ಮಾಹಿತಿ
ಬಡವರ ಬಂಧು- ಕಾರ್ಮಿಕ ಕಾರ್ಡ್, ಈಗಲೇ ಮಾಡಿಸಿಕೊಳ್ಳಿ
ಕಾರ್ಮಿಕರು ದಿನಕೆಲಸಗಳನ್ನು ಒಂದು ಕುಟುಂಬವನ್ನ ನಿಭಾಹಿಸುತ್ತಿರುತ್ತಾರೆ, ದಿನ ನಿತ್ಯ ಕೆಲಸ ಮಾಡಿ ಒಂದು ಕುಟುಂಬವನ್ನು ಸಾಕುಬೇಕು ಅಂದರೆ ದಿನವೆಲ್ಲಾ ತುಂಬಾ ಕಷ್ಟಪಡಬೇಕು , ಇನ್ನ ಮಕ್ಕಳ ಶಿಕ್ಷಣಕ್ಕೆ ಬಂದರೆ ಕುಲಿ ಮಾಡಿ ದೊಡ್ಡದಾಗಿ ಶಿಕ್ಷಣ ಕೋಡಿಸೋದು ತುಂಬಾ ಕಷ್ಟ, ಇದನ್ನು ಅರಿತ ಸರ್ಕಾರ ಕೆಲವು ಯೋಜನೆಯನ್ನು ತಂದಿದೆ, ಅದರಲ್ಲಿ ಬಹು ಮುಖ್ಯವಾದದ್ದು ಅಂದರೆ ಕಾರ್ಮಿಕ ಕಾರ್ಡ್, ಈ ಕಾರ್ಮಿಕ ಕಾರ್ಡ್ ಇದನ್ನು ಯಾವ ಯಾವ ವೃತ್ತಿಯವರು ಬಳಸಿಕೊಳ್ಳಬಹುದು ಅಂದರೆ ಸೆಂಟ್ರಿಂಗ್ ಕೆಲಸ,ಗಾರೆ ಕೆಲಸ,ಸಿಮೇಂಟ್ ಕೆಲಸ,ಎಲೆಕ್ಟ್ರನಿಕ್ ಕೆಲಸ,ಪೆಂಟಿಂಗ್ ಕೆಲಸ,ಪ್ಲಮ್ಬರ್ ಕೆಲಸ, ಬಡಗಿ ಕೆಲಸ, ಟವರ್ ನಿರ್ಮಾಣ ಕಾರ್ಮಿಕರು, ಕೊಳವೆ ಮಾರ್ಗ , ಒಳ ಚರಂಡಿ, ರಸ್ತೆ ನಿರ್ಮಾಣ ಮೋರಿ ಸೇತುವೆ, ಡಾಮಾರಿಕರಣ ಕಾರ್ಮಿಕರು, ಮುಂತಾದ ಕೆಲಸ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಕಾರ್ಡ್ನ್ನು ನೀಡುತ್ತದೆ,
ಈ ಕಾರ್ಮಿಕ ಕಾರ್ಡ್ ಯಾವ ರೀತಿ ಕಾರ್ಮಿಕರಿಗೆ ಉಪಯೋಗವಾಗುತ್ತದೆ ಅಂದರೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಸ್ಕಾಲರ್ ಶಿಪ್ 2000 ರಿಂದ 3000 ವರೆಗೂ ಸಿಗುತ್ತೆ, ಅವರು ಎಲ್ಲಿಯವರೆಗೂ ಶಿಕ್ಷಣ ಮಾಡುತ್ತಾರೋ ಅಲ್ಲಿಯವರೆಗೂ ಕಲಿಕೆ ಭಾಗ್ಯ ದೊರೆಯುತ್ತದೆ, ಹಾಗೂ ಪ್ರತಿಭಾವಂತ ಮಕ್ಕಳಿಗೂ ವಿಶೇಷ ಸೌಲಭ್ಯಗಳು ಇವೆ, ಎಸ್, ಎಸ್ ಎಲ್ ಸಿ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ 5000 , ಪಿ,ಯು,ಸಿ ತರಗತಿಯಲ್ಲಿ ಶೇ 75 ಅಂಕ ಪಡೆದವರಿಗೆ 7000 ರೂ,ಪದವಿ ಕೋರ್ಸ್ ನಲ್ಲಿ ಶೇ 75 ಅಂಕ ಪಡೆದವರಿಗೆ 10,000, ಸ್ನಾತಕೊತ್ತರ ಪದವಿಯಲ್ಲಿ ಶೇ 75 ಅಂಕ ಪಡೆದವರಿಗೆ 15,000 ಹೀಗೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಸೌಲಭ್ಯಗಳು ಇವೆ, ಒಂದನೇ ತರಗತಿ ಯಿಂದ ಕಾರ್ಮಿಕರ ಮಕ್ಕಳು ಎಲ್ಲಿಯವರೆಗೂ ಓದುತ್ತಾರೋ ಅಲ್ಲಿಯ ವರೆಗೂ ಪ್ರೋತ್ಸಹ ಧನ ಸಿಕ್ಕೆ ಸಿಗುತ್ತದೆ,
ಒಂದನೇ ತರಗತಿ ಉತ್ತಿರ್ಣದಾವರಿಗೆ 1000 ದಿಂದ ಪಿ.ಎಚ್,ಡಿ ಗೆ 20000 ವರೆಗೂ ಹೆಚ್ಚುವರಿ ಸಿಗುತ್ತದೆ, ಕಾರ್ಮಿಕರು ಅಥವಾ ಕಾರ್ಮಿಕರ ಮಕ್ಕಳ ಮದುವೆಗೆ 50,,000 ದಷ್ಟು ಮೊತ್ತ ಸಹಾಯ ಧನವಾಗಿ ಸಿಗುತ್ತದೆ, ಕಾರ್ಮಿಕರ ಕಲ್ಯಾಣಕ್ಕೆ ಇದು ಸಹಾಯಧನ , ಕಾರ್ಮಿಕರ ವಯಸ್ಸದ 60 ವರ್ಷದ ಮೇಲೆ ಪಿಂಚಾಣಿಯ ಸೌಲಭ್ಯ ಕೂಡ ಪಡೆದುಕೊಳ್ಳಬಹುದು, ಕಾರ್ಮಿಕರಿಗೆ ಆರೋಗ್ಯದಲ್ಲಿ ತೊಂದರೆ ಆದರೆ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕ ಚಿಕಿತ್ಸೆ ಭಾಗ್ಯ ದೊರಯಲಿದೆ, ಆಕಸ್ಮಿಕವಾಗಿ ಕಾರ್ಮಿಕರು ಕೆಲಸ ಮಾಡವಾಗ ಮರಣ ಹೊಂದಿದರೆ 5,00,000 ಅವರ ಕುಟುಂಬಕ್ಕೆ ಪರಿಹಾರ , ಸಂಪೂರ್ಣವಾಗಿ ಶಾಶ್ವತ ದುರ್ಬಲತೆಗೆ 2.00,000\ , ಭಾಗಶಂ ಶಾಶ್ವತ ದುರ್ಬಲತೆಗೆ 1,00,000 ರೂ ಸಹಾಯಧನ ನೀಡುವುದು. ಹೀಗೆ ಮುಂತಾದ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ನಲ್ಲಿ ಪಡೆಯಬಹುದು.
ಇಷ್ಟೇಲ್ಲಾ ಸೌಲಭ್ಯಗಳು ಕಾರ್ಮಿಕ ಕಾರ್ಡ್ನಲ್ಲಿ ಇವೆ, ಇದನ್ನು ಯಾವ ರೀತಿ ಮಾಡಿಸೋದು ಇದಕ್ಕೆ ಬೇಕಾಗಿರುವ ದಾಖಲಾತಿ ಯಾವು ಅಂದರೆ 18 ರಿಂದ 55 ವರ್ಷ ಆಗಿರಬೇಕು, ಆಧರ್ ಕಾರ್ಡ್, ರೇಷನ್ ಕಾರ್ಡ್, ಗುರುತಿನಿ ಚೀಟಿ, ಪೋಟೋ ಬ್ಯಾಂಕ್ ಪಾಸ್ ಬುಕ್, ಗಾರೆ ಕೆಲಸ ಮೆಸ್ತ್ರಿ ಇಂದ ಪಡೆದ ಅರ್ಜಿ, ಈ ಅರ್ಜಿ ನಮೂನೆಯನ್ನು ತೆಗೆದುಕೊಂಡು ಕರ್ನಾಟಕ ಕಟ್ಟಡ ಅಥವಾ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಛೇರಿಯನ್ನು ಸಂಪರ್ಕಿಸಬೇಕು, ಇಂತಹ ಉಪಯುಕ್ತ ಮಾಹಿತಿಯನ್ನು ತಾಲ್ಲೂಕುಗಳಲ್ಲಿ ಹಳ್ಳಿ, ಗ್ರಾಮ ಗಳಲ್ಲಿ ಗೊತ್ತಿಲ್ಲದವರಿಗೆ ತಿಳಿಸಬೇಕು ಇವುಗಳು ಹೆಚ್ಚು ಆದಾಯ ತಂದುಕೊಡುವ, ಗೌರವ ಇರುವ ವೃತ್ತಿಗಳು ಆಗಿವೆ ಎಲ್ಲಾ ಕಾರ್ಮಿಕರು ಈಗಾಲೇ ಅರ್ಜಿ ಹಾಕಿ ಆದಷ್ಟುಬೇಗ ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಿ..
ಮಾಹಿತಿ
ಅಕ್ಟೋಬರ್ 12 ರಿಂದ 30ರವರೆಗೆ ರಾಜ್ಯಾದ್ಯಂತ ಶಾಲೆಗಳಿಗೆ ಮಧ್ಯಂತರ ರಜೆ
ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರು ರಾಜ್ಯಾದ್ಯಂತ ಅ. 12 ರಿಂದ 30ರವರೆಗೆ ಶಾಲೆಗಳಿಗೆ ಮಧ್ಯಂತರ ರಜೆ ಘೋಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಆದೇಶವು ಸರ್ಕಾರಿ ಶಾಲೆಗಳ ಜೊತೆಗೆ ಅನುದಾನಿತ ಮತ್ತು ಖಾಸಗಿ ಶಾಲೆಗಳು ಹಾಗೂ ಶಿಕ್ಷಕರಿಗೂ ಅನ್ವಯವಾಗಲಿದೆ. ಆನ್ಲೈನ್ ತರಗತಿಗಳು ಸಹ ಮೂವತ್ತರವರೆಗೆ ಸ್ಥಗಿತವಾಗಲಿದೆ.
ಮಾಹಿತಿ
ಪೇದೆ ಹುದ್ದೆಗೆ 18ರಂದು ಲಿಖಿತ ಪರೀಕ್ಷೆ
ಬೆಂಗಳೂರು : ಬೆಂಗಳೂರು ನಗರ ಘಟಕದಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಸಂಬಂಧ ಅಕ್ಟೋಬರ್ 18ರಂದು 53 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳು ಇಲಾಖೆ ವೆಬ್ಸೈಟ್ www.ksp.gov.in ನಲ್ಲಿ ಕರಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಮಾಹಿತಿ
ಸುರಕ್ಷಿತ ದಸರಾಗೆ ಸಿಎಂ ಸೂಚನೆ
ಮೈಸೂರು : ರಾಜ್ಯದಲ್ಲಿ ಕರುನಾಡಿನ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಬನ್ನಿ ಸುರಕ್ಷಿತವಾಗಿ ಆಚರಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರು ಸೂಚನೆ ನೀಡಿದ್ದು ವರ್ಚುವಲ್ ಆಚರಣೆಗೆ ಒತ್ತು ಕೊಡುವಂತೆ ಸಲಹೆ ನೀಡಿದ್ದಾರೆ.
ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮತ್ತು ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿ ಕೆಲವು ಸೂಚನೆಗಳನ್ನು ನೀಡಿದರು.