ರಾಜ್ಯ
ಬಡವರು ಮತ್ತು ಕುಂಚ ಕಲಾವಿದರಿಗೆ ಆಸರೆಯಾದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ
ಗೌರಿಬಿದನೂರು : ಕೊರೊನಾ ಮಹಾಮಾರಿಯ ಪರಿಣಾಮವಾಗಿ ಜನತೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು ಅವರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗಗಳನ್ನು ನೀಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದು ತಹಸೀಲ್ದಾರ್ ಎಚ್.ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ಮಿನಿ ವಿಧಾನಸೌಧ ಮುಂಭಾಗ ಶನಿವಾರ ಕುಂಚ ಕಲಾವಿದರ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟದಿಂದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಡೀ ಜಿಲ್ಲೆ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿದ ಬಳಿಕ ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ. ಜನರು ಅನಾವಶ್ಯಕವಾಗಿ ಓಡಾಡುವುದನ್ನು ಬಿಟ್ಟು ಸರ್ಕಾರದ ಆದೇಶದಂತೆ ಮನೆಯಲ್ಲೇ ಇದ್ದು ಸೋಂಕಿನ ಸರಪಳಿಯನ್ನು ಕತ್ತರಿಸಲು ಸಹಕಾರಿಯಾಗಬೇಕಿದೆ.
ಗ್ರಾಮೀಣ ಭಾಗದಲ್ಲಿರುವ ಬಡ ಹಾಗೂ ಕಾರ್ಮಿಕ ವರ್ಗದ ಕುಟುಂಬಗಳು ಉದ್ಯೋಗದ ಆಸರೆಯಿಲ್ಲದೆ ನಿತ್ಯದ ಆಹಾರಕ್ಕಾಗಿ ಪರಿತಪಿಸುವಂತಾಗಿದ್ದು, ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಲು ಬದ್ಧವಾಗಿರುವುದು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಪಡೆಯುವ ಮೂಲಕ ಬಡವರ ಹಾಗೂ ಕೂಲಿ ಕಾರ್ಮಿಕರ ಬದುಕಿಗೆ ಬೆನ್ನೆಲುಬಾಗಿ ನಿಲ್ಲಲು ಯೋಜನೆ ಬದ್ಧವಾಗಿದೆ ಎಂದು ಹೇಳಿದರು.
ಮುಖಂಡರಾದ ಎನ್.ಎಂ.ರವಿನಾರಾಯಣರೆಡ್ಡಿ ಮಾತನಾಡಿ, ಇಡೀ ದೇಶ ಕೊರೊನಾ ಸೋಂಕಿನಿಂದ ತತ್ತರಿಸಿದ್ದು ಬಹುತೇಕ ಉದ್ಯಮಗಳು ನೆಲಕ್ಕಚ್ಚಿವೆ. ಇದರಿಂದಾಗಿ ಸಾಮಾನ್ಯ ಜನತೆ ಕೈಯಲ್ಲಿ ಕೆಲಸವಿಲ್ಲದೆ ಒಪ್ಪೊತ್ತಿನ ಊಟಕ್ಕಾಗಿ ಪರಿತಪಿಸುವಂತಾಗಿದೆ. ಇಂತಹ ಸಮಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಬಡವರ ಕಷ್ಟಗಳಿಗೆ ಸ್ಪಂಧಿಸುವ ಕಾರ್ಯ ನಿಜವಾಗಿಯೂ ಶ್ಲಾಘನೀಯವಾಗಿದೆ. ಅವರ ಈ ಸೇವಾ ಮನೋಭಾವವು ಸಾವಿರಾರು ಕುಟುಂಬಗಳಿಗೆ ಬೆಳಕಾಗಿದೆ ಎಂದು ಹೇಳಿದರು.
ಇದೇ ವೇಳೆ ನಗರಸಭೆ ಸದಸ್ಯ ಮೋಹನ್, ಮುಖಂಡರಾದ ಬಿ.ಪಿ.ಅಶ್ವತ್ಥನಾರಾಯಣಗೌಡ, ರಾಮಣ್ಣ, ವೇದಲವೇಣಿ ವೇಣು, ಕೆ.ಎಸ್.ಅನಂತರಾಜು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಯೋಜನಾಧಿಕಾರಿ ಎಂ.ಕಲ್ಮೇಶ್, ಯೋಜನೆಯ ವಲಯ ಮೇಲ್ವಿಚಾರಕರಾದ ಅಮೂಲ್ಯ, ಮಲ್ಲಣ್ಣ, ಮೋಹನ್, ಸೇವಾಪ್ರತಿನಿಧಿ ನಾಗರತ್ನ, ಕಂದಾಯ ಇಲಾಖೆಯ ಖಾದರ್, ಎಚ್.ರವಿಕುಮಾರ್, ಅನಿಲ್ ಸೇರಿದಂತೆ ಇತರರು ಭಾಗವಹಿಸಿದ್ದರು.
ರಾಜ್ಯ
ಪರಿಸರ ಉಳಿಯುವಿಕೆಗಾಗಿ ಆಕ್ಸಿಜನ್ ಚ್ಯಾಲೆಂಜ್ ಎಂಬ ಕಾರ್ಯಕ್ರಮವನ್ನು ದೇಶಾದ್ಯಂತ ABVP ಪ್ರಾರಂಭ
ಮಸ್ಕಿ :- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಸ್ಕಿ ವತಿಯಿಂದ ಜೂನ್ 5 ಪರಿಸರ ದಿನಾಚರಣೆಯಿಂದ ಪರಿಸರ ಉಳಿಯುವಿಕೆಗಾಗಿ ಆಕ್ಸಿಜನ್ ಚ್ಯಾಲೆಂಜ್ ಎಂಬ ಕಾರ್ಯಕ್ರಮವನ್ನು ದೇಶಾದ್ಯಂತ ABVP ಪ್ರಾರಂಭಿಸಿದ್ದು ಪ್ರತಿಯೊಬ್ಬ ಕಾರ್ಯಕರ್ತರು 5 ಸಸಿ ನೆಡುವುದರ ಜೊತೆ ಜೊತೆಗೆ ತನ್ನ ಗೆಳೆಯರಿಗೂ ಕೂಡ ಆ ಚಾಲೆಂಜ್ ಮಾಡುವುದರ ಮೂಲಕ ಹೆಚ್ಚು ಸಸಿಗಳನ್ನು ನೆಡುವಲ್ಲಿ ಹೆಜ್ಜೆ ಹಾಕಿದ್ದೇವೆ.
ಲಾಕ್ ಡೌನ್ ಸಂಧರ್ಭದಲ್ಲಿ ಕರೋನಾ ಮಹಾಮಾರಿಯ ಮದ್ಯೆ ಆಕ್ಸಿಜನ್ ಸಮಸ್ಯೆಯಾಗಿದ್ದು ಮುಂದಿನ ದಿನಮಾನಗಳಲ್ಲಿ ಈ ಸಮಸ್ಯೆಯಾಗಬಾರದೆಂದು ABVP ಕರ್ನಾಟಕವು ಈ ಚಾಲೆಂಜ್ ಅನ್ನು ಮಾಡಿ ರಾಜ್ಯಾದ್ಯಂತ 5 ಲಕ್ಷ ಸಸಿ ನೆಡುವುದರತ್ತ ಹೆಜ್ಜೆ ಹಾಕಿದ್ದೇವೆ ಅದರ ಅಡಿಯಲ್ಲಿ ಮಸ್ಕಿ ಶಾಖೆಯಲ್ಲಿಯೂ ಕೂಡ ಆ ಕಾರ್ಯಕ್ರಮವನ್ನು ಕಾರ್ಯಗತಗೊಳಸಿದ್ದೇವೆ ಎಂದು :-
ಮಹೇಶ ABVP ಪದಾಧಿಕಾರಿಗಳು ಮಸ್ಕಿ ತಿಳಿಸಿದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
ಮಾಹಿತಿ
ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್
ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ : ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ
ಬೆಂಗಳೂರು : ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ, ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ, ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ ಮಾಡಿದೆ. ಆಗಸ್ಟ್ 28, 29ರಂದು ನಡೆಸಲು ನಿರ್ಧರಿಸಿದೆ.
ಈ ಕುರಿತಂತೆ ಇಂದು ಸಿಇಟಿ ವಿಚಾರವಾಗಿ ನಡೆದಂತ ಸಭೆಯ ನಂತ್ರ, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಸಿಇಟಿ ಸಭೆ ವಿಚಾರದಲ್ಲಿ ಸಭೆಯನ್ನು ಕರೆಯಲಾಗಿತ್ತು.
ಈ ಸಭೆಯಲ್ಲಿ ವಿವಿಧ ಅಧಿಕಾರಿಗಳು, ತಜ್ಞರು ಭಾಗವಹಿಸಿದ್ದರು. ಸಚಿವ ಸುರೇಶ್ ಕುಮಾರ್ ಸಲಹೆಯನ್ನು ನೀಡಿ, ದ್ವಿತೀಯ ಪಿಯು ಅಂಕಗಳನ್ನು ಈ ಬಾರಿ ಪರಿಗಣಿಸದಂತೆ ಮನವಿ ಮಾಡಿದ್ದರು. ಸಿಇಟಿ ಆಧಾರದ ಮೇಲೆ RANK ನೀಡುವ ಕಾರ್ಯ ನಡೆಯಬೇಕು ಎಂಬುದಾಗಿ ತಿಳಿಸಿದ್ದರು. ಈ ವಿಚಾರವಾಗಿ ವಿಸೃತವಾಗಿ ಚರ್ಚೆ ಮಾಡಿ, ಸಂಬಂಧ ಪಟ್ಟ ಎಲ್ಲಾ ಕೌನ್ಸಿಲ್ ಗಳಿಗೆ ಪತ್ರವನ್ನು ಬರೆದು, ಈ ಬಗ್ಗೆ ರಿಲ್ಯಾಕ್ಸೇಷನ್ ಕೊಡುವಂತೆ ಕೋರಲಾಗುತ್ತದೆ ಎಂದರು
ರಾಜ್ಯ
ಬಿ.ಜೆ.ಎಸ್ – ಮಿಷನ್ ಆಕ್ಸಿಜನ್ ಬ್ಯಾಂಕ್ ಉದ್ಘಾಟನೆ
ಬೆಂಗಳೂರು : ಭಾರತೀಯ ಜೈನ್ ಸಂಘಟನೆ, ಬೆಂಗಳೂರು ಇವರು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಒದಗಿಸುತ್ತಿರುವ ಬಿ.ಜೆ.ಎಸ್ – ಮಿಷನ್ ಆಕ್ಸಿಜನ್ ಬ್ಯಾಂಕ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಉದ್ಘಾಟಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಆರೋಗ್ಯ ಇಲಾಖೆ ಸಚಿವ ಡಾ|| ಕೆ.ಸುಧಾಕರ್, ಭಾರತೀಯ ಜೈನ ಸಂಘಟನೆ ಸಂಸ್ಥಾಪಕ ಶಾಂತಿಲಾಲ್ ಮುತ್ತ, ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಲಂಕರ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಉಪಸ್ಥಿತರಿದ್ದರು.
-
Politics3 weeks ago
ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಎನ್. ಎಚ್.ಶಿವಶಂಕರ್ ರೆಡ್ಡಿ
-
Politics4 weeks ago
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
-
Politics3 days ago
“ಸಿಂದಗಿ ವಲಯದ ನಲಿ-ಕಲಿ ಶಿಕ್ಷಕರಿಗೆ ಗೂಗಲ್ ಮೀಟ್ ಮೂಲಕ ತರಬೇತಿ”
-
ಸುದ್ದಿ4 weeks ago
ಹರಳಕೆರೆ ಗ್ರಾಮದಲ್ಲಿ ಹಸುವನ್ನು ಬಲಿತೆಗೆದುಕೊಂಡ ಚಿರತೆ : ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು