Connect with us
Ad Widget

ಸುದ್ದಿ

ಮಸ್ಕಿ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದ ಕಾರಣ ನಗರ ಆಸ್ಪತ್ರೆ ಜನರ ಪ್ರಾಣಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ !!.

Published

on

ಮಸ್ಕಿ :- ಶನಿವಾರ ಬೆಳಗ್ಗೆ ಮಸ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕಾರಿ ಆಸ್ಪತ್ರೆಯ ಮುಂದೆಯೇ ಅಪಘಾತವಾದಾಗ ಚಿಕಿತ್ಸೆಗೆಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ವೈದ್ಯರ ಕೊರತೆ ಕಂಡುಬಂದಿದೆ.
ಇದರಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಅಪಘಾತವಾದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಆಸ್ಪತ್ರೆಗೆ ಕಳಿಸಲಾಯಿತು.

ಆದರೆ ಮೊದಲಿನಿಂದಲೂ ಮಸ್ಕಿಯು ನೂತನವಾಗಿ ತಾಲೂಕು ಕೇಂದ್ರವಾದರೂ ಇಲ್ಲಿಯವರೆಗೂ ಹೆಚ್ಚಿನ ಚಿಕಿತ್ಸೆ ದೊರೆಯುತ್ತಿಲ್ಲ ಹಾಗೂ ವೈದ್ಯರಿಲ್ಲ ಎಂಬ ಕೂಗು ಕೇಳಿಬರುತ್ತಿದೆ.

ಇದರಿಂದ ಬಡರೋಗಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು
6 ಬೆಡ್ ಸೌಲಭ್ಯವನ್ನು ಮಾತ್ರ ಹೊಂದಿರುವ ಆಸ್ಪತ್ರೆಗೆ ಕಾಯಂ ವೈದ್ಯರ ಕೊರತೆ ಇದೆ.

ಸುಮಾರು ವರ್ಷಗಳಿಂದ ವೈದ್ಯರ ಕೊರತೆ ಇದ್ದು .ಇದ್ದ ಒಬ್ಬ ವೈದ್ಯರು ಆಯುರ್ವೇದಿಕ್ ಆಯುಷ್ ವೈದ್ಯರಾಗಿದ್ದು ಇದರಿಂದ ಹೆಚ್ಚಿನ ಚಿಕಿತ್ಸೆಗೆ ಬೇರೆಕಡೆಗೆ ಹೋಗಿ ಪರದಾಡುವಂತಾಗಿದೆ.

ಹೆಚ್ಚಿನ ಚಿಕಿತ್ಸೆಗೆಂದು ಬೇರೆ ಕಡೆ ಹೋಗುವ ಸಮಯದಲ್ಲಿ ಶೇಕಡಾ 70 ರಷ್ಟು ರೋಗಿಗಳು ನಡು ದಾರಿಯಲ್ಲಿ ಸಾವನ್ನಪ್ಪಿ ಸ್ಮಶಾನ ಸೇರುವಂತಾಗಿದೆ.

ಮಸ್ಕಿ ತಾಲೂಕು ಪರಿವರ್ತನೆಯಾಗಿದೆ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಬೇಕಾಗಿದೆ.
ಈ ಮೂಲಕ ಮಸ್ಕಿ ಸೇರಿದಂತೆ ಸುತ್ತ ಮುತ್ತಲಿನ ಬಹುತೇಕ ಎಲ್ಲಾ ಹಳ್ಳಿಗಳ ಬಡ ಜನರಿಗೆ ಚಿಕಿತ್ಸೆಯನ್ನು ಅನುಕೂಲವಾಗುವಂತೆ ಮಾಡಿಕೊಡಬೇಕಾಗಿದೆ.

ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚರಿಕೆವಹಿಸಬೇಕಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ವೈದ್ಯರ ಕೊರತೆಯ ಬಗ್ಗೆ ಸ್ಥಳೀಯ ನಗರದ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ವಿಜಯ್ ಬಡಿಗೇರ್ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಬಂದರೂ ಬಾರದಂತೆ ಬೇಜವಾಬ್ದಾರಿತನವನ್ನು ವರ್ತಿಸುತ್ತಿದ್ದಾರೆ. ಆದರೆ ಮಸ್ಕಿ ತಾಲೂಕು ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಿ ಬಡರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಬರುವ ಮುಂದಿನ ದಿನಮಾನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯ

Published

on

ಮಸ್ಕಿ . ಪಟ್ಟಣದ 6ನೇ ವಾರ್ಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ಮಸ್ಕಿಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಶಿಕ್ಷಕಿಯರು ಹಾಗೂ ಗ್ರಾಮಸ್ಥರು, ಇಂದು ಕನ್ನಡ ಸಂಸ್ಕೃತಿಯ ಪ್ರಕಾರ ನಿಯಮ ನಿತ್ಯ ದಿಂದ ಹೂವು ಹಣ್ಣು ನೀಡಿ ಸೀಮಂತ ಕಾರ್ಯ ಮಾಡಿದರು,

ಈ ವೇಳೆ ಅಂಗನವಾಡಿಯ ಕಾರ್ಯಕರ್ತರಾದ ಶ್ರೀಮತಿ ಈರಮ್ಮ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ಭಾರತೀಯ ಸಂಸ್ಕೃತಿಯ ಒಂದು ಪ್ರತೀಕವಾಗಿದೆ, ಇಂತಹ ಕಾರ್ಯಕ್ರಮದಿಂದ, ಹುಟ್ಟುವ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯಲಿದೆ, ಅಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಎಲ್ಲರೂ ಪೌಷ್ಟಿಕಾಹಾರ ಸೇವನೆ ಮಾಡಬೇಕು, ಎಂದರು.

ಮಕ್ಕಳು ಆರೋಗ್ಯದಿಂದ ಹುಟ್ಟಬೇಕಾದರೆ ತಾಯಿಯು ಪೌಷ್ಟಿಕ ಆಹಾರ ಸೇವನೆ ಮಾಡಬೇಕು, ತರಕಾರಿ ಸೊಪ್ಪುಗಳನ್ನು ಹೆಚ್ಚು ಉಪಯೋಗಿಸಬೇಕು.

ಹಾಗೂ ಕೆಮಿಕಲ್ ಮಿಕ್ಸ್ ಇರುವಂತ ಪಾನೀಯಗಳನ್ನು ಸೇವನೆ ಮಾಡಬಾರದು ಎಂದರು,

ಈ ಸಂದರ್ಭದಲ್ಲಿ-: ಅಂಗನವಾಡಿ ಕಾರ್ಯಕರ್ತರಾದ, ಶ್ರೀಮತಿ ಈರಮ್ಮ, ಅಂಗನವಾಡಿಯ ಸಹಾಯಕಿ, ಶ್ರೀಮತಿ ನರಸಮ್ಮ, ಮಹಿಳೆಯರಾದ, ಶಂಕ್ರಮ್ಮ, ಸುಜಾತ, 6ನೇ ವಾರ್ಡಿನ ಮಹಿಳೆಯರು ಭಾಗಿಯಾಗಿದ್ದರು.

ವರದಿ: ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಬೆಟ್ಟಗುಡ್ಡಗಳಿಗೆ ಕಿಡಿ ಹಚ್ಚುವ ಕಿಡಿಗೇಡಿಗಳಿಗೆ ಶಿಕ್ಷೆ ಯಾವಾಗ?

Published

on

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ವನ್ಯ ಸಂಪತ್ತು ಇರುವುದೇ ಬೆಟ್ಟಗುಡ್ಡಗಳನ್ನು ಅವಲಂಭಿಸಿ ಜೀವ ಹಿಡಿದಿಟ್ಟುಕೊಂಡಿವೆ. ಇಂತಹ ಬೆಟ್ಟಗುಡ್ಡಗಳು ಈಗಾಗಲೇ ಕಲ್ಲುಗಣಿಗಾರಿಕೆ, ಅಕ್ರಮ ಒತ್ತುವರಿ ಸೇರಿದಂತೆ ಹಲವು ಮನುಷ್ಯನ ಸ್ವಾರ್ಥಕ್ಕೆ ಸೊರಗಿ ಹೋಗುತ್ತಿದ್ದು, ಅಳಿದುಳಿದ ಬೆಟ್ಟಗುಡ್ಡಗಳಲ್ಲಿ ಹಲವು ಬಗೆಯ ಪ್ರಾಣಿ,ಪಕ್ಷಿಗಳು ವಾಸವಾಗಿವೆ. ಇಂತಹ ಬೆಟ್ಟಗುಡ್ಡಗಳು ಕುರಿ,ಮೇಕೆ, ಜಾನುವಾರುಗಳಿಗೆ ಮೇವನ್ನೂ ಒದಗಿಸುತ್ತಿವೆ. ಇದರಿಂದ ಗ್ರಾಮೀಣ ಬಡವರ ಬದುಕಿಗೆ ಆಸರೆಯೂ ಆಗುತ್ತಿವೆ. ಈ ರೀತಿಯ ಬಹು ಉಪಯೋಗದ ಬೆಟ್ಟಗುಡ್ಡಗಳು ಇತ್ತೀಚೆಗೆ ತಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳುತ್ತಿದ್ದು, ಕಿಡಿಗೇಡಿಗಳ ಕುಚೇಷ್ಟೆಗಳಿಂದ ಸರ್ವನಾಶವಾಗುತ್ತಿವೆ. ಪ್ರಕೃತಿ ವಸಂತ ಕಾಲಕ್ಕೆ ಕಾಲಿಡುವ ಸುಸಂದರ್ಭದಲ್ಲಿ ಎಲೆಗಳನ್ನುದುರಿಸಿ ಚಿಗುರೊಡೆಯಲು ಪ್ರಾರಂಭಿಸುತ್ತವೆ. ಉದುರಿದ ಎಲೆಗಳಿಗೆ,ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಅಂಟಿಸುವುದರಿಂದ ಅಪಾರ ವನ್ಯ ಸಂಪತ್ತು ಸಜೀವವಾಗಿ ಬೆಂಕಿಯ ಕೆನ್ನಾಲಿಗೆ ಬಲಿಯಾಗುತ್ತದೆ.

ತಾಲ್ಲೂಕಿನ ಗೂಳೂರು ಹೋಬಳಿಯ ಮೊಟುಕಪಲ್ಲಿ, ಮಾಡಪಲ್ಲಿ,ಹೊನ್ನಂಪಲ್ಲಿ ಸುತ್ತಲಿನ ಬೆಟ್ಟಗುಡ್ಡಗಳಿಗೆ ಬೆಂಕಿ ಅಂಟಿಸಲಾಗಿದೆ. ಅದೇ ರೀತಿಯಲ್ಲಿ ದೇವಿಕುಂಟೆ ಗ್ರಾಮದಲ್ಲಿ ಭತ್ತದ ಹೊಲದ ಪಕ್ಕದಲ್ಲಿನ ಅರಣ್ಯಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ, ಕಾಡಿನ ಸಂಪತ್ತು ನಾಶ ಆಗಿ, ಅಪಾರ ಪ್ರಮಾಣದ ಪಕ್ಷಿ-ಪ್ರಾಣಿಗಳು ಸುಟ್ಟು ಭಸ್ಮವಾಗಿದೆ.

ದೇವಿಕುಂಟೆ ಗ್ರಾಮದ ಗೋಪಾಲ್ ಎಂಬ ರೈತ ಭತ್ತದ ಗದ್ದೆ ಪಕ್ಕದಲ್ಲಿ ಅರಣ್ಯ ಪ್ರದೇಶ ಇದೆ. ಬುಧವಾರ ಕೆಲ ಕಿಡಿಗೇಡಿಗಳು ಒಣಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕಿಡಿಗಳು ಭತ್ತದ ಗದ್ದೆಗೆ ಹರಡುತ್ತದೆ ಎಂದು, ರೈತ ಗೋಪಾಲ್ ಬೆಂಕಿಯನ್ನು ನೀರಿನಿಂದ ಆರಿಸಿದರೂ ಪ್ರಯೋಜವಾಗಿಲ್ಲ. ಈ ಬೆಟ್ಟಗುಡ್ಡಗಳಲ್ಲಿ ಮೊಳಕಾಲುದ್ದ ಬೆಳೆದಿರುವ ಈ ಹುಲ್ಲಿನ ನಡುವೆ ಮೊಲ,ಜಿಂಕೆಯಂತಹ ಪ್ರಾಣಿಗಳು, ನವಿಳು, ಕೋಗಿಲೆಯಂತಹ ಪಕ್ಷಿಗಳು ಸೇರಿದಂತೆ ಹುಳು ಹುಪ್ಪಟಗಳು, ಕಪ್ಪೆಗಳು, ಹಾವುಗಳು, ಓತಿಕೇತ, ಮಿಡತೆಗಳು, ಚಿಟ್ಟೆಗಳು ಸುಂದರ ಸಂಸಾರ ಹೂಡಿವೆ. ನೆಲದೊಳಗೆ ಇರುವೆಗಳು, ಗೆದ್ದಲು ಗೂಡು ಕಟ್ಟಿದೆ. ಎರೆ ಹುಳಗಳು ನೆಲವೆಲ್ಲಾ ನನ್ನದೇ ಎಂದು ತಿರುಗಾಡುತ್ತಿವೆ.

ಆದರೆ ಬೆಂಕಿ ಹರಡಿ ಅಪಾರ ಪ್ರಮಾಣದ ಹುಲ್ಲು ನಾಶ ಆಗಿದೆ.

‘ಬೇಸಿಗೆ ಆರಂಭವಾಗುತ್ತಿದ್ದಂತೆ ಕೆಲವರು ಬೆಟ್ಟ-ಗುಡ್ಡಗಳಿಗೆ ಕುರಿ, ಹಸು ಮೇಯಿಸಲು ಹೋಗುತ್ತಾರೆ. ಬೀಡಿ, ಸಿಗರೇಟು ಅಂಟಿಸಿಕೊಂಡು, ನೆರೆದ ಹುಲ್ಲಿಗೆ ಬೆಂಕಿ ಇಡುತ್ತಿದ್ದಾರೆ. ಇದರಿಂದ ಅಪಾರ ಪ್ರಮಾಣದ ಸಸ್ಯ ಹಾಗೂ ಮರಗಳು ಬೆಂಕಿಗೆ ಆಹುತಿ ಆಗುತ್ತವೆ. ಕಾಡು, ಬೆಟ್ಟ-ಗುಡ್ಡಗಳಿಗೆ, ಅರಣ್ಯ ಪ್ರದೇಶಗಳಿಗೆ ಬೆಂಕಿ ಇಡುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಸುಮ್ಮನಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

‘ಸೂಕ್ಷ್ಮ ವಲಯದ ಕಾಡು, ಅರಣ್ಯ, ಬೆಟ್ಟ-ಗುಡ್ಡಗಳ ಕಡೆ ನಿಗಾ ವಹಿಸಬೇಕು. ಬೆಂಕಿ ಹಚ್ಚುವವರಿಗೆ ಕಾನೂನಿನ ಕ್ರಮ ಜರುಗಿಸಿ, ಶಿಕ್ಷೆಗೆ ಒಳಪಡಿಸಬೇಕು. ನಾವು ಮಾಡುವ ಕಾರ್ಯದಲ್ಲಿ ಮಮಕಾರ ಮತ್ತು ಮಾನವೀಯತೆ ಇರಬೇಕು. ಯಾವುದೇ ಕಾರ್ಯದಲ್ಲಿಯೂ ಇದು ಇರದಿದ್ದರೆ ಅದು ಸಮಾಜಕ್ಕೆ ಮಾರಕವಾಗುತ್ತದೆ’ ಎಂದು ಗ್ರಾಮದ ಯುವಕ ಡಿ.ಜೆ.ಪವನ್ ಕಲ್ಯಾಣ್ ತಿಳಿಸಿದರು.

‘ಮನುಷ್ಯನ ದುರಾಸೆಗಳು ಇಡೀ ಪರಿಸರ ಸಮತೋಲನವನ್ನೇ ಬುಡಮೇಲು ಮಾಡಿವೆ. ಪ್ರಾಣಿ ಪಕ್ಷಿಗಳು ವಾಸಿಸುವ ಸ್ಥಳಗಳಲ್ಲಿ ಮನುಷ್ಯನು ನೆಲೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾನೆ. ಕಾಡು, ಬೆಟ್ಟ-ಗುಡ್ಡ, ಸಸ್ಯ, ಮರಗಳು ಇದ್ದರೆ ಮಳೆ ಆಗುತ್ತದೆ. ಬಯಲುಸೀಮೆ ಪ್ರದೇಶದಲ್ಲಿ ನದಿನಾಲೆಗಳು ಇಲ್ಲ. ಇಂತಹ ಪ್ರದೇಶದಲ್ಲಿ ಗಿಡ-ಮರಗಳನ್ನು ಸಂರಕ್ಷಿಸಬೇಕೇ ಹೊರತು, ಅರಣ್ಯಕ್ಕೆ ಬೆಂಕಿ ಹಚ್ಚುವುದರಿಂದ ಪರಿಸರವೇ ಮಾಯವಾಗುತ್ತದೆ. ಮಳೆಯು ಬರುವುದಿಲ್ಲ. ಬೆಂಕಿ ಹಚ್ಚುವ ಕೆಲಸ ಎಂದಿಗೂ ಮಾಡಬಾರದು’ ಎಂದು ಪರಿಸರ ಪ್ರೇಮಿ, ರೈತ ಗೋಪಾಲ್ ತಿಳಿಸಿದ್ದಾರೆ.

Continue Reading

ಸುದ್ದಿ

ಶ್ರೀ ಮಹಾಸತಿ ಭೈರವಿ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ

Published

on

ಉತ್ತರ ಕನ್ನಡ : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಉತ್ತರ ಕನ್ನಡ ಜಿಲ್ಲೆ ಶಾಖಾ ಮಠದ ಕುಮಟಾ ತಾಲ್ಲೂಕಿನ ಬಿಜಿಎಸ್ ಸೆಂಟ್ರಲ್ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಮಹಾಸತಿ ಭೈರವಿ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರು ದಿವ್ಯಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಮತ್ತು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಎಲ್ಲಾ ಪೂಜ್ಯ ಸ್ವಾಮೀಜಿಯವರು, ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ, ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮ ಗೌಡರವರು, ಮಾಜಿ ಶಾಸಕರಾದ ಮಂಕಾಳು ವೈದ್ಯರವರು, ಮತ್ತು ಗಣ್ಯರು, ಹಾಗೂ ಶ್ರೀ ಮಠದ ಸದ್ಭಕ್ತರು, ಉಪಸ್ಥಿತರಿದ್ದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್