ಮನರಂಜನೆ
ಗನ್ ಮ್ಯಾನ್ ಬೌನ್ಸರ್ಸ್ ಸಂಸ್ಕೃತಿಯ ವಿರುದ್ಧ ಸಿಡಿದೆದ್ದ ನವರಸ ನಾಯಕ: ಟ್ವಿಟರ್ ನಲ್ಲಿ ಆಕ್ರೋಶ
ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಂತೆ ಜೊತೆಯಲ್ಲಿ ಗನ್ ಮ್ಯಾನ್ ಗಳು ಬೌನ್ಸರ್ ಗಳನ್ನು ಹೊಂದುವುದರ ಬಗ್ಗೆ ಮತ್ತು ಬಿಲ್ಡಪ್ ಶೋಗಳನ್ನು ಕೊಡುವುದರ ಕುರಿತು ನವರಸ ನಾಯಕ ಜಗ್ಗೇಶ್ ಅವರು ಟ್ವಿಟರ್ನಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಚಿತ್ರರಂಗದವರ ಬಿಲ್ಡಪ್ ಮತ್ತು ಗನ್ ಮ್ಯಾನ್ ಗಳ ಸಂಸ್ಕೃತಿಯ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಜಗ್ಗೇಶ್ ಬಿಲ್ಡಪ್ ಕೊಡುವವರ ವಿರುದ್ಧ ಗರಂ ಆಗಿದ್ದಾರೆ
” ಎಂತಹ ಬಿಲ್ಡಪ್ ಕಾಲವಿದು ಗನ್ ಮ್ಯಾನ್ ಬೌನ್ಸರ್ಸ್ ಇದ್ದವನ ಒಪ್ಪಿ ಉಘೇ ಉಘೇ ಅಂತೆ. ಎಲ್ಲ ಇದ್ದು ಸಾಮಾನ್ಯನಂತೆ ಬದುಕುವ ಎಲ್ಲೂ ಸಲ್ಲದ ಸಾಮಾನ್ಯನಂತೆ ಯಾಕೆ? ವಾಕರಿಕೆ ಬರುತ್ತಿದೆ ಇತ್ತೀಚಿನ ನಡಾವಳಿ ಕಂಡು, ತುಂಬಿದ ಕೊಡ ತುಳುಕಲ್ಲ ಅರ್ಧ ತುಂಬಿದ ಕೊಡವೇ ಶಬ್ದ ಜಾಸ್ತಿ ಬಿಲ್ಡಪ್ ಗೆ ಕಳೆಯದಿರಿ ಸಾಧನೆ ಎಲ್ಲಾ ಬಿಲ್ಡಪ್ ಕೊಟ್ಟು ಬೋರಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ
ಮನರಂಜನೆ
ಶ್ರೀ ವೆಂಕಟೇಶ್ವರ ಸಿನಿಮಾಸ್ ಚಿತ್ರಮಂದಿರಕ್ಕೆ ಪೊಗರು ಚಲನಚಿತ್ರ ತಂಡ ಶುಕ್ರವಾರ ಭೇಟಿ
ಶಿಡ್ಲಘಟ್ಟ : ನಗರದ ಶ್ರೀ ವೆಂಕಟೇಶ್ವರ ಸಿನಿಮಾಸ್ ಚಿತ್ರಮಂದಿರಕ್ಕೆ ಪೊಗರು ಚಲನಚಿತ್ರ ತಂಡ ಶುಕ್ರವಾರ ಭೇಟಿ ನೀಡಿತ್ತು. ನಾಯಕನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ “ಪೊಗರು” ಚಲನಚಿತ್ರದ ವಿಜಯಾತ್ರೆ ಪ್ರಯುಕ್ತ ಶಿಡ್ಲಘಟ್ಟದ ಶ್ರೀವೆಂಕಟೇಶ್ವರ ಸಿನಿಮಾಸ್ ಚಿತ್ರ ಮಂದಿರಕ್ಕೆ ಆಗಮಿಸಿದ್ದರು.
ಧ್ರುವ ಸರ್ಜಾ ಅಭಿಮಾನಿಗಳು ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರದೊಂದಿಗೆ ತಮ್ಮ ನಾಯಕ ನಟನನ್ನು ಸ್ವಾಗತಿಸಿದರು. ಅಭಿಮಾನಿಗಳು ತಯಾರಿಸಿದ 148 ಕೆ. ಜಿ ಕೇಕನ್ನು ಕತ್ತರಿಸಿ ಮಾತನಾಡಿದ ಧ್ರುವ ಸರ್ಜಾ, “ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ವೀಕ್ಷಿಸುವ ಮೂಲಕ ಕನ್ನಡ ಸಿನಿಮಾ ರಂಗವನ್ನು ಪ್ರೋತ್ಸಾಹಿಸಿ ಮತ್ತು ಬೆಳೆಸಿ. ಪೊಗರು ಚಿತ್ರ ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, ತಾಲ್ಲೂಕಿನ ಜನತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿ ಹರಸುವಂತೆ ಮನವಿ ಮಾಡಿದರು.
ರಾಜ್ಯಾದ್ಯಂತ ಈ ಚಲನಚಿತ್ರಕ್ಕೆ ಒಳ್ಳೆಯ ರೀತಿಯಲ್ಲಿ ಸ್ಪಂದಿನೆ ಸಿಕ್ಕಿದ್ದು ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಚಿತ್ರದ ನಿರ್ದೇಶಕ ನಂದಕಿಶೋರ್ ಮಾತನಾಡಿ, ಚಲನಚಿತ್ರ ಬಿಡುಗಡೆ ಸಂದರ್ಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಒಳ್ಳೆಯ ಚಿತ್ರವನ್ನು ಜನತೆ ವೀಕ್ಷಿಸಿ ಜನರು ಬೆಂಬಲ ವ್ಯಕ್ತಪಡಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಜನತೆ ಅತಿ ಹೆಚ್ಚಾಗಿ ವೀಕ್ಷಿಸುವ ಮೂಲಕ ಶತದಿನೋತ್ಸವ ಆಚರಿಸುವಂತೆ ಮಾಡಬೇಕು ಎಂದರು .
ಚಿತ್ರದ ನಿರ್ಮಾಪಕ ಬಿ.ಕೆ. ಗಂಗಾಧರ್, ಟಿ ಆನಂದ್, ವೆಂಕಟೇಶ್ವರ ಸಿನಿಮಾಸ್ ಚಿತ್ರ ಮಂದಿರದ ಮಾಲೀಕ ಎಸ್.ಪ್ರಕಾಶ್, ಸಿದ್ದೇಶ್ವರ ಥಿಯೇಟರ್ ಮಾಲೀಕ ಟಿ.ಆನಂದ್, ಗಣೇಶ್, ಕಾರ್ತಿಕ್ ಹಾಗು ಅಪಾರ ಅಭಿಮಾನಿಗಳು ಹಾಜರಿದ್ದರು.
ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ
ಮನರಂಜನೆ
13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ ಜರುಗಿತು. ಇದೇ ಸಂದರ್ಭದಲ್ಲಿ ಅವರು ಚಲನಚಿತ್ರೋತ್ಸವದ ಲಾಂಛನ ಬಿಡುಗಡೆ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ದೇಶಕ ಡಿ.ಆರ್.ಜೈರಾಜ್, ಹಿರಿಯ ಕಲಾವಿದರಾದ ಶ್ರುತಿ, ತಾರಾ ಅನುರಾಧಾ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಆಯುಕ್ತ ಪಿ.ಎಸ್.ಹರ್ಷ ಉಪಸ್ಥಿತರಿದ್ದರು.
ಮನರಂಜನೆ
ಹೀರೋ ಆಗಿ ಪ್ರೇಕ್ಷಕರ ಮುಂದೆ ಕುರಿ ಪ್ರತಾಪ್
ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ಈಗ ಪ್ರೇಕ್ಷಕರ ಮುಂದೆ ಹೀರೋ ಆಗಿ ಬರಲು ಸಜ್ಜಾಗಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಈಗಾಗಲೇ ಅನೇಕ ಹಾಸ್ಯ ಕಲಾವಿದರು ನಾಯಕರಾಗಿ ಮಿಂಚಿ ಸಕ್ಸಸ್ ಕಂಡಿದ್ದಾರೆ. ಕಾಮಿಡಿ ನಟರಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಅನೇಕ ಕಲಾವಿದರು ಖ್ಯಾತಿಗಳಿಸುತ್ತಿದ್ದಂತೆ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಇದೀಗ ಅದೇ ಸಾಲಿಗೆ ಕುರಿ ಪ್ರತಾಪ್ ಸಹ ಸೇರಿಕೊಂಡಿದ್ದಾರೆ.
ಅಂದಹಾಗೆ ಕುರಿ ಪ್ರತಾಪ್ ಹೀರೋ ಆಗಿ ನಟಿಸುತ್ತಿರುವ ಮೊದಲ ಸಿನಿಮಾಗೆ ‘ಆರ್ ಸಿ ಬ್ರದರ್ಸ್’ ಎಂದು ಟೈಟಲ್ ಇಡಲಾಗಿದೆ. ಪ್ರಕಾಶ್ ಕುಮಾರ್ ಎನ್ನುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಹೋದರ ನಡುವಿನ ಸಂಬಂಧದ ಬಗ್ಗೆ ಇರುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ