Connect with us
Ad Widget

ಸುದ್ದಿ

ಕೆರೂರು ಪಟ್ಟಣದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯೋತ್ಸವ

Published

on

ಮುಗ್ಧ ಸಮಾಜವನ್ನು ಪ್ರಬುದ್ಧ ಸಮಾಜವನ್ನಾಗಿಸುವ ಉದ್ದೇಶವೇ ಜಯಂತ್ಯೋತ್ಸವದ ಆಶಯವಾಗಿದೆ. ಜಯಂತಿಗಳು ಜಾತ್ರೆಯಾಗದೇ ಜಾಗೃತಿ ಜಾಥಗಳಾಗಲಿ ಎಂದು ಬಾಗಲಕೋಟೆಯ ಶ್ರೀ  ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ತಿಳಿಸಿದರು.

ಭೋವಿ ವಡ್ಡರ ಸಮಾಜದಿಂದ ಹಮ್ಮಿಕೊಂಡಿದ್ದ ಕೆರೂರು ಪಟ್ಟಣದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯೋತ್ಸವದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು ಸಿದ್ಧರಾಮೇಶ್ವರ ಕಾಯಕ ವರ್ಗದವರ ಆಸ್ಮಿತೆ. ಬದುಕಿನ ಪರಿವರ್ತನೆಗೆ ದರ್ಪಣ ಸಿದ್ದರಾಮರ ಜೀವನ. ಮೌಡ್ಯ ಸಂಪ್ರದಾಯಗಳಿಂದ ಮೌಲ್ಯ ಸಂಪ್ರದಾಯಳಿಗೆ ನಾಂದಿ ಹಾಡಿದವರು. ಜಲಕ್ರಾಂತಿ ಮೂಲಕ ಸಕಲ ಜೀವತ್ಮಾರಿಗೆ ಲೇಸನ್ನು ಬಯಸಿದವರು. ಮಾನವ ಸಮಾಜದ ಚಿಂತಕ ಸಿದ್ಧರಾಮೇಶ್ವರ. ಸಿದ್ಧರಾಮೇಶ್ವರರು ಜಲತಜ್ಞರು. ಸ್ತ್ರೀ ಸಮಾನತೆಗೆ ಧ್ವನಿ ಎತ್ತಿದವರು. ಮಹಿಳೆಯನ್ನು ದೈವಸ್ವರೂಪದಲ್ಲಿ ನೋಡಿದವರು. ವಚನ ಸಂರಕ್ಷಣೆಯಲ್ಲಿ ಅಗ್ರಜ. ಸಿದ್ದರಾಮರ ವಚನಗಳಲ್ಲಿ ಸಮಾಜ ವ್ಯವಸ್ಥೆಯ ಗೊಡ್ಡುತನವನ್ನು, ಹುಸಿ ನಂಬಿಕೆಗಳನ್ನು, ಹೇಯ ಆಚರಣೆಗಳನ್ನು, ಶತಮಾನಗಳ ಭಯ-ಭ್ರಮೆಗಳನ್ನು ಬಯಲು ಮಾಡಿವೆ. ಸಮಾಜದ ವಿಮರ್ಶೆಗೆ ಸಂಬಂಧಿಸಿದ ವಚನಗಳಲ್ಲಿ ಎರಡು ರೀತಿಯ ವೈಶಿಷ್ಟ್ಯತೆ ಇದೆ. ಒಂದು ಮೌಢ್ಯ ಸಂಪ್ರದಾಯಗಳನ್ನು ತಿರಸ್ಕರಿಸಿದರೆ, ಮತ್ತೊಂದು ಬದುಕಿನ ಸತ್ಯದರ್ಶನ ಮಾಡಿಕೊಡುತ್ತದೆ. ಹಳೆಯದನ್ನೂ ದುರಾಚರಣೆಯನ್ನೂ ತಿರಸ್ಕರಿಸುತ್ತಲೇ, ಹೊಸದಕ್ಕೆ-ವಾಸ್ತವ ಬದುಕಿಗೆ ಬೆಲೆಕಟ್ಟಿಕೊಡುವುದರಿಂದ ವಚನಗಳು ಇಂದಿಗೂ ಪ್ರಸ್ತುತವಾಗುತ್ತವೆ.

ಸಮಾಜ ವ್ಯವಸ್ಥೆಯಲ್ಲಿ ಬೇರೂರಿದ ಮೌಢ್ಯತೆ ಅಂಧಾನುಕರಣೆಗಳು ಮತ್ತು ಅವುಗಳನ್ನೆಲ್ಲಾ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಸೋಗನ್ನೂ ವಚನಗಳು ಬಯಲು ಮಾಡುತ್ತಾ ವಾಸ್ತವ ಬದುಕಿನ ಸತ್ಯದರ್ಶನವನ್ನೂ ತೋರಿಸಿರುವುದರಿಂದ ವಚನ ಸಾಹಿತ್ಯದ ಅನಿವಾರ್ಯತೆಯ ಅರಿವೂ ಮೂಡುತ್ತದೆ.

ಸಿದ್ಧರಾಮ ವಿಡಂಬಿಸುವ ಜಾತಿ ವ್ಯವಸ್ಥೆ, ಕೈಲಾಸದ ಕಲ್ಪನೆ, ಧರ್ಮ ದೇವರುಗಳ ಹೆಸರಿನಲ್ಲಿ ನಡೆಯುವ ಅನೇಕ ಹೇಯಾಚರಣೆಗಳು ಇಂದಿಗೂ ನಡೆಯುತ್ತಲೇ ಇವೆ. ಹೀಗಾಗಿ ಈ ವಚನಗಳು ಹನ್ನೆರಡನೆ ಶತಮಾನದಲ್ಲಿ ರಚಿತವಾದರೂ ಕೂಡ ಇಂದಿನ ಸಮಾಜ ವ್ಯವಸ್ಥೆಯ ಬದುಕಿಗೂ ಪ್ರಸ್ತುತವಾಗಿವೆ. ಅಂತೆಯೇ ಸಿದ್ಧರಾಮ ಇಂದಿಗೂ ಅನುಕರಣೆಗೆ ಯೋಗ್ಯರಾಗುತ್ತಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಎಮ್.ಕೆ.ಪಟ್ಟಣಶೆಟ್ಟಿರವರು ಮಾತನಾಡಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜ ಸುಧಾರಣೆ ಮಾಡಬೇಕು. ಶರಣರು ನುಡಿ ಧೀರರಾಗದೇ ನಡೆ ಧೀರರಾಗಿದ್ದರು. ಸಿದ್ಧರಾಮೇಶ್ವರರು ಕಾಯಕ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ಮೆರವಣಿಗೆಯೇ ಜಯಂತಿ ಅಲ್ಲ, ಶರಣರ ವಿಚಾರ ವಿನಿಮಯ ಜಯಂತಿಯಾಗಬೇಕು. ಶರಣರ ಚಿಂತನೆಗಳಿಂದ ಸಮಾಜ ಸುಧಾರಣೆಗೆ ಪ್ರೇರಣೆ ನೀಡುತ್ತದೆ. ಸಾಧಕರ ಬೆನ್ನು ತಟ್ಟುವ ಕಾರ್ಯದಿಂದ ಇನ್ನೂ ಹೆಚ್ಚಿನ ಉತ್ಸಾಹ ಸಿಗುತ್ತದೆ. ಒಗ್ಗಟ್ಟಿನಿಂದ ಸಮಾಜ ಪ್ರಗತಿ ಸಾಧ್ಯವಿದೆ. ಸರ್ಕಾರದ ಯೋಜನೆಗಳನ್ನು ಪಡೆದು ಸಮಸಮಾಜಕ್ಕೆ ನಾಂದಿ ಹಾಕಿ ಎಂದು ತಿಳಿಸಿದರು.

ಭಾಜಪ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ ಮನುಕುಲಕ್ಕೆ ದಿಕ್ಸೂಚಿ ನೀಡಿದವರು ಸಿದ್ಧರಾಮೇಶ್ವರರು. ಜೀವನ ಪಾವನವಾಗಲು ವೈಚಾರಿಕ ಧರ್ಮ ನೀಡಿದರು. ಶಿಕ್ಷಣವಂತರಾಗಿ ಪ್ರಜ್ಞಾವಂತರ ಸಂಖ್ಯೆ ಹೆಚ್ಚಿಸಿ ಎಂದು ಕರೆನೀಡಿದರು.

ಭಾಜಪ ಮುಖಂಡ ಮಹಾಂತೇಶ ಮಮದಪುರ  ಮಾತಾನಾಡಿ ಸಿದ್ಧರಾಮೇಶ್ವರರ ವಚನಗಳು ಜಾತ್ಯತೀತವಾಗಿ ಬೆಳಕನ್ನು ನೀಡಿದೆ. ಭೋವಿ ಸಮಾಜ ಮುಖ್ಯವಾಹಿನಿಗೆ ಬರಲು ಸಾಮಾಜಿಕ, ಶೈಕ್ಷಣಿಕ  ಆರ್ಥಿಕ, ಸುಧಾರಣೆ ಅವಶ್ಯಕ. ಕಾಯಕ ಸಮಾಜಗಳಿಂದ ಸುಂದರ ಸಂಸ್ಕಾರ ಸಮಾಜ ನಿರ್ಮಾಣವಾಗಿದೆ. ನಾಗರಿಕತೆಯ ನೆರಳಿನ ಜೀವನ ಕೊಟ್ಟವರು ಭೋವಿ ಸಮಾಜ. ಸಾಧನೆಗೆ ಪ್ರೇರಣೆ ಮುಖ್ಯವಾಗಿದೆ. ಭೋವಿ ಸಮಾಜ ರಾಜಕೀಯವಾಗಿ ಹೆಚ್ಚು ಬೆಳೆಯಬೇಕು. ಅಧಿಕಾರ ಶಾಶ್ವತವಾಲ್ಲ ಸಿಕ್ಕಾಗ ಸಮಾಜಸೇವೆ ಮಾಡಿ. ಸರ್ವರಂಗದಲ್ಲಿ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಲಿ ಎಂದು ತಿಳಿಸಿದರು.

ಕಾಂಗ್ರೆಸ್ಸಿನ ಮುಖಂಡ ಎಂ.ಬಿ.ಹಂಗರಗಿ ಮಾತನಾಡಿ ಹಲವು ಬಗೆಯ ಕಾಯಕ ಜೀವಿಗಳು ಸೇರಿ ಅನುಭವ ಮಂಟಪ ರಚನೆಯಾಗಿದೆ. ಮಾನವರೆಲ್ಲರನ್ನು ಸುಖ ಸಂತೋಷದಿಂದ ಇರಲು ಕಟ್ಟಡ ಕಟ್ಟಿಕೊಟ್ಟವರು ಭೋವಿ ಸಮಾಜ. ನಮ್ಮ ಸರ್ಕಾರವಿದ್ದಾಗ ಸರ್ಕಾರಿ ಕೆಲಸದಲ್ಲಿ 50 ಲಕ್ಷದವರೆಗೆ ಪರಿಶಿಷ್ಟ ಜಾತಿಗೆ ಮೀಸಲು ಕೊಟ್ಟಿದ್ದಾರೆ. ಭೋವಿ ನಿಗಮದ ಕೊಡುಗೆ ಸಿದ್ಧರಾಮಯ್ಯರವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಕೆ.ಎ.ಎಸ್ ಅಧಿಕಾರಿಯಾಗಿ ಆಯ್ಕೆಗೊಂಡ ಉಮೇಶ ಸೀಮಿಕೇರಿ ಸನ್ಮಾನ ಸ್ವೀಕರಿಸಿ ಮಾತನಾಡಿ ಸೈನಿಕನಾಗಿ ಹದಿನಾರು ವರ್ಷ ಸೇವೆ ಸಲ್ಲಿಸಿ, ಸೇವೆಯಲ್ಲೇ ಓದಿನ ಆಸಕ್ತಿಯಿಂದ ದಿನಿತ್ಯ ಆರು ತಾಸು ಅಧ್ಯಯನ ಮಾಡಿದೆ. ಸಾಮಾಜಿಕ ಜಾಲತಾಣ ಬಳಸಿ ಅಧ್ಯಯನ ಮಾಡಿದೆ. ಗಡಿಯಲ್ಲಿ ಸೇವೆ ಸಮಯದಲ್ಲಿ ಅಧ್ಯಯನ ಕಷ್ಟವಾಗಿತ್ತು ರಹಸ್ಯ ತಾಣದಲ್ಲಿ ಅಧ್ಯಯನ ಮಾಡುತ್ತಿದೆ. ದುಶ್ಚಟಗಳಿಂದ ಯುವಕರು ದೂರವಿರಿ. ಗುರಿ ಮುಟ್ಟುವವರಿಗೂ ಸತತ ಪ್ರಯತ್ನವಿರಲಿ. ಇದಕ್ಕೆ ಪೋಷಕರ ಪ್ರೋತ್ಸಾಹವಿರಲಿ.  ಎಂದು ತಿಳಿಸಿದರು.

ಪಟ್ಟಣಪಂಚಾಯ್ತಿಯ ಉಪಾಧ್ಯಕ್ಷ ವಿಜಯಕುಮಾರ ಐಹೊಳೆ ಮಾತಾನಾಡಿ ಕಪ್ಪಬಣ್ಣದ ದ್ರಾವಿಡ ಜನಾಂಗ ಭೋವಿ ಸಮಾಜ. ಒರಿಸ್ಸ ಮೂಲದವರಾದ ಭೋವಿ ಸಮಾಜ ವಿವಿಧ ಹೆಸರಿನ ಮೂಲಕ ಭಾರತದಾದ್ಯಂತ ವ್ಯಾಪಿಸಿದ್ದಾರೆ. ಜಗತ್ತಿನ ಎಲ್ಲಾ ಕಟ್ಟಡಗಳ ಕೊಡುಗೆ ಕೊಟ್ಟವರು ಭೋವಿ ಸಮಾಜ. ಸಿದ್ಧರಾಮೇಶ್ವರರ ಈ ಸಮಾಜ ಧಾರ್ಮಿಕ ಪುಣ್ಯಪುರುಷರಾಗಿದ್ದಾರೆ.ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಬಿ.ಸೂಳಿಕೇರಿ ಮಾತಾನಾಡಿ ಧರ್ಮ ಮಾರ್ಗದಲ್ಲಿ ನಡೆಯಲು ಸಿದ್ಧರಾಮೇಶ್ವರ ಜಯಂತಿ ಆಚರಣೆಯ ಉದ್ದೇಶವಾಗಿದೆ. ಶೈಕ್ಷಣಿಕ ಸುಧಾರಣೆ ಗಮನ ನೀಡಬೇಕು. ದುಡಿಯುವ ಸಮಾಜ ಕುಡಿಯುವ ಸಮಾಜವಾಗಬಾರದು. ದುಶ್ಚಟಗಳಿಂದ ದೂರವಿರಿ. ಗುರುಗಳ ಆಶೀರ್ವಾದ ಆಶೀರ್ವಚನದಿಂದ ಜೀವನ ಪಾವನ ಮಾಡಿಕೊಳ್ಳಿ. ಉನ್ನತ ವ್ಯಾಸಂಗ ಮಾಡಿಸಿ ಸರ್ಕಾರಿ ಅಧಿಕಾರಿಗಳ  ಸಂಖ್ಯೆ ಹೆಚ್ಚಿಸಬೇಕು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದರೂ ಅವಕಾಶವಂಚಿತರು ಭೋವಿ ಸಮಾಜ.

ಡಿ.ಡಿ.ಬಂಡಿವಡ್ಡರ ಪ್ರಾಸ್ತಾವಿಕ ಭಾಷಣ ಮಾಡಿ, ಬಸವಣ್ಣನವರ ಸಮಕಾಲೀನವರಾಗಿದ್ದವರು.  ಜಾತಿ ಮತ ಭೇದವಿಲ್ಲದ ಸಮಾಗಮವೇ ಅನುಭವ ಮಂಟಪ ಇದರ ಮೂರನೇ ಶುನ್ಯಪೀಠದ ಪೀಠಾಧ್ಯಕ್ಷರಾಗಿದ್ದರು. ಸಂಘಟನೆಯಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಶಿಕ್ಷಣಕ್ಕೆ ಆದ್ಯತೆ ನೀಡಿ. ಭೋವಿ ಸಮಾಜದ ಸಹೋದರ ಸಮಾಜದೊಂದಿಗೆ ಕಿಂಕರತ್ವ ಹೊಂದಿ ಸರ್ವೊರಳೊಗೆ ಹೊಂದಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಅಶೋಕ ಲಿಂಬಾವಳಿ ಮಾತನಾಡಿ ಭೋವಿ ಸಮಾಜ ಸಿದ್ಧರಾಮೇಶ್ವರರ ವಂಶಸ್ಥರು. ಸಿದ್ಧರಾಮೇಶ್ವರರು ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡವರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಭೋವಿ ಸಮಾಜವನ್ನು ತರಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ತೀಕ್ಷ್ಣ ಮತಿಗಳಾಗಬೇಕು. ಸತಿಪತಿಗಳೊಂದಾಗಿ ಕಾಯಕ ಜೀವನ ನಿರ್ವಹಿಸುವ ಕುಟುಂಬ ಭೋವಿ ಸಮಾಜವಾಗಿದೆ. ಭೋವಿ ಸಮಾಜಕ್ಕೆ ದುಶ್ಚಟಗಳು ಶಾಪವಾಗಿದೆ. ಇವತ್ತಿನ ಸಂಸತ್ ಅಂದಿನ ಅನುಭವ ಮಂಟಪ. ಸಾಲಮುಕ್ತ ಜೀವನ ರೂಪಿಸಕೊಳ್ಳಬೇಕು.

ಚರಂತಿಮಠದ ಡಾ.ಶಿವಕುಮಾರ ಶ್ರೀಗಳು ಮಾತನಾಡಿ ಭೋವಿ ಸಮಾಜ ಪರಿವರ್ತನೆಯಾಗುವ ಕಾಲ ಕೂಡಿ ಬಂದಿದೆ. ಅನಿಮಿಷ ಶಿವಯೋಗಿ ಸಿದ್ಧರಾಮೇಶ್ವರರು. ಜಾತಿಗಳ ಮದ್ಯ ಅಷ್ಟೇ ಅಲ್ಲದೆ, ಸ್ತ್ರೀ ಪುರುಷರು ಸಮಾನರು ಎಂದು ಸಾರಿ ಹೇಳಿದ್ದಾರೆ. ಸ್ತ್ರೀಕುಲೋದ್ದಾರಕರು. ವಡ್ಡರು ದೊಡ್ಡವರು ಹಿರಿಯರು ಎಂಬ ಅರ್ಥ ನೀಡುತ್ತದೆ. ಆದರ್ಶ ವ್ಯಕ್ತಿತ್ವ ರೂಪಿಸಕೊಳ್ಳಬೇಕು. ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡಲು ಸಂಘಟನೆ ಮಾಡಿ. ಭಗವಂತ ಭಕ್ತಿ ಬೇಡುತ್ತಾನೆ ಹೊರತು ಬಲಿಯನ್ನು ಅಲ್ಲ. ಜಾತಿ ಮೀರಿದ ಜ್ಯೋತಿ ಸಿದ್ಧರಾಮೇಶ್ವರರು ಎಂದು ತಿಳಿಸಿದರು.

ದೇವಾಂಗ ಮಠದ ವೇ.ಮೂ ರುದ್ರಮುನಿ ಶ್ರೀಗಳು ಮಾತನಾಡಿ ಭಾರತ ದೇಶದ ಪ್ರಾಚೀನ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದು. ದುಷ್ಟರ ನಿಗ್ರಹ ಶಿಷ್ಟರ ರಕ್ಷಕನಾಗಿ ಭಗವಂತ ಅವತಾರಿಸಿದ್ದಾನೆ. ಭಾರತೀಯ ಧರ್ಮ ಜೀವನ ಧರ್ಮ. 12ನೇ ಶತಮಾನದಲ್ಲಿ ಸಿದ್ಧರಾಮೇಶ್ವರ ಶರಣರ ರೂಪದಲ್ಲಿ ಭಗವಂತ ಅವತಾರದಲ್ಲಿ ಬಂದಿದ್ದಾರೆ. ವಚನಗಳ ಮೂಲಕ ಸಮಾಜ ಸುಧಾರಣೆ ಮಾಡಿದ್ದಾರೆ. ಇತಿಹಾಸ ಅರಿತು ಭವಿಷ್ಯ ರೂಪಿಸಕೊಳ್ಳಬೇಕು. ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದವರು ಸಿದ್ಧರಾಮೇಶ್ವರರು. ಮನೆಗಳ ಮನಸ್ಸುಗಳು ಸಂಸ್ಕಾರವಂತರಾಗಬೇಕು. ಭಾವ ಶುದ್ಧೀಕರಣವಾಗಬೇಕು. ಇತಿಹಾಸ ರಚಿಸಲು ಭೋವಿ ಸಮಾಜ ಪ್ರೇರಕ ಶಕ್ತಿಯಾಗಿದೆ ಎಂದು ತಿಳಿಸಿದರು.

ಶ್ರೀಗಳ ಜೋಳಿಗೆಗೆ ದುಶ್ಚಟ ಹಾಕಿ ಜಯಂತಿಯನ್ನು ಅರ್ಥಪೂರ್ಣವಾಗಿಸಬೇಕು. ಮೂಢನಂಬಿಕೆಯಿಂದ ಹೊರಬರಬೇಕು. ಭಿನ್ನಾಭಿಪ್ರಾಯಗಳನ್ನು ದೂರಮಾಡಿ ಸಂಘಟಿತ ಸಮಾಜ ನಿರ್ಮಿಸೋಣ ಎಂದು ತಿಳಿಸಿದರು.

ಪ್ರಿಯದರ್ಶಿನಿ ಬಂಡಿವಡ್ಡರ್, ಉಮೇಶ ಸೀಮಿಕೇರಿ, ಹನುಮಂತ ಡವಳಗಿ, ರಮೇಶ ದೊಡ್ಡಮನಿ, ರವಿ ಪೂಜಾರ, ಅಕ್ಷಯಕುಮಾರ್ ಬಂಡಿವಡ್ಡರ, ಗೊಂಡಪ್ಪ ಸಾಲಹಳ್ಳಿ, ಕಾಶಿನಾಥ ಸಾಲಹಳ್ಳಿ, ದ್ಯಾಮಣ್ಣ ಅಬ್ಬಿಗೇರಿ, ಸೈನಿಕರಿಗೆ, ಸರ್ಕಾರಿ ನೌಕರರಿಗೆ ಪ್ರತಿಭಾವಂತರಿಗೆ ಸನ್ಮಾನ ಜರುಗಿತು.

ಶಾಂತಗೌಡ ಪಾಟೀಲ, ಬಸಲಿಂಗಪ್ಪ ನಿಲುಗಲ್, ಶ್ರೀಮತಿ ನಿರ್ಮಲಾ ಸದಾನಂದ ಮದಿ,ಮಲ್ಲಪ್ಪಜ್ಜ ಘಟ್ಟದ್,ಮಹಾಂತೇಶ ಮೆಣಸಿಗಿ, ಜಯಪ್ರಕಾಶ್ ವಡ್ಡರ, ಕಿರಣ ವಡ್ಡರ, ದುರ್ಗಪ್ಪ ವಡ್ಡರ, ಗಣೇಶ್ ಬದಾಮಿ, ಯಲ್ಲಪ್ಪ ವಡ್ಡರ, ಸುನೀಲ ವಡ್ಡರ, ಅರುಣ ವಡ್ಡರ, ಮಂಜು ದೊಡ್ಡಮನಿ, ಶೋಭ ವಡ್ಡರ, ಸಂಕಪ್ಪ ವಡ್ಡರ,  ಜಗದೀಶ ಪ್ರಭಾಕರ, ಆನಂದ ವಡ್ಡರ, ರಾಜು ವಡ್ಡರ್, ಭರತ ವಡ್ಡರ್, ಸುನೀಲ ಪೂಜಾರ, ಉಪಸ್ಥಿತಿಯಿದ್ದರು. ಸಂಜಯ ಪ್ರಭಾಕರ ಸ್ವಾಗತಿಸಿದರು, ಲೋಯಿತ್ ಕೋರೆ ನಿರೂಪಿಸಿದರು.
ಸೋನಿ ಘಟ್ಟರ್ ಮತ್ತು ಸಂಗಡಿಗರು ಪ್ರಾರ್ಥನೆ ನಡೆಸಿಕೊಟ್ಟರು.

ವರದಿ: ದೇವು ಕೂಚಬಾಳ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಅಂಬಾ ಭವಾನಿ ದೇವಿಯ ಜಾತ್ರಾ ಮಹೋತ್ಸವ

Published

on

ಸಾವಳಗಿ: ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಅಂಬಾ ಭವಾನಿ ದೇವಿಯ ಜಾತ್ರಾ ಮಹೋತ್ಸವ ಬಹು ಅದ್ದೂರಿಯಾಗಿ ನಡೆಯಿತು. ಕಳೆದ ಮೂರು ದಿನಗಳಿಂದ ನಸುಕಿನ ಜಾವಾದಲ್ಲಿ ನಾನಾ ರೀತಿಯಲ್ಲಿ ಅಭಿಷೇಕ್ ಬೆಣ್ಣೆಯ ಅಲಂಕಾರ, ಹೋಮ ಹವನದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭವಾಗಿದೆ. ಪ್ರತಿ ದಿನ ಬೆಳಿಗ್ಗೆ ಹಾಗೂ ಸಾಯಂಕಾಲ ಮಹಾ ಮಂಗಳಾರತಿ ಮಾಡುತ್ತಿರುತ್ತಾರೆ, ಪ್ರತಿದಿನ ರಾತ್ರಿ ೮ ಗಂಟೆಗೆ ಗೋಂದಳಿ ಹಾಗೂ ಶಿವ ಭಜನಾ ಕಾರ್ಯಕ್ರಮಗಳನ್ನು ಜರುಗಿದವು.

ಮೂರನೇ ದಿನವಾದ ಇಂದು ಪಲ್ಲಕಿ ಉತ್ಸವ ಕಾರ್ಯಕ್ರಮವನ್ನು ಉತ್ತರಪ್ರದೇಶದ ರಾಷ್ಟ್ರೀಯ ಅಖಿಲ ಭಾರತೀಯ ಮರಾಠಿ ಮಹಾಮಂಡಲ ಅಧ್ಯಕ್ಷರಾದ ಶ್ರೀ ಅನೀಲ ಪಾಟೀಲ ಶೇಠ ಹಾಗೂ ಸಾವಳಗಿ ಪೋಲಿಸ್ ಠಾಣೆಯ ಪಿಎಸೈ ಕುಮಾರಿ ಬಿ.ಸಿ.ಮಗದುಮರವರು ಚಾಲನೆ ರಿಬ್ಬನ್ ಕಟ್ಟ ಮಾಡುವ ಮೂಲಕ ಚಾಲನೆ ನೀಡಿದರು.

ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ದೇವಿಯ ಪಲ್ಲಕಿಯೊಂದಿಗೆ ಕುಂಭಮೇಳ, ಡೊಳ್ಳು ಕುಣಿತ, ಕರಡಿ ಮಜಲು, ಜಾಂಜ್ ಪತಂಗ ಹಾಗೂ ಜನಪದ ವಾದ್ಯ ಮೇಳಗಳೂಂದಿಗೆ ದೇವಿಯ ಪಲ್ಲಕಿ ಉತ್ಸವ ನೇರೆವೆರಿತು.

ಪ್ರತಿ ವರ್ಷದಂತೆ ಈ ವರ್ಷವೂ ಭಾವೈಕ್ಯತೆಯ ಸಂಕೇತವಾಗಿ ಜಾತ್ರಾ ಮಹೋತ್ಸವದಲ್ಲಿ ನೇರೆದಿದ್ದ ಭಕ್ತಾದಿಗಳಿಗೆ ಮುಸ್ಲಿಂ ಸಮುದಾಯದ ಬಾಂಧವರಿಂದ ಕುಡಿಯುವ ನೀರಿನ ಬಾಟಲ್ ಮತ್ತು ಬಾಳೆ ಹೆಣ್ಣಿನ ಸೇವೆ ಸಲ್ಲಿಸಿದರು ಹಾಗೂ ಗ್ರಾಮದ ಎಲ್ಲಾ ಸಮುದಾಯದ ಯುವತಿಯರು ಹಾಗೂ ಮಹಿಳೆಯರು ಸಾವಿರಾರು ಕುಂಭಗಳನ್ನು ಹೊತ್ತು ಉತ್ಸವಕ್ಕೆ ಶೋಭೆ ತಂದರು.

ವರದಿ : ದೇವು ಕೂಚಬಾಳ

Continue Reading

ಸುದ್ದಿ

ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗೆ ಅಪಾಯ -ಶ್ರೀಮತಿ ಸುಕನ್ಯಾ ಕಳವಳ

Published

on

ಬಾಗೇಪಲ್ಲಿ: ಅತಿಯಾಗಿ ಪ್ಲಾಸ್ಟಿಕ್ ಬಳಕೆಯಿಂದ ಮನುಕುಲದ ಭೂಮಿ ಮೇಲಿನ ಸಕಲ ಜೀವರಾಶಿಗೂ ಅಪಾಯವಾಗುತ್ತಿದೆ’ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಅರ್.ಎಂ.ಎಸ್.ಎ. ಡಿ ವೈ ಪಿ ಸಿ ಅಧಿಕಾರಿಗಳಾದ ಶ್ರೀಮತಿ ಸುಕನ್ಯಾ ರವರು ಆತಂಕ ವ್ಯಕ್ತಪಡಿಸಿದರು.

ಇಂದು ಕಸಬಾ ಹೋಬಳಿ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯ ಸುಂದರ ಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನದಡಿಲ್ಲಿ ಸುಂದರ ಕೈ ತೋಟ ನಿರ್ಮಿಸಿದ್ದು, ವೀಕ್ಷಣೆ ಮಾಡಿ ಉತ್ತಮವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿ, ‘ಮನುಷ್ಯನ ಜೀವನ ಶೈಲಿಯಿಂದ ಭೂಮಿ ಮೇಲಿನ ಎಲ್ಲಾ ಜೀವರಾಶಿಗಳಿಗೂ ಅಪಾಯವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಶಾಲಾ ಕಾಲೇಜು ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರೆ ಸಮಾಜವನ್ನು ಬದಲಾವಣೆ ತರಲು ಸಹಕಾರಿಯಾಗುತ್ತದೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರೆ ಶೇ 50ರಷ್ಟು ಪರಿಸರ ಮಾಲಿನ್ಯ ನಿಯಂತ್ರಿಸಬಹುದು’ ಎಂದು ಸಲಹೆ ನೀಡಿದರು.

ಕಾಡಿಗೆ ಬೆಂಕಿ ಹಚ್ಚುವುದು, ಮೋಜ ಮಸ್ತಿ ನೆಪದಲ್ಲಿ ಕಾಡು ನಾಶ ಮಾಡಿ ರೆಸಾರ್ಟ್ ನಿರ್ಮಾಣದಿಂದಾಗಿ ನೆಮ್ಮದಿಯಿಂದ ಜೀವಿಸುತ್ತಿದ್ದ ವನ್ಯಜೀವಿಗಳು ಆಹಾರ ಹುಡುಕುತ್ತಾ ನಾಡಿಗೆ ಬಂದು ಮನಷ್ಯನ ಕೈಯಲ್ಲಿ ಬಲಿಯಾಗುತ್ತಿವೆ’ ಎಂದು ವಿಷಾದಿಸಿದರು.

‘ಪರಿಸರ ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಸರ್ವನಾಶವಾಗಲಿದೆ. ಪರಿಸರ ರಕ್ಷಣೆ ಎಂದರೆ ನಮ್ಮ ರಕ್ಷಣೆ ಎಂದು ಅರ್ಥ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪರಿಸರ ರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿ’ಎಂದು ಹೇಳಿದರು.

‘ಎಲ್ಲರೂ ಪ್ಲಾಸ್ಟಿಕ್ ಮಿತ ಬಳಕೆ ಅಭ್ಯಾಸ ಮಾಡಬೇಕು.ಶಾಲೆಯ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕಾದರೆ ಮೊದಲು ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಲ್ಲಿಸಬೇಕು. ವಿಧ್ಯಾರ್ಥಿಗಳು ಮಾರುಕಟ್ಟೆಗೆ ಹೋಗುವಾಗ ಮರೆಯದೆ ಬಟ್ಟೆಯ ಅಥವಾ ಸೆಣಬಿನ ಕೈಚೀಲ ಕೊಂಡೊಯ್ಯಬೇಕು’ ಎಂದು ತಿಳಿಸಿದರು.

ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ಮಾತನಾಡಿ
‘ಪ್ಲಾಸ್ಟಿಕ್ ಬಳಕೆ ನಿರ್ಬಂಧದ ಬಗ್ಗೆ ಭಾಷಣೆ ಮಾಡಿದರೆ ಸಾಲದು. ಮೊದಲು ನಾವು ಬದಲಾಗಿ ಇತರರಿಗೆ ಮಾದರಿಯಾಗಬೇಕು. ನಮ್ಮ ಶಾಲೆಯ ಸುಂದರ್ ಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಶಾಲೆ ಆವರಣದಲ್ಲಿ ವಿಜ್ಞಾನ ಶಿಕ್ಷಕ ಎಲ್.ರವಿ ರವರ ಮಾರ್ಗದರ್ಶನದಲ್ಲಿ ಕೈತೋಟ ನಿರ್ಮಿಸಲಾಗಿದೆ.

ಪರಿಸರದಲ್ಲಿ ನೀರು ಕುಡಿದು ಬಿಸಾಕಿರುವ ಬಾಟಲ್ ತಂದು ಕೈತೋಟಕ್ಕೆ ರಕ್ಷಣೆ ಗೋಡೆಯನ್ನು ನಿರ್ಮಿಸಿ ಬಹಳ ಸುಂದರವಾಗಿ ಕಾಣಿಸುತ್ತದೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಶಾಲೆ ಆವರಣದಲ್ಲಿ ಎಳೆ ಮತ್ತು ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಕೈತೋಟಕ್ಕೆ ಬಳಸಿದರೆ ಪರಿಸರ ಸಂರಕ್ಷಣೆಯ ಜತೆಗೆ ಆರ್ಥೀಕವಾಗಿ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

ತಾಲ್ಲೂಕು ಕಸಬಾ ಇಸಿಓ ಆರ್.ಹನುಮಂತ ರೆಡ್ಡಿ ಮಾತನಾಡಿ ವೈಯಕ್ತಿಕ ಸ್ವಚ್ಚತೆಯೊಂದಿಗೆ ಪರಿಸರ ಸ್ವಚ್ಚತೆ,ಸಾತ್ವಿಕ ಆಹಾರ ಪದ್ದತಿ, ನೀರಿನ ಮಿತ ಬಳಿಕೆ, ಪರಿಸರ ಬಗ್ಗೆ ಪ್ರೀತಿ ಕಾಳಜಿಯೊಂದಿಗೆ ಪರಿಸರ ಸಂರಕ್ಷಣೆ ವಿವಿಧ ರೀತಿಯ ಮಾಲಿನ್ಯಗಳು ಅವುಗಳಿಂದ ಉಂಟಾಗುವ ದುಷ್ಪರಿಣಾಮಗಳು ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಮುಂದೆ ಹತ್ತು ನೇ ತರಗತಿಯಲ್ಲಿ ಓದಿ ಅತ್ಯುತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎನ್. ಎನ್.ಸಂದ್ಯಾ,ಬಿರಾದಾರ ವಿಠ್ಠಲ ಚಂದ್ರ ಶಾ,ಶ್ರೀನಿವಾಸ್ ಎನ್.ಸಿ.ನಾರಾಯಣ ಸ್ವಾಮಿ, ಎಲ್. ರವಿ,ರಾಮಚಂದ್ರಪ್ಪ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

Continue Reading

ಸುದ್ದಿ

ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಶನಿವಾರ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ

Published

on

ಬೆಳಗಾವಿ : ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಶನಿವಾರ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಭಿಮಾನಿಯ ಹೊಸ ಕಾರಿಗೆ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.

ಮೂಢನಂಬಿಕೆಯ ವಿರುದ್ಧ ನಾವು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದೇವೆ. ಅದರ ಒಂದು ಭಾಗವಾಗಿ ಸ್ಮಶಾನದಲ್ಲಿ ನೂತನ ಕಾರಿಗೆ ಚಾಲನೆ ನೀಡಲಾಗಿದೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್