ಸುದ್ದಿ
ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಚಿತ್ರ ಕ್ಷಿಪ್ರಾ
“ದಕ್ಷ ನಾಯಕ ನಟನಾಗಿ ನಟಿಸಿರುವ “ಕ್ಷಿಪ್ರಾ ಚಲನಚಿತ್ರ ಬಹಳ ವಿಭಿನ್ನ ,ಸಸ್ಪೆನ್ಸ ,ತ್ರಿಲ್ಲರ್,ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ರವಾನಿಸುವ ಕಥೆಯಾಗಿದ್ದು ಈ ಸಿನಿಮಾ ದಲ್ಲಿ ನಾಯಕನಾಗಿ ನಟಿಸಿರುವ ದಕ್ಷ ನಟನೆ ನಲ್ಲಿ ಪ್ರಭುದ್ದತ್ತೆಯನ್ನು ಹೊಂದಿದ್ದು ಇಂಡಸ್ಟ್ರಿಯಲ್ಲಿ ಚಾಪು ಮೂಡಿಸುವ ಎಲ್ಲಾ ಲಕ್ಷಣಗಳು ಕಾಣುತ್ತವೆ ಹಾಗೂ ಡೈರಕ್ಟರ್ ಪ್ರೆಕ್ಷರನ್ನು ಹಿಡಿದು ಕುರಿಸುವಂತಹ ಚಾಲಕ್ಯತನವನ್ನು ಹೊಂದಿದ್ದಾರೆ.ಸಿನಿಮಾದಲ್ಲಿ ನಟಿಸಿರುವ ನಾಯಕಿರು ಬಹಳ ಸೊಗಸಾಗಿ ನಟನೆಯನ್ನು ಮಾಡಿದ್ದಾರೆ ಈ ಚಲನಚಿತ್ರ ಬಹಳ ದೊಡ್ಡ ಮಟ್ಟದಲ್ಲಿ ಯಶಸ್ವಿ ಯಾಗಿ ಶತದಿನಗೋಳಿಂದಗೆ ದಾಖಲೆಗಳನ್ನು ಬರೆಯಲೆಂದು ಕನಾ೯ಟಕ ದಲಿತ ಜನ ಸೇನೆಯ ದೇವನಹಳ್ಳಿ ಘಟಕದ(ಕಾಕ್ಸಟೌನ್ ಶಂಕರ್ ಅಪ್ಪಿ) (ಮಾರುತಿ ನಗರ ಶಿವು),( ಮಾರುತಿ ನಗರ ಬೋಪಾಲ್),(ದೊಡ್ಡ ಶೀಮನಹಳ್ಳಿ ಮದು) ,( ಇಲತೋರೆ ಮಂಜು ) ಚಲನಚಿತ್ರ ತಂಡಕ್ಕೆ ಶುಭ ಹಾರೈಸಿದರು
ಸುದ್ದಿ
ಸೋಮನಾಥಪುರ ಗ್ರಾ.ಪಂ.ಅಧ್ಯಕ್ಷರಾಗಿ ರತ್ನಮ್ಮ ,ಉಪಾಧ್ಯಕ್ಷರಾಗಿ ಬಿ.ಎನ್.ಈಶ್ವರಮ್ಮ ಆಯ್ಕೆ
ಬಾಗೇಪಲ್ಲಿ: ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ರತ್ನಮ್ಮ ಹಾಗೂ ಉಪಾಧ್ಯಕ್ಷೆಯಾಗಿ ಈಶ್ವರಮ್ಮ. ಬಿ.ಎನ್ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಆವರಣದಲ್ಲಿ ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ(ಮಹಿಳೆ)ಕ್ಕೆ ಮೀಸಲಾಗಿತ್ತು.
ಸೋಮನಾಥಪುರ ಒಟ್ಟು 16 ಸದಸ್ಯರು ಇದ್ದು
ಅದ್ಯಕ್ಷ ಸ್ಥಾನಕ್ಕೆ ರತ್ನಮ್ಮ ಅವರು 8 ಮತ ಪಡೆದರೆ, ಪ್ರತಿಸ್ಪರ್ಧಿ 7 ಮತಗಳನ್ನು ಪಡೆದು ಒಂದು ಮತ ಅಮಾನ್ಯವಾಗಿದೆ. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿ.ಎನ್.ಈಶ್ವರಮ್ಮ 9 ಮತ ಹಾಗೂ ಪ್ರತಿಸ್ಪರ್ಧಿ7 ಮತ ಪಡೆದರು. ಕೊನೆಯ ಘಳಿಗೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ಮಹಿಳೆ ರತ್ನಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಬಿ.ಎನ್.ಈಶ್ವರಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳಾದ ಡಾ.ನೊವೇಶ್ ಕುಮಾರ್ ಉಪ ಚುನಾವಣೆ ಅಧಿಕಾರಿಗಳಾದ ಶಿವಪ್ಪ ರವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ರಾಚವಾರಿಪಲ್ಲಿ ಕೃಷ್ಣಾರೆಡ್ಡಿ, ಸೀಮನ್ನಗಾರಿಪಲ್ಲಿ ಉತ್ತರೆಡ್ಡಿ, ಎಂ.ವಿ.ರಮಣ ರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ಸುದ್ದಿ
ಕಲಾವಿದ ಅಯ್ಯಪ್ಪ ಬಡಿಗೇರ ಇವರಿಂದ ಜನಪದ ಕಾರ್ಯಕ್ರಮ
ಕುಷ್ಟಗಿಯ ಶಾಖಾಪೂರ ರಸ್ತೆಯ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ನೆಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಶ್ರೀ ಮಂಜುನಾಥ ಗ್ರಾಮೀಣ ವಿವಿದೋದ್ಧೇಶಗಳ ಅಭಿವೃದ್ಧಿ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ)ನೆರಬೆಂಚಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜನಪದ ಕಾರ್ಯಕ್ರಮವನ್ನು ಕಲಾವಿದ ಅಯ್ಯಪ್ಪ ಬಡಿಗೇರ ನೆಡೆಸಿಕೊಟ್ಟರು.
ಪುರಸಭೆ ಸದಸ್ಯೆ ಶ್ರೀಮತಿ ಮೋದನಬಿ ಹುಸನಸಾಬ ಯಲಬುರ್ಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೋಹನಲಾಲ್ ಜೈನ್ ಕಾರ್ಯಕ್ರಮವನ್ನು ಜೋತಿ ಬೆಳಗಿಸುವ ಮೂಲಕ ಕಾರ್ಯಮವನ್ನು ಕುರಿತು ಮಾತನಾಡಿ ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಪ್ರೋತ್ಸಾಹಿಸುವಂತಹ ಪ್ರತಿಯೊಬ್ಬ ನಾಗರಿಕರಲ್ಲಿ ಬರಬೇಕಾಗಿದ್ದು ಕಲಾವಿದರು ತಮ್ಮ ಜೀವನಕ್ಕಾಗಿ ಅನೇಕ ಹಾಡುಗಳನ್ನು ಹಾಡುತ್ತ ಈ ದೇಶದ ಸಂಸ್ಕೃತಿಯನ್ನು ಉಳಿಸಲು ಮತ್ತು ನಮ್ಮ ನಾಡಿನ ಸಂಸ್ಕೃತಿ ಪರಂಪರೆ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ ಕಮ್ಮಾರ, ಸಿದ್ಧಪ್ಪ ಬಡಿಗೇರ, ಶರಣಪ್ಪ ಬನ್ನಿಗೊಳ, ಲಲಿತಮ್ಮ ಹಿರೇಮಠ, ಕಲಾವಿದರಾದ ಶೇಷಗಿರಿ ಸೋನಾರ,ಬಸವರಾಜ ಉಪ್ಪಲದಿನ್ನಿ, ಮಲ್ಲನಗೌಡ ಅಗಸಿಮುಂದಿನ್, ದೇವೇಂದ್ರಪ್ಪ ಬಡಿಗೇರ, ಪವಾಡೆಪ್ಪ ಚೌಡ್ಕಿ, ಕೊಳ್ಳಪ್ಪ ಬೂದ, ಶುಖಮುನಿ ಗಡಿಗಿ, ಈರಪ್ಪ ತೋಟದ, ಸಂಗಪ್ಪ ಬಡಿಗೇರ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.
ಸುದ್ದಿ
ಗ್ರಾನೈಟ್ ಕ್ವಾರಿ ಮಾಲೀಕರ ಪೂರ್ವಭಾವಿ ಸಭೆ
ಮಾನ್ಯ ಡಿ. ಎಸ್.ಪಿ ಗಂಗಾವತಿಯ ಶ್ರೀ ಆರ್. ಎಸ್. ಉಜ್ಜನಕೊಪ್ಪ ಸಾಹೇಬರ ನೇತೃತ್ವದಲ್ಲಿ ಗ್ರಾನೈಟ್ ಕ್ವಾರಿ ಮಾಲೀಕರ ಪೂರ್ವಭಾವಿ ಸಭೆ.
ಕುಷ್ಟಗಿ: ಕುಷ್ಟಗಿ ತಾಲ್ಲೂಕಿನಲ್ಲಿ ಬರುವಂತಹ ಎಲ್ಲಾ ಗ್ರಾನೈಟ್ ಕ್ವಾರಿಯ ಮಾಲೀಕರಿಗೆ ತಿಳಿಸುವುದೇನೆಂದರೆ ಇತ್ತೀಚೆಗೆ ಶಿವಮೊಗ್ಗ ಮತ್ತು ಇತರ ಕಡೆ ಜರುಗಿದ ಪ್ರಕರಣಗಳು ಹಾಗೂ ಪೋಲಿಸ್ ಅಧಿಕಾರಿಗಳು ಕಾನೂನು ಅಡಿಯಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಿದರು.
*) ಗ್ರಾನೈಟ್ ಕ್ವಾರಿಗೆ ಸಂಬಂಧಿಸಿದಂತೆ ಎಲ್ಲಾ ಲೀಜ್ ಮೂಲ ದಾಖಲೆಗಳು ಮತ್ತು ಮೂಲ ದಾಖಲೆಯ 3 ಝರಾಕ್ಸ ಪ್ರತಿಗಳು, ಅಥವಾ ಲೈಸನ್ಸ್ ಪ್ರತಿಗಳು. ಅಥವಾ ಪಹಣಿ ಪತ್ರಿಕೆಗಳು.
*) ಒಂದು ವೇಳೆ ಬ್ಲಾಸ್ಟಿಂಗ್ ಅನುಮತಿ ಇದ್ದರೆ ಅದಕ್ಕೆ ಸಂಬಂಧಿಸಿದಂತೆ ದಾಖಲಾತಿಗಳು.
*) ಸಪ್ಲೈ ಲೈಸನ್ಸ್ ಪ್ರತಿಗಳು.
*) ಮೈನ್ಸ್ ಮ್ಯಾನೇಜರ್ ಸರ್ಟಫಿಕೇಟ್ ಪ್ರತಿ.
*) ಮೈನ್ಸ್ ಪೋರಮನ್ ಸರ್ಟಫಿಕೇಟ್ ಪ್ರತಿ.
*) ಬ್ಲಾಸ್ಟರ್ ಸರ್ಟಿಫಿಕೇಟ್ ಪ್ರತಿ.
*) ಕ್ಯಾಟರ್ಲಿ ರಿಟರ್ನ್ ಕಾಫಿ ಮತ್ತು ಇತರೆ ಯಾವುದಾದರೂ ದಾಖಲಾತಿಗಳು.
*) ಸುರಕ್ಷತಾ ಕ್ರಮ ಕೈಗೊಂಡ ದಾಖಲಾತಿಗಳು.
ಈ ಸಂದರ್ಭದಲ್ಲಿ ಕುಷ್ಟಗಿಯ ಸಿ.ಪಿ.ಐ ಸಾಹೇಬರು ಶ್ರೀ ನಿಂಗಪ್ಪ ಎನ್. ಆರ್, ಕುಷ್ಟಗಿಯ ಪಿ.ಎಸ್.ಐ ತಿಮ್ಮಣ್ಣ ನಾಯಕ, ತಾವರಗೇರ ಪಿ.ಎಸ್.ಐ ಗೀತಾಂಜಲಿ ಸಿಂಧೆ, ಹಾಗೂ ಹನಮಸಾಗರ ಪಿ.ಎಸ.ಐ ಅಶೋಕ ಬೇವೂರು, ಹಾಗೂ ಕುಷ್ಟಗಿ ತಾಲ್ಲೂಕಿನ ಎಲ್ಲಾ ಗ್ರಾನೈಟ್ ಕ್ವಾರಿಯ ಮಾಲೀಕರು ಇದ್ದರು.