ಬೆಂಗಳೂರು
ನ್ಯಾಯಕ್ಕಾಗಿ ನ್ಯಾಯವಾದಿಗಳ ಪ್ರತಿಭಟನೆ ; ಸಿಟಿ ಸಿವಿಲ್ ಕೋರ್ಟ್ ಬಳಿ ಘಟನೆ
ಮುಕ್ತ ನ್ಯಾಯಾಲಯಕ್ಕಾಗಿ ಸರ್ಕಾರದ ವಿರುದ್ಧ ನ್ಯಾಯವಾದಿಗಳು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಆವರಣದ ಗೇಟ್ ಬಳಿ ಪ್ರತಿಭಟನೆಯನ್ನು ನಡೆಸಿದರು. ವಕೀಲರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುಕ್ತ ಪ್ರವೇಶ ಕೊಡಬೇಕೆಂದು ನ್ಯಾಯವಾದಿಗಳು ಆಗ್ರಹಿಸಿದರು. ಬೆಳಿಗ್ಗೆ 11:30 ಗಂಟೆಗೆ ಪ್ರಾರಂಭವಾದ ಪ್ರತಿಭಟನೆಯಲ್ಲಿ ಕಮಿಟಿ ಕನ್ವಿನರ್ ಭಕ್ತ ವತ್ಸಲಾ, ಜಂಟಿ ಕನ್ವಿನರ್ ಮುನಿಯಪ್ಪ , ಎಸ್ ಬಾಲನ್, ಎಲ್ ಭರತ್ ಪಾಲ್ಗೊಂಡಿದ್ದರು. ಸರ್ಕಾರ ಮತ್ತು ನ್ಯಾಯಾಂಗ ಇಲಾಖೆ ಖುದ್ದಾಗಿ ಪರಿಶೀಲಿಸಿ ವಕೀಲರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಬೆಂಗಳೂರು
ರಾಷ್ಟ್ರದ ರಾಜಧಾನಿಯಲ್ಲಿನ ಕೊಳೆಗೆರೆ ಪ್ರದೇಶದಲ್ಲಿ ಕೊಚ್ಚಿ ಹೋಗುತ್ತಿವೆ
ನವದೆಹಲಿ: ರಾಷ್ಟ್ರ ರಾಜಧಾನಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಐಟಿಒ ಬಳಿಯ ಅಣ್ಣಾ ನಗರದ ಕೊಳೆಗೇರಿ ಪ್ರದೇಶದಲ್ಲಿ ಇಂದು ಮನೆ ಕುಸಿದಿದೆ. ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಕೇಂದ್ರೀಕೃತ ಅಪಘಾತ ಮತ್ತು ಆಘಾತ ಸೇವೆಗಳು (ಸಿಎಟಿಎಸ್) ಮತ್ತು ಅಗ್ನಿಶಾಮಕ ಯಂತ್ರಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ರಾಜಕಾಲುವೆಗಳ ದಡದಲ್ಲಿದ್ದ ಮನೆಗಳ ಅಡಿಪಾಯಗಳು ತೇವಗೊಂಡಿದ್ದು, ಭಾರಿ ಮಳೆಗೆ ಅಡಿಪಾಯಗಳ ಸಹಿತ ಕುಸಿದು ಬೀಳುತ್ತಿವೆ. ಸರ್ಕಾರಗಳು ಇಂತಹ ಅಪಾಯದಲ್ಲಿನ ಮನೆಗಳನ್ನು ಈ ಮೊದಲೇ ತೆರವುಗೊಳಿಸಿ ಅಲ್ಲಿನ ನಿವಾಸಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಕೊಡಬೇಕಿತ್ತು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಬೆಂಗಳೂರು
ದ್ವಿತೀಯ ಪಿಯು ಫಲಿತಾಂಶ ಪ್ರಕಟ; ಕಲಾ ವಿಭಾಗದಲ್ಲಿ ಟಾಪರ್ ಆದ ಗ್ರಾಮೀಣ ಪ್ರತಿಭೆ
ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಇಂದು ಪಿಯು ಕಾಲೇಜ್ ವಿದ್ಯಾರ್ಥಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗ್ರಾಮೀಣ ಪ್ರತಿಭಾವಂತ ಕರೆಗೌಡ್ ದಾಸನಗೌಡರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ.
600 ಕ್ಕೆ 596 ಅಂಕ ಪಡೆದ ವಿದ್ಯಾರ್ಥಿ ಗ್ರಾಮೀಣ ವಿದ್ಯಾರ್ಥಿ…
ಇತಿಹಾಸ – 100 ಕನ್ನಡ- 97 ಸಂಸ್ಕೃತ -100 ಪಾಲಿಟಿಕಲ್ – 98 ಐಚ್ಛಿಕ ಕನ್ನಡ- 99 ಶಿಕ್ಷಣ -100 ಅಂಕಗಳನ್ನು ಪಡೆದು ಕಲಾವಿಭಾಗದಲ್ಲಿ ಟಾಪರ್ ಆಗಿದ್ದಾನೆ.
ಬೆಂಗಳೂರು
ದ್ವಿತೀಯ PUC ಫಲಿತಾಂಶ ಪ್ರಕಟ :ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಗಳು ಪ್ರಥಮ ಮತ್ತು ವಿಜಯಪುರ ಕೊನೆ
ಬೆಂಗಳೂರು : ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.61.80 ಫಲಿತಾಂಶ ಬಂದಿದೆ. ಇಂದು ಬೆಳಗ್ಗೆ 11.30 ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಇಲಾಖೆಯ ವೆಬ್ ಸೈಟ್ ನಲ್ಲಿ ಅಧಿಕೃತ ಫಲಿತಾಂಶ ಪ್ರಕಟವಾಗಿದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತಿಳಿಯಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ www.karresults.nic.in ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು.
1016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸುಮಾರು 70 ಮೌಲ್ಯಮಾಪನ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿದೆ. ಒಟ್ಟು 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ಹೊಸಬರು 5,56267 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಇದರಲ್ಲಿ 3,84,947 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನಾರಾವರ್ತಿತ 91,025 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 25,602 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ. 76.02 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ,65.52 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾವಿಭಾಗದಲ್ಲಿ ಶೇ. 41.27 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಈ ಎರಡು ಜಿಲ್ಲೆಗಳಲ್ಲಿ ಶೇ. 90.71 ರಷ್ಟು ಫಲಿತಾಂಶ ಬಂದಿದೆ. ವಿಜಯಪುರ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.
ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ?
1.ಉಡುಪಿ – ಶೇ. 90.71
2.ದಕ್ಷಿಣ ಕನ್ನಡ- ಶೇ.90.71
3.ಕೊಡಗು- ಶೇ.81.53
4.ಉತ್ತರ ಕನ್ನಡ- ಶೇ.80.97
5.ಚಿಕ್ಕಮಗಳೂರು- ಶೇ.79.11
6.ಬೆಂಗಳೂರು ದಕ್ಷಿಣ- ಶೇ. 77.56
7.ಬೆಂಗಳೂರು ಉತ್ತರ – ಶೇ.75.54
8.ಬಾಗಲಕೋಟೆ- ಶೇ.74.59
9.ಚಿಕ್ಕಬಳ್ಳಾಪುರ- ಶೇ.73.74
10.ಶಿವಮೊಗ್ಗ- ಶೇ.72.19
11.ಹಾಸನ – ಶೇ.70.18
12.ಚಾಮರಾಜನಗರ- ಶೇ.69.29
13.ಬೆಂಗಳೂರು ಗ್ರಾಮಾಂತರ- ಶೇ.69.02
14.ಹಾವೇರಿ- ಶೇ.68.01
15.ಮೈಸೂರು- ಶೇ.67.98
16.ಕೋಲಾರ ಶೇ.67.42
17.ಧಾರವಾಡ- ಶೇ.67.31
18.ಬೀದರ್ – ಶೇ.64.61
19.ದಾವಣಗೆರೆ- ಶೇ.64.09
20.ಚಿಕ್ಕೋಡಿ- ಶೇ.63.88
21.ಮಂಡ್ಯ -ಶೇ.63.82
22.ಗದಗ – ಶೇ.63
23.ತುಮಕೂರು- ಶೇ.62.26
24.ಬಳ್ಳಾರಿ- ಶೇ.62.02
25.ರಾಮನಗರ- ಶೇ.60.96
26.ಕೊಪ್ಪಳ- ಶೇ.60.09
27.ಬೆಳಗಾವಿ- ಶೇ.59.07
28.ಯಾದಗಿರಿ- ಶೇ.58.38
29.ಕಲಬುರಗಿ- ಶೇ. 58.27
30.ಚಿತ್ರದುರ್ಗ- ಶೇ.56.08
31.ರಾಯಚೂರು- ಶೇ.56.22
32.ವಿಜಯಪುರ- ಶೇ.54.22.
ವರದಿ: ನರಸಿಂಹಮೂರ್ತಿ ಎಂ.ಎಲ್. ಮಾಡಪ್ಪಲ್ಲಿ