ರಾಜ್ಯ
ಪರಿಸರ ಉಳಿಯುವಿಕೆಗಾಗಿ ಆಕ್ಸಿಜನ್ ಚ್ಯಾಲೆಂಜ್ ಎಂಬ ಕಾರ್ಯಕ್ರಮವನ್ನು ದೇಶಾದ್ಯಂತ ABVP ಪ್ರಾರಂಭ
ಮಸ್ಕಿ :- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಸ್ಕಿ ವತಿಯಿಂದ ಜೂನ್ 5 ಪರಿಸರ ದಿನಾಚರಣೆಯಿಂದ ಪರಿಸರ ಉಳಿಯುವಿಕೆಗಾಗಿ ಆಕ್ಸಿಜನ್ ಚ್ಯಾಲೆಂಜ್ ಎಂಬ ಕಾರ್ಯಕ್ರಮವನ್ನು ದೇಶಾದ್ಯಂತ ABVP ಪ್ರಾರಂಭಿಸಿದ್ದು ಪ್ರತಿಯೊಬ್ಬ ಕಾರ್ಯಕರ್ತರು 5 ಸಸಿ ನೆಡುವುದರ ಜೊತೆ ಜೊತೆಗೆ ತನ್ನ ಗೆಳೆಯರಿಗೂ ಕೂಡ ಆ ಚಾಲೆಂಜ್ ಮಾಡುವುದರ ಮೂಲಕ ಹೆಚ್ಚು ಸಸಿಗಳನ್ನು ನೆಡುವಲ್ಲಿ ಹೆಜ್ಜೆ ಹಾಕಿದ್ದೇವೆ.
ಲಾಕ್ ಡೌನ್ ಸಂಧರ್ಭದಲ್ಲಿ ಕರೋನಾ ಮಹಾಮಾರಿಯ ಮದ್ಯೆ ಆಕ್ಸಿಜನ್ ಸಮಸ್ಯೆಯಾಗಿದ್ದು ಮುಂದಿನ ದಿನಮಾನಗಳಲ್ಲಿ ಈ ಸಮಸ್ಯೆಯಾಗಬಾರದೆಂದು ABVP ಕರ್ನಾಟಕವು ಈ ಚಾಲೆಂಜ್ ಅನ್ನು ಮಾಡಿ ರಾಜ್ಯಾದ್ಯಂತ 5 ಲಕ್ಷ ಸಸಿ ನೆಡುವುದರತ್ತ ಹೆಜ್ಜೆ ಹಾಕಿದ್ದೇವೆ ಅದರ ಅಡಿಯಲ್ಲಿ ಮಸ್ಕಿ ಶಾಖೆಯಲ್ಲಿಯೂ ಕೂಡ ಆ ಕಾರ್ಯಕ್ರಮವನ್ನು ಕಾರ್ಯಗತಗೊಳಸಿದ್ದೇವೆ ಎಂದು :-
ಮಹೇಶ ABVP ಪದಾಧಿಕಾರಿಗಳು ಮಸ್ಕಿ ತಿಳಿಸಿದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
ಮಾಹಿತಿ
ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್
ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ : ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ
ಬೆಂಗಳೂರು : ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ, ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ, ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ ಮಾಡಿದೆ. ಆಗಸ್ಟ್ 28, 29ರಂದು ನಡೆಸಲು ನಿರ್ಧರಿಸಿದೆ.
ಈ ಕುರಿತಂತೆ ಇಂದು ಸಿಇಟಿ ವಿಚಾರವಾಗಿ ನಡೆದಂತ ಸಭೆಯ ನಂತ್ರ, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಸಿಇಟಿ ಸಭೆ ವಿಚಾರದಲ್ಲಿ ಸಭೆಯನ್ನು ಕರೆಯಲಾಗಿತ್ತು.
ಈ ಸಭೆಯಲ್ಲಿ ವಿವಿಧ ಅಧಿಕಾರಿಗಳು, ತಜ್ಞರು ಭಾಗವಹಿಸಿದ್ದರು. ಸಚಿವ ಸುರೇಶ್ ಕುಮಾರ್ ಸಲಹೆಯನ್ನು ನೀಡಿ, ದ್ವಿತೀಯ ಪಿಯು ಅಂಕಗಳನ್ನು ಈ ಬಾರಿ ಪರಿಗಣಿಸದಂತೆ ಮನವಿ ಮಾಡಿದ್ದರು. ಸಿಇಟಿ ಆಧಾರದ ಮೇಲೆ RANK ನೀಡುವ ಕಾರ್ಯ ನಡೆಯಬೇಕು ಎಂಬುದಾಗಿ ತಿಳಿಸಿದ್ದರು. ಈ ವಿಚಾರವಾಗಿ ವಿಸೃತವಾಗಿ ಚರ್ಚೆ ಮಾಡಿ, ಸಂಬಂಧ ಪಟ್ಟ ಎಲ್ಲಾ ಕೌನ್ಸಿಲ್ ಗಳಿಗೆ ಪತ್ರವನ್ನು ಬರೆದು, ಈ ಬಗ್ಗೆ ರಿಲ್ಯಾಕ್ಸೇಷನ್ ಕೊಡುವಂತೆ ಕೋರಲಾಗುತ್ತದೆ ಎಂದರು
ರಾಜ್ಯ
ಬಿ.ಜೆ.ಎಸ್ – ಮಿಷನ್ ಆಕ್ಸಿಜನ್ ಬ್ಯಾಂಕ್ ಉದ್ಘಾಟನೆ
ಬೆಂಗಳೂರು : ಭಾರತೀಯ ಜೈನ್ ಸಂಘಟನೆ, ಬೆಂಗಳೂರು ಇವರು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಒದಗಿಸುತ್ತಿರುವ ಬಿ.ಜೆ.ಎಸ್ – ಮಿಷನ್ ಆಕ್ಸಿಜನ್ ಬ್ಯಾಂಕ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಉದ್ಘಾಟಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಆರೋಗ್ಯ ಇಲಾಖೆ ಸಚಿವ ಡಾ|| ಕೆ.ಸುಧಾಕರ್, ಭಾರತೀಯ ಜೈನ ಸಂಘಟನೆ ಸಂಸ್ಥಾಪಕ ಶಾಂತಿಲಾಲ್ ಮುತ್ತ, ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಲಂಕರ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಉಪಸ್ಥಿತರಿದ್ದರು.
ರಾಜ್ಯ
ಉತ್ತಮ ಮುಂಗಾರು ಮಳೆ, ಗರಿಗೆದರಿದ ಕೃಷಿ ಚಟುವಟಿಕೆಗಳು
ಬಾಗೇಪಲ್ಲಿ: ತಾಲ್ಲೂಕಿನಾದ್ಯಂತ ಸತತ ಐದು ವರ್ಷಗಳಿಂದ ಅನಾವೃಷ್ಟಿಯಿಂದ ರೈತಾಪಿ ಜನರು ಅಕ್ಷರಶಃ ನಲುಗಿ ಹೋಗಿತ್ತು. ಕಳೆದ ಕೆಲ ದಿನಗಳಿಂದ ಮಳೆ ಬೀಳುತ್ತಲಿದ್ದು
ಮುಂಗಾರು ಪೂರ್ವದಲ್ಲೇ ಮಳೆ ಚುರುಕುಗೊಂಡಿದೆ. ಹೊಸ ಭರವಸೆಯೊಂದಿಗೆ ರೈತರು ಮತ್ತೆ ಜಮೀನುಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಬಿತ್ತನೆಗೆ ಸಜ್ಜುಗೊಳ್ಳುತ್ತಿದ್ದಾರೆ.
ಈ ನಡುವೆ ಆವರಿಸಿರುವ ಕೊರೊನಾ ಆತಂಕದ ಮಧ್ಯೆಯೇ ರೈತರು ಕೃಷಿ ಚಟುಕವಟಿಕೆಗಳಿಗೆ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ, ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ತಾಲೂಕಿನಲ್ಲಿ ಮಳೆ ಚುರುಕೊಂಡಿದ್ದು, ಕೃಷಿಕರಲ್ಲಿ ಹೊಸ ಚೈತನ್ಯ ಮೂಡಿಸಿದೆ.
ತಾಲ್ಲೂಕು ಮುಂಗಾರಿಗೆ ಆಗಬಹುದಾದ ಬಿತ್ತನೆ ಪ್ರಮಾಣಕ್ಕೆ ತಕ್ಕಂತೆ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಶೇಂಗಾ, ಸೂರ್ಯಕಾಂತಿ, ಹೈಬ್ರಿಡ್ ಜೋಳ, ಮುಸುಕಿನ ಜೋಳ, ಸಜ್ಜೆ, ಹೆಸರು, ತೊಗರಿ, ಇನ್ನೂ ಮುಂತಾದ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ.
ತಾಲ್ಲೂಕಿನ ಮುಂದಿನ ಮಳೆ ಪ್ರಮಾಣ ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಮತ್ತಷ್ಟು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗುವುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕೆಂದು ಬಾಗೇಪಲ್ಲಿ ತಾಲ್ಲೂಕು ಕೃಷಿ ನಿರ್ದೇಶಕರಾದ ಕೆ.ಸಿ.ಮಂಜುನಾಥ ಮನವಿ ಮಾಡಿದ್ದಾರೆ.
ರೈತ ಸಂಪರ್ಕ ಕೇಂದ್ರಗಳು ರೈತರ ಅನುಕೂಲಕ್ಕಾಗಿ ತಾಲೂಕಿನಾದ್ಯಂತ 6 ಕಡೆ ರೈತ ಸಂಪರ್ಕ ವಿತರಣಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ ಬಾಗೇಪಲ್ಲಿ ಪಟ್ಟಣದ ಬಾಗೇಪಲ್ಲಿ ಕಸಬಾ, ಗೂಳೂರು, ಪಾತಪಾಳ್ಯ, ಮಿಟ್ಟೇಮರಿ, ಚೇಳೂರು ಚಾಕವೇಲು ಗ್ರಾಮದಲ್ಲಿ ಬಿತ್ತನೆ ಬೀಜಗಳ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಬಾಗೇಪಲ್ಲಿ ತಾಲ್ಲೂಕು ಕೃಷಿ ನಿರ್ದೇಶಕರಾದ ಕೆ.ಸಿ.ಮಂಜುನಾಥ ತಿಳಿಸಿದ್ದಾರೆ.
ಆದರೂ ಕೆಲ ರೈತ ಸಂಪರ್ಕ ಕೇಂದ್ರಗಳಲ್ಲಿ ಸರಿಯಾಗಿ ಬಿತ್ತನೆ ಬೀಜ ವಿತರಣೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
-
Politics3 weeks ago
ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಎನ್. ಎಚ್.ಶಿವಶಂಕರ್ ರೆಡ್ಡಿ
-
Politics3 weeks ago
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
-
ಸುದ್ದಿ3 weeks ago
ಹರಳಕೆರೆ ಗ್ರಾಮದಲ್ಲಿ ಹಸುವನ್ನು ಬಲಿತೆಗೆದುಕೊಂಡ ಚಿರತೆ : ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
-
ಕೊರೊನಾ3 weeks ago
ವಿದುರಾಶ್ವತ್ಥದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ವಿತರಣೆ