ಸುದ್ದಿ
ಲಾಕ್ಡೌನ್ ಹಿನ್ನೆಲೆಯಲ್ಲಿ ಶಾಲೆಗಳು ಬಂದ್: ಮೀನಿನ ಬೇಟೆಯಲ್ಲಿ ಮಕ್ಕಳು
ಬಾಗೇಪಲ್ಲಿ: ಕೊರೋನಾ ಎರಡನೇ ಅಲೆಯ ತೀವ್ರತೆಯಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಘೋಷಣೆಯಾಗಿದೆ. ಇದರಿಂದಾಗಿ ಬಡಜನರ ಬದುಕು ಮೂರಾಬಟ್ಟೆಯಾಗುತ್ತಿದೆ. ಕೂಲಿಗಾರರಿಗೆ ಕೂಲಿ ಸಿಗುತ್ತಿಲ್ಲ. ರೋಗಿಗಳಿಗೆ ಸರಿಯಾದ ಆಸ್ಪತ್ರೆ ಸೌಲಭ್ಯಗಳು ದೂರವಾಗುತ್ತಿವೆ.
ಶಾಲಾ, ಕಾಲೇಜುಗಳು ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ. ಬಹುತೇಕ ನಗರ,ಪಟ್ಟಣದ ಮಕ್ಕಳು ಆನ್ಲೈನ್ ತರಗತಿಗಳ ಜೊತೆಗೆ ಮೊಬೈಲ್ ಪ್ರಪಂಚದಲ್ಲಿನ ವೀಡಿಯೋ ಗೇಮ್, ಹಾಸ್ಯ ದೃಶ್ಯಗಳ ವೀಕ್ಷಣೆಯಲ್ಲಿ ಮುಳುಗಿದ್ದಾರೆ. ಆದರೆ ಗ್ರಾಮೀಣ ಮಕ್ಕಳ ಜೀವನ ಶೈಲಿಯು ಹಳೇ ಕಾಲಕ್ಕೆ ಮರಳಿದಂತಿದೆ. ತಮ್ಮ ಪೋಷಕರ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದಾರೆ. ಇನ್ನು ಕೆಲವರು ಕ್ರಿಕೆಟ್, ಕಬ್ಬಡ್ಡಿ ಆಟಗಳು ಆಡಿಕೊಂಡು ಕಾಲ ದೂಡುತ್ತಿದ್ದಾರೆ.
ಮದಕವಾರಪಲ್ಲಿ, ಕೊಲಿಂಪಲ್ಲಿ, ಕೃಷ್ಣಾಪುರ ಸೇರಿದಂತೆ ಹಲವೆಡೆ ಕಳೆದ ವರ್ಷದ ಚಂಡಮಾರುತಳಿಂದಾಗಿ ಕೆರೆ ಕುಂಟೆಗಳು ಭರ್ತಿಯಾಗಿದ್ದವು. ಹಾಗಾಗಿ ಕೆಲವು ಮಕ್ಕಳು ಕೆರೆ,ಬಾವಿಗಳಲ್ಲಿ ಮೀನಿನ ಬೇಟೆಯಲ್ಲಿ ತೊಡಗಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮದಕವಾರಪಲ್ಲಿ ಅರವಿಂದ್ ಮಾತನಾಡಿ ಶಾಲೆಗೆ ಹೋಗಬೇಕೆಂದುಕೊಂಡರೆ ಬಾಗಿಲೇ ತೆಗೆಯಲ್ಲ, ಇದೇನೋ ಕೊರೋನಾ ಭಯ. ಮನೆಯಲ್ಲಿ ಬೇಜಾರಾಗುತ್ತದೆ ಹಾಗಾಗಿ ಪೋಷಕರ ಅಪ್ಪಣೆ ಮೇರೆಗೆ ಮೀನು ಹಿಡಿಯಲು ಬಂದಿದ್ದೇನೆ. ನನ್ನ ಜೊತೆಗೆ ಕಾರ್ತಿಕ, ನವೀನ, ಬುಡ್ಡೋಡು ಜೊತೆಗೂಡಿದ್ದಾರೆ ಎನ್ನುತ್ತಾನೆ.
ಸುದ್ದಿ
ನಮ್ಮ ಕಮಿಟಿ ವತಿಯಿಂದ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದ ಖಬರಸ್ತಾನ್ ಕಮಿಟಿ ಅಧ್ಯಕ್ಷ ಶಂಶೀರ್
ಶಿಡ್ಲಘಟ್ಟ : ತಾಲ್ಲೂಕಿನ ಕೋವಿಡ್ ಮೃತರು ಯಾವುದೇ ಜಾತಿ, ಧರ್ಮ, ಮತದವರಾಗಿರಲಿ ಅವರವರ ಆಚಾರ ವಿಚಾರಕ್ಕೆ ಅನುಗುಣವಾಗಿ ಅತ್ಯಂತ ಗೌರವಯುತವಾಗಿ ನಮ್ಮ ಕಮಿಟಿ ವತಿಯಿಂದ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದು ಖಬರಸ್ತಾನ್ ಕಮಿಟಿ ಅಧ್ಯಕ್ಷ ಶಂಶೀರ್ ತಿಳಿಸಿದರು.
ನಗರದಲ್ಲಿ ಸೋಮವಾರ ಈದ್ಗಾಮೈದಾನದ ಬಳಿ ಖಬರಸ್ತಾನ್ ಕಮಿಟಿ ಸದಸ್ಯರೊಂದಿಗೆ ಚರ್ಚಿಸಿದ ನಂತರ ಅವರು ಮಾತನಾಡಿದರು. ಕೊರೊನಾ ಬಂದು ನಿಧನರಾದವರ ಅಂತ್ಯಸಂಸ್ಕಾರಕ್ಕೆ ಎಲ್ಲೆಡೆ ಬಹಳ ತೊಂದರೆಯಾಗುತ್ತಿದೆ. ಬಂಧುಗಳೇ ನೆರವಿಗೆ ಬರುತ್ತಿಲ್ಲ. ಈ ಕಾರಣದಿಂದ ಶಿಡ್ಲಘಟ್ಟ ಖಬರಸ್ತಾನ್ ಕಮಿಟಿ ವತಿಯಿಂದ ಕೋವಿಡ್ ನಿಂದ ಮೃತರಾದವರಿಗೆ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ. ನಮ್ಮ ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆಯಿದೆ. ಏನೇ ತೊಂದರೆಯಾದರೂ ಬೆಂಗಳೂರಿಗೆ ಹೋಗಬೇಕು, ಹೆಣವಾಗಿ ವಾಪಸ್ ಬರಬೇಕು. ಈ ಬಗ್ಗೆ ಶಾಸಕರು ಮತ್ತು ಉಸ್ತುವಾರಿ ಸಚಿವರು ಗಮನ ಹರಿಸಬೇಕು. ಅವರು ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಬೇಕು. ಆಗ ಇಲ್ಲಿನ ಸಮಸ್ಯೆ ಅವರಿಗೆ ತಿಳಿಯುತ್ತದೆ ಮತ್ತು 24 ಗಂಟೆ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಗೆ ಮಾನಸಿಕ ಸ್ಥೈರ್ಯ ಮೂಡುತ್ತದೆ ಎಂದರು.
ಈ ಸಂಧರ್ಭದಲ್ಲಿ ಖಬರಸ್ತಾನ್ ಕಮಿಟಿ ಕಾರ್ಯದರ್ಶಿ ಮೌಲಾ, ಮುನಿಕೃಷ್ಣಪ್ಪ, ಹುಸೇನ್ ಶರೀಫ್, ಅಮೀರ್ ಖಾನ್, ನದ್ದು, ಅಫ್ರೋಜ್ ಅಹಮದ್, ಗೌಸ್ ಖಾನ್, ಸೈಯದ್ ಮತೀನ್, ದಾದು, ಸುಲೇಮಾನ್, ದಾದಾಪೀರ್, ನದೀಪ್ ಪಾಷ, ಆಸೀಫ್, ಇರ್ಫಾನ್ ಮುಂತಾದವರು ಹಾಜರಿದ್ದರು.
ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ
ಸುದ್ದಿ
ಶ್ರೀ ಮಾದರ ಚನ್ನಯ್ಯ ನಗರದಲ್ಲಿ ಅಂತರರಾಷ್ಟ್ರೀಯ ಕಾಮಿ೯ಕರ ದಿನಾಚರಣೆ
ವಿಜಯಪುರ : ಜಿಲ್ಲೆಯ ತಾಳಿಕೋಟಿಯಲ್ಲಿ ಇಂದು ದಿನಾಂಕ:- 01-05-2021ರಂದು ಅಂತರರಾಷ್ಟ್ರೀಯ ಕಾಮಿ೯ಕರು ದಿನಾಚರಣೆಯನ್ನು ಶ್ರೀ ಮಾದರ ಚನ್ನಯ್ಯ ನಗರದಲ್ಲಿ ಆಚರಣೆ ಮಾಡಲಾಯಿತು ಡಾ//ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಾವ ಚಿತ್ರಕ್ಕೆ ಕಾರ್ಮಿಕ ಯುವ ಘಟಕದ ಅಧ್ಯಕ್ಷರಾದ ನಜೀರ್ ಚೋರಗಸ್ತಿ ರಾಮಣ್ಣ ಕಟ್ಟಿಮನಿ ನಾಗಪ್ಪ ಕಟ್ಟಿಮನಿ ಮಾಲಾರ್ಪಣೆ ಮಾಡಲಾಯಿತು ವಿವಿಧ ಸಾಮಾನುಗಳಿಗೆ ಸಲಿಕೆ ಪುಟ್ಟಿ ಗುದ್ದಲಿ ಪೂಜೆ ಸಲ್ಲಿಸಲಾಯಿತ್ತು. ಈ ಕಾಯ೯ಕ್ರಮ ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ಸೇನೆ ತಾಲೂಕು ಕಾಯ೯ದಶಿ೯ರಾದ ಗೋಪಾಲ ಹಣಮಂತ ಕಟ್ಟಿಮನಿ ಮೊದಲಿಗೆ ಎಲ್ಲಾ ಕಾಮಿ೯ಕರಿಗೆ ಕಾಮಿ೯ಕ ದಿನಾಚರಣೆ ಶುಭಾಶಯಗಳು ಹಾಗೂ ಕಾಮಿ೯ಕರಿಗೆ ಬರುವ ಸವಲತ್ತುಗಳನ್ನು ಮಧ್ಯವತಿ೯ಗಳು ಆವಳಿಯಿಂದ ನಿಜವಾದ ಕಾಮಿ೯ಕರಿಗೆ ಮುಟ್ಟುವುದಿಲ್ಲ
ಅದಕ್ಕಾಗಿ ಸಕಾ೯ರ ಬರುವ ಸವಲತ್ತುಗಳನ್ನು ಕಟ್ಟು ನಿಟ್ಟಿನ ಕ್ರಮವನ್ನು ನೀಡಬೇಕು ನಿಜವಾದ ಕಾಮಿ೯ಕರಿಗೆ ಮುಟ್ಟುಬೇಕು ಸಕಾ೯ರ ಆದೇಶ ಮಾಡಬೇಕು .
ಕಾರ್ಮಿಕರಾ ಬಸವರಾಜ ಮಾದರ ತಾಯಪ್ಪ ಮಾದರ ಗಿರೀಶ್ ಕಟ್ಟಿಮನಿ ರವಿ ಶಿರೋಳ ಮಾದರ ಸಮಾಜ ಮುಖಂಡರಾದ ಯಮನಪ್ಪ ಕಟ್ಟಿಮನಿ ಬಸಪ್ಪ ಶಿರೋಳ ಮರೇಪ್ಪ ಶಿರೋಳ ಹುಲಗಪ್ಪ ಮಾದರ ಇನ್ನೂ ಅನೇಕ ಕಾಮಿ೯ಕರು ಈ ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ದೇವು ಕೂಚಬಾಳ
ಸುದ್ದಿ
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ರೈತನ ಗೋಳಾಟ
ಮಸ್ಕಿ :- ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಕಾಲಿಕ ಮಳೆಯೊಂದಿಗೆ ಜೋರಾದ ಬಿರುಗಾಳಿ ಬೀಸಿದ ಪರಿಣಾಮ ತಾಲೂಕಿನ ಹಲವು ಕಡೆಗಳಲ್ಲಿ ಭತ್ತದ ಬೆಳೆ ನೆಲಕ್ಕುರುಳಿದ್ದು.
ಕೋಯ್ಲಿಗೆ ಬಂದ ಬೆಳೆ ಮಣ್ಣು ಪಾಲಾಗಿದೆ.ಹೀಗಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ತಾಲೂಕಿನಾದ್ಯಂತ ಗುರುವಾರ ತಡರಾತ್ರಿ ನಾನಾ ಕಡೆ ಮಳೆಯೊಂದಿಗೆ, ವಾಯುದೇವನ ಆರ್ಭಟ ಹೆಚ್ಚಾಗಿದ್ದು .ಇದರಿಂದಾಗಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕೆ ಮಲಗಿದೆ.
ಭತ್ತದ ಕಾಳುಗಳು ನೆಲಕ್ಕೆ ಬಿದ್ದಿರುವುದರಿಂದ ಬೆಳೆ ನಷ್ಟವಾಗಿದ್ದು. ಅಲ್ಲದೆ ಅಳಿದುಳಿದಿದ್ದನ್ನು ಸಂಗ್ರಹಿಸಲು ರೈತರು ಹೈರಾಣ ಆಗುವಂತಾಗಿದೆ.
ವಾರದೊಳಗೆ ಭತ್ತದ ಬೆಳೆಯನ್ನು ಕಟಾವ್‌ಮಾಡಲು ರೈತರು ತಯಾರಿ ನಡೆಸಿದ್ದರು. ಇನ್ನೇನು ರಾಶಿ ಮಾಡಿಕೊಂಡು, ಶ್ರಮದ ಫಲ ಧಕ್ಕಿಸಿಕೊಳ್ಳಬೇಕು ಎಂಬ ಖುಷಿಯಲ್ಲಿದ್ದವರು ಪಾಲಿಗೆ, ಏಕಾಏಕಿ ಬಿರುಗಾಳಿ ಅಪ್ಪಳಿಸಿದ್ದು ಮಣ್ಣಿನ ಮಕ್ಕಳಾದ ರೈತರಿಗೆ ಕನಲುವಂತೆ ಮಾಡಿದೆ.
ದುಬಾರಿ ರಸಗೊಬ್ಬರ, ಕ್ರಿಮಿ ನಾಶಕ ಔಷಧವನ್ನು ಸಿಂಪರಣೆ ಮಾಡಿದ್ದು.ಗದ್ದೆಯಲ್ಲಿ ಕೃಷಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ನಾಟಿ ಮಾಡಿಸಿ, ಉತ್ತಮವಾಗಿ ಬೆಳೆ ನಿರೀಕ್ಷೆಯಲ್ಲಿದ್ದರು.ಆದರೆ, ಎಲ್ಲ ಮಾಡಿ ಇನ್ನೇನು ಬೆಳೆ ಕೈ ಸೇರುತ್ತದೆ ಅಂದುಕೊಳ್ಳುವರಷ್ಟಲ್ಲಿಯೇ ಮಳೆ ಮತ್ತು ಗಾಳಿ ರೈತರ ಆಸೆಗೆ ತಣ್ಣೀರೆರಚಿದೆ.
ಮಸ್ಕಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹೀಗೆ ಬೇಸಿಗೆ ಮಳೆಯ ಅವಘಡ ಮುಂದುವರೆದಿವೆ.
ಇನ್ನಿತರ ಕಡೆಗೆಗಳಲ್ಲಿ ಭತ್ತವನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದ್ದು. ಕೆಲವು ಕಡೆಗೆ ಈಗಾಗಲೇ ಮುಂಚಿತವಾಗಿ ನಾಟಿ ಮಾಡಿದ ರೈತರು ಭತ್ತವನ್ನು ಕಟಾವ್ ಮಾಡಿದ್ದಾರೆ. ಇನ್ನೂ ತಡವಾಗಿ ನಾಟಿ ಮಾಡಿದವರು ವಾರದೊಳಗೆ ಕಟಾವ್ ಮಾಡಲು ನಿರ್ಧರಿಸಿದ್ದರು. ಆದರೆ, ಈ ಘಟನೆ ಅನ್ನದಾತರನ್ನು ಕುಗ್ಗುವಂತೆ ಮಾಡಿದೆ.
ಮಳೆ ಜತೆಗೆ ಜೋರಾಗಿ ಗಾಳಿ ಬೀಸಿದ್ದರಿಂದ ಭತ್ತದ ಬೆಳೆ ನೆಲಕ್ಕುರಳಿದೆ.
ಇನ್ನೇನು ವಾರದೊಳಗೆ ಕಟಾವ್ ಮಾಡುತ್ತಿದ್ದೇವು ಎಂದು ಬಳಗಾನೂರು ಗ್ರಾಮದ ರೈತರು ,ಅನ್ನದಾತರಗಿ ಕಣ್ಣೀರಿಟ್ಟಿದ್ದಾರೆ.
ಎಲ್ಲೆಡೆ ಮಹಾಮಾರಿ ಕೊರೋನಾ ಸೋಂಕು ಹರಡುತ್ತಿರುವುದರಿಂದ ಈ ಸೊಂಕು ತಗಲದಂತೆ ಮುಂಜಾಗ್ರತೆ ವಹಿಸಬೇಕು ಮತ್ತು ತಪ್ಪದೆ ಸಾಮಾಜಿಕ ಅಂತರದೊಂದಿಗೆ ಕೃಷಿ ಚಟುವಟಿಕೆಗಳನ್ನು ಮುಂದುವರೆಸಬೇಕು ಎಂದು ಸರ್ಕಾರ ಜಾಗೃತಿ ಸಂದೇಶ ನೀಡಿದೆ. ಆದರೆ ಬೆಳೆ ಹಾನಿಗೊಳಗಾದ ನಷ್ಟ ಪರಿಹಾರದ ಬಗ್ಗೆ ಮಾತನಾಡಿಲ್ಲ ಎಂದು ರೈತರ ಬದುಕು ಕಂಗಾಲಾಗಿದ್ದು ಇದನ್ನು ಕೇಳುವರ್ಯಾರು ಯಾರು ಇಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ : ದುರ್ಗೇಶ್ ಭೋವಿ ಮಸ್ಕಿ
-
Politics3 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
Politics16 hours ago
ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
-
ಸುದ್ದಿ3 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ4 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?