ರಾಜ್ಯ
ಬಿಳ್ಳೂರು ಬಳಿ ಬಲಿಗಾಗಿ ಆಹ್ವಾನಿಸುತ್ತಿರುವ ವಿದ್ಯುತ್ ಕಂಬ
ಬೆಸ್ಕಾಂ ಇಲಾಖೆಯ ಗಮನಕ್ಕೆ.
ಬಾಗೇಪಲ್ಲಿ: ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ತಾಲ್ಲೂಕಿನ ಬಿಳ್ಳೂರುನಿಂದ ಪಾತಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಿಳ್ಳೂರು ಹೊರವಲಯದ ಸಮೀಪದಲ್ಲಿ ವಿದ್ಯುತ್ ಕಂಬವೊಂದರ ಬುಡದಲ್ಲಿ ಮುರಿದು ರಸ್ತೆಗೆ ವಾಲಿ ಆತಂಕವನ್ನು ಸೃಷ್ಟಿಸಿದೆ.
ಕಳೆದ ಬುಧವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ನೂರಾರೂ ಮರಗಳು ಧರೆಗೆ ಉರುಳಿ ಬಿದ್ದಿರುವುದು ಒಂದಡೆಯಾದರೆ ಮತ್ತೊಂದು ಕಡೆ ವಿದ್ಯುತ್ ಕಂಬಗಳು ಅಲ್ಲಲ್ಲಿ ಮುರಿದು ಬಿದ್ದಿವೆ.
ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು ಯಾವ ಕ್ಷಣದಲ್ಲಿ ಈ ಕಂಬ ಬೀಳುವುದೋ ಎಂಬ ಭಯದಿಂದ ಪ್ರಾಣ ಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕೂಡಲೇ ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಬಲಿಗಾಗಿ ಕಾದಿರುವ ವಿದ್ಯುತ್ ಕಂಬ ತೆರವುಗೊಳಿಸಿ ಹೊಸ ಕಂಬ ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ರಾಜ್ಯ
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಬಾಗೇಪಲ್ಲಿ: ಪೆಟ್ರೋಲ್ ಡೀಸೆಲ್,ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ನೇತೃತ್ವದಲ್ಲಿ ಬಾಗೇಪಲ್ಲಿ ಡಾ.ಎಚ್.ಎನ್ ವೃತದಿಂದ ಮೆರವಣಿಗೆ ಹೊರಟು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಿವಿಧ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಸಾಮಾನ್ಯರ ಜೀವನ ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಭಾರತದಲ್ಲಿ ಜೀವನ ಮಾಡೋದೇ ಕಷ್ಟವಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇಲ್ಲ ಎಂದು ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.
ಸಿಪಿಐಎಂ ಪಕ್ಷದ ಮುಖಂಡ ಹಾಗೂ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ಪಿ.ಎಂ.ಮುನಿವೆಂಕಟಪ್ಪ ಮಾತನಾಡಿ ಕೋವಿಡ್ ಲಾಕ್‌ಡೌನ್ ನಂತರ ಚಾಲಕರ ಜೀವನ ಮತ್ತಷ್ಟು ಹದಗೆಟ್ಟಿದೆ. ಸರ್ಕಾರವು ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುತ್ತಲೇ ಇದೆ. ಕೇವಲ ಚಾಲಕರಷ್ಟೇ ಅಲ್ಲ, ಅಡುಗೆ ಸಿಲಿಂಡರ್ ದರ ಕೂಡ ಏರಿಸುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ’ ಎಂದರು.
ಇಂತಹ ಸಂಕಷ್ಟದ ನಡುವೆ ರಾಜ್ಯ ಸರ್ಕಾರವು ಟಿ.ವಿ, ಬೈಕ್ ಇರುವವರ ಪಡಿತರ ಚೀಟಿ ರದ್ದು ಮಾಡಲಾಗುವುದು ಎಂದು ನೀಡಿರುವ ಹೇಳಿಕೆಯಿಂದ ಬಡವರು ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಅಗತ್ಯ ವಸ್ತುಗಳು, ತೈಲ ಬೆಲೆ ಇಳಿಸಬೇಕು. ಮಾರ್ಚ್ 4ರ ಗಡುವಿನೊಳಗೆ ಸರ್ಕಾರ ಚಾಲಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಧಾನಸೌಧ ಚಲೋ ನಡೆಸಲಾಗುವುದು’ ಎಂದು ತಿಳಿಸಿದರು.
ಎಡಪಂಥೀಯ ಚಿಂತಕ ಹಾಗೂ ಪ್ರಜಾ ವೈದ್ಯ ಡಾ.ಅನಿಲ್ ಕುಮಾರ್ ಅವುಲಪ್ಪ ಮಾತನಾಡಿ
ಕೊರೊನಾ ಬಳಿಕ ಪುನಶ್ಚೇತನದ ಹಾದಿ ತುಳಿದಿರುವ ಸಾಮಾನ್ಯರ ಜೀವನ ಹಾಗೂ ಆರ್ಥಿಕ ಸ್ಥಿತಿಗತಿಯ ಮೇಲೆ ಪೆಟ್ರೋಲ್ ಬೆಲೆ ಏರಿಕೆಯು ಬರೆ ಎಳೆದಂತಾಗಿದೆ. ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಜನರು ತತ್ತರಿಸಿ ಹೋಗಿದ್ದಾರೆ. ಜೊತೆಗೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಹೆಚ್ಚಾಗಿರುವುದು ಜೀವನ ನಿರ್ವಹಣೆಗೆ ಕಠಿಣ ಸವಾಲು ಹಾಕಿದಂತಾಗಿದೆ ಎಂದು ಹೇಳಿದರು.
ಪ್ರತಿಭಟನೆಯ ನಂತರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ.ಅನಿಲ್ ಕುಮಾರ್ ಅವುಲಪ್ಪ, ಮಂಜುನಾಥ ರೆಡ್ಡಿ, ಸಾವಿತ್ರಮ್ಮ, ಮುನಿವೆಂಕಟಪ್ಪ, ಅಶ್ವಥಪ್ಪ, ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ರಾಜ್ಯ
ಸರ್ಕಾರಿ ಶಾಲೆಗಳ ಸಬಲೀಕರಣ, ಶಾಲಾ ಅಭಿವೃದ್ದಿ
ಬಾಗೇಪಲ್ಲಿ : ಸರ್ಕಾರಿ ಶಾಲೆಗಳ ಸಬಲೀಕರಣ ,ಶಾಲಾ ಅಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ ಎಂದು ಬಿಳ್ಳೂರು ವ್ಯಾಪ್ತಿಯ ಸಿಆರ್ಪಿ ಅರುಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ಪೆದ್ದರೆಡ್ಡಿಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ
ಅಯೋಜಿಸಿದ್ದ ಕ್ಲಸ್ಟರ್ ಮಟ್ಟದ ಎಸ್ಡಿಎಂಸಿ ಸದಸ್ಯರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರ ಮಕ್ಕಳ ಗುಣಾತ್ಮಕ ಕಲಿಕೆ ಮತ್ತು ಶಾಲಾ ಮೂಲಭೂತ ಸೌಲಭ್ಯಗಳಿಗಾಗಿ ಅನುದಾನ ಬಿಡುಗಡೆ ಮಾಡುತ್ತಿದೆ.ಅದರ ಸದುಪಯೋಗ ಆದಾಗ ಕಾರ್ಯ ಯೋಜನೆಗಳು ಯಶಸ್ವಿಯಾಗುತ್ತವೆ ಎಂದರು.
ರಾಶ್ಚೇರುವು ವ್ಯಾಪ್ತಿಯ ಸಿಆರ್ಪಿ ಎನ್.ರಫೀಕ್ ಅಹ್ಮದ್ ಮಾತನಾಡಿ ಸಮಿತಿಯ ಜವಾಬ್ದಾರಿ ,ಕರ್ತವ್ಯ,ಅಧಿಕಾರ,ವಿಧಿವಿಧಾನಗಳು,ಸಭೆ ನಡೆಸುವುದು,ಸರ್ಕಾರಿ ಸೌಲಭ್ಯ ಬಳಕೆ,ಅವಕಾಶ,ತರಬೇತಿ ಬಗ್ಗೆ ತಿಳಿಸಿದರು.
ಶಾಲೆಗಳ ಸಮಗ್ರ ಅಭಿವೃಧ್ಧಿಗೆ ಸಮುದಾಯದ ಸಹಭಾಗಿತ್ವ ಮುಖ್ಯ.ಇವರನ್ನು ಶಾಲೆಗಳ ಕಡೆ ಗಮನ ಸೆಳೆಯುವ ಕೆಲಸ ಎಸ್ಡಿಎಂಸಿಗಳಿಂದ ಆಗಬೇಕು.ಮಕ್ಕಳಿಲ್ಲದಿದ್ದರೆ ಶಾಲೆ ನಡೆಸುವುದು ಯಾರಿಗಾಗಿ ಎನ್ನುವುದೇ ಸರ್ಕಾರದ ಪ್ರಶ್ನೆ.ಇದಕ್ಕಾಗಿ ಮಕ್ಕಳ ಪೋಷಕರು ಹೆಚ್ಚಿನ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಮುಂದಿನ ಭವಿಷ್ಯಕ್ಕಾಗಿ ಇಂದೇ ಬುನಾದಿ ಹಾಕಬೇಕು ಎಂದರು.ಷೋಷಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸಿ ಮಕ್ಕಳಿಗೆ ಬೇಕಾಗಿರುವ ಸೌಲಭ್ಯ ಒದಗಿಸುತ್ತಿದೆ ಎಂದರು.
ತರಬೇತಿ ಕಾರ್ಯಗಾರದಲ್ಲಿ ಎಸ್ಡಿಎಂಸಿ ಅಧ್ಯಕ್ಷ ವಿ.ರಂಗಯ್ಯ ,ಸದಸ್ಯರು ,
ಮುಖ್ಯ ಶಿಕ್ಷಕಿ ಶಾಷಿತ್ತಾನಾಜ್,ಅಂಗನವಾಡಿ ಕಾರ್ಯಕರ್ತೆ ಶ್ಯಾಮಲ ಮತ್ತು ಗ್ರಾಮಸ್ಥರು ಹಾಜರಿದ್ದರು.
ರಾಜ್ಯ
ಡಿಜಿ ಪೆಟ್ರೋಲ್ ಪಂಪ್ ಬಳಿ ನೂತನ ಉದ್ಯಾನವನ ನಿರ್ಮಾಣಕ್ಕೆ ಚಾಲನೆ
ಬೆಂಗಳೂರು : ತಮ್ಮ ವಿಧಾನಸಭಾ ಕ್ಷೇತ್ರದ ಪದ್ಮನಾಭನಗರ ವಾರ್ಡ್ ನ ಡಿಜಿ ಪೆಟ್ರೋಲ್ ಪಂಪ್ ಬಳಿ ನೂತನ ಉದ್ಯಾನವನ ನಿರ್ಮಾಣಕ್ಕೆ ಸ್ಥಳೀಯ ಶಾಸಕರಾದ ಆರ್. ಅಶೋಕ್ ರವರು ಭೂಮಿಪೂಜೆ ನೆರವೇರಿಸಿದರು.
ಉದ್ಯಾನವನದ ಕುರಿತು ಅಲ್ಲಿ ಪಾಲ್ಗೊಂಡ ಸ್ಥಳೀಯರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಉದ್ಯಾನವನವು ನಮ್ಮ ಕ್ಷೇತ್ರದ ಅತಿದೊಡ್ಡ ಉದ್ಯಾನವನವಾಗಲಿದ್ದು, ಕ್ಷೇತ್ರದ ಜನರಿಗೆ ಅಗತ್ಯವಿರುವ ಸೌಲಭ್ಯ, ಅತ್ಯುತ್ತಮ ಮನರಂಜನಾ ಮತ್ತು ವಿಶ್ರಾಂತಿಯ ತಾಣವಾಗಲಿದೆ ಎಂದರು.