ಸುದ್ದಿ
ಶ್ರೀ ಬಸವ ಆಟೋಮೋಬೈಲ್ಸ್ ಮತ್ತು ಕೃಷ್ಣ ಬೈಕ್ ಗ್ಯಾರೇಜ್ ಉದ್ಘಾಟನೆಯ ಕಾರ್ಯಕ್ರಮ
ಶ್ರೀ ಬಸವ ಆಟೋಮೋಬೈಲ್ಸ್ ಮತ್ತು ಕೃಷ್ಣ ಬೈಕ್ ಗ್ಯಾರೇಜ್ ಉದ್ಘಾಟನೆಯ ಕಾರ್ಯಕ್ರಮವನ್ನು ಸೈನಿಕರಿಂದ ಉದ್ಘಾಟನೆ
ಇಂದು ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿ ನೂತನವಾಗಿ ಶ್ರೀ ಬಸವ ಆಟೋಮೋಬೈಲ್ಸ್ ಮತ್ತು ಕೃಷ್ಣ ಬೈಕ್ ಗ್ಯಾರೇಜ್ ಉದ್ಘಾಟನೆಯ ಕಾರ್ಯಕ್ರಮವನ್ನು ನಗರದ ವೆಂಕಟೇಶ್ವರ ಕ್ಯಾಂಪಿನ ಹಾಲಿ ಯೋಧರಾದ ಚಿದಾನಂದ ಮತ್ತು ನಗರದ ಅಮರಪುರದ ಹಾಲಿ ಯೋಧರಾದ ಶ್ರೀ ಮತಿ ರೇಣುಕಾ ದುರುಗಪ್ಪ ಹಾಲಿ NSG ಕಮಾಂಡೋ ಅವರು ರಿಬನ್ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಿದರು.
ಈ ಕಾರ್ಯಕ್ರಮದ ದಿವ್ಯ ಸಾನಿದ್ಯ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು ಉದ್ಘಾಟನೆ ಮಾಡಿದ ಯೋಧರಿಗೆ ಶ್ರೀ ಬಸವ ಆಟೋಮೋಬೈಲ್ಸ್ ಮತ್ತು ಕೃಷ್ಣ ಬೈಕ್ ಗ್ಯಾರೇಜ್ ವತಿಯಿಂದ ಯೋಧರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಆಟೋಮೋಬೈಲ್ಸ್ ಮಾಲೀಕರಾದ ಬಸವನ ಗೌಡ ಪೊಲೀಸ್,ಅಮರೇಗೌಡ,
ಮೆಕಾನಿಕ್ ಕೃಷ್ಣ, ಚಂದ್ರು, ರೈತರ ಮತ್ತು ಸೈನಿಕರ ಅಭಿಮಾನಿಗಳ ಸಂಘದ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಓಂಕಾರ ಜಿ ಎಂ, ರವಿಕುಮಾರ್, ಸುರೇಶ,ಮಂಜುನಾಥ್, ಗೋಪಾಲ್,ಹಾಗೂ ಕುಟುಂಬಸ್ಥರು, ಸ್ನೇಹಿತರು, ಇತರರು ಇದ್ದರು.
ವರದಿ ದುರ್ಗೇಶ್ ಬೋವಿ ಮಸ್ಕಿ.
ಸುದ್ದಿ
ಮಸ್ಕಿಯಲ್ಲಿ ಶುಕ್ರವಾರ 394 ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ
ಮಸ್ಕಿಯಲ್ಲಿ ಶುಕ್ರವಾರ 394 ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.
ಮಸ್ಕಿ.ಫೆ.26 :- ಮಸ್ಕಿ ತಾಲೂಕಿನಲ್ಲಿ 394 ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ ನಗರವೆಲ್ಲ ವಿಜೃಂಭಣೆಯಿಂದ ಛತ್ರಪತಿ ಶಿವಾಜಿಯವರ ಮೂರ್ತಿಯನ್ನು ಮಸ್ಕಿಯ PWD ಕ್ಯಾಂಪಿನ ಗಣೇಶನ ದೇವಸ್ಥಾನದಿಂದ ದೈವದ ಕಟ್ಟೆಯ ವರೆಗೆ ಮೆರವಣಿಗೆ ಮಾಡಲಾಯಿತು.
ಹಿಂದೂ ಸಾಮ್ರಾಜ್ಯ ರಚನೆ ಜೊತೆಗೆ ಭಾರತೀಯರಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಶಿವಾಜಿ ಮಹಾರಾಜರು ನಮ್ಮೆಲ್ಲರ ನಾಯಕರು. ಅಂಬಾಭವಾನಿ ಹಾಗೂ ತಾಯಿ ಜೀಜಾಬಾಯಿ ಆಶೀರ್ವಾದದೊಂದಿಗೆ ಅವರು ನಮ್ಮ ನಾಡಿಗೆ ಬೆಳಕಾದರು.
ಸಮಾಜಕ್ಕೆ ಸಾತ್ವಿಕ ಸಂದೇಶಗಳನ್ನು ಸಾರಿ ಜಗತ್ತಿಗೆ ಮಾದರಿಯಾದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಗರವೆಲ್ಲ ಕೇಸರಿಮಯ ವಾಗಿ ಮಾರ್ಪಟ್ಟಿತ್ತು. ಎಲ್ಲಿ ನೋಡಿದರೂ ಕೇಸರಿ ಟೋಪಿ, ಕೇಸರಿ ವಸ್ತ್ರ , ಕಂಗೊಳಿಸುತ್ತಿದ್ದವು.
ಬೈಕ್ , ಟ್ರ್ಯಾಕ್ಟರ್ ಗಳ ಮೂಲಕ, ಕೇಸರಿ ಬಾವುಟಗಳನ್ನು ಹಿಡಿದು ಯುವಕರು ಜೈ ಭವಾನಿ ಜೈ ಶಿವಾಜಿ ಎಂಬ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾರಾಜರ ಭಾವಚಿತ್ರವನ್ನು ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಸನ್ನ ಪಾಟೀಲ್, ಚೇತನ್ ಪಾಟೀಲ್ , ರಾಕೇಶ್ ಪಾಟೀಲ್, ವೀರೇಶ್ ಕಮತರ್ , ಶಶಿ ಹಿರೇಮಠ್ , ಅಂಬಾಡಿ ಮಲ್ಲಣ್ಣ, ರಾಘಣ್ಣ ದುರ್ಗಾ ಕ್ಯಾಂಪ್, ಹಾಗೂ ಸುತ್ತಮುತ್ತಲಿನ ಗ್ರಾಮದ ಯುವಕರು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಪಾಲ್ಗೊಂಡಿದ್ದರು ಹಾಗೂ ಪೊಲೀಸ್ ಬಂದೋಬಸ್ತು ನಿಂದ ಕೂಡಿತ್ತು.
ವರದಿ : ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ನಮ್ಮ ಕಾರ್ಗೊ ಸೇವೆ ಲೋಕಾರ್ಪಣೆ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ವಿಧಾನಸೌಧದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ನೂತನ ಪಾರ್ಸಲ್ ಹಾಗೂ “ನಮ್ಮ ಕಾರ್ಗೊ” ಸೇವೆಯನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷಣ ಸವದಿ, ಸಚಿವರುಗಳಾದ ಉಮೇಶ್ ಕತ್ತಿ, ಡಾ ಕೆ.ಸುಧಾಕರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಪಾಟೀಲ್ ಜಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ
ಡಿಜಿ ಪೆಟ್ರೋಲ್ ಪಂಪ್ ಬಳಿ ನೂತನ ಉದ್ಯಾನವನ ನಿರ್ಮಾಣಕ್ಕೆ ಚಾಲನೆ
ಬೆಂಗಳೂರು : ತಮ್ಮ ವಿಧಾನಸಭಾ ಕ್ಷೇತ್ರದ ಪದ್ಮನಾಭನಗರ ವಾರ್ಡ್ ನ ಡಿಜಿ ಪೆಟ್ರೋಲ್ ಪಂಪ್ ಬಳಿ ನೂತನ ಉದ್ಯಾನವನ ನಿರ್ಮಾಣಕ್ಕೆ ಸ್ಥಳೀಯ ಶಾಸಕರಾದ ಆರ್. ಅಶೋಕ್ ರವರು ಭೂಮಿಪೂಜೆ ನೆರವೇರಿಸಿದರು.
ಉದ್ಯಾನವನದ ಕುರಿತು ಅಲ್ಲಿ ಪಾಲ್ಗೊಂಡ ಸ್ಥಳೀಯರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಉದ್ಯಾನವನವು ನಮ್ಮ ಕ್ಷೇತ್ರದ ಅತಿದೊಡ್ಡ ಉದ್ಯಾನವನವಾಗಲಿದ್ದು, ಕ್ಷೇತ್ರದ ಜನರಿಗೆ ಅಗತ್ಯವಿರುವ ಸೌಲಭ್ಯ, ಅತ್ಯುತ್ತಮ ಮನರಂಜನಾ ಮತ್ತು ವಿಶ್ರಾಂತಿಯ ತಾಣವಾಗಲಿದೆ ಎಂದರು.