ಮಾಹಿತಿ
ರಕ್ತದಾನ, ಔಷಧಗಳು ಸೇರಿದಂತೆ ಹಲವು ತುರ್ತು ಸೇವೆಗಳಿಗಾಗಿ ಸಂಪರ್ಕಿಸಿ
ಬಾಗೇಪಲ್ಲಿ: ಇಡೀ ದೇಶವನ್ನೆ ಆತಂಕಕ್ಕೆ ದೂಡಿರುವ ಕೊರೋನಾ ಸೋಂಕಿನ ಎರಡನೇ ಅಲೆಯು, ರೂಪಾಂತರ ಕೋವೊಡ್ ವೈರಸ್ ದಾಳಿಯನ್ನು ತಡೆಯುವಲ್ಲಿ ಸರ್ಕಾರಗಳೂ ಅಸಹಾಯಕತೆ ತೋರುತ್ತಿವೆ. ಇಂತಹ ಕೊರೋನಾ ಕಷ್ಟಕಾಲದಲ್ಲಿ ಬಡವರಿಗೆ ನೆರವಾಗಲು ಭಾರತದ ಪ್ರಜಾಸತ್ತಾತ್ಮಕ ಯುವ ಫೆಡರೇಶನ್ ನ ತಾಲ್ಲೂಕು ಘಟಕ ಸಹಾಯಕ್ಕೆ ಬರುತ್ತಿದೆ. ರಕ್ತದಾನ, ಔಷಧಗಳು ಸೇರಿದಂತೆ ಹಲವು ತುರ್ತು ಸೇವೆಗಳನ್ನು ಒದಗಿಸಲು ಸಂಘಟನೆಯು ಸಿದ್ದವಾಗಿದ್ದು, ನೆರವು ಬೇಕಾದವರು 9449102933, 9945914151 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದೆಂದ ಪ್ರಕಟಣೆ ಕೋರಿದೆ.
ಡಿವೈಎಫ್ಐ ನ ಜಿಲ್ಲಾ ಸಂಚಾಲಕರಾದ ಡಾ.ಅನಿಲ್ ಕುಮಾರ್ ಆವುಲಪ್ಪ ಹಾಗೂ ತಾಲ್ಲೂಕು ಸಂಚಾಲಕರಾದ ವೈ.ಎನ್ ಹರೀಶ್ ರವರು ಈ ಕುರಿತು ಮಾಹಿತಿ ನೀಡಿದ್ದು, ಕೊರೋನಾ ಸೋಂಕಿನ ಬಗ್ಗೆ ಆತಂಕಗೊಳ್ಳದೆ ತಪ್ಪದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಎಂದಿದ್ದಾರೆ.
ಮಾಹಿತಿ
ಭೂ ಮಾಪಕರ ದಿನ ಆಚರಣೆ
ಶಿಡ್ಲಘಟ್ಟ : ನಗರದ ತಾಲ್ಲೂಕು ಕಚೇರಿಯಲ್ಲಿರುವ ಭೂಮಾಪಕರ ಶಾಖೆಯಲ್ಲಿ ಭೂ ಮಾಪಕರ ದಿನವನ್ನು ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಭಾಗಿಯಾದ ಭೂ ಮಾಪಕರ ಶಾಖೆಯ ಸೂಪರ್ ವೈಸರ್ ಸೋಮಶೇಖರಪ್ಪ ಅವರು ಮಾತನಾಡಿ, ಭಾರತದಲ್ಲಿ ಪ್ರಥಮ ಬಾರಿಗೆ ಆಧುನಿಕ ಉಪಕರಣಗಳನ್ನು ಬಳಸಿ ವೈಜ್ಞಾನಿಕ ರೀತಿಯಲ್ಲಿ ಕರ್ನಲ್ ವಿಲಿಯಂ ಲ್ಯಾಂಬ್ ಟನ್ ಎಂಬ ಸೇನಾಧಿಕಾರಿಯ ನೇತೃತ್ವದಲ್ಲಿ 1802 ರಲ್ಲಿ ಭೂ ಸರ್ವೆ ಕಾರ್ಯ ನಡೆಯಿತು. ಅದರ ಜ್ಞಾಪಕಾರ್ಥವಾಗಿ ಪ್ರತಿ ವರ್ಷವೂ ಏಪ್ರಿಲ್‌ನಲ್ಲಿ ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವೈಜ್ಞಾನಿಕ ಪದ್ಧತಿಯಲ್ಲಿ ಪ್ರಾರಂಭಿಸಿದ ರಾಷ್ಟ್ರೀಯ ಭೂಮಾಪನಕ್ಕೆ ಎರಡು ಶತಮಾನಗಳ ಇತಿಹಾಸವಿದೆ. ಹಲವು ಸಮಸ್ಯೆಗಳ ನಡುವೆಯೂ ಭೂಮಾಪಕರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ದಿನಾಚರಣೆಯಲ್ಲಿ ಭೂಮಾಪಕರುಗಳಾದ ನಾಗಭೂಷಣರೆಡ್ಡಿ, ಗುರುಸ್ವಾಮಿ, ರವೀಂದ್ರ, ಆದರ್ಶ, ಲಕ್ಷ್ಮೀ ನರಸಿಂಹಯ್ಯ, ಸತೀಶ್, ರಾಜಮ್ಮ, ನಂದಿನಿ, ಗುರುಪ್ರಸಾದ್ ಮುಂತಾದವರು ಹಾಜರಿದ್ದರು
ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ
ಮಾಹಿತಿ
ಸಾಹಿತಿ ಶಶಿಕಾಂತ್ ರಾವ್ ಗೆ ‘ನುಡಿಸಿರಿ’ ಪ್ರಶಸ್ತಿ.
ಪೀಣ್ಯ ದಾಸರಹಳ್ಳಿ: ಸ್ನೇಹಜೀವಿ ಗೆಳೆಯರ ಬಳಗ ಹಾಗೂ ಕ.ಸಾ.ಪ. ಬೆಂಗಳೂರು ನಗರ ಜಿಲ್ಲೆ ಉಪಾಧ್ಯಕ್ಷ ಶಶಿಕಾಂತ್ ರಾವ್ ಅವರು ಸಾಹಿತ್ಯ, ಸಾಂಸ್ಕೃತಿಕ ಸಂಘಟನೆ, ಸಮಾಜಸೇವೆ ಸಲ್ಲಿಸಿರುವ ಗಣನೀಯ ಸೇವಾ ಸಾಧನೆಗಾಗಿ 2021 ನೇ ಸಾಲಿನ ರಾಜ್ಯಮಟ್ಟದ ‘ನುಡಿಸಿರಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಕಾಶನದ ಚಂದ್ರಶೇಖರ್ ಮಾಡಲಗೇರಿ ತಿಳಿಸಿದ್ದಾರೆ. ಹುಬ್ಬಳ್ಳಿಯ ಚೇತನ ಪ್ರಕಾಶನದಿಂದ ಮಾ.20 ಮತ್ತು 21 ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಭವನದಲ್ಲಿ ನಡೆಯಲಿರುವ ‘ಧಾರವಾಡ ನುಡಿ ಸಡಗರ’ ದಲ್ಲಿ ಸಾಹಿತಿ,ಸಮಾಜ ಸೇವಕ- ಸಂಘಟಕರಾದ ಶಶಿಕಾಂತ್ ರಾವ್ ಅವರಿಗೆ ಖ್ಯಾತ ಚಿತ್ರನಟ ಮುಖ್ಯಮಂತ್ರಿ ಚಂದ್ರು ಅವರು ‘ನುಡಿಸಿರಿ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಮಾಹಿತಿ
ಹೊಯ್ಸಳ ಪ್ರಶಸ್ತಿಗೆ ಸರಕಾರಿ ಪ್ರೌಢಶಾಲೆ ಬಳಗಾನೂರು ವಿದ್ಯಾರ್ಥಿ ರಮೇಶಯಲುಪಯ್ಯ ಆಯ್ಕೆ
ಮಸ್ಕಿ :- 2020 -21 ನೇ ಸಾಲಿನ ಮಹಿಳಾ ಮತ್ತು ಮಕ್ಕಳಅಭಿವೃದ್ಧಿಇಲಾಖೆ ವತಿಯಿಂದ ಕೊಡುವ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿಯಲ್ಲಿ ಬಳಗಾನೂರು ಪಟ್ಟಣದ ಸರಕಾರಿ ಪ್ರೌಢಶಾಲೆ ಬಳಗಾನೂರಿನ 9ನೇ ತರಗತಿ ವಿದ್ಯಾರ್ಥಿ ರಮೇಶ ಯಲುಪಯ್ಯ ಸ್ಕೌಟ್ ವಿದ್ಯಾರ್ಥಿಯಾದ ಇವರು ಕ್ರೀಡಾ (ಖೋಖೋ) ಕ್ಷೇತ್ರದಿಂದ ಹೊಯ್ಸಳ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ರಮೇಶ ಯಲುಪಯ್ಯ ಜಿಲ್ಲಾಮಟ್ಟದ ಹೊಯ್ಸಳ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಮಹದೇವಮ್ಮ , ದೈಹಿಕ ಶಿಕ್ಷಣ ಶಿಕ್ಷಕರಾದ ರವೀಂದ್ರಹಾಗೂ ಬೋಧಕ ಸಿಬ್ಬಂದಿ ವರ್ಗ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಊರಿನ ನಾಗರಿಕರು ಅಭಿನಂದಿಸಿದ್ದಾರೆ.
ವರದಿ : ದುರ್ಗೇಶ್ ಬೋವಿ ಮಸ್ಕಿ
-
Politics2 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
ಸುದ್ದಿ4 weeks ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ
-
ಸುದ್ದಿ2 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ3 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?