Connect with us
Ad Widget

ಕೊರೊನಾ

ಎಂತಹ ಘೋರ ಪರಿಸ್ಥಿತಿ ನಿರ್ಮಾಣವಾಯಿತು!

Published

on

ಚಾಮರಾಜಪೇಟೆ :ಸಿಲಿಕಾನ್ ಸಿಟಿ ಜನರೇ ಸ್ಮಶಾನದಲ್ಲೂ ಜಾಗವಿಲ್ಲವಾಗುತ್ತಿದೆ.! ಹೌದು ಚಾಮರಾಜಪೇಟೆಯ ಟಿ ಆರ್ ಮಿಲ್ ಸಮೀಪದ ಸ್ಮಶಾನದ ಗೇಟ್ ಗೆ ಹೌಸ್ ಪುಲ್ ಬೋರ್ಡ್ ಹಾಕಿ ಸಿನಿಮಾ ಥಿಯೇಟರ್ ಸಿನಿಮಾ ಮಾಲ್ ಗಳಂತೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ರಾಜ್ಯ ರಾಜಧಾನಿಯಲ್ಲಂತೂ ಮರಣ ಮೃದಂಗವಾಗಿದೆ. ನಿತ್ಯವೂ 200ಕ್ಕೂ ಹೆಚ್ಚು ಶವಗಳನ್ನು ಸುಡಲಾಗುತ್ತಿದೆ. ಆದರಿಂದ ಭಾನುವಾರ ಕೋವಿಡ್ ನಿಂದ ಮೃತರಾದ 45 ಮೃತದೇಹ ಅಂತ್ಯಕ್ರಿಯೆ ಮಾಡಿದ್ದು,

ಈಗಾಗಲೇ 19 ಮೃತದೇಹಗಳ ದಹನಕ್ಕೆ ಬುಕಿಂಗ್ ಆಗಿರುವುದರಿಂದ ಸ್ಮಶಾಣದ ಮುಂದೆ ಸ್ಮಶಾನದ ಮುಂದೆ ಹೌಸ್ ಪುಲ್ ಬೋರ್ಡ್ ಅನ್ನು ಹಾಕಿದ್ದಾರೆ.. ದಿನಕ್ಕೆ 20 ಮೃತದೇಹಗಳ ಅಂತ್ಯಕ್ರಿಯೆ ಗೆ ಅವಕಾಶವಿರುವುದರಿಂದ ಈಗಾಗಲೇ ಮೃತದೇಹ ದಹನದ ಬುಕಿಂಗ್ ಕಂಪ್ಲೀಟ್ ಆಗಿದ್ದು, ಹೀಗಾಗಿ ಚಾಮರಾಜಪೇಟೆಯ ಟಿ ಆರ್ ಮಿಲ್ ಸಮೀಪದ ಚಿತಾಗಾರದ ಮುಂದೆ ಹೌಸ್ ಫುಲ್ ಬೋರ್ಡ್ ಅನ್ನು ಹಾಕಿದ್ದಾರೆ.

Continue Reading
Advertisement
Click to comment

Leave a Reply

Your email address will not be published. Required fields are marked *

Politics

ಸರ್ಕಾರಿ ಆಸ್ಪತ್ರೆಗೆ 10 ಆಮ್ಲಜನಕ ಸಿಲಿಂಡರ್ ಹಸ್ತಾಂತರ

Published

on

ಶಿಡ್ಲಘಟ್ಟ: ನಗರದಲ್ಲಿ ಸೋಮವಾರ ಸರ್ಕಾರಿ ಆಸ್ಪತ್ರೆಗೆ 10 ಆಮ್ಲಜನಕ ಸಿಲಿಂಡರ್ ಗಳನ್ನು ಹಸ್ತಾಂತರ ಮಾಡಿ ಕಾಂಗ್ರೆಸ್‌ ಮುಖಂಡ, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ಮಾತನಾಡಿದರು

ಆಮ್ಲಜನಕ ಈಗ ಅಮೃತ ಸಮಾನವಾಗಿದೆ. ನಮ್ಮ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದಲ್ಲಿ ಯಾರೊಬ್ಬರೂ ಆಮ್ಲಜನಕದ ಕೊರತೆಯಿಂದ ಪ್ರಾಣ ಕಳೆದುಕೊಳ್ಳಬಾರದು ಎಂದು. ಈಗ ಹತ್ತು ಆಮ್ಲಜನಕ ಸಿಲಿಂಡರ್ ಗಳನ್ನು ಸರ್ಕಾರಿ ಆಸ್ಪತ್ರೆಗೆ ನೀಡುತ್ತಿದ್ದು, ಮುಂದಿನವಾರ ಇನ್ನೂ ಹತ್ತು ಸಿಲಿಂಡರ್ ಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಸರ್ಕಾರ, ವೈದ್ಯಕೀಯ ಸಿಬ್ಬಂದಿ, ತಾಲ್ಲೂಕು ಆಡಳಿತ ಕೋವಿಡ್ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳಾದ ನಾವು ಇಂತಹ ಸಂದರ್ಭಗಳಲ್ಲಿ ಜನರಿಗೆ ಸಾಧ್ಯವಾದಷ್ಟು ನೆರವಾಗಬೇಕಾದ್ದುನಮ್ಮ ಧರ್ಮ. ಸರ್ಕಾರಿ ಆಸ್ಪತ್ರೆಗೆ ಮತ್ತು ರೋಗಿಗಳಿಗೆ ಬೇಕಾದ ಔಷಧ, ಆಹಾರ, ಆಮ್ಲಜನಕ ಒದಗಿಸಲು ಸಂಪೂರ್ಣ ಸಹಕಾರ ನೀಡುತ್ತೇನೆ. ಪಾಸಿಟಿವ್ ಆದವರು ವೈದ್ಯರ ಮಾರ್ಗದರ್ಶನ ಪಡೆದು ಧೈರ್ಯದಿಂದ ಎದುರಿಸಿ. ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕೆಯ ಬಗ್ಗೆ ತಜ್ಞರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಂಡು ಕೊರೊನಾ ವಿರುದ್ಧ ಹೋರಾಡಲು ಸಜ್ಜಾಗಬೇಕು ಎಂದರು.

ತಹಶೀಲ್ದಾರ್ ರಾಜೀವ್ ಮಾತನಾಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರ ಸಹಕಾರ ಅಗತ್ಯ. ಜನಪ್ರತಿನಿಧಿಗಳು ಈ ರೀತಿಯಲ್ಲಿ ತಾಲ್ಲೂಕು ಆಡಳಿತ ಮತ್ತು ಸರ್ಕಾರಿ ಆಸ್ಪತ್ರೆಗೆ ಸಹಕಾರ ನೆರವು ನೀಡಿದಲ್ಲಿ ಕೋವಿಡ್ ರೋಗವನ್ನು ಸಶಕ್ಷಮವಾಗಿ ಎದುರಿಸಬಹುದು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ ಮಾತನಾಡಿ, ನಮ್ಮಲ್ಲಿ 40 ಕೋವಿಡ್ ಹಾಸಿಗೆಗಳಿದ್ದು ಎಲ್ಲಾ ಭರ್ತಿಯಾಗಿವೆ. 34 ಆಮ್ಲಜನಕ ಸಿಲಿಂಡರ್ ಗಳಿವೆ. ಪ್ರತಿದಿನ 25 ಸಿಲಿಂಡರ್ ಗಳ ಅಗತ್ಯವಿದೆ. ಖಾಲಿಯಾದಾಗ ತುಂಬಿಸಿ ತರಲು ತಡವಾಗುತ್ತಿತ್ತು. ಈಗ ಎಸ್.ಎನ್.ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ಅವರು 10 ಸಿಲಿಂಡರ್ ನೀಡಿರುವುದು ನಮಗೆ ತುಂಬಾ ಅನುಕೂಲಕರವಾಗಿದೆ. ಇನ್ನೂ 10 ಸಿಲಿಂಡರ್ ನೀಡುವುದಾಗಿ ಹೇಳಿದ್ದಾರೆ ಎಂದರು.

ನಗರ ಆರೋಗ್ಯಧಿಕಾರಿ ಡಾ.ವಾಣಿ, ನಗರ ಸಭೆ ಸದಸ್ಯ ಶಬೀರ್, ಎಸ್ ಎನ್ ಕ್ರಿಯಾ ಟ್ರಸ್ಟ್ ನ ಸದಸ್ಯರಾದ ಆನೂರು ದೇವರಾಜು, ಆನಂದ್, ಸುಮೀರ್, ಇತ್ತಿಯಾಸ್ ಪಾಷ್, ಮಹ್ಮಬುಬ್ ಪಾಷ್, ಜಮೀರ್, ಚಾಂದ್ ಪಾಷ್, ಅಫ್ಸರ್ ಮುಂತಾದವರು ಹಾಜರಿದ್ದರು

ವರದಿ : ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

ಕೊರೊನಾ

ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಕೊಡುಗೆ

Published

on

ಬೆಂಗಳೂರು : ನಗರದ ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ಕಚೇರಿಯ ವತಿಯಿಂದ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಇಂದು ಭೇಟಿ ಮಾಡಿದ ಜೆಕ್ ರಿಪಬ್ಲಿಕ್ ನ ಕಾನ್ಸಲ್ ಸಿ.ಎಸ್.ಪ್ರಕಾಶ್, ಮೈಕೋ ಮೆಡಿಕಲ್ ಎಸ್.ಆರ್.ಒ ಸಂಸ್ಥೆಯು ಈ ವೆಂಟಿಲೇಟರ್ ಗಳನ್ನು ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ನೆರವಿಗೆಂದು ಕೊಡುಗೆಯಾಗಿ ನೀಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷಣ ಸವದಿ, ಆರೋಗ್ಯ ಸಚಿವ ಡಾ|| ಕೆ.ಸುಧಾಕರ್, ಪೆರು ಕಾನ್ಸುಲೇಟ್ ಕಚೇರಿಯ ವಿಕ್ರಂ ವಿಶ್ವನಾಥ್, ರುವಾಂಡಾ ಕಾನ್ಸುಲ್ ಮೋಹನ್ ಸುರೇಶ್ ಉಪಸ್ಥಿತರಿದ್ದರು.

Continue Reading

ಕೊರೊನಾ

ಆಮ್ಲಜನಕ ಕೊರತೆ, 24 ರೋಗಿಗಳ ಸಾವು

Published

on

ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದುರಂತ ಸಂಭವಿಸಿದ್ದು 24 ಮಂದಿ ಸಾವನ್ನಪ್ಪಿದ್ದಾರೆ.

ತಡರಾತ್ರಿ 18 ಮಂದಿ, ಬೆಳಗಿನ ಜಾವ 6ಕ್ಕೂ ಹೆಚ್ಚು ಜನ ಆಕ್ಸಿಜನ್ ಕೊರತೆಯಿಂದ ನಿಧನರಾಗಿರುವ ಶಂಕೆ ವ್ಯಕ್ತವಾಗಿದೆ. 24 ಮಂದಿ ಸಾವನ್ನಪ್ಪಿರುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ನಿನ್ನೆ ರಾತ್ರಿ ಆಕ್ಸಿಜನ್ ಖಾಲಿಯಾಗಿದೆ ಎಂದು ರೋಗಿಗಳ ಸಂಬಂಧಿಕರ ಆರೋಪ ಮಾಡುತ್ತಿದ್ದರು,ಆಸ್ಪತ್ರೆ ಸಿಬ್ಬಂದಿ ಯ ನಿರ್ಲಕ್ಷ್ಯತೆ ಈ ಸಾವಿಗೆ ಕಾರಣವಿರಬಹುದು ಎನ್ನಲಾಗುತ್ತಿದೆ. ಕಳೆದ ಎರಡು ಮೂರು ವಾರದಿಂದ ಇದೇ ರೀತಿ ಈ ಆಸ್ಪತ್ರೆಯಲ್ಲಿ ಕಂಡು ಬರುತ್ತಿದೆ.

ಆಕ್ಸಿಜನ್ ಕೊರತೆಯಿಂದ ನನ್ನ ಅಣ್ಣ ಮೃತ ಪಟ್ಟಿದ್ದಾನೆ. ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಅಧಿಕಾರಿಗಳನ್ನು ಕೇಳಿದ್ರೆ ಆಕ್ಸಿಜನ್ ವ್ಯವಸ್ಥೆಯಾಗಿದೆ ಎಂದು ತಿಳಿಸಿದ್ದರು. ನಾನೊಬ್ಬ ಜನ ಪ್ರತಿನಿಧಿಯಾಗಿ ನನ್ನ ಅಣ್ಣನನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಚಾಮರಾಜನಗರ ಬಿಜೆಪಿ ಸದಸ್ಯ ಚಂದ್ರಶೇಖರ್ ಗಂಭೀರ ಆರೋಪ ಮಾಡಿದ್ದಾರೆ.ಜಿಲ್ಲಾಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್