Connect with us
Ad Widget

ಸುದ್ದಿ

ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮ

Published

on

ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಗ್ರಾಮದ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳ ಗೋವಿಂದಗೌಡ ಮಾತನಾಡಿದರು.

ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಚೈತನ್ಯ ತುಂಬುವುದು ಹಾಗೂ ಖಾಸಗಿ ವ್ಯಕ್ತಿಗಳ ಬಡ್ಡಿ ಕಿರುಕುಳವನ್ನು ತಪ್ಪಿಸುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಮೂಲಕ ನೀಡುತ್ತಿರುವ ಬಡ್ಡಿರಹಿತ ಸಾಲದ ಉಪಯೋಗವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳಬೇಕು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಹೇಳಿದರು.
ಹಣ ಡ್ರಾ ಮಾಡಲು ಮೊಬೈಲ್ ಬ್ಯಾಂಕಿಂಗ್ ವಾಹನ ನಿಮ್ಮ ಮನೆ ಬಾಗಿಲಿಗೆ ಬರುವ ವ್ಯವಸ್ಥೆ ಕಲ್ಪಿಸಲಾಗಿದೆ. ಯಾರೂ ಬೇರಾವುದೇ ಎಟಿಎಂಗೆ ಹೋಗುವ ಅವಶ್ಯಕತೆಯಿಲ್ಲ. ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಲಾ ಒಂದೊಂದು ಲಕ್ಷ ಸಾಲ ನೀಡುವುದಾಗಿ ಹೇಳಿದರು.

ತಾಯಂದಿರು ತಮ್ಮ ಉಳಿತಾಯದ ಹಣವನ್ನು ಸಹಕಾರ ಸಂಘದಲ್ಲಿಯೇ ಠೇವಣಿ ಇಡಬೇಕು. ಡಿಸಿಸಿ ಬ್ಯಾಂಕ್ ಬಡವರ ಹಾಗೂ ಮಹಿಳೆಯರ ಪರವಾಗಿದೆ ಎಂದರು.

ಶಾಸಕ ವಿ.ಮುನಿಯಪ್ಪ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಬರೀ ಆಶ್ವಾಸನೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಇದರಿಂದ ಯಾವೊಬ್ಬರಿಗೂ ಉಪಯೋಗವಾಗಿಲ್ಲ. ಕೇಂದ್ರ ಸರ್ಕಾರ ಪ್ರತಿಯೊಬ್ಬ ಮತದಾರರಿಗೂ ತಲಾ ಹದಿನೈದು ಲಕ್ಷ ಹಣ ನೀಡುತ್ತೇವೆ ಎಂದು ಹೇಳಿದ್ದ ಆಶ್ವಾಸನೆ ಬರೀ ಆಶ್ವಾಸನೆಯಾಗಿಯೇ ಉಳಿದಿದೆ ಎಂದರು.

ಈ ಸಂದರ್ಭದಲ್ಲಿ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸುಮಾರು 50 ಸ್ವಸಹಾಯ ಸಂಘಗಳಿಗೆ 2 ಕೋಟಿ 26 ಲಕ್ಷ, 63 ಸಾವಿರ ಸಾಲ ವಿತರಿಸಲಾಯಿತು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಜಂಗಮಕೋಟೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಮಂಜುಳಮ್ಮ, ಮಾಜಿ ಅಧ್ಯಕ್ಷ ಗಣೇಶ್, ನಿರ್ದೇಶಕರಾದ ಹನುಮಂತಪ್ಪ, ಮುನಿರಾಜು, ಎಚ್.ಎಂ.ಮಂಜುನಾಥಗೌಡ, ಶ್ರೀನಿವಾಸ್, ಅಶ್ವತನಾರಾಯಣ, ಮುನೇಗೌಡ, ಶ್ರೀನಿವಾಸ್, ದೇವರಾಜು, ಪರಮೇಶ್ ಹಾಜರಿದ್ದರು.

ವರದಿ: ಕೆ .ಮಂಜುನಾಥ್.ಶಿಡ್ಲಘಟ್ಟ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ನೀರಾವರಿ ವಿಷಯದಲ್ಲಿ ಬಯಲುಸೀಮೆಗೆ ಅನ್ಯಾಯ-ಆರ್.ಆಂಜನೇಯರೆಡ್ಡಿ

Published

on

ನೈಜತೆ, ನಿಖರತೆ, ಪ್ರಾಮಾಣಿಕತೆ, ದೂರದೃಷ್ಟಿಯ ಕೊರತೆಯಿಂದ ಬಯಲುಸೀಮೆ ಪಾಲಿಗೆ ಮರೀಚಿಕೆಯಾದ ಶಾಶ್ವತ ನೀರಾವರಿ

ನೀರಾವರಿಗೆ ಒಳಪಟ್ಟ ಕೃಷ್ಣಾ , ಕಾವೇರಿ ಅಚ್ಚುಕಟ್ಟು ಪ್ರದೇಶಗಳ ಮತ್ತು ನೀರಾವರಿ ವಂಚಿತ, ಮಳೆಯಾಶ್ರಿತ ಬಯಲುಸೀಮೆಯ ಪ್ರದೇಶಗಳ ತಾರತಮ್ಯ ಮುಂದುವರೆದಿದೆ.

ಬಯಲುಸೀಮೆಗೆ ಹರಿಸಬೇಕಾದ ಜಿಎಸ್ ಪರಮಶಿವಯ್ಯ ನವರ ವರದಿ ಆಧಾರಿತ ಪಶ್ಚಿಮವಾಹಿನಿ ನದಿಗಳ ನೀರಿಗೆ ಕಿಂಡಿ ಅಣೆಕಟ್ಟುಗಳ ನಿರ್ಮಾಣದಿಂದ ಬಯಲುಸೀಮೆ ಅತಂತ್ರ ಪರಿಸ್ಥಿತಿಗೆ ಬೀಳಲಿದೆ ಎಂದು ಶಾಶ್ವತ ನೀರಾವರಿ ಹೋರಾಟದ ಸಮಿತಿಯ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ.

ಬಯಲುಸೀಮೆಯ ದಾಹ ನೀಗಿಸಲಾಗದ ಅವೈಜ್ಞಾನಿಕ ಎತ್ತಿನಹೊಳೆಯ ಜಲವಿಜ್ಞಾನವನ್ನು CWC ಕೇಂದ್ರೀಯ ಜಲ ಆಯೋಗದಿಂದ ಮರುಅಧ್ಯಯನಕ್ಕೊಳಪಡಿಸದೇ, ಯೋಜನೆ ಪೂರ್ಣಗೊಳಿಸಲು ಆದ್ಯತೆ ಕೊಟ್ಟಿರುವುದರಿಂದ, ಭ್ರಷ್ಠರ ಜೋಳಿಗೆ ತುಂಬುತ್ತದೆಯೇ ಹೊರತು ನಮ್ಮ ಕೆರೆಗಳಿಗೆ ನೀರು ಹರಿಯುವುದಿಲ್ಲ.

ಕೃಷ್ಣಾ ನದಿ ನೀರನ್ನು ಬಯಲುಸೀಮೆಗೆ ಹರಿಸಲು ಆಲಮಟ್ಟಿ ಮತ್ತು ಪೆನ್ನಾರ್ ಜೋಡಣೆಗೆ NWDA (ನ್ಯಾಷನಲ್ ವಾಟರ್ ಡೆವಲಪಮೆಂಟ್ ಏಜನ್ಸಿ ) ಈಗಾಗಲೇ ಅಧ್ಯಯನವರದಿ ಸಿದ್ದಪಡಿಸಿ, ಹಸಿರು ನಿಶಾನೆ ತೋರಿಸಿದ್ದರೂ ಸಹಾ, ಕೃಷ್ಣಾ ನೀರನ್ನು ಮತ್ತೆ ಉತ್ತರಕರ್ನಾಟಕಕ್ಕೆ ಮೀಸಲಿಟ್ಟು ಬಯಲುಸೀಮೆಗೆ ಸೊನ್ನೆ ಸುತ್ತಲಾಗಿದೆ.

ರಾಜ್ಯ ಸರ್ಕಾರ ಬಹಳ ಉದಾರತೆಯಿಂದ ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಆಯ್ದ ಕೆಲ ಕೆರೆಗಳಿಗೆ ಹರಿಸುತ್ತಿರುವ ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಕೇಂದ್ರಸರ್ಕಾರದ ಮಾನದಂಡಕ್ಕನುಗುಣವಾಗಿ ಮೂರನೇ ಹಂತಕ್ಕೆ ಶುದ್ದೀಕರಿಸುವಲ್ಲಿ ಸರ್ಕಾರದಲ್ಲಿ ಚಿತ್ತಶುದ್ಧಿ ಮರೆಯಾಗಿದೆ.

ಅಂತರ್ಜಲ ಆಧಾರಿತ ಕೃಷಿ ಮಾಡುವ ಬಯಲುಸೀಮೆ ರೈತರ ಲಕ್ಷಾಂತರ‌ ಕೊಳವೆ ಬಾವಿಗಳು ವಿಫಲವಾಗಿವೆ. ಇವುಗಳ ಮರುಪೂರಣ, ಪುನಶ್ಚೇತನಕ್ಕೆ ವಿಶೇಷ ಅನುದಾನ ಒದಗಿಸುವುದನ್ನು ಮರೆತಿದ್ದಾರೆ.

ಸಾವಿರಾರು ಕೆರೆಗಳಿರುವ ಬಯಲುಸೀಮೆಯ ಕೆರೆಗಳ ಜಲಾನಯನ ಪ್ರದೇಶದ ಒತ್ತುವರಿ ತೆರುವು, ರಾಜಕಾಲುವುವೆಗಳ ಪುನರುಜ್ಜೀವನಗೊಳಿಸಿ, ಅಂತರ್ಜಲ ಅಭಿವೃದ್ದಿಪಡಿಸುವ ಯಾವುದೇ ನಿಖರವಾದ ವೈಜ್ಞಾನಿಕ ಯೋಜನೆಗಳ ಕಡೆ ಗಮನಹರಿಸದೆ. ಓಬಿರಾಯನ ಹಳೆಯ ಪದ್ಧತಿಗಳಿಗೆ ಜೋತುಬಿದ್ದಿರುವುದರಿಂದ ಬಯಲುಸೀಮೆಗೆ ಯಾವುದೇ ಉಪಕಾರವಾಗುವುದಿಲ್ಲ .

ಬಯಲುಸೀಮೆಯ ಜಿಲ್ಲೆಗಳಲ್ಲಿ ರಾಡಾರ್ ಆಧಾರಿತ ಹವಾಮಾನ ಮತ್ತು ಮಳೆ ಮುನ್ಸೂಚನಾ ಕೇಂದ್ರಗಳನ್ನು ಸ್ಥಾಪಿಸಿದರೆ, ಕೃಷಿಯಲ್ಲಿ ಅಂತರ್ಜಲದ ಉಳಿತಾಯ, ಜಲ ಸಂರಕ್ಷಣೆ, ಬರ ನಿರ್ವಹಣೆ ಮತ್ತು ಬೆಳೆಗಳ ರೋಗ ನಿರ್ವಹಣೆಗೆ ಅನುಕೂಲವಾಗುತ್ತಿತ್ತು.

ಇಂದಿನ ಬಜೆಟ್ ಬಯಲುಸೀಮೆಯ ಪಾಲಿಗೆ ಹೊಸ ಬಾಟಲಿಯಲ್ಲಿ ಹಳೇ ಮದ್ಯ ಎಂಬಂತಿದೆ ಎಂದರು.

Continue Reading

ಸುದ್ದಿ

ಮಸ್ಕಿ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದ ಕಾರಣ ನಗರ ಆಸ್ಪತ್ರೆ ಜನರ ಪ್ರಾಣಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ !!.

Published

on

ಮಸ್ಕಿ :- ಶನಿವಾರ ಬೆಳಗ್ಗೆ ಮಸ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕಾರಿ ಆಸ್ಪತ್ರೆಯ ಮುಂದೆಯೇ ಅಪಘಾತವಾದಾಗ ಚಿಕಿತ್ಸೆಗೆಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ವೈದ್ಯರ ಕೊರತೆ ಕಂಡುಬಂದಿದೆ.
ಇದರಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಅಪಘಾತವಾದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಆಸ್ಪತ್ರೆಗೆ ಕಳಿಸಲಾಯಿತು.

ಆದರೆ ಮೊದಲಿನಿಂದಲೂ ಮಸ್ಕಿಯು ನೂತನವಾಗಿ ತಾಲೂಕು ಕೇಂದ್ರವಾದರೂ ಇಲ್ಲಿಯವರೆಗೂ ಹೆಚ್ಚಿನ ಚಿಕಿತ್ಸೆ ದೊರೆಯುತ್ತಿಲ್ಲ ಹಾಗೂ ವೈದ್ಯರಿಲ್ಲ ಎಂಬ ಕೂಗು ಕೇಳಿಬರುತ್ತಿದೆ.

ಇದರಿಂದ ಬಡರೋಗಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು
6 ಬೆಡ್ ಸೌಲಭ್ಯವನ್ನು ಮಾತ್ರ ಹೊಂದಿರುವ ಆಸ್ಪತ್ರೆಗೆ ಕಾಯಂ ವೈದ್ಯರ ಕೊರತೆ ಇದೆ.

ಸುಮಾರು ವರ್ಷಗಳಿಂದ ವೈದ್ಯರ ಕೊರತೆ ಇದ್ದು .ಇದ್ದ ಒಬ್ಬ ವೈದ್ಯರು ಆಯುರ್ವೇದಿಕ್ ಆಯುಷ್ ವೈದ್ಯರಾಗಿದ್ದು ಇದರಿಂದ ಹೆಚ್ಚಿನ ಚಿಕಿತ್ಸೆಗೆ ಬೇರೆಕಡೆಗೆ ಹೋಗಿ ಪರದಾಡುವಂತಾಗಿದೆ.

ಹೆಚ್ಚಿನ ಚಿಕಿತ್ಸೆಗೆಂದು ಬೇರೆ ಕಡೆ ಹೋಗುವ ಸಮಯದಲ್ಲಿ ಶೇಕಡಾ 70 ರಷ್ಟು ರೋಗಿಗಳು ನಡು ದಾರಿಯಲ್ಲಿ ಸಾವನ್ನಪ್ಪಿ ಸ್ಮಶಾನ ಸೇರುವಂತಾಗಿದೆ.

ಮಸ್ಕಿ ತಾಲೂಕು ಪರಿವರ್ತನೆಯಾಗಿದೆ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಬೇಕಾಗಿದೆ.
ಈ ಮೂಲಕ ಮಸ್ಕಿ ಸೇರಿದಂತೆ ಸುತ್ತ ಮುತ್ತಲಿನ ಬಹುತೇಕ ಎಲ್ಲಾ ಹಳ್ಳಿಗಳ ಬಡ ಜನರಿಗೆ ಚಿಕಿತ್ಸೆಯನ್ನು ಅನುಕೂಲವಾಗುವಂತೆ ಮಾಡಿಕೊಡಬೇಕಾಗಿದೆ.

ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚರಿಕೆವಹಿಸಬೇಕಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ವೈದ್ಯರ ಕೊರತೆಯ ಬಗ್ಗೆ ಸ್ಥಳೀಯ ನಗರದ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ವಿಜಯ್ ಬಡಿಗೇರ್ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಬಂದರೂ ಬಾರದಂತೆ ಬೇಜವಾಬ್ದಾರಿತನವನ್ನು ವರ್ತಿಸುತ್ತಿದ್ದಾರೆ. ಆದರೆ ಮಸ್ಕಿ ತಾಲೂಕು ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಿ ಬಡರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಬರುವ ಮುಂದಿನ ದಿನಮಾನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯ

Published

on

ಮಸ್ಕಿ . ಪಟ್ಟಣದ 6ನೇ ವಾರ್ಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ಮಸ್ಕಿಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಶಿಕ್ಷಕಿಯರು ಹಾಗೂ ಗ್ರಾಮಸ್ಥರು, ಇಂದು ಕನ್ನಡ ಸಂಸ್ಕೃತಿಯ ಪ್ರಕಾರ ನಿಯಮ ನಿತ್ಯ ದಿಂದ ಹೂವು ಹಣ್ಣು ನೀಡಿ ಸೀಮಂತ ಕಾರ್ಯ ಮಾಡಿದರು,

ಈ ವೇಳೆ ಅಂಗನವಾಡಿಯ ಕಾರ್ಯಕರ್ತರಾದ ಶ್ರೀಮತಿ ಈರಮ್ಮ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ಭಾರತೀಯ ಸಂಸ್ಕೃತಿಯ ಒಂದು ಪ್ರತೀಕವಾಗಿದೆ, ಇಂತಹ ಕಾರ್ಯಕ್ರಮದಿಂದ, ಹುಟ್ಟುವ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯಲಿದೆ, ಅಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಎಲ್ಲರೂ ಪೌಷ್ಟಿಕಾಹಾರ ಸೇವನೆ ಮಾಡಬೇಕು, ಎಂದರು.

ಮಕ್ಕಳು ಆರೋಗ್ಯದಿಂದ ಹುಟ್ಟಬೇಕಾದರೆ ತಾಯಿಯು ಪೌಷ್ಟಿಕ ಆಹಾರ ಸೇವನೆ ಮಾಡಬೇಕು, ತರಕಾರಿ ಸೊಪ್ಪುಗಳನ್ನು ಹೆಚ್ಚು ಉಪಯೋಗಿಸಬೇಕು.

ಹಾಗೂ ಕೆಮಿಕಲ್ ಮಿಕ್ಸ್ ಇರುವಂತ ಪಾನೀಯಗಳನ್ನು ಸೇವನೆ ಮಾಡಬಾರದು ಎಂದರು,

ಈ ಸಂದರ್ಭದಲ್ಲಿ-: ಅಂಗನವಾಡಿ ಕಾರ್ಯಕರ್ತರಾದ, ಶ್ರೀಮತಿ ಈರಮ್ಮ, ಅಂಗನವಾಡಿಯ ಸಹಾಯಕಿ, ಶ್ರೀಮತಿ ನರಸಮ್ಮ, ಮಹಿಳೆಯರಾದ, ಶಂಕ್ರಮ್ಮ, ಸುಜಾತ, 6ನೇ ವಾರ್ಡಿನ ಮಹಿಳೆಯರು ಭಾಗಿಯಾಗಿದ್ದರು.

ವರದಿ: ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್