ವ್ಯಕ್ತಿ ವಿಶೇಷ
ಬಾಗೇಪಲ್ಲಿಯಲ್ಲಿ ಅಪರೂಪದ ಪರಿಸರ ಪ್ರೇಮಿ
ಬಾಗೇಪಲ್ಲಿ: ಇಲ್ಲೊಬ್ಬ ಮಾನಸಿಕ ಅಸ್ವಸ್ಥ ಪ್ರತಿದಿನವೂ ಕಾಲೇಜು ಮುಂಭಾಗದಲ್ಲಿರುವ ಸಸಿಗೆ ನೀರು ಹನಿಸುವ ಮೂಲಕ ಆರೈಕೆ ಮಾಡುತ್ತಿದ್ದಾನೆ.
ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳ ಅವರು ಡಾ.ಜಚನಿ ಕಲಾಕ್ಷೇತ್ರದ ಮುಂಭಾಗದಲ್ಲಿ ಸಸಿ ನೆಟ್ಟಿದ್ದರು. ಮಾನಸಿಕ ಅಸ್ವಸ್ಥ ಒಂದು ದಿನವೂ ತಪ್ಪಿಸದಂತೆ ಆ ಸಸಿಗೆ ನೀರು ಹಾಕುತ್ತಿದ್ದಾನೆ.
ಪ್ರತಿ ದಿನ ಟೋಲ್ ಗೇಟ್ ಬಳಿಯ ಶೌಚಾಲಯದಿಂದ ಜಗ್ ಮತ್ತು ಬಕೆಟ್ನಲ್ಲಿ ನೀರು ತಂದು ಗಿಡಕ್ಕೆ ಸುರಿಯುತ್ತಾನೆ. ಒಂದು ವೇಳೆ ಜಗ್, ಬಕೆಟ್ ಸಿಗದಿದ್ದರೆ ನೀರು ಕುಡಿದು ಬಿಸಾಡಿದ ಪ್ಲಾಸ್ಟಿಕ್ ಬಾಟಲಿ ಹುಡುಕುತ್ತಾನೆ. ಬಾಟಲಿಯಲ್ಲಿಯೇ ನೀರು ಹಿಡಿದು ಸಸಿಗೆ ಹನಿಸುತ್ತಾನೆ ಎಂದು ಅಕ್ಕ ಪಕ್ಕದ ಅಂಗಡಿಯವರು ಹೇಳುತ್ತಾರೆ.
ಡಾ.ಶ್ರೀ ಜಚನಿ ಕಲಾಕ್ಷೇತ್ರಕ್ಕೆ ರಾತ್ರಿ ವೇಳೆ ಅಪರಿಚಿತರು ಸುಳಿಯದಂತೆ ಕಾವಲು
ಕಾಯುತ್ತಾನೆ. ಯಾರಾದರೂ ಬಂದರೆ ಅವರನ್ನು ಓಡಿಸುತ್ತಾನೆ ಎಂದು ಕಾಲೇಜಿನ ರಾತ್ರಿ ಕಾವಲುಗಾರ ಅಶ್ವತ್ಥಪ್ಪ ಹೇಳುತ್ತಾರೆ.
ಈತನ ಕೆಲಸದ ಬಗ್ಗೆ ತಿಳಿದ ಕುಸುಮವಾಣಿ ಪತ್ರಿಕೆ ವರದಿಗಾರರು ಹುಡುಕಿಕೊಂಡು ಹೊರಟಾಗ ರೋಚಕ ಕತೆಯೊಂದು ತೆರೆದುಕೊಂಡಿತು. ಮೂಲತಃ ಆಂಧ್ರಪ್ರದೇಶದ ವಿಜಯವಾಡದ ಈತನಿಗೆ ಮೂವರು ಪತ್ನಿಯರು. ಆದರೆ, ಮೂವರಲ್ಲಿ
ಯಾರೂ ಆತನೊಂದಿಗೆ ಇಲ್ಲ. ಅವರೆಲ್ಲರೂ ಬಿಟ್ಟು ಹೋಗಿದ್ದಾರೆ.
ಬಾಗೇಪಲ್ಲಿಗೆ ಈತ ಬಂದು ಸುಮಾರು ನಾಲ್ಕು ತಿಂಗಳಾಯಿತು. ಅಂದಿನಿಂದಲೂ ಕಾಲೇಜಿನ ಮುಂಭಾಗದ ಟೋಲ್‌ಗೇಟ್ ಬಳಿಯೇ ಠಿಕಾಣಿ ಹೂಡಿದ್ದಾನೆ. ಈತನ ಹೆಸರು ಯಾರಿಗೂ ಗೊತ್ತಿಲ್ಲ. ಅವರಿವರು ನೀಡಿದ ಆಹಾರದಿಂದ ಹೊಟ್ಟೆ ತುಂಬುತ್ತದೆ. ಲಾರಿ ಚಾಲಕರು, ಕಾಲೇಜು ವಿದ್ಯಾರ್ಥಿಗಳು ಈತನ ಮೆಚ್ಚಿನ ಸ್ನೇಹಿತರು. ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರಿಗೂ ಈತ ಅಚ್ಚುಮೆಚ್ಚು ಎನ್ನುತ್ತಾರೆ ಹೈವೆ ಪಕ್ಕ ಟೀ ಅಂಗಡಿ ಇಟ್ಟುಕೊಂಡಿರುವ ಅಶೋಕ.
ರಾಜ್ಯ
ಬಳಗಾನೂರಿನ ವಿದ್ಯಾರ್ಥಿಗಳು ಖೋ ಖೋ ವಿಭಾಗದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಮಸ್ಕಿ :- ಲಿಂಗಸುಗೂರು ತಾಲೂಕಿನ ಚಿತಾಪೂರದಲ್ಲಿ ನಡೆದ ರಾಯಚೂರು ಜಿಲ್ಲಾ ಅಮೆಚೂರ್ ಖೋ ಖೋ ಅಸೋಸಿಯೇಷನ್ ಆಶ್ರಯದಲ್ಲಿ ಪೆ.26 ರಂದು ನಡೆದ ಪುರುಷರ ಸಿನಿಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಪಟ್ಟಣ ಬಳಗಾನೂರಿನ ( ರಾಜು ಮಸ್ಕಿ /ಬದ್ರಪ್ಪ ) ಮತ್ತು ( ಶಿವಲಿಂಗ ಭೋವಿ / ಮುದುಕಪ್ಪ ) ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ .
ಈ ಸಂದರ್ಭದಲ್ಲಿ ತರಬೇತಿ ನೀಡಿದ ತರಬೇತಿದಾರರಾದ ಸರಕಾರಿ ಪ್ರೌಢ ಶಾಲೆ ಬಳಗಾನೂರಿನ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರವೀಂದ್ರ ತಿಳಿಸಿದ್ದಾರೆ .
ಜನನಿ ಪದವಿ ಪೂರ್ವ ಕಾಲೇಜಿನ ವಿದ್ಯಾಭ್ಯಾಸ ಮಾಡುತ್ತಿರುವ ರಾಜು ಮಸ್ಕಿ ವಿದ್ಯಾರ್ಥಿಯ ಸಾಧನೆಗೆ ಪ್ರಾಚಾರ್ಯರಾದ ತಿರುಪತಿ ಸರ್ ಹಾಗೂ ಆಡಳಿತ ವರ್ಗವು ರಜಾಕ್ ಪಾಷ ಸರ್ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.
ಮಾಚ್೯ 6 ಮತ್ತು 7 ರಂದು ಧಾರವಾಡದ ಸೌಂಸಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪುರುಷರ ಸಿನಿಯರ್ ಹೊನಲು ಬೆಳಕಿನ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳಿಗೆ ಪಟ್ಟಣದ ಎಲ್ಲಾ ಗುರು ಹಿರಿಯರು, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಹಷ೯ ವ್ಯಕ್ತಪಡಿಸಿದ್ದಾರೆ.
ವರದಿ : ದುರ್ಗೇಶ್ ಭೋವಿ ಮಸ್ಕಿ
ವ್ಯಕ್ತಿ ವಿಶೇಷ
ಸಾವಯವ ಕೃಷಿಯಲ್ಲಿ ಸಾಧನೆಗೈದ ರೈತ
ಕೋಲಾರ :ಕೆ.ಜಿ.ಎಫ್ ತಾಲೂಕಿನ ಎನ್.ಜಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಂ.ಕೋತ್ತೂರು ಎಂಬ ಹಳ್ಳಿಯಲ್ಲಿ ಆಲೂಗಡ್ಡೆ ಬೆಳೆಯುವುದರಲ್ಲಿ ಸಾವಯವ ಗೊಬ್ಬರವನ್ನು ಬಳಸಿ ಹೆಚ್ಚು ಆದಾಯ ಗಳಿಸಿದ ಪ್ರಗತಿಪರ ರೈತ ಜಿ. ಶ್ರೀನಿವಾಸ. .
ರೈತನು ಒಂದು ಎಕರೆ ಜಮೀನುನಲ್ಲಿ ಸುಮಾರು 175 ಕ್ವಿಂಟಾಲ್ ಆಲೂಗಡ್ಡೆಯನ್ನು ಬೆಳೆದಿದ್ದಾರೆ.
ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ವಿವಿದ ರೋಗಗಳು ಬರುತ್ತದೆ ಅದೇ ಕೇವಲ ಧನದ ಕೂಟ್ಟಿಗೆಯ ಗೊಬ್ಬರವನ್ನು ಬಳಸಿ ಬೆಳೆ ಬೆಳೆದರೆ ರೋಗಗಳು ಕಡಿಮೆ ಎಂದು ಹೇಳಿದರು.
ಅಂದರೆ ಈ ರೀತಿ ಮಾಡಿದರೆ ಭೂಮಿಯು ಸಹ ತನ್ನ ಫಲವತ್ತತೆಯನ್ನು ಕಳೆದುಕೂಳ್ಳುವುದು ಇಲ್ಲ ಎಂದು ಹೇಳಿದರು. ಅದ್ದರಿಂದ ಎಲ್ಲಾ ರೈತರು ಬೆಳೆಗಳಿಗೆ ಅಳವಡಿಸಿಕೊಂಡು ಸಾವಯವ ಕೃಷಿ ಪದ್ದತಿ ರೂಢಿಸಿಕೊಂಡರೆ ಉತ್ತಮ ಆರೋಗ್ಯಕರ ತರಕಾರಿ ಬೆಳೆಯಬಹುದು ಎಂದರು.
ವ್ಯಕ್ತಿ ವಿಶೇಷ
ಮಗಳಿಗೆ ಸೆಲ್ಯೂಟ್ ಹೊಡೆದ ಅಪ್ಪ
ತಿರುಪತಿ: ಸ್ವಂತ ಮಗಳು ತನಗಿಂತ ಉನ್ನತ ಹುದ್ದೆಯಲ್ಲಿದ್ದು ಎದುರಾದಾಗ ಸೆಲ್ಯೂಟ್ ಹೊಡೆದು ತಂದೆಗೆ ಹೆಮ್ಮೆಯ ಕ್ಷಣ ಅವಿಸ್ಮರಣೀಯ. ಇದು ಸಿನಿಮಾ ಕಥೆಯಲ್ಲಿ ಬದಲಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ತನಗಿಂತ ಉನ್ನತ ಅಧಿಕಾರಿಯಾದ ಸ್ವಂತ ಮಗಳಿಗೇ ಸಲ್ಯೂಟ್ ಹೊಡೆಯುತ್ತಿರುವ ಒಂದು ಅಸ್ಮರಣೀಯ ಘಟನೆ ನಡೆದಿದೆ.
ಆಂಧ್ರ ಪ್ರದೇಶದ ಈ ಅಪ್ಪ, ಮಗಳು ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮೊದಲ ಬಾರಿ ಕರ್ತವ್ಯದ ಮೇಲೆ ಇಬ್ಬರು ಎದುರಾದ ಸಂದರ್ಭ ಅಪ್ಪ ಮಗಳಿಗೆ ಸಲ್ಯೂಟ್ ಹೊಡೆದ ಹೃದಯಸ್ಪರ್ಶಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಧ್ರದ ತಿರುಪತಿಯಲ್ಲಿ ಭಾನುವಾರ ಪೊಲೀಸ್ ಇಲಾಖೆ ಸಭೆ “ಇಗ್ನೈಟ್” ಅನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಅಪ್ಪ ಮಗಳು ಎದುರಾಗಿದ್ದಾರೆ. ಇದೇ ಮೊದಲ ಬಾರಿಗೆ ಕರ್ತವ್ಯದ ಮೇಲೆ ಇಬ್ಬರೂ ಭೇಟಿಯಾಗಿದ್ದು, ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಪ್ಪ ಯೆಂಡಲೂರು ಶ್ಯಾಮ್ ಸುಂದರ್ ಹಾಗೂ ಡಿವೈಎಸ್ ಪಿ ಆಗಿರುವ ಮಗಳು ವೈ ಜೆಸ್ಸಿ ಪ್ರಶಾಂತಿ ಅವರಿಗೆ ಸಲ್ಯೂಟ್ ಹೊಡೆದಿದ್ದಾರೆ.
ನನ್ನ ತಂದೆಯೇ ನನಗೆ ದೊಡ್ಡ ಸ್ಫೂರ್ತಿ. ಜನರ ಸೇವೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡುತ್ತಾ ಬಂದ ತಂದೆಯನ್ನು ನೋಡಿ ಬೆಳೆದವಳು ನಾನು. ತನ್ನ ಕೈಯಿಂದ ಆಗುವ ಸಹಾಯವನ್ನು ಆಗಿನಿಂದ ಮಾಡುತ್ತಾ ಬಂದಿದ್ದಾರೆ. ಅದೇ ಕಾರಣ ನಾನು ಇಲಾಖೆಗೆ ಸೇರಲು ಸ್ಫೂರ್ತಿ 2018ರಲ್ಲಿ ಪೊಲೀಸ್ ಇಲಾಖೆ ಸೇರಿದೆ ಪ್ರಶಾಂತಿ ಖಾಸಗಿ ಪತ್ರಿಕೆಗೆ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವೈ ಶ್ಯಾಮ್ ಸುಂದರ್ ಅವರು, “ನನ್ನ ಮಗಳು ಪ್ರಾಮಾಣಿಕವಾಗಿ ಇಲಾಖೆಗೆ ಸೇವೆ ಸಲ್ಲಿಸುತ್ತಾಳೆ ಎಂಬ ವಿಶ್ವಾಸವಿದೆ” ಎಂದಿದ್ದಾರೆ.
ಒಟ್ಟಿನಲ್ಲಿ ಯಾವುದೇ ತಂದೆ ತಾಯಿಗೆ ತಮ್ಮ ಮಕ್ಕಳು ತಮಗಿಂತಲೂ ಉನ್ನತ ಮಟ್ಟಕ್ಕೆ ಏರಬೇಕು ಎನ್ನುತ್ತಾರೆ. ಅದರಂತೆ ಆದಾಗ ಆ ತಂದೆ ತಾಯಿಗಳ ಸಂತಸಕ್ಕೆ ಪಾರವೇ ಇರುವುದಿಲ್ಲ.