ಮಾಹಿತಿ
ಬೆಂಗಳೂರಿನಲ್ಲಿ ಕೇಳಿದ್ದು ಸುಖೋಯ್ “ಸಾನಿಕ್” ಶಬ್ದ
ಬೆಂಗಳೂರಿನಲ್ಲಿ ಬುಧವಾರ ಜನರನ್ನು ಬೆಚ್ಚಿ ಬೀಳಿಸಿದ ಶಬ್ದ ಸುಖೋಯ್ ಸೂಪರ್ ಸಾನಿಕ್ ವಿಮಾನದ್ದು ಎನ್ನಲಾಗಿದೆ. ಈ ಕುರಿತು ವಿಜ್ಞಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಸೂಪರ್ ಸಾನಿಕ್ ವಿಮಾನಗಳ ಶಬ್ದ ಗುಡುಗಿಗಿಂತಲೂ ಪ್ರಬಲವಾಗಿರುತ್ತದೆ. ಎಲ್ಲೋ ಇಂದು ಕಡಿಮೆ ಎತ್ತರದಲ್ಲಿ ಸಾನಿಕ್ ವಿಮಾನ ಹಾರಾಟ ನಡೆಸಿದಾಗ ಕೆಲವೊಮ್ಮೆ ಭೂಮಿಗೆ ಪ್ರಬಲವಾಗಿ ಶಬ್ದ ಕೇಳಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ಮಾಹಿತಿ
ಅಕ್ಟೋಬರ್ 12 ರಿಂದ 30ರವರೆಗೆ ರಾಜ್ಯಾದ್ಯಂತ ಶಾಲೆಗಳಿಗೆ ಮಧ್ಯಂತರ ರಜೆ
ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರು ರಾಜ್ಯಾದ್ಯಂತ ಅ. 12 ರಿಂದ 30ರವರೆಗೆ ಶಾಲೆಗಳಿಗೆ ಮಧ್ಯಂತರ ರಜೆ ಘೋಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಆದೇಶವು ಸರ್ಕಾರಿ ಶಾಲೆಗಳ ಜೊತೆಗೆ ಅನುದಾನಿತ ಮತ್ತು ಖಾಸಗಿ ಶಾಲೆಗಳು ಹಾಗೂ ಶಿಕ್ಷಕರಿಗೂ ಅನ್ವಯವಾಗಲಿದೆ. ಆನ್ಲೈನ್ ತರಗತಿಗಳು ಸಹ ಮೂವತ್ತರವರೆಗೆ ಸ್ಥಗಿತವಾಗಲಿದೆ.
ಮಾಹಿತಿ
ಪೇದೆ ಹುದ್ದೆಗೆ 18ರಂದು ಲಿಖಿತ ಪರೀಕ್ಷೆ
ಬೆಂಗಳೂರು : ಬೆಂಗಳೂರು ನಗರ ಘಟಕದಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಸಂಬಂಧ ಅಕ್ಟೋಬರ್ 18ರಂದು 53 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳು ಇಲಾಖೆ ವೆಬ್ಸೈಟ್ www.ksp.gov.in ನಲ್ಲಿ ಕರಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಮಾಹಿತಿ
ಸುರಕ್ಷಿತ ದಸರಾಗೆ ಸಿಎಂ ಸೂಚನೆ
ಮೈಸೂರು : ರಾಜ್ಯದಲ್ಲಿ ಕರುನಾಡಿನ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಬನ್ನಿ ಸುರಕ್ಷಿತವಾಗಿ ಆಚರಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರು ಸೂಚನೆ ನೀಡಿದ್ದು ವರ್ಚುವಲ್ ಆಚರಣೆಗೆ ಒತ್ತು ಕೊಡುವಂತೆ ಸಲಹೆ ನೀಡಿದ್ದಾರೆ.
ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮತ್ತು ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿ ಕೆಲವು ಸೂಚನೆಗಳನ್ನು ನೀಡಿದರು.