Connect with us
Ad Widget

ವಿಡಿಯೋ

ಪೆಟ್ರೋಲ್, ಡಿಸೇಲ್ ಅಡುಗೆ ಅನಿಲ ಬೆಲೆ ಏರಿಕೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

Published

on

ತಾಳಿಕೋಟೆ :ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹ 100ರ ಗಡಿ ದಾಟಿರುವುದನ್ನು ವಿರೋಧಿಸಿ ಶನಿವಾರ ಕಾಂಗ್ರೆಸ್ ಘಟಕದ ನಾಯಕರು ಹಾಗೂ ಕಾರ್ಯಕರ್ತರು ಪಟ್ಟಣದ
ಪೆಟ್ರೋಲ್‌ ಬಂಕ್‌ಗಳ ಎದುರು ‘ಪೆಟ್ರೋಲ್‌ 100 ನಾಟೌಟ್‌’ ಪ್ರತಿಭಟನಾ ಪ್ರದರ್ಶನ ನಡೆಸಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಸಿಲಿಂಡರ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರು ಗತಿಯಲ್ಲೇ ಸಾಗಿದೆ.ಕೇಂದ್ರವು ಕೋವಿಡ್‌ ಸಂಕಷ್ಟದಲ್ಲಿರುವ ಜನಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ’ ಎಂದು ಕಾಂಗ್ರೆಸ್ b s ಪಾಟೀಲ (ಯಾಳಗಿ) ಕೆ. ಪಿ. ಸಿ. ಸಿ ಸದಸ್ಯರು ಬೆಂಗಳೂರು ಕಿಡಿಕಾರಿದರು.

ಈ ಸಂದರ್ಭದಲ್ಲಿ ಸುರೇಶಬಾಬುಗೌಡ. ಬಿರಾದಾರ ಎ. ಪಿ. ಮ. ಸಿ ಸದಸ್ಯರು ತಾಳಿಕೋಟಿ, ಶಿವು ದೇಸಾಯಿ, ಬಸನಗೌಡ ಗಬಸವಳಗಿ, ಪ್ರಭುಗೌಡ ಮದರಕಲ್, g s ಕಶೇಟ್ಟಿ, ಕಾಶಿಂ ಪಟೇಲ್, ಸುರೇಶ್ ಗೌಡ ಬಿರಾದರ್, ವಿಶ್ವನಾಥ್ ನಾಡಗೌಡ, ಜೈಪಾಲ್ ರೆಡ್ಡಿ ಬಂಟನೂರು, ಅಶೋಕ್ ಅಸ್ಕಿ, ಯಮನಪ್ಪ ಬೊಮ್ಮನಹಳ್ಳಿ, ಸಂಗನಗೌಡ ಅಸ್ಕಿ, ಶಂಕರ್ ಕಟ್ಟಿಮನಿ, ಇನ್ನು ಹಲವಾರು ಉಪಸ್ಥಿತರಿದ್ದರು.

ವರದಿ : ದೇವು ಕುಚಬಾಳ ತಾಳಿಕೋಟೆ

Continue Reading
Advertisement
Click to comment

Leave a Reply

Your email address will not be published. Required fields are marked *

ವಿಡಿಯೋ

ಸತ್ತ ಕುರಿಗಳಿಗೆ ಸರ್ಕಾರದಿಂದ ಪರಿಹಾರವಿಲ್ಲ ಬೇಸರ ವ್ಯಕ್ತಪಡಿಸಿದ ಅಯ್ಯಪ್ಪ ಗಬ್ಬೂರು

Published

on

ರಾಯಚೂರು : ರಾಯಚೂರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬರುವ ಗಟ್ಟು ಬಿಚ್ಚಾಲಿ ಎಂಬ ಗ್ರಾಮದಲ್ಲಿ ಸಾಯಿಬಣ್ಣ ಎಂಬ ಕುರಿಗಾಹಿನ ಒಂದೇ ಕುಟುಂಬದಲ್ಲಿ ಇದುವರೆಗೂ ಸುಮಾರು 20 ಕುರಿಗಳು ಸಾವನ್ನಿಪ್ಪಿವೆ ಇನ್ನೂಳಿದ ನೀಲ ನಾಲಿಗೆ ಇನ್ನಿತರ ರೋಗಗಳಿಗೆ ಕುರಿಗಳು ಸಾವನ್ನುಪ್ಪುತ್ತಿರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

ಜಿಲ್ಲೆಯಾದ್ಯಂತ ನಿರಂತರ ಮಳೆಗೆ ದಿನಾಲು ರೋಗ ರುಜಿನಗಳಿಗೆ ತುತ್ತಾಗಿ ಕುರಿಗಳು ಸಾವನ್ನಪ್ಪುತ್ತಿದ್ದು ಸರ್ಕಾರದಿಂದ ಇದುವರೆಗೆ ಪರಿಹಾವಿಲ್ಲದೇ ಕುರಿ ಸಾಕಾಣಿಕೆದಾರರು ಪರಿಸ್ಥಿತಿ ಹೇಳತೀರದು ಹಲವಾರು ಬಾರಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ (ರಿ) ಜಿಲ್ಲಾ ಘಟಕ ರಾಯಚೂರು ವತಿಯಿಂದ ಸಂಬಂಧ ಪಟ್ಟ ಸಚಿವರಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಇದುವರೆಗೂ ಕುರಿಗಾಹಿಗಳ ಕುಟುಂಬ ಕಡೆ ಸರ್ಕಾರ ಗಮನಹರಿಸುತ್ತಿಲ್ಲ ಸರ್ಕಾರ ಈಗಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದಾರೆ ಇದೇ ರೀತಿ ಮುಂದುವರಿದರೆ ಎಲ್ಲಾ ಕುರಿ ಸಾಕಾಣಿಕೆದಾರರು ಕುರಿ ಸಾಕಾಣಿಕೆ ಮಾಡುವುದನ್ನು ಬಿಟ್ಟು ವಿದೇಶಿಗಳಿಗೆ ಗೂಳೆ ಹೋಗು ಪರಿಸ್ಥಿತಿ ಬರುತ್ತಿದೆ.

ದಿನಾಲು ಕುರಿ ಸಾಕಾಣಿಕೆ ಕಸುಬುವನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಕುರಿಗಾಹಿಗಳ ಜೀವನ ಅತಂತ್ರ ಸ್ಥಿತಿಯಾಗಿದೆ ಸರ್ಕಾರ ಈಗಾದರೂ ಪರಿಹಾರ ಕೊಟ್ಟು ನೊಂದ ಕುಟುಂಬಗಳಿಗೆ ನೇರವಾಗಬೇಕೆಂದು ನಾನು ಸರ್ಕಾರಕ್ಕೆ ಮನವಿ ಮಾಡಿಕೋಳ್ಳುತ್ತೇನೆ.

ಶ್ರೀ ಅಯ್ಯಪ್ಪ ಗಬ್ಬೂರು ಜಿಲ್ಲಾ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ (ರಿ) ರಾಯಚೂರು.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading

ವಿಡಿಯೋ

ಪಿಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

Published

on

ಚಿಂತಾಮಣಿ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಏನಿಗದಲೆ ಗ್ರಾಮದಲ್ಲಿ ನಡೆದಿದೆ.


ಹೊಸಕೋಟೆಯ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ವೇತ, ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಕೆಂಚಾರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್ ರಂಜನ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ: ಸುನಿಲ್ ವಿ ಚಿಂತಾಮಣಿ

Continue Reading

ವಿಡಿಯೋ

ಅಂತರಾಷ್ಟ್ರೀಯ ಯೋಗ ದಿನಾಚರಣೆ; ಬಿಕೆಎಸ್ ಫೌಂಡೇಶನ್ ವತಿಯಿಂದ ಆಯೋಜನೆ

Published

on

ದೇವನಹಳ್ಳಿ ನಾಗರಿಕ ಹಿತರಕ್ಷಣಾ ವೇದಿಕೆ ಮತ್ತು B.K.S. Foundation ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ.

ದೇವನಹಳ್ಳಿ ತಾಲ್ಲೂಕು ನಾಗರೀಕರ ಹಿತರಕ್ಷಣಾ ವೇದಿಕೆ ಮತ್ತು ಬಿ.ಕೆ.ಎಸ್.ಪ್ರತಿಷ್ಠಾನದ (B.K.S.FOUNDATION) ವತಿಯಿಂದ ಸಂಸ್ಥೆಯ ದೇವನಹಳ್ಳಿ ಕಛೇರಿಯಲ್ಲಿ ಜೂನ್ 21 ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಯುವ ಯೋಗ ಪಟುಗಳಾದ ಪುನೀತ್ ಮತ್ತು ಚರಣ್ ರವರು ಯೋಗ ನಡೆಸಿಕೊಟ್ಟರು.

ಅತ್ಯುತ್ತಮವಾಗಿ ಯೋಗ ನಡೆಸಿಕೊಟ್ಟ ಯೋಗಪಟು ಪುನೀತ್ ರವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ಶಿವಪ್ಪ. ಮಮತಾ ಮಹೇಶ್, ಕುಸುಮಾ, ಮುನಿರಾಜು, ಪಾಪಣ್ಣ, ಪ್ರಕಾಶ್,ಶ್ವೇತಾ, ನವ್ಯ, ರೂಪ,ಕೀರ್ತನಾ, ಮಧು, ಮಂಜುಳಾ, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಮಧು ಸಾದಹಳ್ಳಿ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್