ಕೊರೊನಾ
ಬೆಡ್ ಗಳನ್ನು ಉಳಿಸಿಕೊಂಡು ಉಳಿದ ಬೆಡ್ ಗಳನ್ನು ಆಸ್ಪತ್ರೆಯವರಿಗೆ ಹಿಂದಿರುಗಿಸಲು ನಿರ್ಧಾರ
ಬೆಂಗಳೂರು : ಸರ್ಕಾರ, ಖಾಸಗಿ ಆಸ್ಪತ್ರೆಗಳಿಂದ ಪಡೆದುಕೊಂಡ ಬೆಡ್ ಗಳ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖಗೊಂಡಿದ್ದು, ಸರ್ಕಾರಿ ಕೋಟಾದಲ್ಲಿ ಸದ್ಯದ ಪರಿಸ್ಥಿತಿಗೆ ಸಾಕಾಗುವಷ್ಟು ಬೆಡ್ ಗಳನ್ನ ಉಳಿಸಿಕೊಂಡು ಉಳಿದ ಬೆಡ್ ಗಳನ್ನ ಕೋವಿಡ್ ಯೇತರ ರೋಗಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆಸ್ಪತ್ರೆಯವರಿಗೆ ಹಿಂದಿರುಗಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಮಾನ್ಯ ಕಂದಾಯ ಸಚಿವರಾದ ಆರ್.ಅಶೋಕ್ ರವರು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮಂಜುನಾಥ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ, ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಜಾವೇದ್ ಅಖ್ತರ್ ಉಪಸ್ಥಿತರಿದ್ದರು.
ಕೊರೊನಾ
“ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ”
ಗೌರಿಬಿದನೂರು : ತಾಲ್ಲೂಕಿನ ಜಿ. ಬೊಮ್ಮಸಂದ್ರ ಗ್ರಾಮದಲ್ಲಿ ಜಿ.ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ವತಿಯಿಂದ ಕರೋನ ವಾರಿಯರ್ಸ್ ಗಳಾಗಿ ಕೆಲಸ ನಿರ್ವಹಿಸುತ್ತಿರುವಂತಹ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು,ಗ್ರಾಮ ಪಂಚಾಯಿತಿ ಸಿಬ್ಬಂದಿ,ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಗಳ ವಿತರಣೆ ಮಾಡಲಾಯಿತು . ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಾಥ್ ರೆಡ್ಡಿ ,ಉಪಾಧ್ಯಕ್ಷರಾದ ಸೌಭಾಗ್ಯಮ್ಮ ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅಶ್ವತನಾರಾಣಸ್ವಾಮಿ ಹಾಗೂ ಗ್ರಾಮದ ಮುಖಂಡರಾದ ಬಿ.ಜಿ. ವೇಣುಗೋಪಾಲ ರೆಡ್ಡಿ ರವರು ಮತ್ತು ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Politics
“ಮಡಿವಾಳರಿಗೆ ದಿನಸಿ ಪದಾರ್ಥ ಹಂಚಿದ ಅಶೋಕ ಮನಗೂಳಿ “
ಸಿಂದಗಿ : ಪಟ್ಟಣದ ಮಡಿವಾಳ ಮಾಚಿದೇವ ಸೇವಾ ಸಂಘದವರಿಗೆ (ಲ್ಯಾಂಡ್ರಿ ) ಕಾರ್ಯಮಾಡುವರಿಗೆ ಕಾಂಗ್ರೆಸ ಪಕ್ಷವತಿಯಿಂದ ದಿನಸಿ ಪದಾರ್ಥಗಳ ಕಿಟಗಳನ್ನು ಬುಧುವಾರರಂದು ವಿತರಿಸಲಾಯಿತು.
ಈ ವೇಳೆ ಸಿಂದಗಿ ಉಪ ಚುಣಾವಣೆಯ ಕಾಂಗ್ರೆಸ ಘೋಷಿತ ಅಭ್ಯರ್ಥಿ ಅಶೋಕ ಮನಗೂಳಿ ಅವರು ಮಾತನಾಡಿ ಮಡಿವಾಳ ಸಮಾಜ ಶಾಂತಿ ಸಹನೆಗೆ ಹೆಸರುವಾಸಿಗಳು ಅವರು ಲಾಕ್ ಡೌನ್ ಜಾರಿ ಇರುವದರಿಂದ ಜೀವನ ನಡೆಸುವದು ಬಾಹಳ ತೊಂದರೆಗೊಳಗಾಗಿದ್ದಾರೆ ಹಿನ್ನೆಲ್ಗೆಯಲ್ಲಿ ಮಡಿವಾಳರಿಗೆ ದಿನಸಿ ಪದಾರ್ಥಗಳು ಕಿಟಗಳನ್ನು ಕೊಡುವ ಮೂಲಕ ಕಾಂಗ್ರೆಸ ಪಕ್ಷೆ ನೊಂದವರ ದ್ವನಿಯಾಗಿದೆ , ಸರಕಾರ ಶ್ರಮಿಕ ವರ್ಗದವರಿಗೆ ಮುಗಿಗೆ ತುಪ್ಪಾ ಸವರುವ ಕೆಲಸ ಮಾಡಿದೆ ಎಂದರು.
ಮಡಿವಾಳ ಸಮಾಜದ ಕಾರ್ಯದರ್ಶಿ ತಿಪ್ಪಣ್ಣ ಅಗಸರ ಮಾತನಾಡಿ ಕೊರೊನಾ ಸೋಂಕಿನ ಈ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಮಡಿವಾಳ ಬಡ ಜನರು ದುಡಿಮೆಯಿಲ್ಲದೆ ಅನೇಕ ತೊಂದರೆಗಳಿಗೆ ಗುರಿಯಾಗಿದ್ದು, ಅವರು ಉಪಜೀವನವನ್ನು ನಡೆಸಲು ಪರದಾಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಅಶೋಕ್ ಅಣ್ಣಾ ಮನಗೂಳಿ ಯವರು ಮಡಿವಾಳ ಸಮುದಾಯದವರಿಗೆ ಸಹಾಯ ಮಾಡುವುದರಲ್ಲಿ ಯಶಸ್ವಿಯಾಗಿ ಕಾರ್ಯ ನಿರಂತರವಾಗಿ ಸಾಗಲಿ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮಡಿವಾಳ ಸಂಘದ ಈರಣ್ಣ ಮಡಿವಾಳರ, ಶಂಕರ ಮಡಿವಾಳ, ಗೋಲ್ಲಾಳ ಅಗಸರ, ಬಸು ಅಗಸರ.ಸಿ .ಬಿ.ಮಡಿವಾಳರ, ನಿಂಗಪ್ಪ ಅಗಸರ,
ಕಾಂಗ್ರೇಸ್ ಕಾರ್ಯಕರ್ತರಾದ ಅಶೋಕ್ ಯಡ್ರಾಮಿ, ರಮೇಶ್ ಹೂಗಾರ, ಮಂಜು ಬಿರಾದಾರ್, ಚನ್ನಪ್ಪ ಪಟ್ಟಣಶೆಟ್ಟಿ, ಅಂಬು ತಿವಾರಿ, ಶಾಂತಗೌಡ ಪಾಟೀಲ , ಚನ್ನಪ್ಪ ಗೋಣಿ, ಬಂದೇನವಾಜ್ ಕರ್ಜಗಿ, ಪರಮಾನಂದ ಉಪ್ಪಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ಭಜಂತ್ರಿ
ಕೊರೊನಾ
ಸಿಂದಗಿ ಬಿ ಆರ್ ಸಿ ಕೇಂದ್ರದಲ್ಲಿ ಕೋವಿಡ್ 19 ಲಸಿಕೆ ಹಾಕಿ ಕೊಂಡ ಶಿಕ್ಷಕರು
ಸಿಂದಗಿ : ಕೊರೊನಾ ಆರ್ಭಟಕ್ಕೆ ಕೋವಿಡ್ ಲಸಿಕೆಯೊಂದೇ ಸಂಜೀವಿನಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲ ವ್ಯಾ ದೇವಣಗಾಂವಿ ಹೇಳಿದರು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಧಿಕಾರಿಗಳ ಕಾರ್ಯಲಯದ ಬಿ ಆರ್ ಸಿ ಕೇಂದ್ರದಲ್ಲಿ ಸೋಮುವಾರರಂದು ತಾಲೂಕಿನ ಶಿಕ್ಷಕರಿಗೆ ಮತ್ತು ಬಿ ಎಲ್ ಓ ಶಿಕ್ಷಕರಿಗೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ಹಾಗೂ ಬಿ ಆರ್ ಸಿ ಮತ್ತು ಸಿ ಆರ್ ಪಿಗಳಿಗೆ ಸರ್ವ ಸಿಬ್ಬಂದಿಗೆ ಕೊವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಶಿಕ್ಷಕರು ಚಿಕ್ಕ ಮಕ್ಕಳೊಂದಿಗೆ ಹೆಚ್ಚು ಒಡನಾಡಿಗಳಾಗಿದ್ದು ಹೊಂದಿರುವರು. ನಾವು ಮೊದಲು ಲಸಿಕೆ ಹಾಕಿ ಕೊಂಡು ಇನ್ನೋಬ್ಬರಿಗೆ ಲಸಿಕೆ ಬಗ್ಗೆ ಜಾಗ್ರತ ಮುಡಿಸಬೇಕು , ಸೋಂಕು ನಮ್ಮೊಂದಿಗೇ ಇನ್ನೂಬ್ಬರಿಗೆ ಕೊರೊನಾ ಸೋಂಕು ಬಾರದಂತೆ , ನಮ್ಮ ಕುಟುಂಬಸ್ಥರಿಗೆ , ನಮ್ಮ ನೆರೆಹೊರೆಯ ಜನರಿಗೆ ಮೊದಲು ಕೋವಿಡ್ ಲಸಿಕೆ ಹಾಕಿಸಿ ಕೊಳ್ಳುವಂತೆ ಶಿಕ್ಷಕರು ಪ್ರೇರಣೆ ನೀಡ ಬೇಕು ಎಂದರು.
ಕ್ಷೇತ್ರ ಸಮನ್ವಯಧಿಕಾರಿ ಸಂತೋಷಕುಮಾರ ಬೀಳಿಗಿ ಮಾತನಾಡಿ ಬಿ ಎಲ್ ಓ ಕಾರ್ಯ ನಿರ್ವಹಿಸುವ ಶಿಕ್ಷಕರು ತಾವು ಕೋವಿಡ್ ಪಾಜೀಟಿವ ಹೊಂದಿರುವ ವ್ಯಕ್ತಿಯನ್ನು ಹಾಗೂ ಅವರೊಂದಿಗೆ ಸಂಪರ್ಕ ಬರುವ ವ್ಯಕ್ತಿಗಳಿಗೆ ಕೊವಿಡ್ ರೋಗದ ಜಾಗ್ರತ ಮೂಡಿಸುವ ಕಾರ್ಯದಲ್ಲಿ ಶಿಕ್ಷಕರು ತಾವು ತೋಡಗಿ ಕೊಳ್ಳುವದರಿಂದ ಮೊದಲು ಕೊವಿಡ್ 19 ಲಸಿಕೆ ಹಾಕಿಸಿ ಕೊಂಡು ಉತ್ತಮ ಆರೋಗ್ಯವಂತರಾಗಬೇಕು ಎಂದರು.
ಆರೋಗ್ಯ ಇಲಾಖೆಯ ಅಧಿಕಾರಿ ಜೆ.ಎ.ಸಿಂದಗಿಕರ್ ಮಾತನಾಡಿ ಪ್ರತಿಯ್ಬೋರು ಮಾಸ್ಕ ದೈಹಿಕ ಅಂತರ ಕಾಪಾಡಿ ಕೊಂಡು ಮತ್ತು ಆಗಾಗ ಕೈ ತೊಳೆಯುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ವಿರೇಂದ್ರ ಪವಾಡಿ ಬೀದರ ಮಾತನಾಡಿ ಸಿಂದಗಿ ಸರಕಾರಿ ಆಸ್ವತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯವರು ಕೋವಿಡ್ 19 ಲಸಿಕೆ ಹಾಕಿದರು.
ಕೋವಿಡ್ 19 ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಸರಕಾರ ಉತ್ತಮ ಆರೋಗ್ಯಕ್ಕೆ ಸಹಕಾರ ನೀಡುತ್ತದೆ ಕಾರಣ 45 ವಯಮಾನದಿಂದ 59ವರಿಗೆ ಬಿ ಪಿ ಸಕ್ಕರೆ ಕಾಯಿಲೆ ಇರುವರು ಹಾಗೂ 60 ವರ್ಷ ಮೇಲ್ಪಟವರು ಎಲ್ಲರು ತಪ್ಪದೆ ಕೋವಿಡ್ 19 ಲಸಿಕೆ ಹಾಕಿ ಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಉತ್ತಮ ಮಾಹಿತಿ ನೀಡಿದರು. ಸರಕಾರಿ ಆಸ್ಪತ್ರೆಗೆ ಬರುವಾಗ ತಮ್ಮ ಆಧಾರ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ತಪ್ಪದೆ ತರಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಅಧಿಕಾರಿಗಳಾದ ಎಸ್ ಡಿ ಕುಲಕರ್ಣಿ , ಪ್ರಭು ಜಂಗಿನಮಠ , ಮಾಹಾಂತೇಶ ಬೂದಿ , ಜುಬೇದರ ಗುಂದಗಿ , ವಿರೇಂದ್ರ ಪವಾಡಿ(ಬೀದರ) ಮೋಸಿನ್ ಮಮದಾಪೂರ, ಶ್ರೀಮತಿ ಜೆ ಕೆ ಚಿಕ್ಕಂಡಿ, ಸದಾನಂದ ಹಂಗರಗಿ , ದೇವರಹಿಪ್ಪರಗಿ ತಾಲೂಕಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಬಿ.ಗಡಗಿ, ಶಿಕ್ಷಣಸಂಯೋಜಕರಾದ ಸುದೀಪ ಕಮತಗಿ , ಆನಂದ ಮಾಡಗಿ , ಮಾಹಾಂತೇಶ ಯಡ್ರಾಮಿ.ಎಂ.ಎಂ.ದೊಡಮನಿ, ಸಿ .ಆರ್.ಪಿಗಳಾದ ವಿರೇಶ ಕರಿಕಳ್ಳಿಮಠ , ಭೀಮನಗೌಡ ಬಿರಾದಾರ ,
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಗೌರವ ಕಾರ್ಯದರ್ಶಿ ಸಾಹಿತಿ ಬಸವರಾಜ ಅಗಸರ , ಸ್ಕೌಟ್ ಮತ್ತು ಭಾರತ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಹಾಗೂ ಕ.ರ.ಪ್ರ.ಶಾ.ಶಿ.ಸಂಸ್ಥೆ ಕಾರ್ಯದರ್ಶಿ ಬಸವರಾಜ ಸೋಮಪೂರ, ಜೆ.ಎಂ.ಅಂಗಡಿ, ಶಿಕ್ಷಕ ಬಸಯ್ಯ ನಂದಿಕೋೋ,ಲ ಜೆ.ಎಂ.ಅಂಗಡಿ, ಮುಖ್ಯಗುರು ಪಿ.ಸಿ.ಚಲವಾದಿ, ಪಿ .ಸಿ .ಮ್ಯಾಗೇರಿ,ಆಶಾ ಕಾರ್ಯಕರ್ತರಾದ ಶ್ರೀಮತಿ ಜ್ಯೋತಿ ಕುಲಕರ್ಣಿ, ನಾಗಮ್ಮ ಎಮ್ಮಿ, ಬಸಮ್ಮ ಧಸ್ಮ , ಎಸ್ .ಎಂ.ಹಿರೇಮಠ ಇದ್ದರು.
ವರದಿ:- ರಾಘವೇಂದ್ರ ಭಜಂತ್ರಿ
-
Politics3 weeks ago
ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಎನ್. ಎಚ್.ಶಿವಶಂಕರ್ ರೆಡ್ಡಿ
-
Politics3 weeks ago
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
-
ಸುದ್ದಿ3 weeks ago
ಹರಳಕೆರೆ ಗ್ರಾಮದಲ್ಲಿ ಹಸುವನ್ನು ಬಲಿತೆಗೆದುಕೊಂಡ ಚಿರತೆ : ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
-
ಕೊರೊನಾ3 weeks ago
ವಿದುರಾಶ್ವತ್ಥದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ವಿತರಣೆ