ಸುದ್ದಿ
ರೆಡ್ಡಿ ಅಭಿವೃದ್ಧಿ ನಿಗಮ ಸ್ಥಾಪಿಸಲು- ಅಖಿಲ ಭಾರತ ರೆಡ್ಡಿ ಒಕ್ಕೂಟ ಒತ್ತಾಯ
ರಾಯಚೂರು,ಅ.17- ಕರ್ನಾಟಕ ರಾಜ್ಯ ರೆಡ್ಡಿ ಅಭಿವೃದ್ದಿ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಅಖಿಲ ಭಾರತ ರೆಡ್ಡಿ ಒಕ್ಕೂಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಪ್ರಸ್ತುತ ರಾಜ್ಯದ 28 ಜಿಲ್ಲೆಗಳಲ್ಲಿ 95 ಲಕ್ಷ ರೆಡ್ಡಿ ಜನರಿದ್ದು, ಅದರಲ್ಲಿ ಶೇ.70 ರಷ್ಟು ಜನರು ಬಡವರಾಗಿದ್ದಾರೆ. ಬಹುತೇಕ ರೆಡ್ಡಿ ಸಮುದಾಯದ ಜನರು ಕೃಷಿ ಪ್ರಧಾನ ಕುಟುಂಬ ಮತ್ತು ಉದ್ಯೋಗಸ್ಥರಾಗಿದ್ದು, ಇವರಲ್ಲಿ ಅನೇಕರು ಬಡವರಾಗಿದ್ದು, ಒಕ್ಕಲುತನವನ್ನೆ ತಮ್ಮ ಬಹುತೇಕ ಬದುಕು ಉಸಿರಾಗಿಸಿಕೊಂಡಿದ್ದಾರೆ. ರೆಡ್ಡಿ ಸಮುದಾಯದ ಹೊಸ ತಲೆಮಾರಿನ ಯುವಕರು ಶಿಕ್ಷಣ ವೃತ್ತಿ, ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ಹೆಚ್ಚಿಸಿ ಉದ್ಯೋಗ ಅವಕಾಶ ಕಲ್ಪಿಸಬೇಕು. ರೆಡ್ಡಿ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ರೆಡ್ಡಿ ಒಕ್ಕೂಟ ಸಮಿತಿಯ ಜಿಲ್ಲಾ ಉಸ್ತುವಾರಿ ವಿ.ಪಿ.ರೆಡ್ಡಿ, ಅಚ್ಚುತ್‌ರೆಡ್ಡಿ, ಕೃಷ್ಣಪಾಟೀಲ್, ಸುಧಾಕರ್ ರೆಡ್ಡಿ, ಮಲ್ಲು ರೆಡ್ಡಿ,ನರಸಿಂಹರೆಡ್ಡಿ, ದಶರತರೆಡ್ಡಿ, ಅಮರೇಶ ರೆಡ್ಡಿ, ರಾಮಾರೆಡ್ಡಿ, ಸಿದ್ದಲಿಂಗ, ಶರಣಬಸವ, ಮಲ್ಲಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಮೇಶ್ ಬಾಬು ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ
ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಮೇಶ್ ಬಾಬು ಅವರು ನಗರದ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು
ಪದವೀಧರ ನಿರುದ್ಯೋಗಿಗಳ ಹಾಗೂ ಸೇವಾ ಭದ್ರತೆ ಇಲ್ಲದೆ ಖಾಸಗಿ ಮತ್ತು ಅನುದಾನರಹಿತ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಲು ನಾನು ಸದಾ ಸಿದ್ಧನಿದ್ದೆನೆ.ಅವರ ಕಷ್ಟಗಳಿಗೆ ಸ್ಪಂದಿಸಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ವಿದ್ಯಾವಂತ ಯುವ ಸಮುದಾಯ ಮತ ನೀಡಿ ಕ್ಷೇತ್ರದ ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಶ್ರಮಿಸುತ್ತೇನೆ ಎಂದರು
ಕಳೆದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 15 ತಿಂಗಳ ಅಲ್ಪ ಅವಧಿಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸಿ 5 ಕೋಟಿ ಅನುದಾನದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿರುವ ನನಗೆ ನಿರುದ್ಯೋಗಿ ಪದವೀಧರ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಮಾಡಿಕೊಡ ಬೇಕೆಂದು ಆಗ್ನೇಯ ಪದವೀಧರ ಕ್ಷೇತ್ರದ ಆಭ್ಯರ್ಥಿ ರಮೇಶ್ ಬಾಬು ಮನವಿ ಮಾಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮತಯಾಚನೆ ಮಾಡಿ ನಂತರ ಮಾತನಾಡಿ, ಕಳೆದ ಶಿಕ್ಷಕರ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ನನಗೆ ಮತ ನೀಡಿ ಆಯ್ಕೆ ಮಾಡಿದ್ದ ಸಂದರ್ಭದಲ್ಲಿ ಕೇವಲ 15 ತಿಂಗಳ ಅವಧಿಯಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳೊಂದಿಗೆ 6ನೇ ವೇತನ ಆಯೋಗದಲ್ಲಿ ಶಿಕ್ಷಕರಿಗೆ ಅನ್ಯಾಯ ವಾಗದಂತೆ ಎಲ್ಲಾ ಶಿಕ್ಷಕರಿಗೂ ಲಾಭದಾಯಕವಾದ ವೇತನ ಶ್ರೇಣಿ ನಿಗದಿಗೆ ಶ್ರಮಿಸಿದ್ದೇನೆ .
ಪಿಯು ಪ್ರಾಂಶುಪಾಲರಿಗೆ ಕಳೆದ 50 ವರ್ಷಗಳಿಂದ ನಿವಾರಣೆಯಾಗದೆ ನನೆಗುಂದಿಗೆ ಬಿದ್ದಿದ್ದ ವೇತನ ಶ್ರೇಣಿಯನ್ನು ನಿಗದಿ ಮಾಡಿಸಲು ಸತತ ಪ್ರಯತ್ನಪಟ್ಟು ಫಲ ಸಿಕ್ಕಿದೆ ಸಾಮಾಜಿಕ ಕಾಳಜಿ ಹೊಂದಿರುವಂಥಹ ವ್ಯಕ್ತಿಗಳನ್ನು ವಿದ್ಯಾವಂತರಾದ ಮತದಾರ ಪ್ರಭುಗಳು ಆಯ್ಕೆ ಮಾಡಬೇಕಾಗಿದೆ .
ಎಲ್ಲಾ ಪದವೀಧರರನ್ನು ಹಾಗೂ ನಿರುದ್ಯೋಗಿ ಪದವೀಧರರನ್ನು ಸಂಪಿರ್ಕಿಸಿ ಅವರಕುಂದು-ಕೊರತೆ ಸಮಸ್ಯೆಯನ್ನು ಅರಿತಿದ್ದು ಈ ಕಾರಣದಿಂದಾಗಿ ಆಗ್ನೇಯಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿದ್ದು ನನನ್ನು ಆಯ್ಕೆ ಮಾಡಿದಲ್ಲಿ ಹಂತಹಂತವಾಗಿ ಪ್ರಮಾಣಿಕ ಪ್ರಯತ್ನ ಮಾಡಿ ಪದವೀಧರರ ಹಾಗೂ ಶಿಕ್ಷಣ ಕ್ಷೇತ್ರದ ಎಲ್ಲಾ ವರ್ಗದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಕಾಲ ಸನ್ನಿಧಿ ಆಗಿದೆ
ದಿನೇದಿನೇ ಯುವಪೀಳಿಗೆ ಹೆಚ್ಚುತ್ತಾ ಹೋದಂತೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಇದರ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡುತ್ತೇನೆ .
ಕಳದ ನನ್ನ ಅಧಿಕಾರ ಅವಧಿಯಲ್ಲಿ ನನ್ನ 2 ಕೋಟಿ ಅನುದಾನದೊಂದಿಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಯೋಜನಾ ಮಂತ್ರಿಗಳಾ ಗಿದ್ದ ಎಂ.ಆರ್.ಸೀತಾರಂ ಅವರ 1 ಕೋಟಿ ಸೇರಿದಂತೆ ಒಟ್ಟು 5 ಕೋಟಿ ರೂಗಳನ್ನುಹಾಗೂಕೇಂದ್ರ ಸರ್ಕಾರದಿಂದ ಸರ್ಕಾರಿಶಾಲೆಗಳ ಅಭಿವೃದ್ಧಿಗಾಗಿ 12 ಕೋಟಿ ರೂಗಳನ್ನು ಕ್ಷೇತ್ರದ 33 ತಾಲೂಕುಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೇನೆ ಎಂದು ತಿಳಿಸಿದರು.
ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರು ಪ್ರಥಮ ಪ್ರಾಶಸ್ತ್ಯ ನೀಡಿ ಮತ ನೀಡುವ ಮೂಲಕ ನಿಮ್ಮ ಸೇವಕನಾಗುವ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು
ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಎಂ ಮುನಿಯಪ್ಪ ಮಾತನಾಡಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮೇಶ್‌ಬಾಬು ಅವರು ಶಿಕ್ಷಕರ ಸಮಸ್ಯೆಗಳ ಬಗ್ಗೆ ಪ್ರಥಮ ಬಾರಿಗೆ ಧ್ವನಿ ಎತ್ತಿದ ಇವರು ಸಾಮಾಜಿಕ ಕಳಕಳಿ ವ್ಯಕ್ತಿತ್ವ ಒಂದಿದ್ದದ್ದು
ಕಾಂಗ್ರೆಸ್ ಪಕ್ಷದ ಒಮ್ಮತದ ಆಭ್ಯರ್ಥಿಯಾಗಿ ಪ್ರಾಮಾಣಿಕ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳವರು ಪದವೀಧರ ಸಮಸ್ಯೆಗೆ ಸಕಾರತ್ಮಾಕವಾಗಿ ಸ್ಪಂದಿಸುವ ಗುಣವಿದೆ.
ಬಿಜೆಪಿ ಸರಕಾರ ಚುನಾವಣೆ ಪೂರ್ವದಲ್ಲಿ ಸುಳ್ಳು ಭರವಸೆ ಗಳನ್ನು ಕೊಡುವುದರಲ್ಲಿ ನಿಸ್ಸೀಮರು ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ವಿಫ ಲವಾಯಿತು ಲಕ್ಷಾಂತರ ಪದವೀಧರರು ಕೆಲಸವಿಲ್ಲದೆ ಮನೆಯಲ್ಲಿ ರುವಂತಾಗಿದೆ ಬಿಜೆಪಿಯವರು ಸುಳ್ಳು ಭರವಸೆಗಳನ್ನು ನೀಡಿ ಯುವಕರನ್ನ ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಾರೆ ಇವರ ಮಾತುಗಳಿಗೆ ಮರುಳಾಗಬೇಡಿ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಮೇಶ್ ಬಾಬು ಪದವೀಧರರ ಪರ ಕೆಲಸ ಮಾಡುವ ಶಕ್ತಿ ಇದೆ ಸರ್ಕಾರದ ಮಟ್ಟದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ನಿರುದ್ಯೋಗ ಪದವಿದಾರರ ಹಾಗೂ ಶಿಕ್ಷಕರ ಸಂಕಷ್ಟಗಳ ಬಗ್ಗೆ ಹೆಚ್ಚಿನ ಗಮನ ಹರಿಸುವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಒಟ್ಟು 2444 ಮತದಾರ ಬಂಧುಗಳು ರಮೇಶ್ ಬಾಬು ಅವರಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಹೆಚ್ಚು ಮತಗಳನ್ನು ಗಳಿಸುವಂತೆ ಕಾರ್ಯೋನ್ಮುಖರಾಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು
ಈ ಸಂರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ತೋಪಡ ನಾಗರಾಜ್, ಕಾಂಗ್ರೆಸ್ ಹಿರಿಯ ಮುಖಂಡ ಟಿ ಕೆ ನಟರಾಜ್, ಕೆ.ಪಿ.ಸಿ.ಸಿ ಸದಸ್ಯ ಶ್ರಿನಿವಾಸ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಲ್ ಮಧುಸೂದನ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಡಿ.ಸಾದಿಕ್ ದಿಬ್ಬೂರಹಳ್ಳಿ ಡಿ.ಎಸ್ ಎಸ್ ರಾಜು, ಎನ್ .ಎಸ್ .ಯು.ಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ನಗರಸಭಾ ಸದಸ್ಯರಾದ ಮಂಜುನಾಥ್ ವಕೀಲ ಮುನಿರಾಜು, ಕೃಷ್ಣಮೂರ್ತಿ. ಕಾಂಗ್ರೆಸ್ ಕಾರ್ಮಿಕ ಘಟಕ ಅಧ್ಯಕ್ಷ ಇಂತಿಯಾಜ್ ಪಾಷ.ಮುಖಂಡ ಮುಸ್ತು. ಟ್ರ್ಯಾಕ್ಟರ್ ಮಂಜುನಾಥ್,ದೊಡ್ಡ ದಾಸರಹಳ್ಳಿ ದೇವರಾಜು ಮುಂತಾದವರು ಹಾಜರಿದ್ದರು
ವರದಿ. ಕೆ.ಮಂಜುನಾಥ್.ಶಿಡ್ಲಘಟ್ಟ
ಸುದ್ದಿ
ತಾಯ್ನಾಡಿಗೆ ಆಗಮಿಸಿದ ಸೈನಿಕರಿಗೆ ಸನ್ಮಾನ
ರಾಯಚೂರು,ಅ.24- ತಾಯಿ ಭಾರತ ಮಾತೆಯ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿರುವ ಯೋಧರು ಕಣ್ಣಿಗೆ ಕಾಣುವ ದೇವರು ಎಂದು ನಗರ ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್ ಹೇಳಿದರು.
ಅವರಿಂದು ನಗರದ ಕನ್ನಡ ಭವನದಲ್ಲಿ ರೈತರ ಮತ್ತು ಸೈನಿಕರ ಅಭಿಮಾನಿಗಳ ಸಂಘ, ಕಲಾ ಸಂಕುಲ ಸಂಸ್ಥೆ, ಗ್ರೀನ್ ರಾಯಚೂರು ಇವರ ಸಂಯೋಗದಲ್ಲಿ ಆಯೋಜಿಸಲಾಗಿದ್ದ 17 ವರ್ಷಗಳ ಕಾಲ ತಾಯಿ ಭಾರತ ಮಾತೆಯ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಅಗಮಿಸಿದ ವೀರಯೋಧರಿಗೆ ಸ್ವಾಗತ ಮತ್ತು ಸಮಾರಂಭ ಕಾರ್ಯಕ್ರಮವನ್ನು ಸಸಿಗೆ ನೀರು ಹಾಯಿಸುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗಡಿನಾಡಿನಲ್ಲಿ ಸೈನಿಕರು ದೇಶಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ.
ನಮ್ಮ ಜಿಲ್ಲೆಯವರು ಕಳೆದ 17 ವರ್ಷಗಳಿಂದ ಎಲ್ಲವನ್ನು ತ್ಯಾಗಮಾಡಿ ದೇಶವನ್ನು ಕಾದು ಇಂದು ತಾಯ್ನಾಡಿಗೆ ಆಗಮಿಸಿದ್ದಾರೆ. ಇವರು ನಮ್ಮ ಕಣ್ಣಿಗೆ ಕಾಣುವ ದೇವರು. ಕಳೆದ ಐದು ತಿಂಗಳಿನಿಂದ ಕೊರೋನಾ ಮಹಾಮಾರಿಯಂತಹ ರೋಗ ದೇಶವ್ಯಾಪಿ ಹಬ್ಬಿದರು ಸೈನಿಕರು ಗಡಿಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ದೇಶವನ್ನು ಕಾದಿದ್ದಾರೆ.
ಬೇರೆ ದೇಶ ನಮ್ಮ ದೇಶವನ್ನು ನೋಡಿ ಕಲಿಯುತ್ತಿದೆ. ನಮ್ಮನ್ನು ಯುದ್ದಕ್ಕೆ ಕರೆಯಬೇಕೆಂದರೆ ಪಾಕೀಸ್ತಾನ, ಚೀನಾದಂತಹ ದೇಶಗಳು ಭಯಪಡುತ್ತವೆ. ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರಿದ್ದಾರೆ. ಭಾರತ ಮಾತೆಗೆ ನಾವು ಚಿರಋಣಿಯಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಸುಂದರ ಸಿಂಗ್, ಮಾರುತಿ ಬಡಿಗೇರ, ರೂಪಾನಾಯಕ, ಓಂಕಾರ, ಅಮರೇಗೌಡ, ರಾಜೇಂದ್ರ ಕುಮಾರ ಶಿವಾಳೆ, ಸರಸ್ವತಿ ಕಿಲೆಕಿಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಕುಷ್ಟಗಿ ತಾಲೂಕಿನ ನಿಲೋಗಲ್ ಅಚುನುರ್ ಮಲ್ಲಯ್ಯ ಗ್ರಾಮದ ಕೆರೆಗೆ ಬಾಗಿನ ಅರ್ಪಣೆ
ಅಭಿನವ ಶ್ರೀ ಗವಿಸಿದ್ದೇಶ್ವರ ಶ್ರೀಗಳ ಅಮೃತ ಹಸ್ತದಿಂದ ಕುಷ್ಟಗಿ ತಾಲೂಕಿನ ನಿಲೋಗಲ್ ಅಚುನುರ್ ಮಲ್ಲಯ್ಯ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಲಾಯಿತು ಕಾರ್ಯಕ್ರಮದಲ್ಲಿ ನಮ್ಮ ಜನಪ್ರಿಯ ಶಾಸಕರಾದ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ್ ಹಾಗು ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಮುಖಂಡರಾದ ಮಹಾಂತೇಶ್ ಅಗಸಿಮುಂದಿನ್ ಹಾಗು ಸ್ಥಳೀಯ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.