Connect with us
Ad Widget

ವ್ಯಕ್ತಿ ವಿಶೇಷ

ದಲಿತ ಹೋರಾಟಗಾರ ಹನುಮಂತಪ್ಪ ಹಂಪನಾಳ “ಸಮಾನತೆಯ ಶ್ರೇಷ್ಠಭೂಷಣ” ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

Published

on

ಮಸ್ಕಿ :- ಕರ್ನಾಟಕದ ಜೀವನಾಡಿ “ಕರ್ನಾಟಕ ದರ್ಶನ” ಕನ್ನಡ ಮಾಸ ಪತ್ರಿಕೆ ವತಿಯಿಂದ ನೀಡಲಾಗುತ್ತಿರುವ “ಸಮಾನತೆಯ ಶ್ರೇಷ್ಠ ಭೂಷಣ” ರಾಷ್ತ್ರೀಯ ಪ್ರಶಸ್ತಿಗೆ ದಲಿತ ಯುವ ಹೋರಾಟಗಾರ ಹನುಮಂತಪ್ಪ ಹಂಪನಾಳ ಭಾಜನರಾಗಿದ್ದಾರೆ.

ಇವರು ದಲಿತಪರ ಸಂಘಟನೆಗಳಲ್ಲಿ ಗ್ರಾಮೀಣ ಬಾಗದ ದಲಿತರ ಅನುಭವಿಸುತ್ತಿರುವ ಅಸ್ಪೃಶ್ಯತೆ. ಮೇಲೂ – ಕೀಳು. ಸಾಮಜಿಕ ಬಹಿಸ್ಕಾರ ದಲಿತಪರವಾದ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಿ ಉತ್ತಮ ಸಮಾಜ ಸೇವೆ ಮತ್ತು ಹೋರಾಟದ ಪ್ರಮುಖ ಪಾತ್ರ ವಹಿಸಿ ರಾಜ್ಯಮಟ್ಟದವರೆಗೂ ತಮ್ಮನ್ನು ದಲಿತ ಚಳುವಳಿಯಲ್ಲಿ ಗುರಿತಿಸಿಕೊಂಡದ್ದರು ಅದರ ಪ್ರಯುಕ್ತ ದಲಿತ ಚಳುವಳಿ ಮತ್ತು ಹೋರಾಟದ ಕ್ಷೆತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾಗುವ ರಾಷ್ತ್ರೀಯ ಪ್ರಶಸ್ತಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ಧ್ವನಿ ಚಂದ್ರಕಾತ್ ಕಾದ್ರೊಳ್ಳಿ ಸಂಘಟನೆಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿರುವ ಹನುಮಂತಪ್ಪ ಹಂಪನಾಳ ಆಯ್ಕೆಯಾಗಿದ್ದಾರೆಂದು ಕರ್ನಾಟಕದ ಜೀವನಾಡಿ ಕರ್ನಾಟಕ ದರ್ಶನ ಕನ್ನಡ ಮಾಸ ಪತ್ರಿಕೆಯ ಸಂಪಾದಕ ರಾಗಿರುವ ಡಾ || ಎಸ್.ಎಸ್.ಪಾಟೀಲ್ ತಿಳಿಸಿದ್ದಾರೆ.

ಇವರು ಮೂಲತ ರಾಯಚೂರು ಜಿಲ್ಲೆಯ ಸಿಂಧನೂರು (ನೂತನ ಮಸ್ಕಿ) ತಾಲ್ಲೂಕಿನ ದೀನಸಮುದ್ರ ಗ್ರಾಮದವರಿದ್ದು ತೀರ ಕಡು ಬಡತನದಲ್ಲಿ ಹುಟ್ಟಿ ಬೆಳೆದವರು ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸದ ಸಮಯದಲ್ಲಿಯೇ ದಲಿತ ಸಮುದಾಯದ ಗ್ರಾಮೀಣ ಬಾಗದಲ್ಲಿ ಹೀನಾಯವಾಗಿ ಅನುಭವಿಸುತ್ತಿರುವ ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಸ್ಕಾರದಂತಹ ಹೀನಾಯ ಪದ್ದತಿಗಳನ್ನು ಪ್ರಶ್ನಿಸಿ ತಮ್ಮ ಬಾಲ್ಯದ ಶಿಕ್ಷಣದಲ್ಲಿಯೇ ಹೋರಾಟದ ಗುಣಗಳನ್ನು ಮೈಗೂಡಿಸಿಕೊಂಡು ದಲಿತ ಚಳುವಳಿ ಮತ್ತು ಹೋರಾಟದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು.

ಕಿತ್ತು ತಿನ್ನುವ ಬಡತನ ಕೂಲಿ ನಾಲಿ ಮಾಡಿ ತಂದೆ ತಾಯಿಗಳ 10 ಜನ ಮಕ್ಕಳ ಪೈಕಿ 5ನೇ ಮಗನಾಗಿ ಹುಟ್ಟಿ ಮನೆಯಲ್ಲಿ ಬಡತನ ಆರ್ಥಿಕ ಪರಸ್ಥಿತಿ ಸರಿದೂಗದ ಕಾರಣ ಕ್ರೈಸ್ತ ಮಿಶನರಿಯ ಸಹಾಯದಿಂದ ಕಾಲೇಜ್ ಶಿಕ್ಷಣ ಪಡೆದುಕೊಂಡು ವಿದ್ಯಾಭ್ಯಾಸ ಅರ್ದಕ್ಕೆ ಮೊಟಕುಗೊಳಿಸಿ 2005 ರಲ್ಲಿ ದಲಿತ ಸಂಘಟನೆಗೆ ರಾಯಚೂರು ಜಿಲ್ಲೆಯ ಈಗಿನ ಮಸ್ಕಿ ತಾಲ್ಲೂಕಿನ ಗುಡದೂರು ಗ್ರಾಮ ಪಂಚಾಯತ್ ಘಟಕ ಅಧ್ಯಕ್ಷರಾಗಿ ಪಾದಾರ್ಪಣೆ ಮಾಡಿ ತಮ್ಮದೇ ಗ್ರಾಮದ ದುರಂತ ಸಾವುಕಂಡ ರಾಯಚೂರು, ಕೊಪ್ಪಳ. ಬಳ್ಳಾರಿ. ಜಿಲ್ಲೆಗಳಲ್ಲಿ ತನ್ನದೆ ಆದ ದಲಿತ ಚಳುವಳಿ ರೂಪಿಸಿದ ದಲಿತ ಕೋಗಿಲೆ ಅಂತಾನೆ ಹೆಸರು ಮಾಡಿದ್ದ ಬಿ. ಡೇವಿಡ್ ಅವರನ್ನು ರೂಲ್ ಮಾಡಲ್ ಆಗಿ ತೆಗೆದುಕೊಂಡು ಹನುಮಂತಪ್ಪ ಹಂಪನಾಳ ದಲಿತ ಚಳುವಳಿಗೆ ದುಮಕಿರುವ ಬಗ್ಗೆ ಮಾಹಿತಿ ಇದೆ.

ಹೀಗೆ ಶುರುವಾದ ಇವರ ದಲಿತಪರ ಹೋರಾಟ ಮೊಟ್ಟ ಮೊದಲಿಗೆ ಗ್ರಾಮೀಣ ಭಾಗದ ಅಸ್ಪೃಶ್ಯತೆ, ಸಾಮಾಜಿಕ ಬಹಿಸ್ಕಾರ. ಹೋಟೆಲ್ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದಲಿತರಿಗೆ ಪ್ರವೇಶ. ಗ್ರಾಮೀಣ ಭಾಗದ ದಲಿತರ ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರು. ರಸ್ತೆ. ಚರಂಡಿ. ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಸಲುವಾಗಿ ಹೋರಾಟಗಳನ್ನು ಬೇಡಿಕೆಗಳನ್ನು ಈಡೇರಿಸಿಕೊಂಡು ಗ್ರಾಮೀಣ ದಲಿತರ ಮನ ಗೆದ್ದರು.

ತದ ನಂತದಲ್ಲಿ ಅವರ ಪ್ರಾಮಾಣಿಕ ದಲಿತ ಹೋರಾಟಗಳನ್ನು ಮನಗಂಡು 2010 ರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅಧ್ಯಕ್ಷರನ್ನಾಗಿ 2014 ರಲ್ಲಿ ರಾಯಚೂರು ಜಿಲ್ಲೆ ಗೌರವಾಧ್ಯಕ್ಷರಾಗಿ ಮತ್ತು 2016 ರಲ್ಲಿ ಹೈದ್ರಾಬಾದ್ ಕರ್ನಾಟಕ ಅಧ್ಯಕ್ಷರು ಹಾಗೂ 2019 ರಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಸಂಘಟನೆಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆ.

ಹೋರಾಟಗಳು: ಗ್ರಾಮೀಣ ಭಾಗದ ದಲಿತರ ಮೂಲಭೂತ ಸಮಸ್ಯೆಗಳ ಸಲುವಾಗಿ,
ದಲಿತ ಬಾಲಕಿಯರ ಮತ್ತು ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯ ಅತ್ಯಾಚಾರ ಪ್ರಕರಣದಂತಹ ಅನೇಕತರದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಹೋರಾಟ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅಂಗನವಾಡಿ ಶಿಕ್ಷಕಿಯರ ಬೇಡಿಕೆಗಳನ್ನು ಈಡೇರಿಸಲು ಅನಿರ್ದಿಷ್ಠ ಧರಣಿ ಸತ್ಯಾಗ್ರಹ. ಮಾದಿಗ ಸಮಾಜದ ಒಳ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ.
ಕರ್ನಾಟಕದಾದ್ಯಂತ ಕಿಚ್ಚುಹಚ್ಚಿದ ಸಿ.ಎ.ಎ.& ಎನ್.ಆರ್.ಸಿ. ಮತ್ತು ಎನ್.ಪಿ.ಆರ್. ಹೋರಾಟದಲ್ಲಿ ಭಾಗಿ.
ಕರ್ನಾಟಕದ ನಮ್ಮ ಮಾದಿಗ ಸಮಾಜದ ಬಹುದಿನಗಳ ಬೇಡಿಕೆಯಾದ ಮಾದಿಗರ ಒಳ ಮೀಸಲಾತಿ ಸಲುವಾಗಿ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಬೆಂಗಳೂರಿನ ಮತ್ತು ಫ್ರಿಡಂ ಪಾರ್ಕ್ ಹೋರಾಟ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಎಲೆಕೂಡ್ಲಿಗಿ ಮತ್ತು ಬನ್ನಿಗನೂರು ಮತ್ತು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ದಲಿತರ ಮೇಲಿನ ಹಲ್ಲೆ ಮತ್ತು ಸಾಮಾಜಿಕ ಬಹಿಸ್ಕಾರ ಹೋರಾಟದಲ್ಲಿ ಪ್ರಮುಖ ಪಾತ್ರ. ಕರ್ನಾಟಕದಾದ್ಯಂತಹ ವಿವಿಧ ಜಿಲ್ಲೆಗಳು ಮತ್ತು ತಾಲೂಕ ಮಟ್ಟದ ಹಾಗೂ ಗ್ರಾಮೀಣ ಮಟ್ಟದ ಹೋರಾಟದಲ್ಲಿ ಭಾಗಿ.

ಸೇವೆಗಳು : ಪ್ರತಿ ವರ್ಷ ನಮ್ಮ ರಾಜ್ಯ ಸಮಿತಿ ವಯಿಂದ ವಿವಿಧ ಜಿಲ್ಲೆಗಳಲ್ಲಿ ಬಡವರಿಗೆ ಉಚಿತ ಸಾಮೂಹಿಕ ವಿವಾಹಗಳು.
ಸರಕಾರದ ವಿವಿಧ ಆರೋಗ್ಯದ ಯೋಜನೆಯಡಿ ಆರೋಗ್ಯ ಸೇವೆ ಒದಗಿಸುವುದು.
ವಿಧವೆ ವೇತನ. ಸಂದ್ಯಾ ಸುರಕ್ಷಾ ವೇತನ. ರಾಷ್ತ್ರೀಯ ಭದ್ರತಾ ಯೋಜನೆ.
ಬಡ ವಿದ್ಯಾರ್ಥಿಗಳಿಗೆ ಉಚಿತವ ಶಿಕ್ಷಣ ಮತ್ತು ವಸತಿ ಸೇವೆಗಳು

ಹವ್ಯಾಸಗಳು : ಡಾ || ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮತ್ತು ಕಾನೂನಿನ ಪುಸ್ತಕ. ದಿನ ಪತ್ರಿಕೆ. ವಾರ ಪತ್ರಿಕೆ. ಮಾಸ ಪತ್ರಿಕೆ ಓದುವುದು.
ಕವನಗಳು. ಕ್ರಾಂತಿ ಗೀತೆ ಹಾಡುವುದು ಮತ್ತು ಬರೆಯುವುದು.
ರಾಜಕೀಯ ದಲಿತ ಮತ್ತು ಸಮಾಜ ವಿರೋದಿ ನೀತಿಯ ವಿರುದ್ದದ ಬರವಣಿಗೆ.

ಹಾಗಾಗಿ ದಿನಾಂಕ 25/04/2021 ರಂದು ಭಾನುವಾರ ರಾಯಚೂರಿನ ಜಂಬಲ್ ದಿನ್ನಿ ರಂಗಮಂದಿರದಲ್ಲಿ ನಡೆಯುವ ರಾಷ್ಟ್ರೀಯ ಪ್ರಶಸ್ತಿಗಳ ಭವ್ಯ ಸಮಾರಂಭದಲ್ಲಿ ಶ್ರೀ ಹನುಮಂತಪ್ಪ ಹಂಪನಾಳ ಇವರಿಗೆ ಸಮಾನತೆಯ ಶ್ರೇಷ್ಠ ಭೂಷಣ ರಾಷ್ಟ್ರೀಯ ಪ್ರಶಸ್ತಿಯನ್ನ ನಾಡಿನ ಶರಣರ ಮತ್ತು ಪ್ರಜ್ಞಾವಂತ ಹಿರಿಯರ ಹಾಗೂ ರಾಜಕೀಯ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಹಿಸಲಾಗುತ್ತದೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ವ್ಯಕ್ತಿ ವಿಶೇಷ

ಬಾಗೇಪಲ್ಲಿಯಲ್ಲಿ ಅಪರೂಪದ ಪರಿಸರ ಪ್ರೇಮಿ

Published

on

ಬಾಗೇಪಲ್ಲಿ: ಇಲ್ಲೊಬ್ಬ ಮಾನಸಿಕ ಅಸ್ವಸ್ಥ ಪ್ರತಿದಿನವೂ ಕಾಲೇಜು ಮುಂಭಾಗದಲ್ಲಿರುವ ಸಸಿಗೆ ನೀರು ಹನಿಸುವ ಮೂಲಕ ಆರೈಕೆ ಮಾಡುತ್ತಿದ್ದಾನೆ.

ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳ ಅವರು ಡಾ.ಜಚನಿ ಕಲಾಕ್ಷೇತ್ರದ ಮುಂಭಾಗದಲ್ಲಿ ಸಸಿ ನೆಟ್ಟಿದ್ದರು. ಮಾನಸಿಕ ಅಸ್ವಸ್ಥ ಒಂದು ದಿನವೂ ತಪ್ಪಿಸದಂತೆ ಆ ಸಸಿಗೆ ನೀರು ಹಾಕುತ್ತಿದ್ದಾನೆ.

ಪ್ರತಿ ದಿನ ಟೋಲ್ ಗೇಟ್ ಬಳಿಯ ಶೌಚಾಲಯದಿಂದ ಜಗ್‌ ಮತ್ತು ಬಕೆಟ್ನಲ್ಲಿ ನೀರು ತಂದು ಗಿಡಕ್ಕೆ ಸುರಿಯುತ್ತಾನೆ. ಒಂದು ವೇಳೆ ಜಗ್‌, ಬಕೆಟ್‌ ಸಿಗದಿದ್ದರೆ ನೀರು ಕುಡಿದು ಬಿಸಾಡಿದ ಪ್ಲಾಸ್ಟಿಕ್ ಬಾಟಲಿ ಹುಡುಕುತ್ತಾನೆ. ಬಾಟಲಿಯಲ್ಲಿಯೇ ನೀರು ಹಿಡಿದು ಸಸಿಗೆ ಹನಿಸುತ್ತಾನೆ ಎಂದು ಅಕ್ಕ ಪಕ್ಕದ ಅಂಗಡಿಯವರು ಹೇಳುತ್ತಾರೆ.

ಡಾ.ಶ್ರೀ ಜಚನಿ ಕಲಾಕ್ಷೇತ್ರಕ್ಕೆ ರಾತ್ರಿ ವೇಳೆ ಅಪರಿಚಿತರು ಸುಳಿಯದಂತೆ ಕಾವಲು
ಕಾಯುತ್ತಾನೆ. ಯಾರಾದರೂ ಬಂದರೆ ಅವರನ್ನು ಓಡಿಸುತ್ತಾನೆ ಎಂದು ಕಾಲೇಜಿನ ರಾತ್ರಿ ಕಾವಲುಗಾರ ಅಶ್ವತ್ಥಪ್ಪ ಹೇಳುತ್ತಾರೆ.

ಈತನ ಕೆಲಸದ ಬಗ್ಗೆ ತಿಳಿದ ಕುಸುಮವಾಣಿ ಪತ್ರಿಕೆ ವರದಿಗಾರರು ಹುಡುಕಿಕೊಂಡು ಹೊರಟಾಗ ರೋಚಕ ಕತೆಯೊಂದು ತೆರೆದುಕೊಂಡಿತು. ಮೂಲತಃ ಆಂಧ್ರಪ್ರದೇಶದ ವಿಜಯವಾಡದ ಈತನಿಗೆ ಮೂವರು ಪತ್ನಿಯರು. ಆದರೆ, ಮೂವರಲ್ಲಿ
ಯಾರೂ ಆತನೊಂದಿಗೆ ಇಲ್ಲ. ಅವರೆಲ್ಲರೂ ಬಿಟ್ಟು ಹೋಗಿದ್ದಾರೆ.

ಬಾಗೇಪಲ್ಲಿಗೆ ಈತ ಬಂದು ಸುಮಾರು ನಾಲ್ಕು ತಿಂಗಳಾಯಿತು. ಅಂದಿನಿಂದಲೂ ಕಾಲೇಜಿನ ಮುಂಭಾಗದ ಟೋಲ್‌ಗೇಟ್‌ ಬಳಿಯೇ ಠಿಕಾಣಿ ಹೂಡಿದ್ದಾ‌ನೆ. ಈತನ ಹೆಸರು ಯಾರಿಗೂ ಗೊತ್ತಿಲ್ಲ. ಅವರಿವರು ನೀಡಿದ ಆಹಾರದಿಂದ ಹೊಟ್ಟೆ ತುಂಬುತ್ತದೆ. ಲಾರಿ ಚಾಲಕರು, ಕಾಲೇಜು ವಿದ್ಯಾರ್ಥಿಗಳು ಈತನ‌ ಮೆಚ್ಚಿನ ಸ್ನೇಹಿತರು. ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರಿಗೂ ಈತ ಅಚ್ಚುಮೆಚ್ಚು ಎನ್ನುತ್ತಾರೆ ಹೈವೆ ಪಕ್ಕ ಟೀ ಅಂಗಡಿ ಇಟ್ಟುಕೊಂಡಿರುವ ಅಶೋಕ.

Continue Reading

ರಾಜ್ಯ

ಬಳಗಾನೂರಿನ ವಿದ್ಯಾರ್ಥಿಗಳು ಖೋ ಖೋ ವಿಭಾಗದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Published

on

ಮಸ್ಕಿ :- ಲಿಂಗಸುಗೂರು ತಾಲೂಕಿನ ಚಿತಾಪೂರದಲ್ಲಿ ನಡೆದ ರಾಯಚೂರು ಜಿಲ್ಲಾ ಅಮೆಚೂರ್ ಖೋ ಖೋ ಅಸೋಸಿಯೇಷನ್ ಆಶ್ರಯದಲ್ಲಿ ಪೆ.26 ರಂದು ನಡೆದ ಪುರುಷರ ಸಿನಿಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಪಟ್ಟಣ ಬಳಗಾನೂರಿನ ( ರಾಜು ಮಸ್ಕಿ /ಬದ್ರಪ್ಪ ) ಮತ್ತು ( ಶಿವಲಿಂಗ ಭೋವಿ / ಮುದುಕಪ್ಪ ) ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ .

ಈ ಸಂದರ್ಭದಲ್ಲಿ ತರಬೇತಿ ನೀಡಿದ ತರಬೇತಿದಾರರಾದ ಸರಕಾರಿ ಪ್ರೌಢ ಶಾಲೆ ಬಳಗಾನೂರಿನ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರವೀಂದ್ರ ತಿಳಿಸಿದ್ದಾರೆ .

ಜನನಿ ಪದವಿ ಪೂರ್ವ ಕಾಲೇಜಿನ ವಿದ್ಯಾಭ್ಯಾಸ ಮಾಡುತ್ತಿರುವ ರಾಜು ಮಸ್ಕಿ ವಿದ್ಯಾರ್ಥಿಯ ಸಾಧನೆಗೆ ಪ್ರಾಚಾರ್ಯರಾದ ತಿರುಪತಿ ಸರ್ ಹಾಗೂ ಆಡಳಿತ ವರ್ಗವು ರಜಾಕ್ ಪಾಷ ಸರ್ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.

ಮಾಚ್೯ 6 ಮತ್ತು 7 ರಂದು ಧಾರವಾಡದ ಸೌಂಸಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪುರುಷರ ಸಿನಿಯರ್ ಹೊನಲು ಬೆಳಕಿನ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳಿಗೆ ಪಟ್ಟಣದ ಎಲ್ಲಾ ಗುರು ಹಿರಿಯರು, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಹಷ೯ ವ್ಯಕ್ತಪಡಿಸಿದ್ದಾರೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ವ್ಯಕ್ತಿ ವಿಶೇಷ

ಸಾವಯವ ಕೃಷಿಯಲ್ಲಿ ಸಾಧನೆಗೈದ ರೈತ

Published

on

ಕೋಲಾರ :ಕೆ.ಜಿ.ಎಫ್ ತಾಲೂಕಿನ ಎನ್.ಜಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಂ.ಕೋತ್ತೂರು ಎಂಬ ಹಳ್ಳಿಯಲ್ಲಿ ಆಲೂಗಡ್ಡೆ ಬೆಳೆಯುವುದರಲ್ಲಿ ಸಾವಯವ ಗೊಬ್ಬರವನ್ನು ಬಳಸಿ ಹೆಚ್ಚು ಆದಾಯ ಗಳಿಸಿದ ಪ್ರಗತಿಪರ ರೈತ ಜಿ. ಶ್ರೀನಿವಾಸ. .

ರೈತನು ಒಂದು ಎಕರೆ ಜಮೀನುನಲ್ಲಿ ಸುಮಾರು 175 ಕ್ವಿಂಟಾಲ್ ಆಲೂಗಡ್ಡೆಯನ್ನು ಬೆಳೆದಿದ್ದಾರೆ.

ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ವಿವಿದ ರೋಗಗಳು ಬರುತ್ತದೆ ಅದೇ ಕೇವಲ ಧನದ ಕೂಟ್ಟಿಗೆಯ ಗೊಬ್ಬರವನ್ನು ಬಳಸಿ ಬೆಳೆ ಬೆಳೆದರೆ ರೋಗಗಳು ಕಡಿಮೆ ಎಂದು ಹೇಳಿದರು.

ಅಂದರೆ ‌ಈ ರೀತಿ ಮಾಡಿದರೆ ‌ಭೂಮಿಯು ಸಹ ತನ್ನ ಫಲವತ್ತತೆಯನ್ನು ಕಳೆದುಕೂಳ್ಳುವುದು ಇಲ್ಲ ಎಂದು ಹೇಳಿದರು. ಅದ್ದರಿಂದ ಎಲ್ಲಾ ರೈತರು ಬೆಳೆಗಳಿಗೆ ಅಳವಡಿಸಿಕೊಂಡು ಸಾವಯವ ಕೃಷಿ ಪದ್ದತಿ ರೂಢಿಸಿಕೊಂಡರೆ ಉತ್ತಮ ಆರೋಗ್ಯಕರ ತರಕಾರಿ ಬೆಳೆಯಬಹುದು ಎಂದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್