Connect with us
Ad Widget

ಸುದ್ದಿ

ಅಕ್ರಮ ಅಕ್ಕಿ ಮಾರಾಟ ಕ್ರಮಕ್ಕೆ – ಇಮ್ರಾನ್ ಬಡೇಸಾಬ್ ಒತ್ತಾಯ

Published

on

ರಾಯಚೂರು ಅ 27- ಜಿಲ್ಲೆಯಾದ್ಯಂತ ಬಡ ಕುಟುಂಬಗಳಿಗೆ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಯನ್ನು ಕಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಅಲ್ದಳ್ ವೀರಭದ್ರಪ್ಪ ಗೌಡ ಹಾಗೂ ಹಿಂಬಾಲಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕನ್ನಡಿಗರ ರಕ್ಷಣಾ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಸ್ಥಾನಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಮ್ರನ್ ಬಡೇಸಾಬ್ ಮಾತನಾಡಿ ರಾಜ್ಯದಲ್ಲಿ ಬಡವರು, ನಿರ್ಗತಿಕರು, ಕೂಲಿಕಾರ್ಮಿಕರ, ಬಡ ಕುಟುಂಬಗಳು ಹಸಿವಿನಿಂದ ಬಳುಲುಬಾರದು ಎಂದು ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಅನ್ನಭಾಗ್ಯ ಅಕ್ಕಿಯನ್ನು ರಾಜಕೀಯ ಬೆಂಬಲದಿಂದ ಅಲ್ದಳ್ ವೀರಭದ್ರಪ್ಪ ಗೌಡ ಅಕ್ಕಿಯನ್ನು ಹಿಂಬಾಲಕರಿಂದ ಜಿಲ್ಲೆಯಾದ್ಯಂತ ಗೋದಾ ಮುಗಳಿಂದ ನೇರವಾಗಿ ಕಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಗರದ ಗದ್ವಾಲ್ ರಸ್ತೆಯಲ್ಲಿರುವ ರೇಸ್ ಮಿಲ್ ಗಳು ಮತ್ತು ಇನ್ನಿತರ ರೇಸ್ ಮಿಲ್ ಗಳಲ್ಲಿ ಅಕ್ಕಿಯನ್ನು ಪಾಲಿಸ್ ಮಾಡಿ ಅಕ್ರಮ ಹೊರ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ, ವೀರಭದ್ರಪ್ಪ ಗೌಡ ಮತ್ತು ಆತನ ಕುಟುಂಬಕ್ಕೆ ಸೇರಿದ ಎರಡು ರೇಸ್ ಮಿಲ್ ಗಳಲ್ಲಿ ನೇರವಾಗಿ ಗೋದಾ ಮಿನಿಂದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಂಚಲಾಪೂರ್ ರಸ್ತೆಯಲ್ಲಿರುವ ಕೆಲವು ರೇಸ್ ಮಿಲ್ ಗಳಲ್ಲಿ ಮತ್ತು ಈ ಅನ್ನಭಾಗ್ಯ ಯೋಜನೆ ಆರಂಭದಿಂದಲೂ ಇಲ್ಲಿತನಕ ಅಕ್ರಮ ದಂಧೆಯಲ್ಲಿ ತೊಡಗಿವೆ. ಜಿಲ್ಲೆಯ ಮಾನ್ವಿ, ದೇವದುರ್ಗ, ಸಿಂಧನೂರು, ಲಿಂಗಸುಗೂರು, ಮತ್ತು ರಾಯಚೂರು ನಗರದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಕಳಸಂತೆಯಲ್ಲಿ ಮಾರಾಟವಾಗುತ್ತವೆ.ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೂರು ನೀಡಿದ್ದರು ಆದರೆ ಯಾವುದೇ ಕ್ರಮ ವಹಿಸಿಲ್ಲ ಕೂಡಲೇ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಂಡವರನ್ನು ಬಂಧಿಸಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿ ಕೊಳ್ಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ಇಮ್ರಾನ್ ಬಡೇಸಾಬ್, ಹೈ. ಕ. ಮಹಿಳಾ ಅಧ್ಯಕ್ಷರು ಕುಮಾರಿ ಜ್ಯೋತಿ ಗೌಡ, ಅಂಬೇಡ್ಕರ್ ದಲಿತ ಸೇವಾ ಸಂಘ ಜಿಲ್ಲಾಧ್ಯಕ್ಷರು ಎಂ.ನರಸಿಂಹ, ಕರ್ನಾಟಕ ರಾಜ್ಯದ ಲೆಜೆಂಡ ಟಿಪ್ಪು ಸುಲ್ತಾನ್ ಸಂಘ ರಾಜ್ಯಾಧ್ಯಕ್ಷರು ಸೈಯದ್ ರಶೀದ್, ಮಹಿಳಾ ಜಿಲ್ಲಾ ಅಧ್ಯಕ್ಷರು ಸುಷ್, ಉಪಾಧ್ಯಕ್ಷ ಇಂದಿರಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ: ದುರ್ಗೇಶ್ ಬೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಸೋಮನಾಥಪುರ ಗ್ರಾ.ಪಂ.ಅಧ್ಯಕ್ಷರಾಗಿ ರತ್ನಮ್ಮ ,ಉಪಾಧ್ಯಕ್ಷರಾಗಿ ಬಿ.ಎನ್.ಈಶ್ವರಮ್ಮ ಆಯ್ಕೆ

Published

on

ಬಾಗೇಪಲ್ಲಿ: ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ರತ್ನಮ್ಮ ಹಾಗೂ ಉಪಾಧ್ಯಕ್ಷೆಯಾಗಿ ಈಶ್ವರಮ್ಮ. ಬಿ.ಎನ್ ಆಯ್ಕೆಯಾಗಿದ್ದಾರೆ.

ಪಂಚಾಯಿತಿ ಆವರಣದಲ್ಲಿ ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ(ಮಹಿಳೆ)ಕ್ಕೆ ಮೀಸಲಾಗಿ‌ತ್ತು.

ಸೋಮನಾಥಪುರ ಒಟ್ಟು 16 ಸದಸ್ಯರು ಇದ್ದು
ಅದ್ಯಕ್ಷ ಸ್ಥಾನಕ್ಕೆ ರತ್ನಮ್ಮ ಅವರು 8 ಮತ ಪಡೆದರೆ, ಪ್ರತಿಸ್ಪರ್ಧಿ 7 ಮತಗಳನ್ನು ಪಡೆದು ಒಂದು ಮತ ಅಮಾನ್ಯವಾಗಿದೆ. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿ.ಎನ್.ಈಶ್ವರಮ್ಮ 9 ಮತ ಹಾಗೂ ಪ್ರತಿಸ್ಪರ್ಧಿ7 ಮತ ಪಡೆದರು. ಕೊನೆಯ ಘಳಿಗೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ಮಹಿಳೆ ರತ್ನಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಬಿ.ಎನ್.ಈಶ್ವರಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳಾದ ಡಾ.ನೊವೇಶ್ ಕುಮಾರ್ ಉಪ ಚುನಾವಣೆ ಅಧಿಕಾರಿಗಳಾದ ಶಿವಪ್ಪ ರವರು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ರಾಚವಾರಿಪಲ್ಲಿ‌ ಕೃಷ್ಣಾರೆಡ್ಡಿ, ಸೀಮನ್ನಗಾರಿಪಲ್ಲಿ ಉತ್ತರೆಡ್ಡಿ, ಎಂ.ವಿ.ರಮಣ ರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

Continue Reading

ಸುದ್ದಿ

ಕಲಾವಿದ ಅಯ್ಯಪ್ಪ ಬಡಿಗೇರ ಇವರಿಂದ ಜನಪದ ಕಾರ್ಯಕ್ರಮ

Published

on

ಕುಷ್ಟಗಿಯ ಶಾಖಾಪೂರ ರಸ್ತೆಯ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ನೆಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಶ್ರೀ ಮಂಜುನಾಥ ಗ್ರಾಮೀಣ ವಿವಿದೋದ್ಧೇಶಗಳ ಅಭಿವೃದ್ಧಿ ಸಾಂಸ್ಕೃತಿಕ ಕಲಾ‌ ಸಂಸ್ಥೆ (ರಿ)ನೆರಬೆಂಚಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜನಪದ ಕಾರ್ಯಕ್ರಮವನ್ನು ಕಲಾವಿದ ಅಯ್ಯಪ್ಪ ಬಡಿಗೇರ ನೆಡೆಸಿಕೊಟ್ಟರು.

ಪುರಸಭೆ ಸದಸ್ಯೆ ಶ್ರೀಮತಿ ಮೋದನಬಿ ಹುಸನಸಾಬ ಯಲಬುರ್ಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೋಹನಲಾಲ್ ಜೈನ್ ಕಾರ್ಯಕ್ರಮವನ್ನು ಜೋತಿ ಬೆಳಗಿಸುವ ಮೂಲಕ ಕಾರ್ಯಮವನ್ನು ಕುರಿತು ಮಾತನಾಡಿ ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಪ್ರೋತ್ಸಾಹಿಸುವಂತಹ ಪ್ರತಿಯೊಬ್ಬ ನಾಗರಿಕರಲ್ಲಿ ಬರಬೇಕಾಗಿದ್ದು ಕಲಾವಿದರು ತಮ್ಮ ಜೀವನಕ್ಕಾಗಿ ಅನೇಕ ಹಾಡುಗಳನ್ನು ಹಾಡುತ್ತ ಈ ದೇಶದ ಸಂಸ್ಕೃತಿಯನ್ನು ಉಳಿಸಲು ಮತ್ತು ನಮ್ಮ ನಾಡಿನ ಸಂಸ್ಕೃತಿ ಪರಂಪರೆ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಶೋಕ ಕಮ್ಮಾರ, ಸಿದ್ಧಪ್ಪ ಬಡಿಗೇರ, ಶರಣಪ್ಪ ಬನ್ನಿಗೊಳ, ಲಲಿತಮ್ಮ ಹಿರೇಮಠ, ಕಲಾವಿದರಾದ ಶೇಷಗಿರಿ ಸೋನಾರ,ಬಸವರಾಜ ಉಪ್ಪಲದಿನ್ನಿ, ಮಲ್ಲನಗೌಡ ಅಗಸಿಮುಂದಿನ್, ದೇವೇಂದ್ರಪ್ಪ ಬಡಿಗೇರ, ಪವಾಡೆಪ್ಪ ಚೌಡ್ಕಿ, ಕೊಳ್ಳಪ್ಪ ಬೂದ, ಶುಖಮುನಿ ಗಡಿಗಿ, ಈರಪ್ಪ ತೋಟದ, ಸಂಗಪ್ಪ ಬಡಿಗೇರ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Continue Reading

ಸುದ್ದಿ

ಗ್ರಾನೈಟ್ ಕ್ವಾರಿ ಮಾಲೀಕರ ಪೂರ್ವಭಾವಿ ಸಭೆ

Published

on

ಮಾನ್ಯ ಡಿ. ಎಸ್.ಪಿ ಗಂಗಾವತಿಯ ಶ್ರೀ ಆರ್. ಎಸ್. ಉಜ್ಜನಕೊಪ್ಪ ಸಾಹೇಬರ ನೇತೃತ್ವದಲ್ಲಿ ಗ್ರಾನೈಟ್ ಕ್ವಾರಿ ಮಾಲೀಕರ ಪೂರ್ವಭಾವಿ ಸಭೆ.

ಕುಷ್ಟಗಿ: ಕುಷ್ಟಗಿ ತಾಲ್ಲೂಕಿನಲ್ಲಿ ಬರುವಂತಹ ಎಲ್ಲಾ ಗ್ರಾನೈಟ್ ಕ್ವಾರಿಯ ಮಾಲೀಕರಿಗೆ ತಿಳಿಸುವುದೇನೆಂದರೆ ಇತ್ತೀಚೆಗೆ ಶಿವಮೊಗ್ಗ ಮತ್ತು ಇತರ ಕಡೆ ಜರುಗಿದ ಪ್ರಕರಣಗಳು ಹಾಗೂ ಪೋಲಿಸ್ ಅಧಿಕಾರಿಗಳು ಕಾನೂನು ಅಡಿಯಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಿದರು.
*) ಗ್ರಾನೈಟ್ ಕ್ವಾರಿಗೆ ಸಂಬಂಧಿಸಿದಂತೆ ಎಲ್ಲಾ ಲೀಜ್ ಮೂಲ ದಾಖಲೆಗಳು ಮತ್ತು ಮೂಲ ದಾಖಲೆಯ 3 ಝರಾಕ್ಸ ಪ್ರತಿಗಳು, ಅಥವಾ ಲೈಸನ್ಸ್ ಪ್ರತಿಗಳು. ಅಥವಾ ಪಹಣಿ ಪತ್ರಿಕೆಗಳು.
*) ಒಂದು ವೇಳೆ ಬ್ಲಾಸ್ಟಿಂಗ್ ಅನುಮತಿ ಇದ್ದರೆ ಅದಕ್ಕೆ ಸಂಬಂಧಿಸಿದಂತೆ ದಾಖಲಾತಿಗಳು.
*) ಸಪ್ಲೈ ಲೈಸನ್ಸ್ ಪ್ರತಿಗಳು.
*) ಮೈನ್ಸ್ ಮ್ಯಾನೇಜರ್ ಸರ್ಟಫಿಕೇಟ್ ಪ್ರತಿ.
*) ಮೈನ್ಸ್ ಪೋರಮನ್ ಸರ್ಟಫಿಕೇಟ್ ಪ್ರತಿ.
*) ಬ್ಲಾಸ್ಟರ್ ಸರ್ಟಿಫಿಕೇಟ್ ಪ್ರತಿ.
*) ಕ್ಯಾಟರ್ಲಿ ರಿಟರ್ನ್ ಕಾಫಿ ಮತ್ತು ಇತರೆ ಯಾವುದಾದರೂ ದಾಖಲಾತಿಗಳು.
*) ಸುರಕ್ಷತಾ ಕ್ರಮ ಕೈಗೊಂಡ ದಾಖಲಾತಿಗಳು.
ಈ ಸಂದರ್ಭದಲ್ಲಿ ಕುಷ್ಟಗಿಯ ಸಿ.ಪಿ.ಐ ಸಾಹೇಬರು ಶ್ರೀ ನಿಂಗಪ್ಪ ಎನ್. ಆರ್, ಕುಷ್ಟಗಿಯ ಪಿ.ಎಸ್.ಐ ತಿಮ್ಮಣ್ಣ ನಾಯಕ, ತಾವರಗೇರ ಪಿ.ಎಸ್.ಐ ಗೀತಾಂಜಲಿ ಸಿಂಧೆ, ಹಾಗೂ ಹನಮಸಾಗರ ಪಿ.ಎಸ.ಐ ಅಶೋಕ ಬೇವೂರು, ಹಾಗೂ ಕುಷ್ಟಗಿ ತಾಲ್ಲೂಕಿನ ಎಲ್ಲಾ ಗ್ರಾನೈಟ್ ಕ್ವಾರಿಯ ಮಾಲೀಕರು ಇದ್ದರು.

           
Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್