ಸುದ್ದಿ
ಫ್ರೀ ಬೀಯಿಂಗ್ ಮಿ ಮತ್ತು ಆಕ್ಷನ್ ಆನ್ ಬಾಡಿ ವಿತ್ ಕಾನ್ ಪಿಡೇನ್ಸ್ ಕಾರ್ಯಾಗಾರ ಉದ್ಘಾಟನೆ ಕಾರ್ಯಕ್ರಮ
ರಾಯಚೂರು ಫೆ.25– ದಿನಾಂಕ:25-02-2021 ರಿಂದ 27-02-2021ರ ವರಗೆ ರಾಜ್ಯ ಮಟ್ಟದ ಫ್ರೀ ಬೀಯಿಂಗ್ ಮಿ ಮತ್ತು ಆಕ್ಷನ್ ಆನ್ ಬಾಡಿ ವಿತ್ ಕಾನ್ ಪಿಡೇನ್ಸ್ ಕಾರ್ಯಾಗಾರವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ ಆಯೋಜನೆ ಮಾಡಲಾಗಿದೆ.
ಈ ಶಿಬಿರದ ನಾಯಕರು ಶ್ರೀ ವಿನಯ್ ಕುಮಾರ್ FBM ಸಂಪನ್ಮೂಲ ವ್ಯಕ್ತಿಗಳು ಕೋಲಾರ ಇವರ ನೇತೃತ್ವದಲ್ಲಿ ನಡೆಯುತ್ತಿದೆ. ಸಾಯಂಕಾಲ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋವಿಂದ ರಾಜ್ ಜಿಲ್ಲಾ ಸ್ಥಾನೀಕ ಆಯುಕ್ತರು ಸ್ಕೌಟ್ ಇವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ವೈ.ಗೋಪಲರೆಡ್ಡಿ ನಗರಾಭಿವೃದ್ಧಿ ಅಧ್ಯಕ್ಷರು ರಾಯಚೂರು ಇದೇ ಸಂದರ್ಭದಲ್ಲಿ ಶ್ರೀಮತಿ ಅಜೀಜಾ ಸುಲ್ತಾನ್ ಜಿಲ್ಲಾ ಮುಖ್ಯ ಆಯುಕ್ತರು ರಾಯಚೂರು, ಶ್ರೀ ಬಸವರಾಜ ಬೋರಡ್ಡಿ ಜಿಲ್ಲಾ ಆಯುಕ್ತರು ಸ್ಕೌಟ್, ಶ್ರೀ ಬಸವರಾಜ ಗದಗಿನ ಜಿಲ್ಲಾ ಕಾರ್ಯದರ್ಶಿಗಳು, ಶ್ರೀ ಎಲ್.ಬಿ.ಹೋರಪ್ಯಾಟೀ ಜಿಲ್ಲಾ ಸ್ಥಾನೀಕ ಆಯುಕ್ತರು ಸ್ಕೌಟ್ ಮತ್ತು ಶಿಕ್ಷಕ/ಶಿಕ್ಷಕಿಯರು 50 ಜನ ಹಾಗೂ ಶ್ರೀಮತಿ ಮನುಕುಮಾರಿ ಬಿ. ಎನ್. ಡಿ.ಓ.ಟಿ ಗೈಡ್ಸ್ ಮತ್ತು ಶ್ರೀ ನಾಗೇಶಗೌಡ ಡಿ. ಓ ಟಿ ಸ್ಕೌಟ್ ಹಾಗೂ ಕುಮಾರ ಅಂಬಣ್ಣ ಎಸ್.ಜಿ.ವಿ ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ನಮ್ಮ ಕಾರ್ಗೊ ಸೇವೆ ಲೋಕಾರ್ಪಣೆ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ವಿಧಾನಸೌಧದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ನೂತನ ಪಾರ್ಸಲ್ ಹಾಗೂ “ನಮ್ಮ ಕಾರ್ಗೊ” ಸೇವೆಯನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷಣ ಸವದಿ, ಸಚಿವರುಗಳಾದ ಉಮೇಶ್ ಕತ್ತಿ, ಡಾ ಕೆ.ಸುಧಾಕರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಪಾಟೀಲ್ ಜಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ
ಡಿಜಿ ಪೆಟ್ರೋಲ್ ಪಂಪ್ ಬಳಿ ನೂತನ ಉದ್ಯಾನವನ ನಿರ್ಮಾಣಕ್ಕೆ ಚಾಲನೆ
ಬೆಂಗಳೂರು : ತಮ್ಮ ವಿಧಾನಸಭಾ ಕ್ಷೇತ್ರದ ಪದ್ಮನಾಭನಗರ ವಾರ್ಡ್ ನ ಡಿಜಿ ಪೆಟ್ರೋಲ್ ಪಂಪ್ ಬಳಿ ನೂತನ ಉದ್ಯಾನವನ ನಿರ್ಮಾಣಕ್ಕೆ ಸ್ಥಳೀಯ ಶಾಸಕರಾದ ಆರ್. ಅಶೋಕ್ ರವರು ಭೂಮಿಪೂಜೆ ನೆರವೇರಿಸಿದರು.
ಉದ್ಯಾನವನದ ಕುರಿತು ಅಲ್ಲಿ ಪಾಲ್ಗೊಂಡ ಸ್ಥಳೀಯರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಉದ್ಯಾನವನವು ನಮ್ಮ ಕ್ಷೇತ್ರದ ಅತಿದೊಡ್ಡ ಉದ್ಯಾನವನವಾಗಲಿದ್ದು, ಕ್ಷೇತ್ರದ ಜನರಿಗೆ ಅಗತ್ಯವಿರುವ ಸೌಲಭ್ಯ, ಅತ್ಯುತ್ತಮ ಮನರಂಜನಾ ಮತ್ತು ವಿಶ್ರಾಂತಿಯ ತಾಣವಾಗಲಿದೆ ಎಂದರು.
ಸುದ್ದಿ
ಶ್ರೀ ಬಸವ ಆಟೋಮೋಬೈಲ್ಸ್ ಮತ್ತು ಕೃಷ್ಣ ಬೈಕ್ ಗ್ಯಾರೇಜ್ ಉದ್ಘಾಟನೆಯ ಕಾರ್ಯಕ್ರಮ
ಶ್ರೀ ಬಸವ ಆಟೋಮೋಬೈಲ್ಸ್ ಮತ್ತು ಕೃಷ್ಣ ಬೈಕ್ ಗ್ಯಾರೇಜ್ ಉದ್ಘಾಟನೆಯ ಕಾರ್ಯಕ್ರಮವನ್ನು ಸೈನಿಕರಿಂದ ಉದ್ಘಾಟನೆ
ಇಂದು ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿ ನೂತನವಾಗಿ ಶ್ರೀ ಬಸವ ಆಟೋಮೋಬೈಲ್ಸ್ ಮತ್ತು ಕೃಷ್ಣ ಬೈಕ್ ಗ್ಯಾರೇಜ್ ಉದ್ಘಾಟನೆಯ ಕಾರ್ಯಕ್ರಮವನ್ನು ನಗರದ ವೆಂಕಟೇಶ್ವರ ಕ್ಯಾಂಪಿನ ಹಾಲಿ ಯೋಧರಾದ ಚಿದಾನಂದ ಮತ್ತು ನಗರದ ಅಮರಪುರದ ಹಾಲಿ ಯೋಧರಾದ ಶ್ರೀ ಮತಿ ರೇಣುಕಾ ದುರುಗಪ್ಪ ಹಾಲಿ NSG ಕಮಾಂಡೋ ಅವರು ರಿಬನ್ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಿದರು.
ಈ ಕಾರ್ಯಕ್ರಮದ ದಿವ್ಯ ಸಾನಿದ್ಯ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು ಉದ್ಘಾಟನೆ ಮಾಡಿದ ಯೋಧರಿಗೆ ಶ್ರೀ ಬಸವ ಆಟೋಮೋಬೈಲ್ಸ್ ಮತ್ತು ಕೃಷ್ಣ ಬೈಕ್ ಗ್ಯಾರೇಜ್ ವತಿಯಿಂದ ಯೋಧರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಆಟೋಮೋಬೈಲ್ಸ್ ಮಾಲೀಕರಾದ ಬಸವನ ಗೌಡ ಪೊಲೀಸ್,ಅಮರೇಗೌಡ,
ಮೆಕಾನಿಕ್ ಕೃಷ್ಣ, ಚಂದ್ರು, ರೈತರ ಮತ್ತು ಸೈನಿಕರ ಅಭಿಮಾನಿಗಳ ಸಂಘದ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಓಂಕಾರ ಜಿ ಎಂ, ರವಿಕುಮಾರ್, ಸುರೇಶ,ಮಂಜುನಾಥ್, ಗೋಪಾಲ್,ಹಾಗೂ ಕುಟುಂಬಸ್ಥರು, ಸ್ನೇಹಿತರು, ಇತರರು ಇದ್ದರು.
ವರದಿ ದುರ್ಗೇಶ್ ಬೋವಿ ಮಸ್ಕಿ.