Connect with us

ಸುದ್ದಿ

ಕರ್ನಾಟಕ ನೊಂದ ಮಹಿಳಾ ರಕ್ಷಣಾ ವೇದಿಕೆ ( ರಿ) ಗೆ ಆಯ್ಕೆಯಾದ ನೂತನ ಪದಾಧಿಕಾರಿಗಳ ಪಟ್ಟಿ

Published

on

ಕರ್ನಾಟಕ ನೊಂದ ಮಹಿಳಾ ರಕ್ಷಣಾ ವೇದಿಕೆ ( ರಿ) ಗೆ ಆಯ್ಕೆಯಾದ ನೂತನ ಪದಾಧಿಕಾರಿಗಳ ಪಟ್ಟಿ ಈ ಕೆಳಕಂಡಂತಿದೆ.

1) ಗೌರವಾಧ್ಯಕ್ಷರು – ಶ್ರೀಮತಿ ವೆಂಕಟಲಕ್ಷ್ಮಮ್ಮ
2) ರಾಜ್ಯಾಧ್ಯಕ್ಷರು – ಶ್ರೀಮತಿ ಭಾಗ್ಯ ಲಕ್ಷ್ಮಮ್ಮ
3) ರಾಜ್ಯ ಉಪಾಧ್ಯಕ್ಷರು – ಶ್ರೀಮತಿ ಸರಸ್ವತಮ್ಮ ಬೆಂಗಳೂರು
4) ರಾಜ್ಯ ಪ್ರಧಾನ ಕಾರ್ಯದರ್ಶಿಗಳು – ಶ್ರೀ ಉದಯ್ ಕುಮಾರ್
5) ರಾಜ್ಯ ಸಹಕಾರ್ಯದರ್ಶಿ ಗಳು – ಶ್ರೀ ರಾಜಶೇಖರ ರೆಡ್ಡಿ
6) ಹಿರಿಯ ಸಮಾಲೋಚನಾ ಸಲಹೆಗಾರರು – ಶ್ರೀ ಜಿ. ಅಶ್ವತಪ್ಪ
7) ರಾಜ್ಯ ಕಾನೂನು ಸಲಹೆಗಾರರು –
ಶ್ರೀ ಕೆ .ಎಲ್. ಲಕ್ಷ್ಮೀನಾರಾಯಣ
8) ರಾಜ್ಯ ಖಜಾಂಚಿ – ಶ್ರೀ ಬಿ. ಎನ್. ಮೋಹನ್ ಕುಮಾರ್
9) ಜಿಲ್ಲಾಧ್ಯಕ್ಷರು – ಶ್ರೀಮತಿ ಜಯಮ್ಮ ಗಂಗರೆಡ್ಡಿ

ರಾಜ್ಯ ನಿರ್ದೇಶಕರುಗಳು:-
ವಿಜಯ್ ಕುಮಾರ್ (ಗುಡಿಬಂಡೆ), ಜಬೀನಮ್ಮ (ಗೌರಿಬಿದನೂರು), ಸನತ್ ಕುಮಾರ್ ಶೆಟ್ಟಿ (ಗೌರಿಬಿದನೂರು), ಲಲಿತಾ ಭೂಷಣ್ (ಮಂಚೇನಹಳ್ಳಿ), ಲತಾ (ಗೌರಿಬಿದನೂರು)

ಮೇಲ್ಕಂಡ ಪದಾಧಿಕಾರಿಗಳು ಟ್ರಸ್ಟ್ ನ ನಿಯಮ ಹಾಗೂ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿ ಮಹಿಳಾ ಸಮಾಜಕ್ಕೆ ಒಳ್ಳೆಯ ವೇದಿಕೆಯನ್ನಾಗಿ ರೂಪಿಸಬೇಕೆಂದು, ಮಾಧ್ಯಮದೊಂದಿಗೆ ಪ್ರಧಾನ ಕಾರ್ಯದರ್ಶಿಯಾದ ಉದಯ್ ಕುಮಾರ್ ಅವರು ಪಟ್ಟಿಯನ್ನು ಬಿಡುಗಡೆ ಮಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Continue Reading
Advertisement
Click to comment

Leave a Reply

Your email address will not be published. Required fields are marked *

ವಿಡಿಯೋ

ಸತ್ತ ಕುರಿಗಳಿಗೆ ಸರ್ಕಾರದಿಂದ ಪರಿಹಾರವಿಲ್ಲ ಬೇಸರ ವ್ಯಕ್ತಪಡಿಸಿದ ಅಯ್ಯಪ್ಪ ಗಬ್ಬೂರು

Published

on

ರಾಯಚೂರು : ರಾಯಚೂರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬರುವ ಗಟ್ಟು ಬಿಚ್ಚಾಲಿ ಎಂಬ ಗ್ರಾಮದಲ್ಲಿ ಸಾಯಿಬಣ್ಣ ಎಂಬ ಕುರಿಗಾಹಿನ ಒಂದೇ ಕುಟುಂಬದಲ್ಲಿ ಇದುವರೆಗೂ ಸುಮಾರು 20 ಕುರಿಗಳು ಸಾವನ್ನಿಪ್ಪಿವೆ ಇನ್ನೂಳಿದ ನೀಲ ನಾಲಿಗೆ ಇನ್ನಿತರ ರೋಗಗಳಿಗೆ ಕುರಿಗಳು ಸಾವನ್ನುಪ್ಪುತ್ತಿರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

ಜಿಲ್ಲೆಯಾದ್ಯಂತ ನಿರಂತರ ಮಳೆಗೆ ದಿನಾಲು ರೋಗ ರುಜಿನಗಳಿಗೆ ತುತ್ತಾಗಿ ಕುರಿಗಳು ಸಾವನ್ನಪ್ಪುತ್ತಿದ್ದು ಸರ್ಕಾರದಿಂದ ಇದುವರೆಗೆ ಪರಿಹಾವಿಲ್ಲದೇ ಕುರಿ ಸಾಕಾಣಿಕೆದಾರರು ಪರಿಸ್ಥಿತಿ ಹೇಳತೀರದು ಹಲವಾರು ಬಾರಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ (ರಿ) ಜಿಲ್ಲಾ ಘಟಕ ರಾಯಚೂರು ವತಿಯಿಂದ ಸಂಬಂಧ ಪಟ್ಟ ಸಚಿವರಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಇದುವರೆಗೂ ಕುರಿಗಾಹಿಗಳ ಕುಟುಂಬ ಕಡೆ ಸರ್ಕಾರ ಗಮನಹರಿಸುತ್ತಿಲ್ಲ ಸರ್ಕಾರ ಈಗಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದಾರೆ ಇದೇ ರೀತಿ ಮುಂದುವರಿದರೆ ಎಲ್ಲಾ ಕುರಿ ಸಾಕಾಣಿಕೆದಾರರು ಕುರಿ ಸಾಕಾಣಿಕೆ ಮಾಡುವುದನ್ನು ಬಿಟ್ಟು ವಿದೇಶಿಗಳಿಗೆ ಗೂಳೆ ಹೋಗು ಪರಿಸ್ಥಿತಿ ಬರುತ್ತಿದೆ.

ದಿನಾಲು ಕುರಿ ಸಾಕಾಣಿಕೆ ಕಸುಬುವನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಕುರಿಗಾಹಿಗಳ ಜೀವನ ಅತಂತ್ರ ಸ್ಥಿತಿಯಾಗಿದೆ ಸರ್ಕಾರ ಈಗಾದರೂ ಪರಿಹಾರ ಕೊಟ್ಟು ನೊಂದ ಕುಟುಂಬಗಳಿಗೆ ನೇರವಾಗಬೇಕೆಂದು ನಾನು ಸರ್ಕಾರಕ್ಕೆ ಮನವಿ ಮಾಡಿಕೋಳ್ಳುತ್ತೇನೆ.

ಶ್ರೀ ಅಯ್ಯಪ್ಪ ಗಬ್ಬೂರು ಜಿಲ್ಲಾ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ (ರಿ) ರಾಯಚೂರು.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading

ಸುದ್ದಿ

ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಮೇಶ್ ಬಾಬು ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ

Published

on

ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಮೇಶ್ ಬಾಬು ಅವರು ನಗರದ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು.

ಪದವೀಧರ ನಿರುದ್ಯೋಗಿಗಳ ಹಾಗೂ ಸೇವಾ ಭದ್ರತೆ ಇಲ್ಲದೆ ಖಾಸಗಿ ಮತ್ತು ಅನುದಾನರಹಿತ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಲು ನಾನು ಸದಾ ಸಿದ್ಧನಿದ್ದೇನೆ. ಅವರ ಕಷ್ಟಗಳಿಗೆ ಸ್ಪಂದಿಸಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ವಿದ್ಯಾವಂತ ಯುವ ಸಮುದಾಯ ಮತ ನೀಡಿ ಕ್ಷೇತ್ರದ ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಶ್ರಮಿಸುತ್ತೇನೆ ಎಂದರು.

ಕಳೆದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 15 ತಿಂಗಳ ಅಲ್ಪ ಅವಧಿಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸಿ 5 ಕೋಟಿ ಅನುದಾನದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿರುವ ನನಗೆ ನಿರುದ್ಯೋಗಿ ಪದವೀಧರ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಮಾಡಿಕೊಡ ಬೇಕೆಂದು ಆಗ್ನೇಯ ಪದವೀಧರ ಕ್ಷೇತ್ರದ ಆಭ್ಯರ್ಥಿ ರಮೇಶ್‌ ಬಾಬು ಮನವಿ ಮಾಡಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಮತಯಾಚನೆ ಮಾಡಿ ನಂತರ ಮಾತನಾಡಿ, ಕಳೆದ ಶಿಕ್ಷಕರ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ನನಗೆ ಮತ ನೀಡಿ ಆಯ್ಕೆ ಮಾಡಿದ್ದ ಸಂದರ್ಭದಲ್ಲಿ ಕೇವಲ 15 ತಿಂಗಳ ಅವಧಿಯಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳೊಂದಿಗೆ 6ನೇ ವೇತನ ಆಯೋಗದಲ್ಲಿ ಶಿಕ್ಷಕರಿಗೆ ಅನ್ಯಾಯ ವಾಗದಂತೆ ಎಲ್ಲಾ ಶಿಕ್ಷಕರಿಗೂ ಲಾಭದಾಯಕವಾದ ವೇತನ ಶ್ರೇಣಿ ನಿಗದಿಗೆ ಶ್ರಮಿಸಿದ್ದೇನೆ .

ಪಿಯು ಪ್ರಾಂಶುಪಾಲರಿಗೆ ಕಳೆದ 50 ವರ್ಷಗಳಿಂದ ನಿವಾರಣೆಯಾಗದೆ ನೆನೆಗುಂದಿಗೆ ಬಿದ್ದಿದ್ದ ವೇತನ ಶ್ರೇಣಿಯನ್ನು ನಿಗದಿ ಮಾಡಿಸಲು ಸತತ ಪ್ರಯತ್ನಪಟ್ಟು ಫಲ ಸಿಕ್ಕಿದೆ ಸಾಮಾಜಿಕ ಕಾಳಜಿ ಹೊಂದಿರುವಂಥಹ ವ್ಯಕ್ತಿಗಳನ್ನು ವಿದ್ಯಾವಂತರಾದ ಮತದಾರ ಪ್ರಭುಗಳು ಆಯ್ಕೆ ಮಾಡಬೇಕಾಗಿದೆ .

ಎಲ್ಲಾ ಪದವೀಧರರನ್ನು ಹಾಗೂ ನಿರುದ್ಯೋಗಿ ಪದವೀಧರರನ್ನು ಸಂಪಿರ್ಕಿಸಿ ಅವರಕುಂದು-ಕೊರತೆ ಸಮಸ್ಯೆಯನ್ನು ಅರಿತಿದ್ದು ಈ ಕಾರಣದಿಂದಾಗಿ ಆಗ್ನೇಯಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿದ್ದು ನನನ್ನು ಆಯ್ಕೆ ಮಾಡಿದಲ್ಲಿ ಹಂತಹಂತವಾಗಿ ಪ್ರಮಾಣಿಕ ಪ್ರಯತ್ನ ಮಾಡಿ ಪದವೀಧರರ ಹಾಗೂ ಶಿಕ್ಷಣ ಕ್ಷೇತ್ರದ ಎಲ್ಲಾ ವರ್ಗದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಕಾಲ ಸನ್ನಿಧಿ ಆಗಿದೆ.

ದಿನೇದಿನೇ ಯುವಪೀಳಿಗೆ ಹೆಚ್ಚುತ್ತಾ ಹೋದಂತೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಇದರ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡುತ್ತೇನೆ .

ಕಳದ ನನ್ನ ಅಧಿಕಾರ ಅವಧಿಯಲ್ಲಿ ನನ್ನ 2 ಕೋಟಿ ಅನುದಾನದೊಂದಿಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಯೋಜನಾ ಮಂತ್ರಿಗಳಾ ಗಿದ್ದ ಎಂ.ಆರ್‌.ಸೀತಾರಂ ಅವರ 1 ಕೋಟಿ ಸೇರಿದಂತೆ ಒಟ್ಟು 5 ಕೋಟಿ ರೂಗಳನ್ನುಹಾಗೂಕೇಂದ್ರ ಸರ್ಕಾರದಿಂದ ಸರ್ಕಾರಿಶಾಲೆಗಳ ಅಭಿವೃದ್ಧಿಗಾಗಿ 12 ಕೋಟಿ ರೂಗಳನ್ನು ಕ್ಷೇತ್ರದ 33 ತಾಲೂಕುಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೇನೆ ಎಂದು ತಿಳಿಸಿದರು.

ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರು ಪ್ರಥಮ ಪ್ರಾಶಸ್ತ್ಯ ನೀಡಿ ಮತ ನೀಡುವ ಮೂಲಕ ನಿಮ್ಮ ಸೇವಕನಾಗುವ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಎಂ ಮುನಿಯಪ್ಪ ಮಾತನಾಡಿ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ರಮೇಶ್‌ಬಾಬು ಅವರು ಶಿಕ್ಷಕರ ಸಮಸ್ಯೆಗಳ ಬಗ್ಗೆ ಪ್ರಥಮ ಬಾರಿಗೆ ಧ್ವನಿ ಎತ್ತಿದ ಇವರು ಸಾಮಾಜಿಕ ಕಳಕಳಿ ವ್ಯಕ್ತಿತ್ವ ಒಂದಿದ್ದದ್ದು ಕಾಂಗ್ರೆಸ್ ಪಕ್ಷದ ಒಮ್ಮತದ ಆಭ್ಯರ್ಥಿಯಾಗಿ ಪ್ರಾಮಾಣಿಕ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳವರು ಪದವೀಧರ ಸಮಸ್ಯೆಗೆ ಸಕಾರತ್ಮಾಕವಾಗಿ ಸ್ಪಂದಿಸುವ ಗುಣವಿದೆ.

ಬಿಜೆಪಿ ಸರಕಾರ ಚುನಾವಣೆ ಪೂರ್ವದಲ್ಲಿ ಸುಳ್ಳು ಭರವಸೆ ಗಳನ್ನು ಕೊಡುವುದರಲ್ಲಿ ನಿಸ್ಸೀಮರು ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ವಿಫ ಲವಾಯಿತು ಲಕ್ಷಾಂತರ ಪದವೀಧರರು ಕೆಲಸವಿಲ್ಲದೆ ಮನೆಯಲ್ಲಿ ರುವಂತಾಗಿದೆ ಬಿಜೆಪಿಯವರು ಸುಳ್ಳು ಭರವಸೆಗಳನ್ನು ನೀಡಿ ಯುವಕರನ್ನ ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಾರೆ ಇವರ ಮಾತುಗಳಿಗೆ ಮರುಳಾಗಬೇಡಿ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಮೇಶ್ ಬಾಬು ಪದವೀಧರರ ಪರ ಕೆಲಸ ಮಾಡುವ ಶಕ್ತಿ ಇದೆ. ಸರ್ಕಾರದ ಮಟ್ಟದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ನಿರುದ್ಯೋಗ ಪದವೀಧರ ಹಾಗೂ ಶಿಕ್ಷಕರ ಸಂಕಷ್ಟಗಳ ಬಗ್ಗೆ ಹೆಚ್ಚಿನ ಗಮನ ಹರಿಸುವರು   ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಒಟ್ಟು 2444 ಮತದಾರ ಬಂಧುಗಳು ರಮೇಶ್ ಬಾಬು ಅವರಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಹೆಚ್ಚು ಮತಗಳನ್ನು ಗಳಿಸುವಂತೆ ಕಾರ್ಯೋನ್ಮುಖರಾಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು. 

ಈ ಸಂರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ತೋಪಡ ನಾಗರಾಜ್, ಕಾಂಗ್ರೆಸ್ ಹಿರಿಯ ಮುಖಂಡ ಟಿ ಕೆ ನಟರಾಜ್, ಕೆ.ಪಿ.ಸಿ.ಸಿ ಸದಸ್ಯ ಶ್ರಿನಿವಾಸ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಲ್ ಮಧುಸೂದನ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಡಿ.ಸಾದಿಕ್ ದಿಬ್ಬೂರಹಳ್ಳಿ ಡಿ.ಎಸ್ ಎಸ್ ರಾಜು, ಎನ್ .ಎಸ್ .ಯು.ಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ನಗರಸಭಾ ಸದಸ್ಯರಾದ ಮಂಜುನಾಥ್ ವಕೀಲ ಮುನಿರಾಜು, ಕೃಷ್ಣಮೂರ್ತಿ, ಕಾಂಗ್ರೆಸ್ ಕಾರ್ಮಿಕ ಘಟಕ ಅಧ್ಯಕ್ಷ ಇಂತಿಯಾಜ್ ಪಾಷ, ಮುಖಂಡ ಮುಸ್ತು, ಟ್ರ್ಯಾಕ್ಟರ್ ಮಂಜುನಾಥ್, ದೊಡ್ಡ ದಾಸರಹಳ್ಳಿ ದೇವರಾಜು ಮುಂತಾದವರು ಹಾಜರಿದ್ದರು.

ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ

Continue Reading

ಸುದ್ದಿ

ತಾಯ್ನಾಡಿಗೆ ಆಗಮಿಸಿದ ಸೈನಿಕರಿಗೆ ಸನ್ಮಾನ

Published

on

ರಾಯಚೂರು: ಅ.24- ತಾಯಿ ಭಾರತ ಮಾತೆಯ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿರುವ ಯೋಧರು ಕಣ್ಣಿಗೆ ಕಾಣುವ ದೇವರು ಎಂದು ನಗರ ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್ ಹೇಳಿದರು.

ಅವರಿಂದು ನಗರದ ಕನ್ನಡ ಭವನದಲ್ಲಿ ರೈತರ ಮತ್ತು ಸೈನಿಕರ ಅಭಿಮಾನಿಗಳ ಸಂಘ, ಕಲಾ ಸಂಕುಲ ಸಂಸ್ಥೆ, ಗ್ರೀನ್ ರಾಯಚೂರು ಇವರ ಸಂಯೋಗದಲ್ಲಿ ಆಯೋಜಿಸಲಾಗಿದ್ದ 17 ವರ್ಷಗಳ ಕಾಲ ತಾಯಿ ಭಾರತ ಮಾತೆಯ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿದ ವೀರಯೋಧರಿಗೆ ಸ್ವಾಗತ ಮತ್ತು ಸಮಾರಂಭ ಕಾರ್ಯಕ್ರಮವನ್ನು ಸಸಿಗೆ ನೀರು ಹಾಯಿಸುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗಡಿನಾಡಿನಲ್ಲಿ ಸೈನಿಕರು ದೇಶಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ.

ನಮ್ಮ ಜಿಲ್ಲೆಯವರು ಕಳೆದ 17 ವರ್ಷಗಳಿಂದ ಎಲ್ಲವನ್ನು ತ್ಯಾಗ ಮಾಡಿ ದೇಶವನ್ನು ಕಾದು ಇಂದು ತಾಯ್ನಾಡಿಗೆ ಆಗಮಿಸಿದ್ದಾರೆ. ಇವರು ನಮ್ಮ ಕಣ್ಣಿಗೆ ಕಾಣುವ ದೇವರು. ಕಳೆದ ಐದು ತಿಂಗಳಿನಿಂದ ಕೊರೊನಾ ಮಹಾಮಾರಿಯಂತಹ ರೋಗ ದೇಶವ್ಯಾಪಿ ಹಬ್ಬಿದರೂ ಸೈನಿಕರು ಗಡಿಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ದೇಶವನ್ನು ಕಾದಿದ್ದಾರೆ.

ಬೇರೆ ದೇಶ ನಮ್ಮ ದೇಶವನ್ನು ನೋಡಿ ಕಲಿಯುತ್ತಿದೆ. ನಮ್ಮನ್ನು ಯುದ್ಧಕ್ಕೆ ಕರೆಯಬೇಕೆಂದರೆ ಪಾಕಿಸ್ತಾನ, ಚೀನಾದಂತಹ ದೇಶಗಳು ಭಯಪಡುತ್ತವೆ. ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರಿದ್ದಾರೆ. ಭಾರತ ಮಾತೆಗೆ ನಾವು ಚಿರಋಣಿಯಾಗಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಸುಂದರ ಸಿಂಗ್, ಮಾರುತಿ ಬಡಿಗೇರ, ರೂಪಾನಾಯಕ, ಓಂಕಾರ, ಅಮರೇಗೌಡ, ರಾಜೇಂದ್ರ ಕುಮಾರ ಶಿವಾಳೆ, ಸರಸ್ವತಿ ಕಿಲೆಕಿಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್