಮಸ್ಕಿ ಶಾಖೆಯಲ್ಲಿಯೂ ಕೂಡ ಆ ಕಾರ್ಯಕ್ರಮವನ್ನು ಕಾರ್ಯಗತಗೊಳಸಿದ್ದೇವೆ ಎಂದು :-
ಮಹೇಶ ABVP ಪದಾಧಿಕಾರಿಗಳು ಮಸ್ಕಿ ತಿಳಿಸಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್